ಸಂಪುಟ
azadi ka amrit mahotsav

ಶರತ್ಕಾಲ (ಖಾರಿಫ್) ಋತುವಿಗಾಗಿ (01.04.2022 ರಿಂದ 30.09.2022 ರವರೆಗೆ) ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.) ದರಗಳನ್ನು ಸಂಪುಟ ಸಭೆ ಅನುಮೋದಿಸಿದೆ


2022ರ ಶರತ್ಕಾಲ (ಖಾರಿಫ್) ಋತುವಿಗಾಗಿ ಸಂಪುಟ ಅನುಮೋದಿಸಿದ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.) – ಮೊತ್ತ ರೂ. 60,939.23 ಕೋಟಿ

 ಪ್ರತಿ ಚೀಲದ ಸಬ್ಸಿಡಿಯಲ್ಲಿ ಕಳೆದ ವರ್ಷಕ್ಕಿಂತ 50% ರಷ್ಟು ಅಧಿಕವಾಗಿದೆ

Posted On: 27 APR 2022 4:52PM by PIB Bengaluru

 ಶರತ್ಕಾಲ (ಖಾರಿಫ್) ಋತುವಿಗಾಗಿ - 2022 (01.04.2022 ರಿಂದ 30.09.2022 ವರೆಗೆ) ರಂಜಕ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ ದರಗಳ ಆಧಾರದಲ್ಲಿ ರಸಗೊಬ್ಬರ ಇಲಾಖೆ ಮಾಡಿರುವ ಪ್ರಸ್ತಾವನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದಿಸಿದೆ.  

 ಹಣಕಾಸಿನ ಪರಿಣಾಮಗಳು:

 ಶರತ್ಕಾಲ (ಖಾರಿಫ್) ಋತುವಿಗಾಗಿ - 2022 (01.04.2022 ರಿಂದ 30.09.2022 ರವರೆಗೆ)  ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದಿಸಿದ ಪೋಷಕಾಂಶ ಆಧಾರಿತ ಸಬ್ಸಿಡಿಯು ರೂ. 60,939.23 ಕೋಟಿಗಳು, ಇದರಲ್ಲಿ ಸ್ಥಳೀಯ ಉತ್ಪಾದನೆಗೆ ಬೆಂಬಲ ಜೊತೆಗೆ ಸರಕು ಸಾಗಣೆ ಸಬ್ಸಿಡಿ ಮತ್ತು ಹೆಚ್ಚುವರಿ ಬೆಂಬಲದ ಮೂಲಕ ದೇಶೀಯ ರಸಗೊಬ್ಬರ ಉತ್ಪಾದನೆ ಹಾಗೂ ಡಿಎಪಿಯ ಆಮದುಗಳಿಗೆ ಬೆಂಬಲ ಕೂಡ ಸೇರಿದೆ.

 ಪ್ರಯೋಜನಗಳು:

 ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಮತ್ತು ಅದರ ಕಚ್ಚಾ ವಸ್ತುಗಳ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಹೆಚ್ಚಳವನ್ನು ಪ್ರಾಥಮಿಕವಾಗಿ ಕೇಂದ್ರ ಸರ್ಕಾರವು ಬರಿಸಿಕೊಳ್ಳುತ್ತದೆ.  ಪ್ರತಿ ಚೀಲಕ್ಕೆ ಕಳೆದ ವರ್ಷ ನೀಡಿರುವ ರೂ.1650 ರ  ಡಿಎಪಿ ಸಬ್ಸಿಡಿ ಬದಲಿಗೆ ಈ ವರ್ಷ ರೂ. 2501 ಗಳ ಸಹಾಯಧನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಇದು ಕಳೆದ ವರ್ಷದ ಸಬ್ಸಿಡಿ ದರಗಳಿಗಿಂತ 50% ಅಧಿಕವಾಗಿದೆ.  ಡಿಎಪಿ  ಮತ್ತು ಅದರ ಕಚ್ಚಾ ವಸ್ತುಗಳ ಬೆಲೆಗಳಲ್ಲಿ ಹೆಚ್ಚಳವು ಅಂದಾಜು 80% ವ್ಯಾಪ್ತಿಯಲ್ಲಿದೆ. ಈ ಮೂಲಕ , ಕೈಗೆಟುಕುವ ಮತ್ತು ಸಮಂಜಸವಾದ  ದರಗಳಲ್ಲಿ ಅಧಿಸೂಚಿತ ಪಿ& ಕೆ ರಸಗೊಬ್ಬರಗಳನ್ನು ಸಬ್ಸಿಡಿ ಜೊತೆಗೆ ಪಡೆಯಲು ರೈತರಿಗೆ ಸಹಾಯವಾಗುತ್ತದೆ ಮತ್ತು ಕೃಷಿ ವಲಯವನ್ನು ಬೆಂಬಲಿಸಿದಂತಾಗುತ್ತದೆ. 

 ಅನುಷ್ಠಾನದ ಕಾರ್ಯತಂತ್ರ ಮತ್ತು ಗುರಿಗಳು:

 ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಶರತ್ಕಾಲ (ಖಾರಿಫ್) ಋತುವಿಗಾಗಿ - 2022 (01.04.2022 ರಿಂದ 30.09.2022 ರವರೆಗೆ ಅನ್ವಯವಾಗುವ) ಎ.ಬಿ.ಎಸ್. ದರಗಳ ಆಧಾರದ ಮೇಲೆ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಒದಗಿಸಲಾಗುತ್ತದೆ

ಕೈಗೆಟಕುವ ಬೆಲೆಯಲ್ಲಿ ರೈತರಿಗೆ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಶರತ್ಕಾಲ (ಖಾರಿಫ್) ಋತುವಿಗಾಗಿ - 2022 (01.04.2022 ರಿಂದ 30.09.2022 ರವರೆಗೆ ಅನ್ವಯವಾಗುವ) ಎನ್.ಬಿ.ಎಸ್. ದರಗಳ ಆಧಾರದ ಮೇಲೆ ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ನೀಡಲಾಗುತ್ತದೆ.

 ಹಿನ್ನೆಲೆ:

 ರಸಗೊಬ್ಬರ ತಯಾರಕರು/ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಯೂರಿಯಾ ಮತ್ತು 25 ದರ್ಜೆಯ ಪಿ & ಕೆ ರಸಗೊಬ್ಬರಗಳನ್ನು ಲಭ್ಯವಾಗುವಂತೆ ಸರ್ಕಾರ ವ್ಯವಸ್ಥೆ ಮಾಡುತ್ತದೆ. ಈ ಯೋಜನೆಯ ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010 ರಿಂದ ಎನ್.ಬಿ.ಎಸ್. ಯೋಜನೆಯಡಿಯಲ್ಲಿ ಸರ್ಕಾರ ನಿಯಂತ್ರಿಸಲಾಗುತ್ತದೆ ಮತ್ತು ಈ ಮೂಲಕ ಕೈಗೆಟಕುವ ಬೆಲೆಯಲ್ಲಿ ರೈತರಿಗೆ ಪಿ&ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.  ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ಗಳ ಅಂತರಾಷ್ಟ್ರೀಯ ಬೆಲೆಗಳಲ್ಲಿ ಹೆಚ್ಚಳ, ಗೊಬ್ಬರ ಮತ್ತು ಕಚ್ಚಾವಸ್ತುಗಳ ಒಳಹರಿವಿನ ವೆಚ್ಚದಲ್ಲಿ ಆಗಿರುವ ಹೆಚ್ಚಳದ ದೃಷ್ಟಿಯಿಂದ, ಡಿಎಪಿ ಸೇರಿದಂತೆ ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ಹೆಚ್ಚಿದ ಬೆಲೆಗಳನ್ನು ಅಧಿಕ ಸಬ್ಸಿಡಿ ಮೂಲಕ ಕಡೆಮೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಅನುಮೋದಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗುವುದು, ಇದರಿಂದ ಅವರು ಅಧಿಕ ಬೆಲೆಯ ರಸಗೊಬ್ಬರಗಳನ್ನು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಪೂರೈಕೆ ಮಾಡಬಹುದು.

 

*****
 


(Release ID: 1820737) Visitor Counter : 281