ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಬಾಂಧವ್ಯಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದ 16 ಯೂಟ್ಯೂಬ್ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ.
ಐಟಿ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರ ಬಳಸಿಕೊಂಡು 10 ಭಾರತೀಯ ಮತ್ತು 6 ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ ಗಳ ನಿರ್ಬಂಧ.
ಯುಟ್ಯೂಬ್ ಚಾನೆಲ್ ಗಳು ಭಾರತದಲ್ಲಿ ಭೀತಿಯನ್ನು ಸೃಷ್ಟಿಸಲು, ಕೋಮು ಸಾಮರಸ್ಯ ಹಾಳು ಮಾಡಲು ಪ್ರಚೋದನಕಾರಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡಲು ಸುಳ್ಳು, ಪರಿಶೀಲಿಸದ ಮಾಹಿತಿಯನ್ನು ಹರಡುತ್ತಿದ್ದವು.
ಯೂಟ್ಯೂಬ್ ಆಧಾರಿತ ಸುದ್ದಿ ವಾಹಿನಿಗಳು 68 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದವು
Posted On:
25 APR 2022 5:41PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯವು 2021ರ ಐಟಿ ನಿಯಮಗಳ ಅಡಿಯಲ್ಲಿ ತುರ್ತು ಅಧಿಕಾರಗಳನ್ನು ಬಳಸಿಕೊಂಡು, 22.04.2022 ರಂದು ಎರಡು ಪ್ರತ್ಯೇಕ ಆದೇಶಗಳ ಮೂಲಕ ಹದಿನಾರು (16) ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್ ಗಳು ಮತ್ತು ಒಂದು (1) ಫೇಸ್ಬುಕ್ ಖಾತೆಯನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ.
ನಿರ್ಬಂಧಿಸಲಾದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪಾಕಿಸ್ತಾನ ಮೂಲದ ಆರು ಮತ್ತು ಭಾರತ ಮೂಲದ ಹತ್ತು ಯೂಟ್ಯೂಬ್ ಸುದ್ದಿ ವಾಹಿನಿಗಳು ಸೇರಿವೆ, ಇದು ಒಟ್ಟಾರೆ 68 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿತ್ತು. ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಾಂಗ ಬಾಂಧವ್ಯಗಳು, ದೇಶದಲ್ಲಿ ಕೋಮು ಸೌಹಾರ್ದತೆ ಕದಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲು ಈ ಚಾನೆಲ್ ಗಳನ್ನು ಬಳಸಲಾಗಿದೆ ಎಂಬುದನ್ನು ಗಮನಿಸಲಾಗಿದೆ. ಐಟಿ ನಿಯಮಗಳು, 2021 ರ ನಿಯಮ 18 ರ ಅಡಿಯಲ್ಲಿ ಅಗತ್ಯವಿರುವ ಮಾಹಿತಿಯನ್ನು ಯಾವುದೇ ಡಿಜಿಟಲ್ ಸುದ್ದಿ ಪ್ರಕಾಶಕರು ಸಚಿವಾಲಯಕ್ಕೆ ಒದಗಿಸಿರಲಿಲ್ಲ.
ವಸ್ತು ವಿಷಯದ ಸ್ವರೂಪ
ಭಾರತ ಮೂಲದ ಕೆಲವು ಯೂಟ್ಯೂಬ್ ಚಾನೆಲ್ ಗಳು ಪ್ರಕಟಿಸಿದ ವಿಷಯವು ಒಂದು ಸಮುದಾಯವನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿದ್ದು, ವಿವಿಧ ಧಾರ್ಮಿಕ ಸಮುದಾಯಗಳ ಸದಸ್ಯರಲ್ಲಿ ದ್ವೇಷವನ್ನು ಪ್ರಚೋದಿಸಿದ್ದವು. ಅಂತಹ ವಸ್ತು ವಿಷಯವು ಕೋಮು ದ್ವೇಷವನ್ನು ಸೃಷ್ಟಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡುವ ಸಾಮರ್ಥ್ಯವನ್ನು ಹೊಂದಿರುವುದು ಕಂಡುಬಂದಿದೆ.
ಭಾರತ ಮೂಲದ ಅನೇಕ ಯೂಟ್ಯೂಬ್ ಚಾನೆಲ್ ಗಳು ಪರಿಶೀಲಿಸದ ಸುದ್ದಿ ಮತ್ತು ವೀಡಿಯೊಗಳನ್ನು ಪ್ರಕಟಿಸುವ ಮೂಲಕ ಸಮಾಜದ ವಿವಿಧ ವರ್ಗಗಳಲ್ಲಿ ಭೀತಿಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುವುದನ್ನು ಗಮನಿಸಲಾಗಿದೆ. ಉದಾಹರಣೆಗೆ ಕೋವಿಡ್ -19 ರ ಕಾರಣದಿಂದಾಗಿ ಭಾರತದಾದ್ಯಂತ ಲಾಕ್ ಡೌನ್ ಘೋಷಣೆಗೆ ಸಂಬಂಧಿಸಿದ ಸುಳ್ಳು ವರದಿಗಳನ್ನು ಪ್ರಕಟಿಸಿ ಮತ್ತು ಆ ಮೂಲಕ ವಲಸೆ ಕಾರ್ಮಿಕರಿಗೆ ಬೆದರಿಕೆಯೊಡ್ಡುವುದು ಮತ್ತು ಕೆಲವು ಧಾರ್ಮಿಕ ಸಮುದಾಯಗಳಿಗೆ ಬೆದರಿಕೆಗಳನ್ನು ಹೇರುವ ಕಲ್ಪಿತ ವರದಿಗಳು ಇತ್ಯಾದಿಗಳು ಸೇರಿವೆ. ಅಂತಹ ವಿಷಯವು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂಬುದನ್ನೂ ಗಮನಿಸಲಾಗಿದೆ.ಉಕ್ರೇನ್ ನಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ವಿದೇಶಾಂಗ ಸಂಬಂಧಗಳಂತಹ ವಿವಿಧ ವಿಷಯಗಳ ಬಗ್ಗೆ ಭಾರತದ ಬಗ್ಗೆ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಲು ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ ಗಳನ್ನು ಸಂಘಟಿತ ರೀತಿಯಲ್ಲಿ ಬಳಸಲಾಗಿರುವುದು ಕಂಡುಬಂದಿದೆ. ರಾಷ್ಟ್ರೀಯ ಭದ್ರತೆ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ ಮತ್ತು ವಿದೇಶಿ ರಾಜ್ಯಗಳೊಂದಿಗಿನ ಭಾರತದ ಸ್ನೇಹಪರ ಸಂಬಂಧಗಳ ದೃಷ್ಟಿಕೋನದಿಂದ ಈ ವಾಹಿನಿಗಳ ವಿಷಯವು ಸಂಪೂರ್ಣವಾಗಿ ಸುಳ್ಳು ಮತ್ತು ಗಂಭೀರವಾಗಿದೆ ಎಂದೂ ಗಮನಿಸಲಾಗಿದೆ.2022ರ ಏಪ್ರಿಲ್ 22ರಂದು, ಸಚಿವಾಲಯವು ಖಾಸಗಿ ಟಿವಿ ಸುದ್ದಿ ವಾಹಿನಿಗಳಿಗೆ ಸುಳ್ಳು ಆರೋಪಗಳನ್ನು ಮಾಡದಂತೆ ಮತ್ತು ಮಾನಹಾನಿಕರ ತಲೆಬರಹಗಳನ್ನು ಬಳಸದಂತೆ ಸಲಹೆ ನೀಡಿತ್ತು. ಮುದ್ರಣ, ದೂರದರ್ಶನ ಮತ್ತು ಆನ್ ಲೈನ್ ಮಾಧ್ಯಮಗಳಲ್ಲಿ ಭಾರತದಲ್ಲಿ ಸುರಕ್ಷಿತ ಮತ್ತು ಸುಭದ್ರ ಮಾಹಿತಿ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ.
ಕಿರುಚಿತ್ರ: ಭಾರತಕ್ಕೆ ನಿರ್ಬಂಧ ವಿಧಿಸುವಂತೆ ಜರ್ಮನಿ ಆಗ್ರಹ
ಕಿರುಚಿತ್ರ: ಭಾರತಕ್ಕೆ ತೈಲ ರಫ್ತನ್ನು ನಿಲ್ಲಿಸುವುದಾಗಿ ಸೌದಿ ಘೋಷಣೆ.
ಕಿರುಚಿತ್ರ: ಭಾರತದ ಎಸ್ 400 ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ ಟರ್ಕಿ
ಕಿರುಚಿತ್ರ: ಭಾರತದ 90 ಶತಕೋಟಿಯ ನೌಕಾಪಡೆಯನ್ನು ಮುಳುಗಿಸಿದ ಪಾಕಿಸ್ತಾನ
ಕಿರುಚಿತ್ರ: ಉಕ್ರೇನ್ ನಲ್ಲಿ 40 ಭಾರತೀಯ ಯೋಧರನ್ನು ಗಲ್ಲಿಗೇರಿಸುವುದಾಗಿ ಘೋಷಿಸಿದ ರಷ್ಯಾ
ಕಿರುಚಿತ್ರ: ಭಾರತದಿಂದ ಕಾಶ್ಮೀರಕ್ಕೆ ಅಮೆರಿಕ ಆಗ್ರಹ
ಕಿರುಚಿತ್ರ: ಭಾರತೀಯ ಸೇನೆಯ ಮೇಲೆ ಸತತ ದಾಳಿ, 24 ರಾಜ್ಯಗಳು ಬೇರ್ಪಡಬಹುದು.
ಕಿರುಚಿತ್ರ: ಎಂಬಿಎಸ್ ನ ದೊಡ್ಡ ಘೋಷಣೆ ಎಲ್ಲಾ ಭಾರತೀಯರನ್ನು ಸ್ಥಳಾಂತರಿಸಲು ಆದೇಶ
ನಿರ್ಬಂಧಿಸಲಾದ ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳು
ಯೂಟ್ಯೂಬ್ ಚಾನಲ್ ಗಳು
ಕ್ರ.ಸಂ.
|
ಯೂ ಟ್ಯೂಬ್ ಚಾನಲ್ ಹೆಸರು
|
ಮಾಧ್ಯಮ ಅಂಕಿಅಂಶಗಳು
|
1.
|
ಸೈನಿ ಎಡ್ಯುಕೇಷನ್ ರಿಸರ್ಚ್
|
5,870,029 ವೀಕ್ಷಣೆಗಳು
59,700 ಚಂದಾದಾರರು
|
2.
|
ಹಿಂದಿ ಮೇ ದೇಖೋ
|
26,047,357 ವೀಕ್ಷಣೆಗಳು
3,53,000 ಚಂದಾದಾರರು
|
3.
|
ಟೆಕ್ನಿಕಲ್ ಯೋಗೇಂದ್ರ
|
8,019,691 ವೀಕ್ಷಣೆಗಳು
2,90,000 ಚಂದಾದಾರರು
|
4.
|
ಆಜ್ ತೆ ನ್ಯೂಸ್
|
3,249,179 ವೀಕ್ಷಣೆಗಳು
ಚಂದಾದಾರರು: ಅನ್ವಯವಾಗುವುದಿಲ್ಲ
|
5.
|
ಎಸ್.ಬಿ.ಬಿ ನ್ಯೂಸ್
|
161,614,244 ವೀಕ್ಷಣೆಗಳು
ಚಂದಾದಾರರು: ಅನ್ವಯವಾಗುವುದಿಲ್ಲ
|
6.
|
ಡಿಫೆನ್ಸ್ ನ್ಯೂಸ್ 24 x 7
|
13,356,737 ವೀಕ್ಷಣೆಗಳು
ಚಂದಾದಾರರು: ಅನ್ವಯವಾಗುವುದಿಲ್ಲ
|
7.
|
ದಿ ಸ್ಟಡಿ ಟೈಮ್
|
57,634,260 ವೀಕ್ಷಣೆಗಳು
3,65,000 ಚಂದಾದಾರರು
|
8.
|
ಲೇಟೆಸ್ಟ್ ಅಪ್ ಡೇಟ್
|
34,372,518 ವೀಕ್ಷಣೆಗಳು
ಚಂದಾದಾರರು: ಅನ್ವಯವಾಗುವುದಿಲ್ಲ
|
9.
|
ಎಂ.ಆರ್.ಎಫ್. ಟಿವಿ ಲೈವ್
|
1,960,852 ವೀಕ್ಷಣೆಗಳು
26,700 ಚಂದಾದಾರರು
|
10.
|
ತಹಾಫುಜ್-ಇ-ದೀನ್ ಇಂಡಿಯಾ
|
109,970,287 ವೀಕ್ಷಣೆಗಳು
7,30,000 ಚಂದಾದಾರರು
|
|
ಒಟ್ಟು
|
ವೀಕ್ಷಣೆಗಳು: 42,20,95,154
25,54,400 ಚಂದಾದಾರರು
|
ಪಾಕಿಸ್ತಾನ ಮೂಲದ ಯೂ ಟ್ಯೂಬ್ ಚಾನೆಲ್ ಗಳು
|
11.
|
ಅಜ್ ತಕ್ ಪಾಕಿಸ್ತಾನ್
|
6,04,342 ವೀಕ್ಷಣೆಗಳು
ಚಂದಾದಾರರು: ಅನ್ವಯವಾಗುವುದಿಲ್ಲ.
|
12.
|
ಡಿಸ್ಕವರ್ ಪಾಯಿಂಟ್
|
10,319,900 ವೀಕ್ಷಣೆಗಳು
70,600 ಚಂದಾದಾರರು
|
13.
|
ರಿಯಾಲಿಟಿ ಚೆಕ್ಸ್
|
2,220,519 ವೀಕ್ಷಣೆಗಳು
ಚಂದಾದಾರರು: ಅನ್ವಯವಾಗುವುದಿಲ್ಲ
|
14.
|
ಕೈಸರ್ ಖಾನ್
|
49,628,946 ವೀಕ್ಷಣೆಗಳು
4,70,000 ಚಂದಾದಾರರು
|
15.
|
ದಿ ವಾಯ್ಸ್ ಆಫ್ ಏಷ್ಯಾ
|
32,438,352 ವೀಕ್ಷಣೆಗಳು
ಚಂದಾದಾರರು: ಅನ್ವಯವಾಗುವುದಿಲ್ಲ
|
16.
|
ಬೋಲ್ ಮೀಡಿಯಾ ಬೋಲ್
|
167,628,947 ವೀಕ್ಷಣೆಗಳು
1,1,60,000 ಚಂದಾದಾರರು
|
|
ಒಟ್ಟು
|
ವೀಕ್ಷಣೆಗಳು: 26,28,41,006
ಚಂದಾದಾರರು: 17,00,600
|
ಫೇಸ್ ಬುಕ್ ಖಾತೆ
ಕ್ರ.ಸಂ
|
ಫೇಸ್ ಬುಕ್ ಖಾತೆ
|
ಫಾಲೋ ಮಾಡುತ್ತಿರುವವರ ಸಂಖ್ಯೆ
|
-
|
ತಹಫಫುಜ್ ಇ ದೀನ್ ಮೀಡಿಯಾ ಸರ್ವೀಸಸ್ ಇಂಡಿಯಾ
|
23,039
|
**************
(Release ID: 1820008)
Visitor Counter : 270