ಪ್ರಧಾನ ಮಂತ್ರಿಯವರ ಕಛೇರಿ

ಡೆನ್ಮಾರ್ಕ್ ನ  ಪ್ರಧಾನಮಂತ್ರಿಯವರೊಂದಿಗೆ  ಪ್ರಧಾನಮಂತ್ರಿಯವರು ನಡೆಸಿದ ಸಭೆಯ ಪತ್ರಿಕಾ ಪ್ರಕಟಣೆ

Posted On: 03 MAY 2022 6:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡೆನ್ಮಾರ್ಕ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್  ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಉಭಯ ನಾಯಕರು ಪರಸ್ಪರ ಸಭೆ ನಡೆಸಿದ  ನಂತರ ನಿಯೋಗ ಮಟ್ಟದ ಮಾತುಕತೆ ನಡೆಸಿದರು.

ಭಾರತ-ಡೆನ್ಮಾರ್ಕ್ ಹಸಿರು ವ್ಯೂಹಾತ್ಮಕ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಪರಿಶೀಲಿಸಿದರು. ಚರ್ಚೆಗಳು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಒಳಗೊಂಡಿವೆ, ವಿಶೇಷವಾಗಿ ಕಡಲಾಚೆಯ ಗಾಳಿ ಶಕ್ತಿ ಮತ್ತು ಹಸಿರು ಹೈಡ್ರೋಜನ್, ಹಾಗೆಯೇ ಕೌಶಲ್ಯ ಅಭಿವೃದ್ಧಿ, ಆರೋಗ್ಯ, ಹಡಗು, ನೀರು ಮತ್ತು ಆರ್ಕ್ಟಿಕ್ ಸಮುದ್ರ ಪ್ರದೇಶ, ಮುಂತಾದ  ಇತರೇ ವಿಷಯಗಳು ಇವುಗಳಲ್ಲಿ ಒಳಗೊಂಡಿದೆ.

ನಮ್ಮ ಪ್ರಮುಖ ಕಾರ್ಯಕ್ರಮಗಳಿಗೆ ಭಾರತದಲ್ಲಿ ಡ್ಯಾನಿಶ್ ಕಂಪನಿಗಳ ಸಕಾರಾತ್ಮಕ ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಡೆನ್ಮಾರ್ಕ್ ನಲ್ಲಿರುವ ಭಾರತೀಯ ಕಂಪನಿಗಳ ಸಕಾರಾತ್ಮಕ ಪಾತ್ರ ಮತ್ತು ಕೊಡುಗೆಗಳನ್ನು ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀಮತಿ ಫ್ರೆಡೆರಿಕ್ಸನ್ ಅವರು ವಿವರಿಸಿದರು.

ಉಭಯ ದೇಶಗಳ ನಡುವಿನ ಜನರ ನಡುವಿನ ಸಂಬಂಧಗಳನ್ನು ವಿಸ್ತರಿಸುತ್ತಿರುವ ವಿಧಿವಿಧಾನಗಳನ್ನು ಇಬ್ಬರೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ವಲಸೆ ಮತ್ತು ಚಲನಶೀಲ ಪಾಲುದಾರಿಕೆಯ ಉದ್ದೇಶದ ಒಪ್ಪಂದಗಳ ಘೋಷಣೆಗಳನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

ಇಬ್ಬರೂ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ನಿಯೋಗ ಮಟ್ಟದ ಮಾತುಕತೆಯ ನಂತರ ಜಂಟಿ ಹೇಳಿಕೆಯನ್ನು ಅಂಗೀಕರಿಸಲಾಯಿತು,ಅದನ್ನು ಇಲ್ಲಿ ನೋಡಬಹುದು.

​​

ಎರಡೂ ದೇಶಗಳು ಪರಸ್ಪರ ತೀರ್ಮಾನಿಸಲಾದ ಒಪ್ಪಂದಗಳ ಪಟ್ಟಿಯನ್ನು.ಇಲ್ಲಿ ನೋಡಬಹುದು.

 

***



(Release ID: 1822406) Visitor Counter : 155