ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇನ್ಸ್ ಚಲನಚಿತ್ರೋತ್ಸವ ಮಾರುಕಟ್ಟೆ ವಿಭಾಗದಲ್ಲಿ ಮೊದಲ ಗೌರವಾನ್ವಿತ ರಾಷ್ಟ್ರವಾಗಿ ಭಾರತ ಆಯ್ಕೆ


“ಗೋಸ್ ಟು ಕೇನ್ಸ್ ಸೆಕ್ಷನ್ “ ನಲ್ಲಿ ಕನ್ನಡದ ಜೈ ಶಂಕರ್ ಅವರ ‘ಶಿವಮ್ಮ’ ಚಲನಚಿತ್ರ ಪ್ರದರ್ಶನ - ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಘೋಷಣೆ

75 ನೇ ಕೇನ್ಸ್ ಚಿತ್ರೋತ್ಸವದ ವಿಶ್ವ ಪ್ರೀಮಿಯರ್ ನಲ್ಲಿ ಪ್ರದರ್ಶನಗೊಳ್ಳಲಿದೆ ಶ್ರೀ ಆರ್. ಮಾಧವನ್ ನಿರ್ಮಾಣದ “ರಾಕೆಟ್ರಿ” ಚಲನಚಿತ್ರ

ಕೇನ್ಸ್ ನೆಕ್ಸ್ಟ್ ನಲ್ಲಿ ಗೌರವಾನ್ವಿತ ದೇಶವಾಗಿ ಹೊರ ಹೊಮ್ಮಿದ ಭಾರತ

Posted On: 04 MAY 2022 6:10PM by PIB Bengaluru

ಫ್ರಾನ್ಸ್ ನಲ್ಲಿ ನಡೆಯಲಿರುವ 75ನೇ ಕೇನ್ಸ್ ಚಲನಚಿತ್ರೋತ್ಸವದ ಜೊತೆಗೆ ಆಯೋಜಿಸಲಾಗುವ ಮಾರ್ಚೆ’ಡು ಫಿಲ್ಮ್ ನಲ್ಲಿ ಭಾರತ ಅಧಿಕೃತ ಗೌರವದ ದೇಶವಾಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಹೇಳಿದ್ದಾರೆ. ಈ ನಿರ್ಧಾರ ಪ್ರಕಟಿಸಿದ ಸಚಿವರು, ಮಾರ್ಚೆ’ಡು ಫಿಲ್ಮ್ ಅಧಿಕೃತ ಕಂಟ್ರಿ ಆಫ್ ಹಾನರ್ ಗೌರವ ಹೊಂದಿರುವುದು ಇದೇ ಮೊದಲು ಮತ್ತು ಈ ವಿಶೇಷತೆ ಮುಂಬರುವ ಆವೃತ್ತಿಗಳಲ್ಲಿ ವಿವಿಧ ರಾಷ್ಟ್ರಗಳಿಗೆ ಪ್ರತಿ ವರ್ಷ ದೊರೆಯಲಿದೆ ಎಂದರು.

ಫ್ರಾನ್ಸ್ ಮತ್ತು ಭಾರತ ನಡುವೆ ರಾಜತಾಂತ್ರಿಕ ಬಾಂಧವ್ಯಕ್ಕೆ 75 ವರ್ಷಗಳು ತುಂಬುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಫ್ರಾನ್ಸ್ ಪ್ರವಾಸ ಮತ್ತು ಅಧ್ಯಕ್ಷ ಮ್ಯಾಕ್ರೋನ್ ಅವರೊಂದಿಗಿನ ಭೇಟಿಯ ನಡುವೆ  ಈ ಸುಸಂದರ್ಭದಲ್ಲಿ ಈ ಬೆಳವಣಿಗೆ ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.  ಇದೇ ಸಂದರ್ಭದಲ್ಲಿ  ಕೇನ್ಸ್ ಚಲನಚಿತ್ರೋತ್ಸವದ ಜೊತೆಗೆ ಆಯೋಜಿಸಲಾಗುವ ಮಾರ್ಚೆ ಡು ಫಿಲ್ಮ್ ನಲ್ಲಿ ಭಾರತವನ್ನು ಅಧಿಕೃತ ಗೌರವದ ದೇಶವಾಗಿ ಆಯ್ಕೆ ಮಾಡಲಾಗಿದೆ ಎಂದರು.

ಇದೇ ಮೊದಲ ಬಾರಿಗೆ ಮಾರ್ಚೆ ಡು ಫಿಲ್ಮ್ ನಲ್ಲಿ ಕಂಟ್ರಿ ಆಫ್ ಹಾನರ್ ಗೌರವವನ್ನು ಹೊಂದಲಾಗಿದೆ ಮತ್ತು ಭವಿಷ್ಯದ ಆವೃತ್ತಿಗಳಲ್ಲಿ ಇಂತಹ ವಿಶೇಷ ಗಮನ ಸೆಳೆಯುವ ನಿಟ್ಟಿನಲ್ಲಿ ವಿವಿಧ ದೇಶಗಳೊಂದಿಗೆ ಪ್ರತಿ ವರ್ಷ ಇದು ಮುಂದುವರೆಯಲಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಸಚಿವರು, ಕಂಟ್ರಿ ಆಫ್ ಹಾನರ್ ನ ಗೌರವ ಈ ಮೂಲಕ ಭಾರತದ ಉಪಸ್ಥಿತಿಯನ್ನು ವಿಶೇಷವಾಗಿ ಖಚಿತಪಡಿಸಲಾಗುತ್ತಿದೆ. ಭವ್ಯವಾದ ಕಡಲತಡಿಯಲ್ಲಿ ಆಯೋಜಿಸಲಾಗುವ ಮಾರ್ಚೆ ಡು ಫಿಲ್ಮ್ ನಲ್ಲಿ ದೇಶವನ್ನು ಕೇಂದ್ರೀಕರಿಸಲಾಗುತ್ತದೆ. ಭಾರತವನ್ನು ಪ್ರತಿಬಿಂಬಿಸುವ ಸಂದರ್ಭದಲ್ಲಿ ಇಲ್ಲಿನ ಸಿನೆಮಾ, ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಅನಾವರಣಗೊಳಿಸಲಾಗುತ್ತದೆ. ಜಾನಪದ ಸಂಗೀತ, ಬಾಣ ಬಿರುಸುಗಳೊಂದಿಗೆ ಗಾಯನತಂಡಗಳಿಂದ ರಾತ್ರಿ ಸಮಯದಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಭಾರತ ಮತ್ತು ಫ್ರೆಂಚ್ ನ ಖಾದ್ಯಗಳನ್ನು ಬಡಿಸಲಾಗುತ್ತದೆ.  ಮುಂದಿನ ಕೇನ್ಸ್ ನಲ್ಲಿ ಭಾರತ ಗೌರವಾನ್ವಿತ ದೇಶವಾಗಿದ್ದು, ಇದರಡಿ ಶ್ರವಣ ಮತ್ತು ದೃಶ್ಯ ವಲಯದ ಉದ್ಯಮಕ್ಕೆ ಉತ್ತೇಜನ ನೀಡಲು ಐದು ಹೊಸ ನವೋದ್ಯಮಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅನಿಮೇಷನ್ ಡೇ ನೆಟ್ ವರ್ಕಿಂಗ್ ನಲ್ಲಿ ಹತ್ತು ಮಂದಿ ವೃತ್ತಿಪರರು ಇದರಲ್ಲಿ ಭಾಗವಹಿಸಲಿದ್ದಾರೆ.

ಜಾಗತಿಕ ಮಟ್ಟದ ಚಿತ್ರೋತ್ಸವದಲ್ಲಿ ಭಾರತ ಪಾಲ್ಗೊಳ್ಳುತ್ತಿದ್ದು, ಇದರ ಮತ್ತೊಂದು ಮುಖ್ಯಾಂಶವೆಂದರೆ ಶ್ರೀ ಆರ್. ಮಾಧವನ್ ಅವರು ನಿರ್ಮಿಸಿರುವ “ರಾಕೆಟ್ರಿ” ಚಲನಚಿತ್ರ ವಿಶ್ವ ಪ್ರೀಮಿಯರ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಲನಚಿತ್ರ 2022 ರ ಮೇ 19 ರಂದು ಪಲೈಸ್ ಕೆ ನ ಸ್ಕ್ರೀನಿಂಗ್ ನಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

“ಗೋಸ್ ಟು ಕೇನ್ಸ್ ಸೆಕ್ಷನ್ “ ನಲ್ಲಿ ಭಾರತದ ಐದು ಚಲನಚಿತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಚಲನಚಿತ್ರಗಳು ಫಿಲ್ಮ್ ಬಜಾರ್ ನ ಡಬ್ಲ್ಯೂಐಪಿ ಪ್ರಯೋಗಾಲಯದ ಭಾಗವಾಗಿವೆ.

1.    ಜೈಚೆಂಗ್ ಝ್ಕ್ಸಾಯ್ ದೋಹೊಟಿಯಾ ಅವರ ಅಸ್ಸಾಮಿ ಮೊರಾನದ ‘ಬಾಗ್ಜಾನ್’

2.    ಶೈಲೇಂದ್ರ ಸಾಹು ಅವರ ಹಿಂದಿ, ಚತ್ತೀಸ್ ಗಢಿಯ ‘ಬೈಲಾಡಿಲಾ’

3.    ಹಿಂದಿಯಿಂದ ಏಕ್ತಾರಾ ಕಲೆಕ್ಟೀವ್ ನಿಂದ ನಿರ್ಮಾಣವಾದ “ಏಕ್ ಜಗಾಹ್ ಅಪ್ನಿ” [ನಮ್ಮದೇ ಆದ ಒಂದು ಸ್ಥಳ]

4.    ನಂತರ ಹರ್ಷದ್ ನಲ್ವಡೆ ಅವರ – ಮರಾಠಿ. ಕನ್ನಡ, ಹಿಂದಿ

5.    ಜೈ ಶಂಕರ್ ಅವರ ‘ಶಿವಮ್ಮ’ ಕನ್ನಡ  ಚಲನಚಿತ್ರ ಪ್ರದರ್ಶನವಾಗಲಿದೆ.

  ಬಿಡುಗಡೆಯಾಗದ ಚಲನಚಿತ್ರ ವಿಭಾಗದಲ್ಲಿ ಪ್ರದರ್ಶನಕ್ಕಾಗಿ 2022 ರ ಮೇ 22 ರಂದು ಒಲಂಪಿಯಾ ಸ್ಕ್ರೀನ್ ಎಂದು ಕರೆಯಲ್ಪಡುವ ಸಿನೆಮಾ ಮಂದಿರವನ್ನು ಭಾರತಕ್ಕಾಗಿ ಮೀಸಲಿಡಲಾಗಿದೆ. ಈ ವಿಭಾಗದಲ್ಲಿ ಐದು ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

·       ಕ್ಲಾಸಿಕ್ ವಿಭಾಗದಲ್ಲಿ ಸಿನೆಮಾ ಡೆ ಪ್ಲಗೆ ವಿಭಾಗದಲ್ಲಿ ಸತ್ಯಜಿತ್ ರೇ ಅವರ ಅತ್ಯುನ್ನತ ಚಿತ್ರ ಪ್ರತಿಧ್ವನಿಯನ್ನು ಪ್ರದರ್ಶಿಸಲಾಗುತ್ತಿದೆ.  

·       “ಭಾರತವನ್ನು ವಿಶ್ವದ ವಿಷಯ ಕೇಂದ್ರೀತ ಭಾಗ”ದ ಅಂಗವಾಗಿ ಮನೋರಂಜನಾ ಕ್ಷೇತ್ರದ ನಾಯಕರನ್ನು ಒಳಗೊಂಡ ಮತ್ತು ಭಾರತಕ್ಕೆ ನಿಗದಿಯಾದ ಒಂದು ಗಂಟೆಯ ಸಮ್ಮೇಳವನ್ನು ಮುಖ್ಯ ವೇದಿಕೆಯಲ್ಲಿ ಆಯೋಜಿಸಲಾಗುತ್ತಿದೆ. ಇಂಡಿಯಾ ಫೋರಂ ನಲ್ಲಿ ನೂರಾರು ಅತಿಥಿಗಳು ಪಾಲ್ಗೊಳ್ಳುತ್ತಿದ್ದು, ಇದು ಆನ್ ಲೈನ್ ನಲ್ಲಿ ನೇರ ಪ್ರಸಾರವಾಗಲಿದೆ.

·       ಇಂಡಿಯಾ ಪೆವಿಲಿಯನ್ – ಈ ವರ್ಷದ ವೇದಿಕೆಯ ವಿಷಯ “ಇಂಡಿಯಾ ದಿ ಕಂಟೆಂಟ್ ಹಬ್ ಆಫ್ ದಿ ವರ್ಲ್ಡ್“ ಎಂಬುದಾಗಿದೆ. 2022 ರ ಮೇ 18 ರಂದು ಇದನ್ನು ಉದ್ಘಾಟಿಸಲಾಗುತ್ತಿದೆ. ಇದು ದೇಶದ ಭಾಷೆ, ಸಂಸ್ಕೃತಿ ಮತ್ತು ಪ್ರಾದೇಶಿಕ ವೈವಿಧ್ಯತೆಗಳಲ್ಲಿ ಭಾರತೀಯ ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಚಲನಚಿತ್ರದ ಚಿತ್ರೀಕರಣ, ವಿತರಣೆ, ನಿರ್ಮಾಣ, ಚಿತ್ರಕಥೆ, ಅಭಿವೃದ್ಧಿ, ತಂತ್ರಜ್ಞಾನ, ಚಲನಚಿತ್ರ ಮಾರಾಟ ಕ್ಷೇತ್ರವನ್ನು ಉತ್ತೇಜಿಸುವ, ಅಂತರರಾಷ್ಟ್ರೀಯ ಪಾಲುದಾರಿಕೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಜಾಗತಿಕ ಸಮುದಾಯದ ಪ್ರತಿನಿಧಿಗಳೊಂದಿಗೆ ಇದು ಸಂಪರ್ಕದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

·       ನಂತರ ‘ಇವಿನಿಂಗ್ ಫಾರ್ ಇಂಡಿಯಾ ರಿಸೆಪ್ಷನ್ ‘ ನಲ್ಲಿ ಜಾನಪದ ಸಂಗೀತ ಮತ್ತು ಜಾಝ್ ಸಂಗೀತ ಏರ್ಪಡಿಸಲಾಗಿದೆ.

***



(Release ID: 1822930) Visitor Counter : 205