ಪ್ರಧಾನ ಮಂತ್ರಿಯವರ ಕಛೇರಿ

ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯೂನ್ ಸುಕ್-ಯೋಲ್ ಅವರಿಗೆ ಸದಾಶಯ ಮತ್ತು ಶುಭಹಾರೈಕೆಗಳನ್ನು ತಿಳಿಸಿದ ಪ್ರಧಾನಮಂತ್ರಿ

Posted On: 10 MAY 2022 12:22PM by PIB Bengaluru

ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಘನತೆವೆತ್ತ ಶ್ರೀ ಯೂನ್ ಸುಕ್-ಯೋಲ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸದಾಶಯ ಹಾಗು ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

 " ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಘನತೆವೆತ್ತ ಶ್ರೀ ಯೂನ್ ಸುಕ್-ಯೋಲ್  ( @sukyeol__yoon ) ಅವರಿಗೆ ನನ್ನ ಹೃತ್ಪೂರ್ವಕ ಸದಾಶಯಗಳು ಮತ್ತು ಶುಭಹಾರೈಕೆಗಳನ್ನು ತಿಳಿಸುತ್ತಿದ್ದೇನೆ.  ಶೀಘ್ರದಲ್ಲೇ ಅವರನ್ನು ಭೇಟಿ ಮಾಡಲು ಮತ್ತು ಭಾರತ- ದಕ್ಷಿಣ ಕೊರಿಯಾ  ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಹಾಗು ಉತ್ಕೃಷ್ಟಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಬಯಸಿದ್ದೇನೆ."

 

 

***



(Release ID: 1824158) Visitor Counter : 150