ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ದೇಶಾದ್ಯಂತ 8500 ಆಟಗಾರರ ಅತಿದೊಡ್ಡ ತಂಡ 4 ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಭಾಗವಹಿಸಲಿದೆ: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್


ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರಲ್ಲಿ ಐದು ಸಾಂಪ್ರದಾಯಿಕ ಕ್ರೀಡೆಗಳಿರುತ್ತವೆ:  ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್

ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ಗಾಗಿ ಲಾಂಛನ(ಲೋಗೋ), ಧ್ಯೇಯಗೀತೆ (ಆಂಥೆಮ್), ಕ್ರೀಡಾ ಉಡುಪು (ಜರ್ಸಿ) ಮತ್ತು ಮುಖವಾಡ(ಮ್ಯಾಸ್ಕಾಟ್ ) ಇಂದು ಪಂಚಕುಲದಲ್ಲಿ ಉದ್ಘಾಟಿಸಲಾಯಿತು

Posted On: 07 MAY 2022 4:23PM by PIB Bengaluru

ಇಂದು ಪಂಚಕುಲದ ಇಂದ್ರಧನುಷ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ಗಾಗಿ ಲಾಂಛನ(ಲೋಗೋ), ಧ್ಯೇಯಗೀತೆ (ಆಂಥೆಮ್), ಕ್ರೀಡಾ ಉಡುಪು (ಜರ್ಸಿ) ಮತ್ತು ಮುಖವಾಡ(ಮ್ಯಾಸ್ಕಾಟ್ ) ಗಳನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಬಿಡುಗಡೆ ಮಾಡಿದರು. “4 ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ದೇಶಾದ್ಯಂತದ 8500 ಆಟಗಾರರ ಅತಿದೊಡ್ಡ ತಂಡವು ಭಾಗವಹಿಸಲಿದೆ. ದೇಶದ ಜನಸಂಖ್ಯೆಯ ಕೇವಲ ಶೇ.2 ರಷ್ಟಿರುವ ಹರಿಯಾಣವು ಹೆಚ್ಚಿನ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಪದಕಗಳ ಪ್ರಮುಖ ಕೊಡುಗೆಯನ್ನು ನೀಡಿದೆ” ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಈ ಸಂದರ್ಭದಲ್ಲಿ ಹೇಳಿದರು. 

 

ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್, ಹರಿಯಾಣ ಉಪಮುಖ್ಯಮಂತ್ರಿ ಶ್ರೀ ಧುಷ್ಯಂತ್ ಚೌತಾಲಾ, ಹರಿಯಾಣ ವಿಧಾನಸಭೆ ಸ್ಪೀಕರ್ ಶ್ರೀ ಜ್ಞಾನ್ ಚಂದ್ ಗುಪ್ತಾ, ಹರಿಯಾಣ ಕ್ರೀಡಾ ಸಚಿವ ಶ್ರೀ ಸಂದೀಪ್ ಸಿಂಗ್, ಭಾರತ ಸರ್ಕಾರದ ಮಾಜಿ ಜಲಶಕ್ತಿ ರಾಜ್ಯ ಸಚಿವ ಶ್ರೀ ರತ್ತನ್ ಲಾಲ್ ಕಟಾರಿಯಾ ಮತ್ತು ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಸಂಜೀವ್ ಕೌಶಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.  

 

ಸಾಂಪ್ರದಾಯಿಕ ಕ್ರೀಡೆಗಳ ಸಂರಕ್ಷಣೆಗೆ ಒತ್ತು ನೀಡಿದ ಕೇಂದ್ರ ಸಚಿವ ಶ್ರೀ ಠಾಕೂರ್ ಅವರು “ಐದು ಸಾಂಪ್ರದಾಯಿಕ ಆಟಗಳಾದ ಗಟ್ಕಾ, ಕಲರಿಪಯಟ್ಟು, ತಂಗ್-ಟಾ, ಮಲ್ಲಕಂಬ ಮತ್ತು ಯೋಗಾಸನಗಳನ್ನು ಮುಂಬರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರ ಪ್ರಧಾನ ಕ್ರೀಡಾ ಸ್ಪರ್ಧೆಯ ಭಾಗವಾಗಲಿವೆ” ಎಂದು ಹೇಳಿದರು. “ಇತ್ತೀಚೆಗೆ ಮುಕ್ತಾಯಗೊಂಡ ಯುವ ಕ್ರೀಡಾಕೂಟ ಮತ್ತು ವಿಶ್ವವಿದ್ಯಾಲಯಗಳ ಕ್ರೀಡೆಗಳು ಭವಿಷ್ಯದಲ್ಲಿ ಖೇಲೋ ಇಂಡಿಯಾದ ಅಡಿಯಲ್ಲಿ ದೊಡ್ಡ ಕ್ರೀಡಾಸ್ಪರ್ಧೆಗಳಾಗಿ ಸಾಗಲು ಯುವಕರನ್ನು ಖಂಡಿತವಾಗಿಯೂ ಪ್ರೇರೇಪಿಸುತ್ತವೆ. ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲು ಭಾರತ ಸರ್ಕಾರವು ತನ್ನ ಪ್ರಯತ್ನದಲ್ಲಿ ಅಚಲವಾಗಿದೆ “ ಎಂದು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹೇಳಿದರು. 

 

“ರಾಜ್ಯವು ಕಾರ್ಯಕ್ರಮಕ್ಕೆ ಸಂಪೂರ್ಣ ತಯಾರಿ ನಡೆಸಿದೆ” ಎಂದು ತಿಳಿಸಿರುವ ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ಅನ್ನು ಆಯೋಜಿಸಲು ರಾಜ್ಯಕ್ಕೆ ಅವಕಾಶ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. “ಹರಿಯಾಣ ರಾಜ್ಯವು ದೇಶಕ್ಕಾಗಿ ಕೇವಲ ಆಹಾರ ಧಾನ್ಯಗಳನ್ನು ಮಾತ್ರ ಉತ್ಪಾದಿಸುತ್ತಿಲ್ಲ, ತಮ್ಮ ಕ್ರೀಡಾ ಪಟುಗಳ ಮೂಲಕ ದೇಶಕ್ಕೆ ಪದಕಗಳನ್ನು ನೀಡುತ್ತಿದೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸುದೃಢತೆಗೆ ಒಳ್ಳೆಯದು” ಎಂದು ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಅವರು ಹೇಳಿದರು.

 

ಹರ್ಯಾಣ ಉಪಮುಖ್ಯಮಂತ್ರಿ ಶ್ರೀ ಧುಷ್ಯಂತ್ ಚೌತಾಲಾ, ಹರಿಯಾಣದ ಕ್ರೀಡಾ ಸಚಿವ ಶ್ರೀ ಸಂದೀಪ್ ಸಿಂಗ್, ಹರಿಯಾಣ ವಿಧಾನಸಭಾಧ್ಯಕ್ಷ ಶ್ರೀ ಜ್ಞಾನ್ ಚಂದ್ ಗುಪ್ತಾ ಮತ್ತು ಮಾಜಿ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ಶ್ರೀ ರತ್ತನ್ ಲಾಲ್ ಕಟಾರಿಯಾ  ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

 

‘ಜಯ’ ಕಪ್ಪು ಚಿಗರೆ (ಬಕ್) ಮತ್ತು ‘ವಿಜಯ್’ ಹುಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಮುಖವಾಡವಾಗಿವೆ. ಖೇಲೋ ಇಂಡಿಯಾ ಯೂತ್ ಗೇಮ್ಸ್-21 ಗಾಗಿ ಹರಿಯಾಣದ ಮುಖವಾಡದ ಹೆಸರು ‘ಧಕಡ್’. 4ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ ಜೂನ್ 4 ರಿಂದ ಜೂನ್ 13, 2022  ರವರೆಗೆ ಹರಿಯಾಣದಲ್ಲಿ ನಡೆಯಲಿದೆ. 

 

***



(Release ID: 1823560) Visitor Counter : 215