ಗೃಹ ವ್ಯವಹಾರಗಳ ಸಚಿವಾಲಯ
ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ನಾಡಬೆಟ್‌ನಲ್ಲಿ ಸೀಮಾದರ್ಶನಕ್ಕಾಗಿ ಹೊಸದಾಗಿ ನಿರ್ಮಿಸಲಾದ ಪ್ರವಾಸೋದ್ಯಮ ಸೌಲಭ್ಯಗಳನ್ನು ಉದ್ಘಾಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ
Posted On:
10 APR 2022 6:55PM by PIB Bengaluru
ನಾಡಬೆಟ್ ಗಡಿ ಹೊರಠಾಣೆಯಲ್ಲಿ ಸೈನಿಕ ಸಮ್ಮೇಳನ ಉದ್ದೇಶಿಸಿ ಶ್ರೀ ಅಮಿತ್ ಶಾ ಭಾಷಣ; ಯೋಧರೊಂದಿಗೆಮಧ್ಯಾಹ್ನದ ಭೋಜನ ಮತ್ತು ಸಂವಾದ
ಸಮಸ್ತ ನಾಡಿನ ಜನತೆಗೆ ರಾಮನವಮಿಯ ಶುಭಾಶಯಗಳು, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಬದುಕು ಪ್ರತಿಯೊಬ್ಬರ ಜೀವನದಲ್ಲಿ ಹೇಗೆ ಪಾತ್ರ ನಿರ್ವಹಿಸಬೇಕು ಎಂಬುದಕ್ಕೆ ಅತ್ಯುತ್ತಮ ಆದರ್ಶವಾಗಿದೆ: ಅಮಿತ್ ಶಾ
ಒಬ್ಬ ಆದರ್ಶ ಪುತ್ರ, ಆದರ್ಶ ಪತಿ, ಆದರ್ಶ ದೊರೆ ಮತ್ತು ಆದರ್ಶ ಸೇನಾಪತಿಯ ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂಬ ಅತ್ಯುತ್ತಮ ಆದರ್ಶವನ್ನು ಪ್ರಸ್ತುತಪಡಿಸಿದ ಜೀವನವನ್ನು ಭಗವಾನ್ ಶ್ರೀರಾಮರು ಬದುಕಿದರು, ಇದರಿಂದ ಜನರು ನೂರಾರು ವರ್ಷಗಳ ಕಾಲ ಬದುಕಬಹುದು.
ನಾನಿಂದು ಗಡಿ ದರ್ಶನ ಪ್ರವಾಸಿ ತಾಣವಾದ ನಾಡಬೆಟ್ಟಕ್ಕೆ ಬಂದಿದ್ದೇನೆ; ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆಯನ್ನು ದೃಡೀಕರಿಸಲು ಬಯಸುತ್ತೇನೆ
ಪ್ರಧಾನಿ ಮೋದಿ ಅವರ ಬಹುಆಯಾಮದ ಪರಿಕಲ್ಪನೆ ಮತ್ತು ದೂರದೃಷ್ಟಿಯನ್ನು ನೇರವಾಗಿ ನೋಡುವ ತನಕ ಯಾರಿಗೂ ಅರ್ಥವಾಗುವುದಿಲ್ಲ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಿಎಪಿಎಫ್ ಯೋಧರು ಮತ್ತು ಅವರ ಕುಟುಂಬಗಳಿಗೆ ಆರೋಗ್ಯ ತಪಾಸಣೆಯಿಂದ ಹಿಡಿದು ಕರ್ತವ್ಯದ ತರ್ಕಬದ್ಧಗೊಳಿಸುವಿಕೆಯ ತನಕ ಸೌಲಭ್ಯಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ
ಆಯುಷ್ಮಾನ್ ಸಿಎಪಿಎಫ್ ಕಾರ್ಡ್ ಅಡಿ, ಸಿಎಪಿಎಫ್ ಸಿಬ್ಬಂದಿಯ ಕುಟುಂಬದ ಯಾವುದೇ ವ್ಯಕ್ತಿ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರು ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಬಹುದು
ಮೋದಿ ಅವರು ಪ್ರಧಾನಿ ಆದಾಗಿನಿಂದ ರಾಷ್ಟ್ರವನ್ನು ವಿಶ್ವದ ಪ್ರತಿ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ವ್ಯವಸ್ಥಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ನಮ್ಮೆಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತದೆ, ಏಕೆಂದರೆ ನಮ್ಮ ಗಡಿ ಭದ್ರತಾ ಪಡೆ ಸಿಬ್ಬಂದಿ ಭದ್ರತೆಯ ಕಾಯಕದಲ್ಲಿ ಗಡಿಯಲ್ಲಿದ್ದಾರೆ, ನೀವು ನಮ್ಮ ಗಡಿಗಳನ್ನು ರಕ್ಷಿಸುತ್ತೀರಿ, ಅದಕ್ಕಾಗಿಯೇ ಗಡಿಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿದೆ
ಮರಳಿನ ಬಿರುಗಾಳಿ, ಸುಡುಬಿಸಿಲು, ವಿಪರೀತ ಚಳಿಯ ನಡುವೆಯೂ ಬಿಎಸ್‌ಎಫ್ ಸಿಬ್ಬಂದಿ ನಮ್ಮ 6,385 ಕಿ.ಮೀ ಉದ್ದದ ಗಡಿ ಕಾವಲು ಕಾಯುತ್ತಿದ್ದಾರೆ; ಹೀಗೆ ಅವರು ಆಜೀವ ಕರ್ತವ್ಯದ ಮಂತ್ರವನ್ನು ಭಕ್ತಿಯಿಂದ ಈಡೇರಿಸುತ್ತಿದ್ದಾರೆ.
1965ರಲ್ಲಿ 25 ತುಕಡಿಯೊಯೊಂದಿಗೆ ಆರಂಭವಾದ ಸಂಸ್ಥೆ ಇಂದು 193 ತುಕಡಿಗಳು ಮತ್ತು 60 ಫಿರಂಗಿ ರೆಜಿಮೆಂಟ್‌ಗಳಲ್ಲಿ 2,65,000 ಸಿಬ್ಬಂದಿಯನ್ನು ಹೊಂದಿದೆ.
ರಾಷ್ಟ್ರ ಮತ್ತು ನಾಗರಿಕರು ಬಿಎಸ್ ಎಫ್ ಅನ್ನು ನಂಬುತ್ತಾರೆ ಮತ್ತು ಈ 2,65,000 ಸಂಖ್ಯೆಯ ಪಡೆಯ ದೇಶದ ಭದ್ರತೆಯ ಭರವಸೆಯಾಗಿದೆ
ಕಾಶ್ಮೀರ ಕಣಿವೆಯಲ್ಲಿ ಒಳನುಸುಳುವಿಕೆ ತಡೆಗಟ್ಟಲು, ಈಶಾನ್ಯ ಮತ್ತು ಕೆಲವು ಎಡಪಂಥೀಯ ಮೂಲಭೂತವಾದವಿರುವ ಪ್ರದೇಶಗಳಲ್ಲಿ ಆಂತರಿಕ ಭದ್ರತೆ ಕಾಪಾಡಿಕೊಳ್ಳಲು, ಕಠಿಣ ಪ್ರದೇಶಗಳಲ್ಲಿಯೂ ಸಹ ಮೊಣಕಾಲು ಆಳದ ಜೌಗು ಪ್ರದೇಶಗಳಲ್ಲಿ ಗಂಟೆಗಳ ಕಾಲ ಎಚ್ಚರವಾಗಿರಲು ಬಿಎಸ್‌ಎಫ್ ಹೊರತುಪಡಿಸಿ ಬೇರೆ ಯಾವುದೇ ಗಡಿ ಭದ್ರತಾ ಪಡೆಗಳು ಕಾರ್ಯ ನಿರ್ವಹಿಸುವುದು ಅಸಾಧ್ಯ
ಮಕ್ಕಳು ನಮ್ಮ ಗಡಿ ಕಾಯುವ ಪಡೆಗೆ ಗೌರವ ಭಾವನೆಯನ್ನು ಸಂಸ್ಕಾರವಾಗಿ ಅಳವಡಿಸಿಕೊಳ್ಳಬೇಕು; ಬಿಎಸ್‌ಎಫ್ ಯೋಧರ ವೀರಾವೇಶ ನೋಡಿದ ನಂತರ ಅವರು ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡಲು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಜೀವನಕ್ಕಾಗಿ ಕರ್ತವ್ಯ ಎಂಬ ಘೋಷಣೆ ಈಡೇರಿಸಿದ್ದಕ್ಕಾಗಿ ಬಿಎಸ್‌ಎಫ್‌ನ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ; ಜನರ ಪರವಾಗಿ ನಿಮ್ಮ ಶೌರ್ಯವನ್ನು ವಂದಿಸಲು ಬಯಸುತ್ತೇನೆ.
ನಾಡಬೆಟ್ ಸುಂದರ ತಾಣವನ್ನು ನೋಡಿದಾಗ ಮತ್ತು ಇಲ್ಲಿಂದ ಗಡಿಯವರೆಗೆ, ಕಷ್ಟಕರ ಸಂದರ್ಭಗಳಲ್ಲಿ ನಮ್ಮನ್ನು ರಕ್ಷಿಸಲು ನಮ್ಮ ಗಡಿ ಯೋಧರು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿದೆ.
ನಾನು ಇಲ್ಲಿಗೆ ನೀಡಿರುವ ಭೇಟಿಯಿಂದ ನಮ್ಮ ಮಕ್ಕಳಲ್ಲಿ ದೇಶಭಕ್ತಿ ಮತ್ತು ಸಶಸ್ತ್ರ ಪಡೆಗಳಿಗೆ ಸೇರಿದ ಭಾವನೆ ಬೆಳೆಯಲಿದೆ
ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ; ಗಡಿ ಗ್ರಾಮಗಳಿಂದ ವಲಸೆ ಹೋಗುವ ದೊಡ್ಡ ಸಮಸ್ಯೆ ನಿವಾರಣೆಯಾಗುತ್ತದೆ; ಜನರು ಇಲ್ಲಿಗೆ ಬಂದಾಗ ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗುತ್ತವೆ; ಗಡಿಯ ಕೊನೆಯ ಹಳ್ಳಿಯನ್ನು ತಲುಪುವ ಪ್ರಕ್ರಿಯೆ ಇದರಿಂದ ಪ್ರಾರಂಭವಾಗಿದೆ.
ಗುಜರಾತ್ ಸರ್ಕಾರ ನಾಡಬೆಟ್ಟದಲ್ಲಿ ಸೀಮಾದರ್ಶನ ಕಾರ್ಯಕ್ರಮಕ್ಕೆ 125 ಕೋಟಿ ರೂ. ಖರ್ಚು ಮಾಡಿದೆ.
10 ವರ್ಷಗಳ ನಂತರ ನಾಡಬೆಟ್ಟದ ಈ ಕ್ಷೇತ್ರವು ಬನಸ್ಕಾಂತ ಜಿಲ್ಲೆಯ ಕನಿಷ್ಠ 5 ಲಕ್ಷ ಜನರ ಉದ್ಯೋಗ ಕೇಂದ್ರವಾಗಲಿದೆ ಎಂದು ನಾನು ಊಹಿಸಬಲ್ಲೆ.
ಮಕ್ಕಳು ನಾಡಬೆಟ್ಟಕ್ಕೆ ಭೇಟಿ ನೀಡಬೇಕು; ಇಲ್ಲಿಗೆ ಬರುವವರು ಬನಸ್ಕಾಂತದಲ್ಲಿ ರಾತ್ರಿಯಾದರೂ ತಂಗಬೇಕು
ಮಕ್ಕಳ ಆಟದ ಸೌಲಭ್ಯಗಳು ಮತ್ತು 100 ಅಡಿ ಎತ್ತರದ ತ್ರಿವರ್ಣ ಧ್ವಜಗಳೆಲ್ಲವೂ ಆಕರ್ಷಣೆಯ ಕೇಂದ್ರಗಳಾಗಲಿವೆ
ಗುಜರಾತ್ ಪ್ರವಾಸೋದ್ಯಮಕ್ಕಾಗಿ ಗ್ಯಾಲರಿಯನ್ನು ನಿರ್ಮಿಸಲಾಗಿದೆ; ನಾಡಬೆಟ್ ಮತ್ತು ಬನಸ್ಕಾಂತದಲ್ಲೂ ಗ್ಯಾಲರಿ ನಿರ್ಮಿಸಲಾಗಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಡಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ದೊಡ್ಡ ಕನಸು ಹೊಂದಿದ್ದಾರೆ; ಇಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭ ಆಕರ್ಷಣೆಯ ಕೇಂದ್ರವಾಗಿದೆ
ಗಡಿ ಪ್ರವಾಸೋದ್ಯಮದ ಮೂಲಕ ಗಡಿ ಭದ್ರತೆ, ಗಡಿ ಸಿಬ್ಬಂದಿ ಜತೆ ಸಾರ್ವಜನಿಕ ಸಂವಹನ ಮತ್ತು ಗಡಿ ಕಾವಲುಗಾರರ ಬಗ್ಗೆ ಜನರಲ್ಲಿ ಆಕರ್ಷಣೆಯ ಭಾವನೆ ಈ ಕಾರ್ಯಕ್ರಮದ ಮೂಲಕ ಈಡೇರುತ್ತದೆ ಎಂದು ನನಗೆ ವಿಶ್ವಾಸವಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ನಾಡಬೆಟ್‌ನಲ್ಲಿ ಸೀಮಾದರ್ಶನಕ್ಕಾಗಿ ಹೊಸದಾಗಿ ನಿರ್ಮಿಸಲಾದ ಪ್ರವಾಸೋದ್ಯಮ ಸೌಲಭ್ಯಗಳನ್ನು ಉದ್ಘಾಟಿಸಿದರು. ಶ್ರೀ ಅಮಿತ್ ಶಾ ಅವರು ನಾಡಬೆಟ್ ಗಡಿ ಹೊರಠಾಣಾ ಸೈನಿಕ ಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿದರು. ಯೋಧರೊಂದಿಗೆ ಮಧ್ಯಾಹ್ನದ ಭೋಜನ ಮತ್ತು ಸಂವಾದ ನಡೆಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಹಾನಿರ್ದೇಶಕರು ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾರಂಭ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಯಾವುದೇ ಗಡಿ ಭದ್ರತಾ ಪಡೆಗಳಿಗಿಂತ, ವಿಶೇಷವಾಗಿ ಬಿಎಸ್‌ಎಫ್ ತುಂಬಾ ಕಷ್ಟಕರ ಮತ್ತು ಸಾಹಸಮಯ ಕೆಲಸ ಮಾಡುತ್ತಿದೆ. ಮರಳಿನ ಬಿರುಗಾಳಿ, ಸುಡುವ ಬಿಸಿಲು ಮತ್ತು ವಿಪರೀತ ಚಳಿಯ ನಡುವೆ ಏಕಾಗ್ರತೆಯಿಂದ ಜೀವಮಾನದ ಕರ್ತವ್ಯ ಮಂತ್ರವನ್ನು ಈಡೇರಿಸುತ್ತಿರುವ ಬಿಎಸ್‌ಎಫ್ ಸಿಬ್ಬಂದಿ, ದೇಶದ 6,385 ಕಿ.ಮೀ ಉದ್ದದ ಗಡಿ ಕಾಯುತ್ತಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದಾಗಿನಿಂದ ದೇಶವನ್ನು ವಿಶ್ವದ ಪ್ರತಿ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ವ್ಯವಸ್ಥಿತ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನ ಯಶಸ್ವಿಯಾಗಲಿದೆ, ಏಕೆಂದರೆ ಗಡಿ ಭದ್ರತಾ ಪಡೆ ಸಿಬ್ಬಂದಿ ನಮ್ಮ ಗಡಿಯನ್ನು ಭದ್ರತೆಯ ಜತನದೊಂದಿಗೆ ಕಾಪಾಡುತ್ತಿದ್ದಾರೆ, ಅವರು ಗಡಿಗಳನ್ನು ರಕ್ಷಿಸುವುದರಿಂದಲೇ ಗಡಿಗಳ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಬಿಎಸ್ಎಫ್ ಮತ್ತು ಸೇನಾ ಸಿಬ್ಬಂದಿ ಅತ್ಯುತ್ತಮ ಶೌರ್ಯ ಪ್ರದರ್ಶಿಸಿದ ಗಡಿ ಇದಾಗಿದೆ ಎಂದರು. ಯುದ್ಧದಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನದಿಂದ ಸುಮಾರು 1,000 ಚದರ ಕಿಲೋಮೀಟರ್ ಆಕ್ರಮಿಸಿ ವಿಜಯ ಸಾಧಿಸಿತು. 1965ರಲ್ಲಿ ಕೇವಲ 25 ತುಕಡಿಗಳೊಂದಿಗೆ ಆರಂಭವಾದ ಬಿಎಸ್‌ಎಫ್ ಆಡಳಿತ ಮತ್ತು ಸಂಘಟನೆ ಸುದೀರ್ಘ ಹಾದಿ ಸಾಗಿ, ಇಂದು 193 ತುಕಡಿಗಳು ಮತ್ತು 60 ಫಿರಂಗಿ ರೆಜಿಮೆಂಟ್‌ಗಳೊಂದಿಗೆ 2,65,000 ಸಿಬ್ಬಂದಿ ಪಡೆ ಹೊಂದಿದೆ. ಈ ಸಂಸ್ಥೆ ಮತ್ತು 2,65,000 ಸಿಬ್ಬಂದಿಯ ಈ ಪಡೆ ನಮ್ಮ ಭದ್ರತೆಯ ಭರವಸೆ ಎಂದು ಇದೀಗ ದೇಶ ಮತ್ತು ನಾಗರಿಕರು ನಂಬುತ್ತಾರೆ.
ಕಾಶ್ಮೀರ ಕಣಿವೆಯಲ್ಲಿ ಒಳನುಸುಳುವಿಕೆ ನಿಲ್ಲಿಸಬೇಕು, ಈಶಾನ್ಯ ಮತ್ತು ಕೆಲವು ಎಡಪಂಥೀಯ ಮೂಲಭೂತವಾದ ಇರುವ ಪ್ರದೇಶಗಳಲ್ಲಿ ಆಂತರಿಕ ಭದ್ರತೆ ಕಾಪಾಡಿಕೊಳ್ಳಬೇಕು, ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭದ್ರತೆ ಕಾಯ್ದುಕೊಳ್ಳಬೇಕು, ತೊರೆಯ ಕಷ್ಟದ ಪ್ರದೇಶದಲ್ಲೂ ಸಹ, ಅಂತಹ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಬಿಎಸ್ಎಫ್ ಹೊರತುಪಡಿಸಿದರೆ ಬೇರೆ ಯಾವುದೇ ಗಡಿ ಕಾವಲು ಪಡೆ ಇಲ್ಲ.
ಗುಜರಾತ್ ಸರ್ಕಾರವು ನಾಡಬೆಟ್ಟದಲ್ಲಿ ಸೀಮಾದರ್ಶನ ಕಾರ್ಯಕ್ರಮಕ್ಕೆ 125 ಕೋಟಿ ರೂ. ವೆಚ್ಚ ಮಾಡಿದೆ. ಮಕ್ಕಳು ನಮ್ಮ ಗಡಿ ಕಾಯುವ ಪಡೆಗೆ ಗೌರವದ ಭಾವನೆಯನ್ನು ಸಂಸ್ಕಾರವಾಗಿ ಅಳವಡಿಸಿಕೊಳ್ಳಬೇಕು. ಬಿಎಸ್‌ಎಫ್ ವೀರಾವೇಶ ಕಣ್ತುಂಬಿಕೊಂಡ ನಂತರ ದೇಶದ ಭದ್ರತೆಗೆ ಕೊಡುಗೆ ನೀಡಬೇಕು ಎಂದು ಮಕ್ಕಳು ನಿರ್ಧರಿಸಬೇಕು. ಇದೀಗ ಗುಜರಾತ್ ಸರ್ಕಾರವು 5ರಿಂದ 8ನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರವಾಸೋದ್ಯಮ ಗಮನವನ್ನು ನಾಡಬೆಟ್ ಗೆ ಯೋಜಿಸಲು ಹೊರಟಿದೆ. ಇದರೊಂದಿಗೆ, ಬಿಎಸ್ಎಫ್ ನ ತ್ಯಾಗ, ಸಮರ್ಪಣೆ ಮತ್ತು ಶೌರ್ಯದ ಸಂದೇಶವು ನಾಗರಿಕ ಸಮಾಜವನ್ನು ತಲುಪುತ್ತದೆ. ಮಕ್ಕಳು ಬೆಳೆದಾಗ ಈ ಗೌರವವನ್ನು ಅವರು ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾರೆ. ಗುಜರಾತ್ ಸರ್ಕಾರವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಸತಿ ಅನುಕೂಲ ಕಲ್ಪಿಸಲು ಯೋಜಿಸುತ್ತಿದೆ. ಗುಜರಾತ್‌ನ ಪ್ರತಿಯೊಬ್ಬ ವ್ಯಕ್ತಿಯು ಬನಸ್ಕಾಂತದ ಹೊರವಲಯದಲ್ಲಿ ಕನಿಷ್ಠ 2 ದಿನಗಳನ್ನು ಕಳೆಯಬೇಕು. ಆಗ ಮಾತ್ರ ಅವರು ಗಡಿ ಪ್ರದೇಶಗಳ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಗಡಿ ಪ್ರದೇಶಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಮಿತ್ ಶಾ ತಿಳಿಸಿದರು.
ಇದಕ್ಕೂ ಮುನ್ನ ನಾಡಬೆಟ್ಟದಲ್ಲಿ ಸೀಮಾದರ್ಶನಕ್ಕಾಗಿ ನೂತನವಾಗಿ ನಿರ್ಮಿಸಲಾದ ಪ್ರವಾಸಿ ಸೌಲಭ್ಯಗಳನ್ನು ಉದ್ಘಾಟಿಸಿದ ಶ್ರೀ ಅಮಿತ್ ಶಾ ಅವರು, ಸಮಸ್ತ ನಾಡಿನ ಜನತೆಗೆ ರಾಮನವಮಿಯ ಶುಭಾಶಯಗಳನ್ನು ಕೋರಿದರು. ರಾಮನವಮಿಯು ಚೈತ್ಯ ನವರಾತ್ರಿಯ ಅಂತ್ಯ ಹಾಗೂ ಐತಿಹಾಸಿಕ ವ್ಯಕ್ತಿತ್ವದ ಶ್ರೀರಾಮನ ಜನ್ಮದಿನ ಎಂದು ಹೇಳಿದರು. ಕೋಟ್ಯಂತರ ಜನರು ತಮ್ಮ ಮನೆಗಳಲ್ಲಿ ಈ ಹಬ್ಬ ಆಚರಿಸುತ್ತಾರೆ. ಜೀವನದಲ್ಲಿ ಪ್ರತಿಯೊಂದು ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜೀವನ ಅತ್ಯುತ್ತಮ ಆದರ್ಶವಾಗಿದೆ ಎಂದರು. ಭಗವಾನ್ ಶ್ರೀರಾಮನು ಅಂತಹ ಜೀವನವನ್ನು ನಡೆಸಿದನು, ಅದರಲ್ಲಿ ಒಬ್ಬ ಆದರ್ಶ ಪುತ್ರ, ಆದರ್ಶ ಪತಿ, ಆದರ್ಶ ರಾಜ ಮತ್ತು ಆದರ್ಶ ಸೇನಾಪತಿಯ ಪಾತ್ರವನ್ನು ಒಂದೇ ಒಂದು ಮಾತಿಲ್ಲದೆ ಹೇಗೆ ನಿರ್ವಹಿಸಬೇಕು ಎಂಬ ಪರಿಪೂರ್ಣ ಆದರ್ಶವನ್ನು ಅವರು ತೋರಿಸಿದ್ದಾರೆ. ಇದರಿಂದ ಜನರು ಯುಗ ಯುಗಾಂತರಗಳ ಕಾಲ ಬದುಕಬಹುದು. ಅದಕ್ಕಾಗಿಯೇ ಅವರು ಇಂದು ನಮ್ಮ ಆರಾಧ್ಯ ದೈವವಾಗಿದ್ದಾರೆ. ನಾವೆಲ್ಲರೂ ಶ್ರೀರಾಮನನ್ನು ದೇವರ ರೂಪದಲ್ಲಿ ಪೂಜಿಸುತ್ತೇವೆ ಮತ್ತು ಅವರು ತೋರಿಸಿದ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತೇವೆ ಎಂದು ಅಮಿತ್ ಶಾ ತಿಳಿಸಿದರು.
ಗಡಿ ಭದ್ರತಾ ಪಡೆ ಯೋಧರು, ಗಡಿಗಳನ್ನು ಕಾಪಾಡುತ್ತಾರೆ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ರಕ್ಷಿಸುತ್ತಿದ್ದಾರೆ. ಪ್ರಾಣ ಕಳೆದುಕೊಂಡ ಅವರೆಲ್ಲರನ್ನೂ ಸ್ಮರಿಸುವ ಮೂಲಕ ಅವರಿಗೆ ರಾಷ್ಟ್ರದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಲು ಬಯಸುತ್ತೇನೆ. ಇಂದು ಇಡೀ ದೇಶದ ಜನತೆಯ ಪರವಾಗಿ ನಾನು ಬಿಎಸ್‌ಎಫ್ ಯೋಧರಿಂದ ಹಿಡಿದು ಡಿಜಿವರೆಗಿನ ಎಲ್ಲ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ದೇಶದಲ್ಲಿ ಗಡಿ ಮತ್ತು ಭದ್ರತೆಯ ಬಿಕ್ಕಟ್ಟು ಉಂಟಾದಾಗಲೆಲ್ಲಾ ಬಿಎಸ್ಎಫ್ ಯಾವಾಗಲೂ ಶೌರ್ಯ ಪ್ರದರ್ಶಿಸುತ್ತದೆ. 1 ಮಹಾವೀರ ಚಕ್ರ, 4 ಕೀರ್ತಿ ಚಕ್ರಗಳು, 13 ವೀರ ಚಕ್ರಗಳು, 13 ಶೌರ್ಯ ಚಕ್ರಗಳನ್ನು ಮುಡಿಗೇರಿಸಿಕೊಂಡಿರುವ ಬಿಎಸ್ಎಫ್, ಅನೇಕ ತ್ಯಾಗ, ಬಲಿದಾನಗಳ ಕಥೆಯನ್ನು ಸಾರುತ್ತಿದೆ. ಇಡೀ ರಾಷ್ಟ್ರವೇ ಅವರ ಶೌರ್ಯಕ್ಕೆ ಹೆಮ್ಮೆಪಡುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ನಾಡಬೆಟ್ಟದ ಈ ಗಡಿ ದರ್ಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆಯನ್ನು ದೃಢೀಕರಿಸಲು ನಾನು ಬಯಸುತ್ತೇನೆ. ಈ ಸ್ಥಳಕ್ಕೆ ನೇರವಾಗಿ ಭೇಟಿ ನೀಡುವ ತನಕ ಪ್ರಧಾನಿ ಅವರ ದೂರದೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಸಾಧ್ಯವಿಲ್ಲ. ಇಲ್ಲಿಗೆ ಬಂದ ನಂತರ ನಾಡಬೆಟ್ಟದ ಪೂರ್ಣ ಪ್ರದರ್ಶನ ತಾಣಕ್ಕೆ ಹೋಗಿ ಇಲ್ಲಿಂದ ಗಡಿಗೆ ಹೋದಾಗ ಮಾತ್ರ ಪ್ರಧಾನಿ ಪರಿಕಲ್ಪನೆ ತಿಳಿಯುತ್ತದೆ. ನಮ್ಮ ಗಡಿ ಕಾವಲುಗಾರರು ಕಷ್ಟದ ಪರಿಸ್ಥಿತಿಯಲ್ಲಿ ನಮ್ಮನ್ನು ರಕ್ಷಿಸಲು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಅರ್ಥವಾಗುತ್ತದೆ. ಇಲ್ಲಿಗೆ ಬಂದರೆ ಮಕ್ಕಳಲ್ಲಿ ದೇಶಭಕ್ತಿ ಮೂಡುತ್ತದೆ. ನಮ್ಮ ಸಶಸ್ತ್ರ ಪಡೆಗಳಿಗೆ ನಾವು ಸೇರಿದ್ದೇವೆ ಎಂಬ ಭಾವನೆ ಮತ್ತು ನಮ್ಮ ಗಡಿಗಳ ಭದ್ರತೆ ಅರಿವಾಗುತ್ತದೆ. ಜನರು ಇಲ್ಲಿಗೆ ಬಂದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತದೆ. ಗಡಿ ಗ್ರಾಮಗಳಿಂದ ವಲಸೆ ಹೋಗುವ ಬಹುದೊಡ್ಡ ಸಮಸ್ಯೆ ನಿವಾರಣೆಯಾಗುತ್ತದೆ, ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗುತ್ತವೆ. ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಪ್ರಕ್ರಿಯೆಗೆ ಇದು ನಾಂದಿಯಾಗಿದೆ ಎಂದು ಹೇಳಿದರು. 10 ವರ್ಷಗಳ ನಂತರ ನಾಡಬೆಟ್ಟದ ಈ ಕ್ಷೇತ್ರವು ಬನಸ್ಕಾಂತ ಜಿಲ್ಲೆಯ ಕನಿಷ್ಠ 5 ಲಕ್ಷ ಜನರಿಗೆ ಉದ್ಯೋಗದ ಕೇಂದ್ರವಾಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರವಾಸಿಗರಿಗೆ ಪೀಠೋಪಕರಣಗಳು ಮತ್ತು ಒಳಾಂಗಣ ಕೆಲಸಗಳೊಂದಿಗೆ ಮೂರು ಆಗಮನ ಪ್ಲಾಜಾಗಳನ್ನು ನಿರ್ಮಿಸಿಕೊಟ್ಟಿದ್ದಾರೆ, ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಿದ್ದಾರೆ, 500 ಜನರ ಸಾಮರ್ಥ್ಯದ ಸಭಾಂಗಣ, ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಒದಗಿಸಲಾಗಿದೆ, 22 ಮಳಿಗೆಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಿರ್ಮಿಸಲಾಗಿದೆ. ಸೌರವಿದ್ಯುತ್ ದೀಪಗಳನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ಇದು ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸುತ್ತದೆ. ಮಕ್ಕಳ ಆಟದ ಸೌಲಭ್ಯಗಳು ಮತ್ತು 100 ಅಡಿ ಎತ್ತರದ ತ್ರಿವರ್ಣ ಧ್ವಜಗಳು ಇಲ್ಲಿ ಆಕರ್ಷಣೆಯ ಕೇಂದ್ರವಾಗಲಿವೆ. ರಾಷ್ಟ್ರದ ಗಡಿಗಳಿಗೆ ಸಂದರ್ಶಕರನ್ನು ಪರಿಚಯಿಸುವ 6 ಗ್ಯಾಲರಿಗಳಿವೆ. ಗುಜರಾತ್ ಪ್ರವಾಸೋದ್ಯಮಕ್ಕೆ ಗ್ಯಾಲರಿ, ನಾಡಬೆಟ್ ಮತ್ತು ಬನಸ್ಕಾಂತದಲ್ಲೂ ಗ್ಯಾಲರಿ ನಿರ್ಮಿಸಲಾಗಿದೆ. ಬಿಎಸ್ಎಫ್ ನ 3 ವಿಭಾಗಗಳಾದ ಸಾಗರ, ವಾಯು ಮತ್ತು ಫಿರಂಗಿಯನ್ನು ಪ್ರಸ್ತುತಪಡಿಸುವ ಗ್ಯಾಲರಿ ಕೂಡ ಇರುತ್ತದೆ ಎಂದು ಅಮಿತ್ ಶಾ ತಿಳಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಡಿ ಪ್ರವಾಸೋದ್ಯಮ ಅಭಿವೃದ್ಧಿಯ ಕನಸು ಹೊಂದಿದ್ದಾರೆ. ಇಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭವು ಆಕರ್ಷಣೆಯ ಕೇಂದ್ರವಾಗಲಿದೆ. ಗಡಿ ಪ್ರವಾಸೋದ್ಯಮದ ಮೂಲಕ ಗಡಿ ಭದ್ರತೆ, ಗಡಿ ಕಾವಲುಗಾರರ ಜತೆ ಜನರ ಸಂವಹನ, ಗಡಿ ಕಾವಲುಗಾರರ ಬಗ್ಗೆ ಜನರ ಮನಸ್ಸಿನಲ್ಲಿ ಆಕರ್ಷಣೆ ಮೂಡಿಸುವ 3 ಉದ್ದೇಶಗಳು ಈ ಕಾರ್ಯಕ್ರಮದಿಂದ ಈಡೇರುವ ಸಂಪೂರ್ಣ ನಂಬಿಕೆ ಇದೆ. ನಮ್ಮ ಗಡಿಗಳ ಭದ್ರತೆ ಮತ್ತು ಮೂಲಸೌಕರ್ಯಕ್ಕಾಗಿ ಶ್ರೀ ನರೇಂದ್ರ ಮೋದಿ ಅವರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಸಮಸ್ತ ಜನತೆಗೆ ಮತ್ತು ವಿಶೇಷವಾಗಿ ಬನಸ್ಕಾಂತದ ಜನತೆಗೆ ಶುಭ ಹಾರೈಕೆಗಳನ್ನು ಸಲ್ಲಿಸಿದ ಅಮಿತ್ ಶಾ ಅವರು, ನಾಡಬೆಟ್ಟದಿಂದ ಬನಸ್ಕಾಂತವು ಈಗ ಗುಜರಾತ್ ಮಾತ್ರವಲ್ಲದೆ ದೇಶಾದ್ಯಂತ ಜನರ ಆಕರ್ಷಣೆಯ ಕೇಂದ್ರವಾಗಲಿದೆ. ಇದು ರಾಷ್ಟ್ರದೊಳಗೆ ಪ್ರವಾಸೋದ್ಯಮ ಸೌಲಭ್ಯಗಳನ್ನು ಒದಗಿಸುತ್ತದೆ, ಭಾರತದಾದ್ಯಂತ ಜನರು ಬಿಎಸ್ಎಫ್ ನ ಶೌರ್ಯವನ್ನು ಹತ್ತಿರದಿಂದ ನೋಡಲು, ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
****
(Release ID: 1815631)
Visitor Counter : 262