ಪಂಚಾಯತ್ ರಾಜ್ ಸಚಿವಾಲಯ

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ 2022ರ ಏಪ್ರಿಲ್ 11 ರಿಂದ 17ರವರೆಗೆ ಸಾಂಪ್ರದಾಯಿಕ ಸಪ್ತಾಹ ಆಚರಣೆಗೆ ಪಂಚಾಯತ್ ರಾಜ್ ಸಚಿವಾಲಯ ನಿರ್ಧಾರ


ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣದ ಕುರಿತ ರಾಷ್ಟ್ರೀಯ ಭಾಗೀದಾರರ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ

ಸಾಂಪ್ರದಾಯಿಕ ಸಪ್ತಾಹದ ಆಚರಣೆಯ ಶೀರ್ಷಿಕೆ ಪಂಚಾಯತಿಗಳ ನವನಿರ್ಮಾಣದ ಸಂಕಲ್ಪೋತ್ಸವ (पंचायतों के नवनिर्माण का संकल्पोत्सव)

ಸಾಂಪ್ರದಾಯಿಕ ವಾರ ಆಚರಣೆ ಅವಧಿಯಲ್ಲಿ 7 ರಾಷ್ಟ್ರೀಯ ಸಮ್ಮೇಳನಗಳ ಆಯೋಜನೆ

Posted On: 09 APR 2022 12:27PM by PIB Bengaluru

ಪಂಚಾಯತ್ ರಾಜ್ ಸಚಿವಾಲಯವು 2022 ರ ಏಪ್ರಿಲ್ 11 ರಿಂದ 17 ರವರೆಗೆ ಅಜಾದಿ ಕಾ ಅಮೃತ ಮಹೋತ್ಸವ (ಎ.ಕೆ.ಎ.ಎಂ.) ಅಂಗವಾಗಿ ಸಾಂಪ್ರದಾಯಿಕ ಸಪ್ತಾಹ (ವಿಶಿಷ್ಟ ಸಪ್ತಾಹ)ವನ್ನು ಜನರ ಪಾಲ್ಗೊಳ್ಳುವಿಕೆಯ ಉತ್ಸಾಹದೊಂದಿಗೆ ಜನ ಉತ್ಸವವಾಗಿ ಆಚರಿಸಲಿದೆ. ಈ ಸ್ಮರಣಾರ್ಹ ಸಂದರ್ಭವನ್ನು “ಇಡೀ ಸಮಾಜ”ದೊಂದಿಗೆ ಮತ್ತು “ಇಡೀ ಸರಕಾರ” ದೊಂದಿಗೆ ಧೋರಣೆಯಲ್ಲಿ ಸರಿಯಾದ ಉತ್ಸಾಹ ಪ್ರೇರಣೆಯೊಂದಿಗೆ ಆಚರಿಸಲು ಪಂಚಾಯತ್ ರಾಜ್ ಸಚಿವಾಲಯ ಈ ವಿಶಿಷ್ಟ ವಾರಾಚರಣೆಗಾಗಿ ಸರಣಿ ವಿಷಯಾಧಾರಿತ ಸಮ್ಮೇಳನಗಳನ್ನು  “ಪಂಚಾಯತೋಂ ಕೆ ನವನಿರ್ಮಾಣ್ ಕಾ ಸಂಕಲ್ಪೋತ್ಸವ” ಎಂಬ (पंचायतों के नवनिर्माण का संकल्पोत्सव)  ಶೀರ್ಷಿಕೆಯಡಿ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್.ಡಿ.ಜಿ.ಗಳು) ಸ್ಥಳೀಯಗೊಳಿಸುವಿಕೆ ನಿಟ್ಟಿನಲ್ಲಿ ಎಲ್ಲಾ  ಭಾಗೀದಾರರ  ಚಿಂತನೆಗಳು, ವಿವಿಧ ದೃಷ್ಟಿಕೋನಗಳು, ಅಭಿಪ್ರಾಯಗಳು, ಸಿದ್ಧತಾಸ್ಥಿತಿ, ತಾಂತ್ರಿಕ ಮಧ್ಯಪ್ರವೇಶಗಳು, ಉತ್ತಮ ಪದ್ಧತಿಗಳು ಮತ್ತು   ಆಧುನಿಕ ಚಿಂತನೆಗಳನ್ನು ಒಗ್ಗೂಡಿಸುವ  ಸಲುವಾಗಿ  ಆಯೋಜಿಸಿದೆ. 
ವಾರ ಕಾಲ ನಡೆಯುವ ಈ ಸ್ಮರಣಾರ್ಥ ಕಾರ್ಯಕ್ರಮಗಳು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್.ಡಿ.ಜಿ.ಗಳು) ಸ್ಥಳೀಯಗೊಳಿಸುವಿಕೆ ನಿಟ್ಟಿನಲ್ಲಿ ಎಲ್ಲಾ  ಭಾಗೀದಾರರ ರಾಷ್ಟ್ರೀಯ ಸಮ್ಮೇಳನವನ್ನು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ 2022 ರ ಏಪ್ರಿಲ್ 11 ರಂದು ಆಯೋಜಿಸುವುದರೊಂದಿಗೆ ಆರಂಭಗೊಳ್ಳುತ್ತವೆ. ಭಾರತದ ಉಪರಾಷ್ಟ್ರಪತಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ರಾಷ್ಟ್ರೀಯ ಭಾಗೀದಾರರ ಸಮ್ಮೇಳನವನ್ನು ಉದ್ಘಾಟಿಸಲಿರುವುದರಿಂದ ಈ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಬಂದಿದೆ. ಉಪರಾಷ್ಟ್ರಪತಿಗಳು ಸುಸ್ಥಿರ ಅಭಿವೃದ್ಧಿ ಗುರಿಗಳ ಲೋಗೋ, ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಯಗೊಳಿಸುವಿಕೆ ಹಾಗು ಕಾರ್ಯಾನುಷ್ಠಾನ ಕುರಿತ ರಾಜ್ಯಗಳ ಜಂಟಿ ಸಲಹೆಗಾರರ ಸಂಕಲನವನ್ನು ಮತ್ತು ಗ್ರಾಮ ಪಂಚಾಯತ್ ಗಳ ಬಳಕೆಗೆ ಶೀರ್ಷಿಕೆ ವಿಷಯಾಧಾರಿತ  ಸಂಕಲನವನ್ನು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್,  ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ, ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್, ಕೇಂದ್ರ ಪಂಚಾಯತ್ ರಾಜ್ ಸಹಾಯಕ ಸಚಿವರಾದ ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್, ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವರಾದ ಶ್ರೀ ಫಾಗ್ಗನ್ ಸಿಂಗ್ ಕುಲಸ್ಥೆ ಅವರು ಸಮಾರಂಭದಲ್ಲಿ ಹಾಜರಿರುತ್ತಾರೆ. ರಾಜ್ಯ ಪಂಚಾಯತ್ ರಾಜ್ ಸಚಿವರು, ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ ರಾಜ್ ಇಲಾಖೆಗಳ ಹಿರಿಯ ಅಧಿಕಾರಿಗಳು, ಎನ್.ಐ.ಆರ್.ಡಿ ಮತ್ತು ಪಿ.ಆರ್., ಎಸ್.ಐ.ಆರ್.ಡಿ ಮತ್ತು ಪಿ.ಆರ್.ಗಳ ಹಿರಿಯ ಅಧಿಕಾರಿಗಳು ಪಂಚಾಯತ್ ಗಳ ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕಾರಿಗಳನ್ನು ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಏಳು ದಿನಗಳ ವಿಷಯಾಧಾರಿತ ಸಮ್ಮೇಳನಗಳ ವಿವರಗಳು ಈ ಕೆಳಗಿನಂತಿವೆ. 

ಕ್ರಮ ಸಂಖ್ಯೆ

ದಿನಾಂಕ/ದಿನ

ರಾಷ್ಟ್ರೀಯ ಸಮ್ಮೇಳನ

1.

11ನೇ ಏಪ್ರಿಲ್  2022 (ಸೋಮವಾರ)

ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ ಕುರಿತು ರಾಷ್ಟ್ರೀಯ ಭಾಗೀದಾರರ ಸಮ್ಮೇಳನ

2.

12 ನೇ ಏಪ್ರಿಲ್ 2022 (ಮಂಗಳವಾರ )

ಉತ್ತಮ ಆಡಳಿತ ಕುರಿತು ರಾಷ್ಟ್ರೀಯ ಸಮ್ಮೇಳನ

3.

13 ನೇ ಏಪ್ರಿಲ್ 2022 (ಬುಧವಾರ)

ಮಕ್ಕಳ ಸ್ನೇಹಿ ಗ್ರಾಮ ಮತ್ತು ಗ್ರಾಮಗಳಲ್ಲಿ ಲಿಂಗ ಸಮಾನತೆಗಾಗಿ  ಹುಟ್ಟು ಹಾಕುವ ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ ಕುರಿತು ರಾಷ್ಟ್ರೀಯ ಸಮ್ಮೇಳನ

4.

14ನೇ ಏಪ್ರಿಲ್ 2022 (ಗುರುವಾರ)

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸ್ವಂತ ಆದಾಯ ಮೂಲ ಒಗ್ಗೂಡಿಸುವ  ಕುರಿತ ರಾಷ್ಟ್ರೀಯ ಸಮ್ಮೇಳನ

5.

15 ನೇ ಏಪ್ರಿಲ್ 2022 (ಶುಕ್ರವಾರ)

ಆರೋಗ್ಯಪೂರ್ಣ  ಗ್ರಾಮ ಮತ್ತು ಸಾಮಾಜಿಕವಾಗಿ ಸುರಕ್ಷಿತ ಗ್ರಾಮಗಳ ಮೇಲೆ ಎಸ್.ಡಿ.ಜಿ. ಗಳ ಸ್ಥಳೀಕರಣ ಕುರಿತ  ರಾಷ್ಟ್ರೀಯ ಸಮ್ಮೇಳನ.

  ಈ ಚಾರಿತ್ರಿಕ  ’ಐಕಾನಿಕ್ ವೀಕ್” ನಲ್ಲಿ ರಾಷ್ಟ್ರೀಯ ಸಮ್ಮೇಳನಗಳನ್ನು ಸಂವಾದಾತ್ಮಕ ಮತ್ತು ರೋಮಾಂಚಕ ರೀತಿಯಲ್ಲಿ ಆಯೋಜಿಸಲಾಗುತ್ತದೆ. ದೇಶದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ಮತ್ತು ತಳಮಟ್ಟದ ಆಡಳಿತದ ಆಧಾರ ಸ್ತಂಭಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿ, ಪಂಚಾಯತ್‌ಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಮತ್ತು ಎಲ್ಲಾ ಹಂತಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪಂಚಾಯತ್ ರಾಜ್ ಸಚಿವಾಲಯವು ಐಕಾನಿಕ್ ವೀಕ್ ಅನ್ನು ಆಚರಿಸಲು ಮುಂದಡಿ ಇಟ್ಟಿದೆ. ಸಮ್ಮೇಳನಗಳನ್ನು  ಸಂವಾದ, ಜ್ಞಾನ ಮತ್ತು ವಿಚಾರ ವಿನಿಮಯ ಹಾಗು ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣದ ಭಾಗೀದಾರರ ನಡುವೆ ಚಿಂತನೆ ವಿನಿಮಯವನ್ನು ಪಂಚಾಯತಿ ರಾಜ್ ಸಂಸ್ಥೆಗಳ ಮೂಲಕ ಉಪಯುಕ್ತವಾಗುವ ರೀತಿಯಲ್ಲಿ ನಡೆಸಿ  ರಾಷ್ಟ್ರೀಯ ಪರಿಣಾಮ  ಮತ್ತು ದೀರ್ಘಾವಧಿಯ ಪರಿಣಾಮವು ಬೀರುವಂತೆ ಆಯೋಜಿಸಲಾಗುತ್ತಿದೆ. ಎಸ್.ಡಿ.ಜಿ.ಗಳನ್ನು ಈಡೇರಿಸಲು ಪಿ.ಆರ್.ಐ.ಗಳು  ಕೈಗೊಳ್ಳಬಹುದಾದ ಕ್ರಮಗಳು, ಬೆಂಬಲದ ನೆಲೆ ಮತ್ತು ಒಗ್ಗೂಡಿಸಬಹುದಾದ ಸಂಪನ್ಮೂಲಗಳ ಬಗ್ಗೆ  ಕೂಡಾ ಇದರಲ್ಲಿ ಸಮಾಲೋಚಿಸಲಾಗುತ್ತದೆ.  ಸಾಂಪ್ರದಾಯಿಕ ಸಪ್ತಾಹದ ಐಕಾನಿಕ್ ವೀಕ್ (11 ನೇ - 17 ನೇ ಏಪ್ರಿಲ್, 2022) ಸಮಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನಗಳು ಸುಸ್ಥಿರ ಅಭಿವೃದ್ಧಿ ಗುರಿಗಳ ಈಡೇರಿಕೆ ವೇಗವನ್ನು ಹೆಚ್ಚಿಸುವ ಸಮೃದ್ಧವಾದ ಚರ್ಚೆಗಳನ್ನು ನಡೆಸಲಿವೆ  ಮತ್ತು ದೃಢವಾದ ಫಲಿತಾಂಶಗಳಿಗೆ  ಸಾಕ್ಷಿಯಾಗಲಿವೆ.  ದೇಶದ ವಿವಿಧ ಭಾಗಗಳಿಂದ ಸೇರುವ ಎಲ್ಲಾ  ಭಾಗೀದಾರರಿಗೆ  ಶ್ರೀಮಂತ ಅನುಭವವನ್ನು ಒದಗಿಸಲಿವೆ.  
ಸಾಂಪ್ರದಾಯಿಕ ವಿಶಿಷ್ಟ ಸಪ್ತಾಹ ಆಚರಣೆಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್.ಡಿ.ಜಿ.ಗಳು) ತ್ವರಿತವಾಗಿ  ಸಾಧಿಸಲು ಭಾಗೀದಾರರಿಗೆ ಇನ್ನಷ್ಟು ಪ್ರೇರಣೆ ನೀಡುವ ಆಂದೋಲನವನ್ನು ರೂಪಿಸಲು ಮತ್ತು ನಮ್ಮ ದೇಶ ಅದರ ಎಸ್.ಡಿ.ಜಿ. ಬದ್ಧತೆಗಳನ್ನು (ಗ್ರಾಮೀಣ ಭಾರತದಲ್ಲಿ ಪಂಚಾಯತ್ ಗಳ ಮೂಲಕ) ಸಕಾಲದಲ್ಲಿ ಸಾಧಿಸಲು ಸಹಾಯ ಮಾಡಲಿವೆ. ಈ ಸಾಂಪ್ರದಾಯಿಕ ಸಪ್ತಾಹ ಆಚರಣೆ ಕಾರ್ಯಕ್ರಮಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಪಂಚಾಯತ್ ಗಳ ಪ್ರಾಮುಖ್ಯವನ್ನು ಪ್ರಮುಖವಾಗಿ ಮುಂಚೂಣಿಗೆ ತರುವುದಲ್ಲದೆ ಸಮುದಾಯ ಜಾಗೃತಿಯನ್ನು ಬೆಳೆಸುವಲ್ಲಿ ಮತ್ತು ಭಾಗೀದಾರಿಕೆಗೆ ಸಂಬಂಧಿಸಿದ ಅವಶ್ಯ ಅರಿವನ್ನು ವಿಸ್ತರಿಸಲಿವೆ. ಏಳು ದಿನಗಳ ಸಂವಾದಾತ್ಮಕ ಸಮ್ಮೇಳನಗಳಲ್ಲಿ ದೇಶಾದ್ಯಂತ ಪಂಚಾಯತ್ ಪ್ರತಿನಿಧಿಗಳ ಹಾಜರಾತಿ ಚಿಂತನೆಗಳ ಮತ್ತು ಅನುಭವಗಳ ವಿನಿಮಯಕ್ಕೆ ಸೂಕ್ತ ಸಂದರ್ಭ ಮತ್ತು ವೇದಿಕೆಯನ್ನು ಒದಗಿಸುತ್ತದೆ. ಏಳು ದಿನಗಳ ಕಾರ್ಯಕ್ರಮವನ್ನು ಪಂಚಾಯತ್ ಗಳು ಮತ್ತು ಇತರ ಪ್ರಮುಖ ಭಾಗೀದಾರರಿಗೆ ಹೆಚ್ಚಿನ ಪ್ರಯೋಜನಗಳು ಲಭಿಸುವಂತೆ ವಿನ್ಯಾಸ ಮಾಡಲಾಗಿದೆ. 
 ಇಡೀ ಸಮಾಜ ಮತ್ತು ಇಡೀ ಸರಕಾರ ಎಂಬ ಬಲಿಷ್ಠ ಧೋರಣೆಯನ್ನು  ಪಂಚಾಯತ್ ರಾಜ್ ಸಂಸ್ಥೆಗಳು,ಸಂಬಂಧಿತ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಸರಕಾರಗಳು/ಕೇಂದ್ರಾಡಳಿತಗಳು, ನಾಗರಿಕ ಸಮಾಜ, ಸಮುದಾಯಗಳು, ಐ.ಐ.ಟಿ.ಗಳು/ಐ.ಐ.ಎಂ.ಗಳು , ಶೈಕ್ಷಣಿಕ ಕ್ಷೇತ್ರದ ವ್ಯಕ್ತಿಗಳು, ಎನ್.ಜಿ.ಒ.ಗಳು/ಸಿ.ಬಿ.ಒ.ಗಳು, ಅಂತಾರಾಷ್ಟ್ರೀಯ ಏಜೆನ್ಸಿಗಳು ಇತ್ಯಾದಿಗಳ ಪಾಲುದಾರಿಕೆ ಮಟ್ಟವನ್ನು ಹೆಚ್ಚಿಸುವುದನ್ನು ಖಾತ್ರಿಪಡಿಸುವುದಕ್ಕಾಗಿ ಅನುಸರಿಸಲಾಗುತ್ತದೆ. ಎಸ್.ಡಿ.ಜಿ.ಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಚಿವಾಲಯಗಳು/ಸಂಬಂಧಿತ ಸಚಿವಾಲಯಗಳು ಮತ್ತು ಇತರ ಭಾಗೀದಾರ ವಿವಿಧ ಉಪಕ್ರಮಗಳು/ಕಾರ್ಯಚಟುವಟಿಕೆಗಳು/ಸಿದ್ಧತಾ ಸ್ಥಿತಿಯ ಬಗ್ಗೆ ಸಮಾಲೋಚಿಸಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಗಳಿಗಾಗಿ 9 ವಿಷಯ ಶೀರ್ಷಿಕೆಗಳಿಗೆ ಆದ್ಯ ಗಮನ ನೀಡಲಾಗಿದೆ. ಅವುಗಳೆಂದರೆ: (i) ಗ್ರಾಮಗಳಲ್ಲಿ ಬಡತನ ಮುಕ್ತ  ಮತ್ತು ವಿಸ್ತರಿತ ಜೀವನೋಪಾಯಗಳು (ವಿಷಯ ಶೀರ್ಷಿಕೆ 1) , (ii) ಆರೋಗ್ಯ ಪೂರ್ಣ ಗ್ರಾಮ (ವಿಷಯ ಶೀರ್ಷಿಕೆ 2), (iii) ಮಕ್ಕಳ ಸ್ನೇಹೀ ಗ್ರಾಮ (ವಿಷಯ ಶೀರ್ಷಿಕೆ 3),  (iv) ಜಲ ಸಮೃದ್ಧ ಗ್ರಾಮ (ವಿಷಯ ಶೀರ್ಷಿಕೆ 4), (v) ಸ್ವಚ್ಛ ಮತ್ತು ಹಸಿರು ಗ್ರಾಮ(ವಿಷಯ ಶೀರ್ಷಿಕೆ 5),   (vi)ಗ್ರಾಮಗಳಲ್ಲಿ ಸ್ವಾವಲಂಬಿ ಮೂಲಸೌಕರ್ಯ(ವಿಷಯ ಶೀರ್ಷಿಕೆ 6). (vii) ಸಾಮಾಜಿಕ ಭದ್ರತೆಯ ಗ್ರಾಮ (ವಿಷಯ ಶೀರ್ಷಿಕೆ 7), (viii)ಉತ್ತಮ ಆಡಳಿತವುಳ್ಳ ಗ್ರಾಮ(ವಿಷಯ ಶೀರ್ಷಿಕೆ 8),  (ix) ಗ್ರಾಮಗಳಲ್ಲಿ  ಹುಟ್ಟುಹಾಕಿದ  ಅಭಿವೃದ್ಧಿ (ವಿಷಯ ಶೀರ್ಷಿಕೆ 9) 
ಇದರಲ್ಲಿ ವಿವಿಧ ಭಾಗೀದಾರರ ಚಿಂತನೆಗಳು ಮತ್ತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಹಾಗು ಭವಿಷ್ಯದ ಹಾದಿಯನ್ನು ರೂಪಿಸಲು ಮತ್ತು ಅವಶ್ಯ ಕ್ರಮಗಳಿಗಾಗಿ ದಾಖಲು ಮಾಡಿಟ್ಟುಕೊಳ್ಳಲಾಗುವುದು. ಕೇಂದ್ರ ಸಚಿವರು, ಪಂಚಾಯತ್ ರಾಜ್ ಸಚಿವರು ಮತ್ತು ಇತರ ಭಾಗೀದಾರರು ಈ ನಿಟ್ಟಿನಲ್ಲಿ ಸಚಿವಾಯಗಳು/ರಾಜ್ಯಗಳು ತಮ್ಮ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಮತ್ತು ಸಿದ್ಧತಾ ಸ್ಥಿತಿಯನ್ನು  ಹಂಚಿಕೊಳ್ಳುವುದಕ್ಕೆ ಈ ಸಮ್ಮೇಳನಗಳು ಒಂದು ಉತ್ತಮ ವೇದಿಕೆಯಾಗುತ್ತವೆ. ಎಲ್ಲಾ ಪ್ರಮುಖ ಭಾಗೀದಾರರು ಈ ಸಂದರ್ಭದಲ್ಲಿ ಹಾಜರಿದ್ದು, ಎಸ್.ಡಿ.ಜಿ.ಗಳಿಗಾಗಿರುವ 2030ರ ಕಾರ್ಯಪಟ್ಟಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಜನತೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಕ್ರಿಯ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ವ್ಯಾಖ್ಯಾನಿಸಲಾದ ಗುರಿಗಳನ್ನು ಸಾಧಿಸುವುದು ಮತ್ತು ಸೇವೆಗಳ ಪೂರೈಕೆಯ ಗುರಿಗಳನ್ನು ಕೇಂದ್ರೀಕರಿಸಿ ಸಚಿವಾಲಯಗಳ ಧೋರಣೆ ಹಾಗು ಸಮಗ್ರತೆಯ ಕುರಿತಂತೆ ಆಳವಾಗಿ ಚರ್ಚಿಸುವುದು. 
 ರಾಷ್ಟ್ರ ಮಟ್ಟದ ಕಾರ್ಯಕ್ರಮದ ಜೊತೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಗ್ರಾಮ ಪಂಚಾಯತ್ ಗಳಿಗೆ ಈ ಸಾಂಪ್ರದಾಯಿಕ ಸಪ್ತಾಹ ಆಚರಣೆ ಸಂದರ್ಭದಲ್ಲಿ (11ರಿಂದ  – 17ನೇ ಏಪ್ರಿಲ್ 2022 ರವರೆಗೆ ) ಪಂಚಾಯತ್ ಸಭೆಗಳನ್ನು ನಡೆಸುವಂತೆ ಕೋರಲಾಗಿದೆ. ಅಲ್ಲಿಯೂ ಚರ್ಚೆಗಳಲ್ಲಿ ಮೇಲೆ ಹೇಳಲಾದ 9 ವಿಷಯಗಳಿಗೆ ಆದ್ಯತೆ ನೀಡುವಂತೆ ಮತ್ತು 2022–2023ರ ಅವಧಿಯಲ್ಲಿ ಈ ಶೀರ್ಷಿಕೆಗಳಲ್ಲಿ ಒಂದು ಅಥವಾ ಎರಡು ವಿಷಯಗಳಿಗೆ ಗಮನ ಕೇಂದ್ರೀಕರಿಸುವ ಬಗ್ಗೆ ನಿರ್ಣಯ ಮಾಡುವಂತೆಯೂ ತಿಳಿಸಲಾಗಿದೆ.  ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಸಾಂಪ್ರದಾಯಿಕ ಸಪ್ತಾಹ ಅವಧಿಯಲ್ಲಿ (11ರಿಂದ  – 17ನೇ ಏಪ್ರಿಲ್ 2022 ರವರೆಗೆ ) ಸೂಕ್ತ ರೀತಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುವಂತೆ ಕಾರ್ಯಕ್ರಮಗಳನ್ನು ಸಂಘಟಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ. 
ಹಿನ್ನೆಲೆ: 
ಆಜಾದಿ ಕಾ ಅಮೃತ ಮಹೋತ್ಸವದ ಅಧಿಕೃತ ಆಚರಣೆ 2021 ರ ಮಾರ್ಚ್ 12 ರಂದು ಆರಂಭ ಗೊಂಡಿರುವುದರಿಂದ ಭಾರತದ  75 ನೇ ವಾರ್ಷಿಕೋತ್ಸವದ 75 ವಾರಗಳ ಲೆಕ್ಕಾಚಾರ ಆರಂಭಗೊಂಡಿದ್ದು, ಪಂಚಾಯತ್ ರಾಜ್ ಸಚಿವಾಲಯ ಗ್ರಾಮೀಣ ಜನಸಮುದಾಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಬಗ್ಗೆ ಅರಿವು ಮೂಡಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ ರಾಜ್ ಇಲಾಖೆಗಳ ಜೊತೆ ಕೈಜೋಡಿಸಿ ಪಂಚಾಯತ್ ರಾಜ್ ಸಂಸ್ಥೆಗಳ ಸಕ್ರಿಯ ಭಾಗೀದಾರಿಕೆಯನ್ನು ಖಾತ್ರಿಪಡಿಸುತ್ತಿದೆ. 
ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಪಂಚಾಯತ್ ಮಟ್ಟದಲ್ಲಿ ಆಯೋಜನೆಯಾಗುವ ಕಾರ್ಯಕ್ರಮಗಳು/ ಚಟುವಟಿಕೆಗಳನ್ನು ಪ್ರದರ್ಶಿಸಲು ಮತ್ತು ಪ್ರಗತಿಯನ್ನು ತೋರಿಸಲು ಇದಕ್ಕಾಗಿಯೇ ಮೀಸಲಾದ ಪ್ರದರ್ಶನ ಫಲಕ (ಡ್ಯಾಶ್ ಬೋರ್ಡ್) [https://IndiaAt75.nic.in/] ವನ್ನು ರೂಪಿಸಲಾಗಿದೆ. ಸಂಬಂಧಿತ ಕಾರ್ಯಕ್ರಮಗಳ/ ಕಾರ್ಯಚಟುವಟಿಕೆಗಳ    (ಛಾಯಾ ಚಿತ್ರ, ವೀಡಿಯೋ, ಸುದ್ದಿ ತುಣುಕುಗಳು ಇತ್ಯಾದಿಗಳನ್ನು)  ವಿವರಗಳನ್ನು  India@75 ಡ್ಯಾಶ್ ಬೋರ್ಡಿಗೆ ಅಪ್ ಗೆ ಲೋಡ್ ಮಾಡಬಹುದು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೈಗೊಳ್ಳುವ ವಿವಿಧ ಕಾರ್ಯಕ್ರಮಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯಿಂದ ಗ್ರಾಮೀಣ ಜನಸಮೂಹವನ್ನು ತಲುಪಲು ಮತ್ತು ಅವರಿಗೆ ಆಜಾದಿ ಕಾ ಅಮೃತ ಮಹೋತ್ಸವದ ಉದ್ದೇಶಗಳನ್ನು ಹಾಗು ಮಹತ್ವದ ಬಗ್ಗೆ ಸೂಕ್ಷ್ಮತ್ವವನ್ನು ಮೂಡಿಸಲು ಸಾಧ್ಯವಾಗುತ್ತದೆ.

***



(Release ID: 1815435) Visitor Counter : 221