ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಹಣಕಾಸು ವರ್ಷ 2021-22 ರಲ್ಲಿಪಿಎಂಇಜಿಪಿ ಅಡಿಯಲ್ಲಿಅತ್ಯಧಿಕ ಉದ್ಯೋಗವನ್ನು ಸೃಷ್ಟಿಸುವಲ್ಲಿಕೆವಿಐಸಿ ಹಿಂದಿನ ಎಲ್ಲದಾಖಲೆಗಳನ್ನು ಮುರಿದಿದೆ

Posted On: 19 APR 2022 2:38PM by PIB Bengaluru

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗಕ್ಕೆ (ಕೆವಿಐಸಿ) ಪ್ರಮುಖ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮವನ್ನು (ಪಿಎಂಇಜಿಪಿ) ಕಾರ್ಯಗತಗೊಳಿಸುವಲ್ಲಿಐತಿಹಾಸಿಕ ಸಾಧನೆಗಳ ಪೂರ್ಣ ವರ್ಷವಾಗಿದೆ. ಅಭೂತಪೂರ್ವ 1.03 ಲಕ್ಷ  ಹೊಸ ಉತ್ಪಾದನಾ ಮತ್ತು ಸೇವಾ ಘಟಕಗಳನ್ನು ಸ್ಥಾಪಿಸುವುದರೊಂದಿಗೆ ಮತ್ತು 8.25 ಲಕ್ಷ ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದರೊಂದಿಗೆ.  2021-22ರ ಹಣಕಾಸು ವರ್ಷದಲ್ಲಿಪಿಎಂಇಜಿಪಿ ಸ್ವಯಂ-ಸಮರ್ಥತೆಯ ಸರ್ಕಾರದ ಅತ್ಯಂತ ಶಕ್ತಿಶಾಲಿ ಸಾಧನವಾಗಿ ಹೊರಹೊಮ್ಮಿದೆ. ಕೋವಿಡ್‌-19 ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿವರ್ಷದ ಮೊದಲ 3 ತಿಂಗಳು ದೇಶವು ಭಾಗಶಃ ಲಾಕ್‌ಡೌನ್‌ನಲ್ಲಿದ್ದರೂ ಈ ಸಾಧನೆ ಮೂಡಿಬಂದಿದೆ.

 

 2008 ರಲ್ಲಿಪಿಎಂಇಜಿಪಿ ಯೋಜನೆಯನ್ನು ಪ್ರಾರಂಭಿಸಿದ ನಂತರ ಇದು ಮೊದಲ ಬಾರಿಗೆ ಕೆವಿಐಸಿ ಒಂದು ಆರ್ಥಿಕ ವರ್ಷದಲ್ಲಿಒಂದು ಲಕ್ಷ ಕ್ಕೂ ಹೆಚ್ಚು ಹೊಸ ಘಟಕಗಳನ್ನು ಸ್ಥಾಪಿಸಿದೆ. ಈ 1,03,219 ಘಟಕಗಳನ್ನು ಸುಮಾರು 12,000 ಕೋಟಿ ರೂ.ಗಳ ಒಟ್ಟು ಬಂಡವಾಳದಲ್ಲಿಸ್ಥಾಪಿಸಲಾಗಿದೆ. ಅದರಲ್ಲಿಕೆವಿಐಸಿ 2978 ಕೋಟಿ ರೂ ಸಹಾಯ ಧನ ಮನಿ ಸಬ್ಸಿಡಿಯನ್ನು ವಿತರಿಸಿದೆ ಮತ್ತು ಬ್ಯಾಂಕ್‌ ಸಾಲದ ಹರಿವು ಸುಮಾರು 9,000 ರೂ. ಆಗಿದೆ. 2021-22 ರಲ್ಲಿಕೆವಿಐಸಿ ನೀಡಿದ 2978 ಕೋಟಿ ರೂ. ಅಂಚು ಸಹಾಯ ಧನ ಸಬ್ಸಿಡಿಯು 2008 ರಿಂದ ಇದುವೆರೆಗಿನ ಅತ್ಯಧಿಕವಾಗಿದೆ. ದೇಶದಾದ್ಯಂತ 8,25,752 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದ್ದು, ಇದು ಪಿಎಂಇಜಿಪಿ ಅಡಿಯಲ್ಲಿಇದುವರೆಗಿನ ಅತ್ಯಧಿಕವಾಗಿದೆ.

 

ಹಿಂದಿನ ವರ್ಷಕ್ಕೆ ಹೋಲಿಸಿದರೆ, ಅಂದರೆ 2020-21ರ ಪಿಎಂಇಜಿಪಿ ಅಡಿಯಲ್ಲಿರಚಿಸಲಾದ ಘಟಕಗಳು ಮತ್ತು ಉದ್ಯೋಗಗಳ ಸಂಖ್ಯೆಯು ತಲಾ ಶೇಕಡ 39ರಷ್ಟು ಹೆಚ್ಚಾಗಿದೆ. ಆದರೆ 2021-22 ರ ಹಣಕಾಸು ವರ್ಷದಲ್ಲಿ ಸಹಾಯ ಧನ ವಿತರಣೆ (ಸಬ್ಸಿಡಿ) ಶೇಕಡ 36ರಷ್ಟು ಜಿಗಿತವನ್ನು ಕಂಡಿದೆ. 

ದೊಡ್ಡ ದೃಷ್ಟಿಕೋನದಲ್ಲಿ2014-15 ರಿಂದ ಪಿಎಂಇಜಿಪಿ ಅಡಿಯಲ್ಲಿಸ್ಥಾಪಿಸಲಾದ ಘಟಕಗಳ ಸಂಖ್ಯೆಯು ಶೇಕಡ 114 ರಷ್ಟು ಹೆಚ್ಚಾಗಿದೆ. ಉದ್ಯೋಗ ಸೃಷ್ಟಿ ಶೇಕಡ 131 ರಷ್ಟು ಹೆಚ್ಚಾಗಿದೆ ಮತ್ತು 2021-22 ವರ್ಷದಲ್ಲಿ ಸಹಾಯ ಧನ ವಿತರಣೆಯು ಶೇಕಡ 165 ರಷ್ಟು ಪ್ರಮಾಣದ ಜಿಗಿತವನ್ನು ಕಂಡಿದೆ..

ಕೆವಿಐಸಿ ಅಧ್ಯಕ್ಷ  ಶ್ರೀ ವಿನಯ್‌ ಕುಮಾರ್‌ ಸಕ್ಸೇನಾ ಅವರು ಸ್ವಾವಲಂಬನೆಯನ್ನು ಸಾಧಿಸಲು ಸ್ಥಳೀಯ ಉತ್ಪಾದನೆಗೆ ಪ್ರಧಾನ ಮಂತ್ರಿ ಅವರ ಉತ್ತೇಜನಕ್ಕೆ ಉದ್ಯೋಗ ಸೃಷ್ಟಿಯಲ್ಲಿಈ ಪ್ರಮಾಣದ ಎತ್ತರಕ್ಕೆ ಕಾರಣವಾಗಿದೆ ಎಂದರು. ‘‘ ಕೋವಿಡ್‌ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿಸ್ಥಳೀಯ ಉತ್ಪಾದನೆ ಮತ್ತು ಸ್ವಯಂ ಉದ್ಯೋಗಕ್ಕೆ ಈ ದೊಡ್ಡ ಒತ್ತಡವು ಅದ್ಭುತಗಳನ್ನು ಸೃಷ್ಟಿಸಿದೆ. ಪಿಎಂಇಜಿಪಿ ಅಡಿಯಲ್ಲಿಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ಸಂಖ್ಯೆಯ ಯುವಕರು, ಮಹಿಳೆಯರು ಮತ್ತು ವಲಸಿಗರನ್ನು ಪ್ರೇರೇಪಿಸಲಾಗಿದೆ. ಇದಲ್ಲದೆ, ಪಿಎಂಇಜಿಪಿ ಅಡಿಯಲ್ಲಿಯೋಜನೆಗಳ ಕಾರ್ಯಗತಗೊಳಿಸುವಿಕೆಯನ್ನು ತ್ವರಿತಗೊಳಿಸಲು ಎಂಎಸ್‌ಎಂಇ ಮತ್ತು ಕೆವಿಐಸಿ ಸಚಿವಾಲಯವು ತೆಗೆದುಕೊಂಡ ನೀತಿ ನಿರ್ಧಾರಗಳು ಕೆವೈಐಸಿ ತನ್ನ ಅತ್ಯುತ್ತಮ ಕಾರ್ಯಕ್ಷ ಮತೆಯನ್ನು ಸಾಧಿಸಲು ಸಹಾಯ ಮಾಡಿತು,’’ ಎಂದು ಸಕ್ಸೇನಾ ಅವರು ಹೇಳಿದರು.

ಕೆವಿಐಸಿ, ಇತ್ತೀಚಿನ ವರ್ಷಗಳಲ್ಲಿ,ಪಿಎಂಇಜಿಪಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. 2016 ರಲ್ಲಿ, ಕೆವಿಐಸಿ ಪಿಎಂಇಜಿಪಿಗಾಗಿ ಆನ್ಲೈನ್‌ ಪೋರ್ಟಲ್‌ಅನ್ನು ಪರಿಚಯಿಸಿತು. 2016ರ ಮೊದಲು, ಅರ್ಜಿಗಳ ಸಲ್ಲಿಕೆಯನ್ನು ಹಸ್ತಚಾಲಿತವಾಗಿ ಮಾಡಲಾಗುತ್ತಿತ್ತು ಮತ್ತು ವಾರ್ಷಿಕವಾಗಿ ಸರಾಸರಿ 70,000 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿತ್ತು. ಆದರೆ, ಆನ್ಲೈನ್‌ ಪೋರ್ಟಲ್‌ನೊಂದಿಗೆ, ಪ್ರತಿ ವರ್ಷ ಸರಾಸರಿ ಸುಮಾರು 4 ಲಕ್ಷ  ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆನ್ಲೈನ್‌ ವ್ಯವಸ್ಥೆಯು ಹೆಚ್ಚಿನ ಪಾರದರ್ಶಕತೆಯನ್ನು ತಂದಿದೆ. ಪಿಎಂಇಜಿಪಿ ಪೋರ್ಟಲ್‌ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಅರ್ಜಿದಾರರಿಗೆ ತಮ್ಮ ಅಪ್ಲಿಕೇಶನ್‌ಗಳನ್ನು ಟ್ರ್ಯಾಕ್‌ ಮಾಡಲು ಅನುವು ಮಾಡಿಕೊಡುತ್ತದೆ.

 

ಮತ್ತೊಂದು ಪ್ರಮುಖ ಹಂತದಲ್ಲಿ, ಕೆವಿಐಸಿ ಎಲ್ಲಾಪಿಎಂಇಜಿಪಿ ಘಟಕಗಳ ಜಿಯೋ-ಟ್ಯಾಗಿಂಗ್‌ ಅನ್ನು ಪ್ರಾರಂಭಿಸಿದೆ. ಇದರಿಂದಾಗಿ ಯಾವುದೇ ಸಮಯದಲ್ಲಿಘಟಕಗಳ ನೈಜ ಭೌತಿಕ ಸ್ಥಿತಿ ಮತ್ತು ಅವುಗಳ ಕಾರ್ಯಕ್ಷ ಮತೆಯನ್ನು ಪರಿಶೀಲಿಸುತ್ತದೆ. ಇಲ್ಲಿಯವರೆಗೆ, 1 ಲಕ್ಷ ಕ್ಕೂ ಹೆಚ್ಚು ಪಿಎಂಇಜಿಪಿ ಘಟಕಗಳನ್ನು ಜಿಯೋ-ಟ್ಯಾಗ್‌ ಮಾಡಲಾಗಿದೆ. ಮೊಬೈಲ್‌ ಅಪ್ಲಿಕೇಶನ್‌ ಬಳಸಿಕೊಂಡು ಪಿಎಂಇಜಿಪಿ ಘಟಕಗಳನ್ನು ಪತ್ತೆಹಚ್ಚಲು ಇದು ಸಹಾಯಕ.

 

 ಇದಲ್ಲದೆ, ಕೆವಿಐಸಿ ಒದಗಿಸಿದ ಒಳಹರಿವಿನ ಆಧಾರದ ಮೇಲೆ ಎಂಎಸ್‌ಎಂಇ ಸಚಿವಾಲಯವು ಪಿಎಂಇಜಿಪಿ ಯೋಜನೆಗಳನ್ನು ಅನುಮೋದಿಸುವಲ್ಲಿಜಿಲ್ಲಾ ಮಟ್ಟದ ಕಾರ್ಯ ಪಡೆ ಸಮಿತಿಯ ಪಾತ್ರವನ್ನು ತೆಗೆದುಹಾಕಿತು ಮತ್ತು ಯೋಜನೆಗಳ ಅನುಮೋದನೆಗಾಗಿ ಕೆವಿಐಸಿಯ ಅಧಿಕೃತ ರಾಜ್ಯ ನಿರ್ದೇಶಕರು ಮತ್ತು ಅದನ್ನು ನೇರವಾಗಿ ಹಣಕಾಸು ಬ್ಯಾಂಕ್‌ಗಳಿಗೆ ಕಳುಹಿಸಿದೆ.

ಕೆವಿಐಸಿ ತನ್ನ ರಾಜ್ಯದ ನಿರ್ದೇಶಕರಿಂದ ಬ್ಯಾಂಕ್‌ಗಳಿಗೆ ಅರ್ಜಿಗಳನ್ನು ಪರಿಶೀಲನೆ ಮತ್ತು ಫಾರ್ವರ್ಡ್‌ ಮಾಡುವ ಕಾಲಾವಧಿಯನ್ನು 90 ದಿನಗಳಿಂದ ಕೇವಲ 26 ದಿನಗಳವರೆಗೆ ಕಡಿಮೆ ಮಾಡಿದೆ. ಇದಲ್ಲದೆ, ಬ್ಯಾಂಕ್‌ಗಳೊಂದಿಗೆ ಮಾಸಿಕ ಸಮನ್ವಯ ಸಭೆಗಳನ್ನು ವಿವಿಧ ಹಂತಗಳಲ್ಲಿಪ್ರಾರಂಭಿಸಲಾಯಿತು. ಇದು ಫಲಾನುಭವಿಗಳಿಗೆ ಸಕಾಲಿಕ ಸಾಲ ವಿತರಣೆಗೆ ಕಾರಣವಾಗಿದೆ.

ವರ್ಷ

ಪಿಎಂಇಜಿಪಿ ಅಡಿ ವರ್ಷವಾರು ಕೆವಿಐಸಿಗಳ ಬೆಳವಣಿಗೆಗಳು

   
 

ಯೋಜನೆಗಳ ಸಂಖ್ಯೆ ಆರಂಭ

ಸಹಾಯ ಧನ ಹಂಚಿಕೆ  (ಕೋಟಿ ರೂ.ಗಳಲ್ಲಿ)

ಯೋಜನೆಗಳ (ಸಂಖ್ಯೆ)

2014-15

48,168

1122.54

3,57,502

2015-16

44,340

1020.06

3,23,362

2016-17

52,912

1280.94

4,07,840

2017-18

48,398

1312.4

3,87,184

2018-19

73,427

2070.00

5,87,416

2019-20

66,653

1950.81

5,33,224

2020-21

74,415

2188.78

5,95,320

2021-22

1,03,219

2977.61

8,25,752

ಒಟ್ಟಾರೆ

5,11,532

13,923.14

40,17,600

2020-21ರಿಂದ ಶೇಕಡ ಬೆಳವಣಿಗೆ

39%

36%

39%

2014-15ರಿಂದ ಶೇಕಡ ಬೆಳವಣಿಗೆ

114%

165%

131%



(Release ID: 1818185) Visitor Counter : 215