ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದಲ್ಲಿ ವಿದೇಶಿ ಚಿತ್ರಗಳ ಚಿತ್ರೀಕರಣಕ್ಕೆ ಉತ್ತೇಜನ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಘೋಷಣೆ
ಭಾರತೀಯ ಪೆವಿಲಿಯನ್ ಉದ್ಘಾಟಿಸಿ 53 ನೇ ಆವೃತ್ತಿಯ ಐ.ಎಫ್.ಎಫ್.ಐ ಪೋಸ್ಟರ್ ಅನಾವರಣಗೊಳಿಸಿದ ಶ್ರೀ ಠಾಕೂರ್
ಭಾರತೀಯ ಸಿನೆಮಾ ಮಾನವ ಪ್ರತಿಭೆ, ವಿಜಯ ಮತ್ತು ನವ ಭಾರತದ ಕಥನವನ್ನು ಒಳಗೊಂಡಿದೆ: ಶ್ರೀ ಠಾಕೂರ್
ಕಳೆದ ಏಳು ದಶಕಗಳಲ್ಲಿ ಸಿನೆಮಾ ನಮ್ಮ ಶಕ್ತಿಯ ಸಾಧನವಾಗಿ ಹೊರಹೊಮ್ಮಿದೆ ; ಶ್ರೀ ಠಾಕೂರ್
ಭಾರತೀಯ ಸಿನೆಮಾ ವಿಶ್ವಕ್ಕೆ ಭಾರತವನ್ನು ಉತ್ತಮವಾಗಿ ತಿಳಿಯುವಂತೆ ಮಾಡಿದೆ: ಫ್ರಾನ್ಸ್ ನಲ್ಲಿರುವ ಭಾರತೀಯ ರಾಯಭಾರಿ ಶ್ರೀ ಜಾವೆದ್ ಅಶ್ರಫ್
Posted On:
18 MAY 2022 5:16PM by PIB Bengaluru
ಕಾನ್ ಚಲನಚಿತ್ರೋತ್ಸವದ ಮಾರುಕಟ್ಟೆಯಲ್ಲಿ “ಮಾರ್ಚ್ ಡು ಫಿಲ್ಮ್ ಇಂಡಿಯಾ ಪೆವಿಲಿಯನ್ ಅನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಉದ್ಘಾಟಿಸಿದರು. ವಿದೇಶಿ ಚಿತ್ರ ತಯಾರಕರಿಗೆ ಭಾರತವನ್ನು ಅತ್ಯಂತ ನೆಚ್ಚಿನ ತಾಣವನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಭಾರತದಲ್ಲಿ ವಿದೇಶಿ ಚಲನಚಿತ್ರಗಳು ಮತ್ತು ವಿದೇಶಿ ಸಹ ನಿರ್ಮಾಣಗಳ ಚಿತ್ರೀಕರಣವನ್ನು ಉತ್ತೇಜಿಸಲು ಎರಡು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಭಾರತದಲ್ಲಿ ವಿದೇಶಿ ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ಶ್ರವ್ಯ, ದೃಶ್ಯ, ಸಹ ನಿರ್ಮಾಣಕ್ಕಾಗಿ ಪ್ರೋತ್ಸಾಹದಾಯಕ ಯೋಜನೆ ಮತ್ತು ವಿದೇಶಿ ಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಿದರೆ ಉತ್ತೇಜನ ನೀಡುವ ಯೋಜನೆಗಳಿಂದ ಭಾರತೀಯ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರದ ಸಾಮರ್ಥ್ಯವನ್ನು ಅನಾವರಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಉತ್ತೇಜನ ನೀಡುವ ಅಂಶಗಳ ಕುರಿತು ಮಾತನಾಡಿದ ಶ್ರೀ ಠಾಕೂರ್, ಅಧಿಕೃತ ಸಹ - ನಿರ್ಮಾಣಗಳಿಗಾಗಿ ಅಂತರರಾಷ್ಟ್ರೀಯ ಸಹ ನಿರ್ಮಾಣ ಕಂಪೆನಿಗಳು ಭಾರತದಲ್ಲಿ ಪಾವತಿಸುವ ಅರ್ಹತಾ ವೆಚ್ಚದ ಮೇಲೆ ಗರಿಷ್ಠ 2 ಕೋಟಿ ರೂಪಾಯಿ ಮಿತಿಗೆ ಒಳಪಟ್ಟು ಶೇ 30 ರ ವರೆಗೆ ಮರುಪಾವತಿಯನ್ನು ಕ್ಲೈಮ್ ಮಾಡಬಹುದು ಎಂದು ಮಾಹಿತಿ ನೀಡಿದರು. ಭಾರತದಲ್ಲಿ ವಿದೇಶಿ ಚಲನಚಿತ್ರಗಳ ಚಿತ್ರೀಕರಣ ಮಾಡಿ ಶೇ 15 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾನವ ಸಂಪನ್ಮೂಲವನ್ನು ಬಳಸಿಕೊಂಡಲ್ಲಿ ಶೇ 5 ರಷ್ಟು, ಗರಿಷ್ಠ 50 ಲಕ್ಷ ರೂಪಾಯಿವರೆಗೆ [65,000 ಡಾಲರ್] ವರೆಗೆ ಮರುಪಾವತಿಯನ್ನು ಕ್ಲೈಮ್ ಮಾಡಬಹುದಾಗಿದೆ. ಈ ಯೋಜನೆಗಳು ಭಾರತದೊಂದಿಗೆ ಜಾಗತಿಕ ಸಹಯೋಗಕ್ಕೆ ಉತ್ತೇಜನ ನೀಡುತ್ತವೆ ಮತ್ತು ವಿದೇಶಿ ಚಲನಚಿತ್ರ ತಯಾರಕರಿಂದ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ಭಾರತವನ್ನು ಚಿತ್ರೀಕರಣದ ತಾಣವಾಗಿ ಮಾಡಲು ಸಹಾಯ ಮಾಡುತ್ತವೆ ಎಂದು ಸಚಿವರು ಹೇಳಿದರು. [ಯೋಜನೆಯ ವಿವರಗಳು ಈ ಕೆಳಗಿನ ಅನುಬಂಧ 1 ರಲ್ಲಿವೆ]
ಭಾರತೀಯ ಸಿನೆಮಾದ ಆಳವಾದ ಸಾಮಾಜಿಕ ಬೇರುಗಳ ಕುರಿತು ವಿವರಿಸಿದ ಶ್ರೀ ಅನುರಾಗ್ ಠಾಕೂರ್, ಭಾರತೀಯ ಚಿತ್ರರಂಗದಲ್ಲಿ ಸೃಜನಶೀಲತೆ, ಉತ್ಕೃಷ್ಟತೆ, ಆವಿಷ್ಕಾರಗಳು ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಸೂಕ್ಷ್ಮವಾಗಿ ನಡೆಸಿಕೊಂಡು ಜೊತೆಜೊತೆಯಾಗಿ ಬೆಳೆದಿವೆ ಎಂದರು.
“ಭಾರತೀಯರ ಮೌಲ್ಯಗಳು, ನಂಬಿಕೆಗಳು ಮತ್ತು ಅನುಭವಗಳು ಪ್ರತಿಬಿಂಬಿಸುತ್ತವೆ. ಭಾರತೀಯ ಸಿನೆಮಾಗಳು ವಿಶ್ವಾಸ, ಕನಸು ಮತ್ತು ಸಾಧನೆಗಳನ್ನು ಅನಾವರಣಗೊಳಿಸುತ್ತವೆ. ಭಾರತೀಯ ಚಲನಚಿತ್ರ ಕೈಗಾರಿಕೆ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಸಾರ್ವತ್ರಿಕ ಗುಣಲಕ್ಷಣಗಳನ್ನು ಕಂಡುಕೊಂಡಿದೆ. ಇದು ನಮ್ಮ ಪುರಾತನ ಕಥೆಗಳನ್ನು ರಕ್ಷಿಸುತ್ತದೆ, ತಂತ್ರಜ್ಞಾನದ ಮೂಲಕ ಭಾರತೀಯ ಚಿತ್ರ ತಯಾರಕರು ಕಥೆ ಹೇಳುವ ನಾವಿನ್ಯತೆಯನ್ನು ಅಳವಡಿಸಿಕೊಂಡಿದ್ದಾರೆ” ಎಂದು ಸಚಿವರು ಹೇಳಿದರು.
ಹಳೆಯ ಕಥೆಗಳನ್ನು ಸಂರಕ್ಷಿಸುವಾಗ ಭಾರತದ ಚಲನಚಿತ್ರ ತಯಾರಕರು ತಂತ್ರಜ್ಞಾನದ ಮೂಲಕ ಕಥೆ ಹೇಳುವ ಕಲೆಯಲ್ಲಿ ಹೊಸತನವನ್ನು ಕಂಡುಕೊಂಡಿದ್ದಾರೆ” ಎಂದು ಹೇಳಿದರು. “ಭಾರತೀಯ ಸಿನೆಮಾ 6000 ವರ್ಷಗಳ ಹಳೆಯ ನಾಗರಿಕತೆಯ ಕಥೆಯನ್ನಷ್ಟೇ ಹೇಳುವುದಿಲ್ಲ, 1.3 ಶತಕೋಟಿ ಮಾನವೀಯ ಪ್ರತಿಭೆಗಳ ವಿಜಯ ಮತ್ತು ನವ ಭಾರತದ ಪಥವನ್ನು ಸಹ ಮಸೂರಗಳ ಮೂಲಕ ಸಾದರಪಡಿಸುತ್ತಿದೆ “ ಎಂದು ಸಚಿವರು ಹೇಳಿದರು.
“"ಭಾರತ್ ಕಾ ಸಿನೆಮಾ, ದೌರ್ನಾ ಚಾಹ್ತಾ ಹೈ, ಉಡ್ನಾ ಚಾಹ್ತಾ ಹೈ , , ಬಾಸ್ ರುಕ್ನಾ ನಹಿ ಚಾಹ್ತಾ", ಎಂಬ ಏ ಜವಾನಿ ಹೇ ದಿವಾನಿ ಎಂಬ ಸಿನೆಮಾದ ಡೈಲಾಗ್ ಅನ್ನು ಪ್ರಸ್ತಾಪಿಸಿದರು. ಭಾರತದ ಸುಂದರ ಚಿತ್ರೋದ್ಯಮದ ಯಾನ ಜಾಗತಿಕ ಸಿನೆಮಾ ತಯಾರಕರಿಗೆ ಸ್ಫೂರ್ತಿಯಾಗಿದೆ ಮತ್ತು 2020 ವರ್ಷ ಭಾರತದ ಕಲೆ ಮತ್ತು ಸಮಯದ ಚಿತ್ರ ನಿರ್ಮಾಣ ಮಾಡಲು ಪ್ರೇರಣೆಯಾಗಿದೆ ಎಂದು ಸಚಿವರು ಹೇಳಿದರು.
“ ಕಳೆದ ಕೆಲವು ವರ್ಷಗಳಲ್ಲಿ ಸ್ಟ್ರೀಮಿಂಗ್ ಕ್ರಾಂತಿ ದೇಶದಲ್ಲಿ ಬಿರುಗಾಳಿಯಂತೆ ಆವರಿಸಿದೆ ಮತ್ತು ಡಿಜಿಟಲ್/ ಒಟಿಟಿ ವೇದಿಕೆಗಳ ಜನಪ್ರಿಯತೆ ಚಲನಚಿತ್ರಗಳನ್ನು ಹೇಗೆ ನಿರ್ಮಿಸಲಾಗುತ್ತದೆ, ವಿತರಿಸಲಾಗುತ್ತದೆ ಮತ್ತು ಬಳಕೆ ಮಾಡಲಾಗುತ್ತಿದೆ ಎಂಬ ವಲಯದಲ್ಲಿ ಬದಲಾವಣೆಯನ್ನು ಕಂಡಿದೆ. ಗ್ರಾಹಕರಿಗೆ ಜಾಗತಿಕ ಮತ್ತು ಭಾರತೀಯ ಸಿನೆಮಾ ಹಿಂದೆಂದಿಗಿಂತಲೂ ಹೆಚ್ಚಿನ ಆಯ್ಕೆಯಾಗಿದೆ” ಎಂದರು.
ಭಾರತವನ್ನು ಚಿತ್ರೀಕರಣದ ತಾಣವನ್ನಾಗಿ ಮಾಡುವ ಸರ್ಕಾರದ ಬಲವಾದ ಉದ್ದೇಶ ಕುರಿತು ಮಾತನಾಡಿದ ಶ್ರೀ ಠಾಕೂರ್, “ನಾವು ಬಲವಾದ ಬೌದ್ಧಿಕ ಆಸ್ತಿ ಆಡಳಿತವನ್ನು ಹೊಂದಿದ್ದೇವೆ. ಡಿಜಿಟಲ್ ಮಾಧ್ಯಮ ಈಗ ಚಿತ್ರಮಂದಿರಗಳು ಮತ್ತು ಚಲನಚಿತ್ರಗಳಂತಹ ಬಳಕೆ ಮತ್ತು ಪ್ರಸಾರದ ಇತರೆ ಹೆಚ್ಚು ಸ್ಥಾಪಿತ ವಿಧಾನಗಳಿಗೆ ಪೂರಕವಾಗಿದೆ. ಗ್ರಾಹಕರಿಗೆ ಇದು ಹಿಂದೆಂದಿಗಿಂತಲೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಹೆಚ್ಚಿನ ಆಯ್ಕೆಯ ಅವಕಾಶಗಳನ್ನು ಕಲ್ಪಿಸಿದೆ ಮತ್ತು ಸರ್ಕಾರ ಸೃಜನಶೀಲ ಕೈಗಾರಿಕೆಗಳಿಗೆ ಬೆಂಬಲ ನೀಡುವ ಮೂಲಕ ಇದನ್ನು ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.
ಭಾರತದ ಚಲನಚಿತ್ರೋದ್ಯಮದ ಪುನಶ್ಚೇತನ ಕಾರ್ಯವನ್ನು ಶ್ಲಾಘಿಸಿದ ಶ್ರೀ ಠಾಕೂರ್, ರಾಷ್ಟ್ರೀಯ ಚಲನಚಿತ್ರ ಪರಂಪರೆ ಅಭಿಯಾನದಡಿ ಸರ್ಕಾರ ವಿಶ್ವದ ಅತಿ ದೊಡ್ಡ ಪ್ರಮಾಣದಲ್ಲಿ ಚಲನಚಿತ್ರ ಮರುಸ್ಥಾಪನೆ ಯೋಜನೆಯನ್ನು ಕೈಗೆತ್ತಿಕೊಂಡಿದೆ ಮತ್ತು ಈ ಅಭಿಯಾನದ ಭಾಗವಾಗಿ ಭಾಷೆಗಳು ಮತ್ತು ವಿವಿಧ ಪ್ರಕಾರಗಳ 2200 ಚಲನಚಿತ್ರಗಳು ತಮ್ಮ ಹಿಂದಿನ ವೈಭವಕ್ಕೆ ಮರಳಲಿವೆ ಎಂದರು.
ಭಾರತೀಯ ಪೆವಿಲಿಯನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಠಾಕೂರ್, “ಭಾರತೀಯ ಪೆವಿಲಿಯನ್ ವಿಶ್ವಾಸ್ ಹಾಗೂ ಪ್ರಯಾಸದ ಮೂಲಕ ನಮ್ಮ ಮುಕುಟಕ್ಕೆ ಗರಿ ಮೂಡಿಸಿದ್ದು, ಇದು ನಾಳಿನ ಭಾರತೀಯ ಕನಸಿನ ಪ್ರವರ್ತಕರಾಗಿ ರೂಪಾಂತರ ಹೊಂದಲಿದೆ ಎಂದು ಹೇಳಿದರು.
ಭಾರತೀಯ ಪೆವಿಲಿಯನ್ ನಲ್ಲಿ 53 ನೇ ಆವೃತ್ತಿಯ ಐ.ಎಫ್.ಎಫ್.ಐ ಪೋಸ್ಟರ್ ಅನ್ನು ಸಚಿವರು ಅನಾವರಣಗೊಳಿಸಿದರು. [ಅನುಬಂಧ 2]
ಸಮಾರಂಭದಲ್ಲಿ ಮಾತನಾಡಿದ ಶ್ರೀಮತಿ ತಮನ್ನಾ ಭಾಟಿಯಾ, ಜಾಗತಿಕ ಸಿನೆಮಾ ವಲಯಕ್ಕೆ ಭಾರತ ಹಲವಾರು ವರ್ಷಗಳಿಂದ ಕೊಡುಗೆ ನೀಡುತ್ತಿದೆ ಮತ್ತು ಈಗ 75 ನೇ ಸ್ವಾತಂತ್ರ್ಯೋತ್ವವದ ವರ್ಷದಲ್ಲಿ ಕಾನ್ ಚಲನಚಿತ್ರೋತ್ಸವದ ಪಾಲುದಾರಿಕೆ ನಿಜಕ್ಕೂ ಅಪ್ರತಿಮವಾಗಿದೆ ಎಂದು ಹೇಳಿದರು.
ನಟ ನವಾಜುದ್ದೀನ್ ಸಿದ್ದಿಕಿ ಮಾತನಾಡಿ, ಭಾರತ ಹಲವಾರು ಕಥೆಗಳ ಭೂಮಿಯಾಗಿದೆ ಮತ್ತು ಈ ತಳಮಟ್ಟದ ಕಥೆಗಳು ಜಾಗತಿಕ ಪ್ರಾಮುಖ್ಯತೆಗೆ ಅರ್ಹವಾಗಿವೆ ಎಂದು ಹೇಳಿದರು.
ನಟಿ ದೀಪಿಕಾ ಪಡುಕೋಣೆ, ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕಾನ್ ನಲ್ಲಿ ಭಾರತಕ್ಕೆ ಇದು ಹೆಮ್ಮೆಯ ಕ್ಷಣವಾಗಿದೆ. ಭಾರತೀಯ ಚಿತ್ರರಂಗ ಶ್ರೇಷ್ಠತೆಯ ಉತ್ತುಂಗದಲ್ಲಿದೆ ಮತ್ತು ಕಾನ್ ನಲ್ಲಿ ಇದು ಕೇವಲ ಆರಂಭ ಮಾತ್ರ ಎಂದು ಹೇಳಿದರು.
ನಟ ಶ್ರೀ ಶೇಖರ್ ಕಪೂರ್ ಮಾತನಾಡಿ, ಭಾರತ ಕಥೆಗಳ ನಾಡು, ಈಗ ಭಾರತೀಯ ಸಂಸ್ಕೃತಿ ಪಶ್ಚಿಮ ಪ್ರಸ್ಥ ಭೂಮಿಗಳಂತೆ ಸಿನೆಮಾದಲ್ಲಿ ಪ್ರಮುಖ ಸಂಸ್ಕೃತಿಯಾಗಲಿದೆ ಎಂದರು. ಶ್ರೀ ಪ್ರಸೂನ್ ಜೋಶಿ ಮಾತನಾಡಿ, ಚಲನಚಿತ್ರ ನಿರ್ಮಾಣ ಈಗ ಎಷ್ಟೊಂದು ಸುಲಭವಾಗಿದೆ ಎಂದರೆ ಸಣ್ಣ ಪಟ್ಟಣಗಳ ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ತಮ್ಮ ಕಲ್ಪನೆಯನ್ನು ವಾಸ್ತವತೆಯತ್ತ ಪರಿವರ್ತಿಸಲು ಸಶಕ್ತರಾಗಿದ್ದಾರೆ ಎಂದರು.
ಶ್ರೀಮತಿ ಪೂಜಾ ಹೆಗ್ಡೆ ಅವರು ಬ್ರಾಂಡ್ ಇಂಡಿಯಾದ ಭಾಗವಾಗಿ ತಾವು ಇಲ್ಲಿಗೆ ಬಂದಿದ್ದು, ಇದು ಅತ್ಯಂತ ಗೌರವದ ಸಂಗತಿ. ಭಾರತ ಗೌರವಾನ್ವಿತ ದೇಶವಾಗಿ, ಸೂಕ್ತ ರೀತಿಯಲ್ಲಿ ಸದ್ದು ಮಾಡುತ್ತಿದೆ ಎಂದರು.
ಶ್ರೀಮತಿ ವಾಣಿ ತ್ರಿಪಾಠಿ ಮಾತನಾಡಿ, ಭಾರತೀಯ ಮಹಿಳೆಯರು ಸಿನೆಮಾದಲ್ಲಿ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೀಪಿಕಾ ತೀರ್ಪುಗಾರರಾಗಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದು, ವಿಶ್ವದಾದ್ಯಂತ ಭಾರತದ ಮಹಿಳೆಯರು ಸಂಭ್ರಮಾಚರಣೆಯಲ್ಲಿದ್ದಾರೆ ಎಂದರು. ಶ್ರೀ ಆರ್. ಮಹದೇವನ್, ಶ್ರೀ ಎ.ಆರ್.ರೆಹಮಾನ್, ಶ್ರೀ ಮಾಮೆ ಖಾನ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಫ್ರಾನ್ಸ್ ನಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಜಾವೆದ್ ಅಶ್ರಫ್ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾನ್ ಚಲನಚಿತ್ರೋತ್ಸವಕ್ಕೆ ಭಾರತೀಯ ನಿಯೋಗದ ಮೂಲಕ ನೀಡಿರುವ ಸಂದೇಶವನ್ನು ಓದಿದರು. ನಂತರ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಚಿತ್ರರಂಗ ವಿಶ್ವಕ್ಕೆ ಭಾರತವನ್ನು ಚೆನ್ನಾಗಿ ತಿಳಿಯುವಂತೆ ಮಾಡಿದೆ ಎಂದು ಹೇಳಿದರು. ಭಾರತೀಯ ಸಿನೆಮಾ ವಿಶ್ವದಲ್ಲಿ ಭಾರತದ ಶಕ್ತಿಯ ನಿರ್ಣಾಯಕ ಅಂಶವಾಗಿದೆ ಎಂದು ಹೇಳಿದರು.
ಅನುಬಂಧ – 1
ಭಾರತದಲ್ಲಿ ವಿದೇಶಿ ಚಲನಚಿತ್ರಗಳ ಧ್ವನಿ – ದೃಶ್ಯ ಸಹ ನಿರ್ಮಾಣ – ಮತ್ತು ಚಿತ್ರೀಕರಣಕ್ಕಾಗಿ ಪ್ರೋತ್ಸಾಹಕ ಯೋಜನೆಗಳ ನಿರ್ಣಾಯಕ ಅಂಶಗಳು
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತದಲ್ಲಿ ಚಿತ್ರೀಕರಣ ಮಾಡುವ ಅಂತರರಾಷ್ಟ್ರೀಯ ಉತ್ಪಾದನೆಗಳಿಗಾಗಿ ಪ್ರೋತ್ಸಾಹಕ ಯೋಜನೆಗಳನ್ನು ಮತ್ತು ವಿದೇಶಗಳೊಂದಿಗೆ ಅಧಿಕೃತ ಸಹ ನಿರ್ಮಾಣ ಕ್ರಮಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಪ್ರೋತ್ಸಾಹ ಮತ್ತು ಅರ್ಹತೆ
1. ಶ್ರವ್ಯ, ದೃಶ್ಯ ಸಹ ನಿರ್ಮಾಣ ವಲಯದ ಪ್ರೋತ್ಸಾಹ ಯೋಜನೆಯಡಿ ಅಧಿಕೃತ ಸಹ - ನಿರ್ಮಾಣಗಳಿಗಾಗಿ ಅಂತರರಾಷ್ಟ್ರೀಯ ಸಹ ನಿರ್ಮಾಣ ಕಂಪೆನಿಗಳು ಭಾರತದಲ್ಲಿ ಪಾವತಿಸುವ ಅರ್ಹತಾ ವೆಚ್ಚದ ಮೇಲೆ ಗರಿಷ್ಠ 2 ಕೋಟಿ ರೂಪಾಯಿ ಮಿತಿಗೆ ಒಳಪಟ್ಟು ಶೇ 30 ರ ವರೆಗೆ ಮರುಪಾವತಿಯನ್ನು ಕ್ಲೈಮ್ ಮಾಡಬಹುದು. ಆದಾಗ್ಯೂ ಮರುಪಾವತಿಯು ಯೋಜನೆಯ ಆರ್ಥಿಕ ಕೊಡುಗೆಯಲ್ಲಿ ಆಯಾ ಪಾಲಿಗೆ ಅನುಗುಣವಾಗಿ ನಿರ್ಮಾಪಕರಿಗೆ ವಿಭಜಿಸಲಾಗುವುದು. ಈ ಯೋಜನೆಯು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಭಾಗವಹಿಸುವ ದೇಶ[ಐಒಎಸ್]ಗಳು ಶ್ರವ್ಯ – ದೃಶ್ಯ – ಸಹ ನಿರ್ಮಾಣ ಒಪ್ಪಂದಗಳಡಿಯಲ್ಲಿ “ಸಹ ನಿರ್ಮಾಣದ” ಸ್ಥಾನವನ್ನು ನೀಡಿರಬೇಕು. 01.04.2022 ರ ನಂತರ ಸಹ ನಿರ್ಮಾಣದ ಯೋಜನೆಗಳಿಗೆ ಪ್ರೋತ್ಸಾಹದ ಸೌಲಭ್ಯ ದೊರೆಯಲಿದೆ.
2. ಭಾರತದಲ್ಲಿ ವಿದೇಶಿ ಚಲನಚಿತ್ರಗಳ ಚಿತ್ರೀಕರಣ ಮಾಡಿ ಶೇ 15 ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾನವ ಸಂಪನ್ಮೂಲವನ್ನು ಬಳಸಿಕೊಂಡಲ್ಲಿ ಶೇ 5 ರಷ್ಟು, ಗರಿಷ್ಠ 50 ಲಕ್ಷ ರೂಪಾಯಿವರೆಗೆ [65,000 ಡಾಲರ್] ವರೆಗೆ ಮರುಪಾವತಿಯನ್ನು ಕ್ಲೈಮ್ ಮಾಡಬಹುದಾಗಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಚಿತ್ರೀಕರಣಕ್ಕೆ 01.04.2022 ರ ನಂತರ ಅನುಮತಿ ನೀಡಿದ್ದಲ್ಲಿ [ಸಾಕ್ಷ್ಯ ಚಿತ್ರಗಳಿಗೆ ಮಾತ್ರ ] ಈ ಯೋಜನೆ ಅನ್ವಯವಾಗುತ್ತದೆ.
ಪ್ರೋತ್ಸಾಹದ ಹಣ ಎರಡು ಹಂತಗಳಲ್ಲಿ ವಿತರಿಸಲಾಗುತ್ತದೆ. ಮಧ್ಯಂತರ ಮತ್ತು ಅಂತಿಮ ಹಂತ. ಭಾರತದಲ್ಲಿ ಯೋಜನೆ ಪೂರ್ಣಗೊಂಡ ನಂತರ ಅಂತಿಮ ಕ್ಲೈಮ್ ಗಳನ್ನು ಮಾಡಬಹುದಾಗಿದೆ. ಪ್ರೋತ್ಸಾಹದ ಮೊತ್ತವನ್ನು ಮೌಲ್ಯ ಮಾಪನ ಮಾಡುವ ವಿಶೇಷ ಸಮಿತಿ ಶಿಫಾರಸ್ಸಿನ ಮೇರೆಗೆ [ಎಫ್.ಎಫ್.ಒ ವೆಬ್ ಸೈಟ್ ನಲ್ಲಿ ವಿಸ್ತೃತ ಮಾರ್ಗ ಸೂಚಿ ಲಭ್ಯವಿದೆ ] ಪ್ರೋತ್ಸಾಹದ ಸೌಲಭ್ಯ ದೊರೆಯಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಯೋಜನೆಯಡಿ ಮಾತ್ರ ಪ್ರೋತ್ಸಾಹವನ್ನು ಕ್ಲೈಮ್ ಮಾಡಬಹುದು, ಎರಡು ಯೋಜನೆಗಳಡಿ ಅಲ್ಲ.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ [ಎನ್.ಎಫ್.ಡಿ.ಸಿ] ಆಶ್ರಯದಲ್ಲಿ ಚಲನಚಿತ್ರ ಸೌಲಭ್ಯ ಕಚೇರಿ ಮೂಲಕ [ಎಫ್.ಎಫ್.ಒ] ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ.
ಅನುಬಂಧ – 2
ಕಾನ್ 2022 – ಬಾರತೀಯ ಪೆವಿಲಿಯನ್ ಕುರಿತ ಯೂಟ್ಯೂಬ್ ಲಿಂಕ್
******
(Release ID: 1826516)
Visitor Counter : 926
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam