ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಕಾರ್ಯಾಚರಣೆ ನಡೆಯದ ಕಲ್ಲಿದ್ದಲು ಗಣಿಗಳನ್ನು ದಂಡವಿಲ್ಲದೇ ಸರ್ಕಾರಕ್ಕೆ ಹಿಂದಿರುಗಿಸಲು ಒಂದು ಬಾರಿಗೆ ಅನುಮತಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ
ಹಾಲಿ ಹರಾಜು ನೀತಿಯನ್ವಯ ಪಿ.ಎಸ್.ಯುಗಳಲ್ಲಿರುವ ಹಲವಾರು ಕಲ್ಲಿದ್ದಲು ಗಣಿಗಳ ಬಿಡುಗಡೆ ಮತ್ತು ಹರಾಜಿಗೆ ಕ್ರಮ
Posted On:
08 APR 2022 4:01PM by PIB Bengaluru
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಿ.ಎಸ್.ಯುಗಳಲ್ಲಿ ಕಾರ್ಯಾಚರಣೆ ನಡೆಸದ ಗಣಿಗಳನ್ನು ಒಂದು ಬಾರಿಗೆ ಅನ್ವಯವಾಗುವಂತೆ ಯಾವುದೇ ದಂಡವಿಲ್ಲದೇ [ಬ್ಯಾಂಕ್ ಖಾತರಿ ಮುಟ್ಟುಗೋಲು] ಮತ್ತು ಯಾವುದೇ ಕಾರಣ ಉಲ್ಲೇಖಿಸದೇ ಸರ್ಕಾರಕ್ಕೆ ಒಪ್ಪಿಸುವ ಕುರಿತ ಕಲ್ಲಿದ್ದಲು ಸಚಿವಾಲಯದ ಪ್ರಸ್ತಾವನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ ಅನುಮೋದನೆ ನೀಡಿದೆ.
ಈಗಿನ ಸಾರ್ವಜನಿಕ ಉದ್ದಿಮೆಗಳ ಹಂಚಿಕೆದಾರರು ಗಣಿಗಳನ್ನು ಅಭಿವೃದ್ಧಿಪಡಿಸುವ ಸ್ಥಿತಿಯಲ್ಲಿಲ್ಲದಿದ್ದರೆ ಅಥವಾ ನಿರಾಸಕ್ತಿ ಹೊಂದಿದ್ದರೆ ಅಂತಹ ಹಲವಾರು ಕಲ್ಲಿದ್ದಲು ಗಣಿಗಳನ್ನು ಬಿಡುಗಡೆ ಮಾಡಬಹುದಾಗಿದೆ ಹೀಗಾಗಿ ಪ್ರಸ್ತುತ ಹರಾಜು ನೀತಿಯನ್ವಯ ಇವುಗಳನ್ನು ಹರಾಜು ಹಾಕಬಹುದು. ಕಲ್ಲಿದ್ದಲು ಗಣಿಗಳನ್ನು ಒಪ್ಪಿಸುವ ಕುರಿತ ನೀತಿ ಪ್ರಕಟಿಸಿ ಅನುಮೋದಿಸಿದ ಮೂರು ತಿಂಗಳ ಒಳಗಾಗಿ ಹಂಚಿಕೆಯಾಗಿರುವ ಕಲ್ಲಿದ್ದಲು ಗಣಿಗಳನ್ನು ಒಪ್ಪಿಸಲು ಕಂಪನಿಗಳಿಗೆ ಅನುಮತಿ ನೀಡಲಾಗಿದೆ.
2014 ರಲ್ಲಿ ಸುಪ್ರೀಂ ಕೋರ್ಟ್ ಕಲ್ಲಿದ್ದಲು ಬ್ಲಾಕ್ ಗಳನ್ನು ರದ್ದುಗೊಳಿಸಿದ ನಂತರ, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಆದ ತಕ್ಷಣದ ಅಡಚಣೆಯನ್ನು ತಪ್ಪಿಸಲು ಸರ್ಕಾರ ಅನೇಕ ರದ್ದಾದ ಕಲ್ಲಿದ್ದಲು ಬ್ಲಾಕ್ ಗಳನ್ನು ರಾಜ್ಯ ಮತ್ತು ಕೇಂದ್ರ ಪಿ.ಎಸ್.ಯುಗಳಿಗೆ ಸೂಕ್ತ ಹಂಚಿಕೆ ವಿಧಾನದಲ್ಲಿ ನೀಡಿತ್ತು. ಹಂಚಿಕೆ ಮಾರ್ಗ ತ್ವರಿತವಾಗಿತ್ತು ಮತ್ತು ರಾಜ್ಯ ಜಿ.ಇ.ಎನ್.ಒ ಗಳ ಮೂಲಕ ಅಗತ್ಯವಿರುವ ಕಲ್ಲಿದ್ದಲನ್ನು ಈ ಬ್ಲಾಕ್ ಗಳಿಂದ ಪೂರೈಸಬಹುದು ಎಂದು ನಿರೀಕ್ಷಿಸಲಾಗಿತ್ತು. ರಾಜ್ಯ/ಕೇಂದ್ರ ಪಿ.ಎಸ್.ಯುಗಳು ಪಾವತಿಸಬೇಕಾದ ಆದಾಯದ ಪಾಲನ್ನು ಖಾಸಗಿ ವಲಯಕ್ಕಿಂತ ಭಿನ್ನವಾಗಿ, ಪ್ರತಿಟನ್ ಆಧಾರದ ಮೇಲೆ ನಿಗದಿಮಾಡಲಾಗಿದೆ. ಆಗಿನ ಸಮಯದಲ್ಲಿ ಕಲ್ಲಿದ್ದಲು ಬ್ಲಾಕ್ ಗಳ ಹಂಚಿಕೆ ಸಂದರ್ಭ ಗಮನಿಸಿದರೆ ಕಲ್ಲಿದ್ದಲು ಬ್ಲಾಕ್ ಗಳ ಕಾರ್ಯಾಚರಣೆ ಷರತ್ತುಗಳು ಅತ್ಯಂತ ಕಠಿಣವಾಗಿದ್ದವು ಮತ್ತು ಯಶಸ್ವಿ ಹಂಚಿಕೆದಾರರಿಗಾಗಲಿ ಅಥವಾ ನಾಮನಿರ್ದೇಶಿತ ಪ್ರಾಧಿಕಾರಗಳಿಗೆ ಯಾವುದೇ ಬಖಸುದಾರಿಗೆ ಅವಕಾಶವಿರಲಿಲ್ಲ. ಕಲ್ಲಿದ್ದಲು ಗಣಿಗಳನ್ನು ಆರಂಭಿಸಲು ವಿಳಂಬ ಮಾಡಿದರೆ ದಂಡ ವಿಧಿಸುವ ಕ್ರಮದಿಂದ ವಿವಾದಗಳು ಸೃಷ್ಟಿಯಾದವು ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗುವಂತಾಯಿತು.
2021 ರ ಡಿಸೆಂಬರ್ ವರೆಗೆ 73 ಕಲ್ಲಿದ್ದಲು ಗಣಿಗಳಲ್ಲಿ ಸರ್ಕಾರದ ಕಂಪನಿಗಳಿಗೆ ಮಂಜೂರಾಗಿದ್ದ 45 ಕಲ್ಲಿದ್ದಲು ಗಣಿಗಳು ಕಾರ್ಯಾಚರಣೆಯಲ್ಲಿರಲಿಲ್ಲ ಹಾಗು 19 ಗಣಿಗಳ ಕಾರ್ಯನಿರ್ವಹಣೆ ಅವಧಿ ಈಗಾಗಲೇ ಪೂರ್ಣಗೊಂಡಿತ್ತು. ಹಂಚಿಕೆದಾರರ ನಿಯಂತ್ರಣಕ್ಕೆ ಮೀರಿದ ಕಾರಣಗಳಿಂದಾಗಿ ಇವುಗಳ ಕಾರ್ಯನಿರ್ವಹಣೆ ವಿಳಂಬವಾಗಿದ್ದು, ಉದಾಹರಣೆಗೆ ಕಾನೂನು ಸುವ್ಯವಸ್ಥೆ, ಈ ಹಿಂದೆ ನಿರ್ಧರಿಸಿದಂತೆ ಅರಣ್ಯ ಪ್ರದೇಶ ಹೆಚ್ಚಾಗಿರುವುದು, ಭೂ ಸ್ವಾಧೀನದ ವಿರುದ್ಧ ಭೂ ಹಿಡುವಳಿದಾರರ ಪ್ರತಿರೋಧ, ಕಲ್ಲಿದ್ದಲು ಸಂಪನ್ಮೂಲಗಳು ಲಭ್ಯವಿದೆ ಎಂದು ಹೇಳಿದ್ದ ಭೌಗೋಳಿಕ ವರದಿಗಳ ಅಂಶಗಳು ಕೂಡ ವಿಳಂಬಕ್ಕೆ ಕಾರಣವಾಗಿದ್ದವು.
ಕಲ್ಲಿದ್ದಲು ವಲಯ ದೇಶದ ಇಂಧನ ಭದ್ರತೆಗೆ ಪ್ರಮುಖವಾಗಿದೆ. ಅನುಮೋದನೆಯಲ್ಲಿ ತಾಂತ್ರಿಕ ಅಡಚಣೆ ನಿವಾರಣೆಯಾದ ನಂತರ ಮತ್ತು ಗಡಿಗಳನ್ನು ಮರುಹೊಂದಿಸಿದ ಬಳಿಕ ಇತ್ತೀಚೆಗೆ ಪ್ರಾರಂಭಿಸಲಾದ ಕಲ್ಲಿದ್ದಲು ಗಣಿಗಳ ಹರಾಜು ನೀತಿಯಡಿ ಆಸಕ್ತರಿಗೆ ಮುಂಚಿತವಾಗಿ ಮಂಜೂರು ಮಾಡಿದ ಉತ್ತಮ ಗುಣಮಟ್ಟದ ಕಲ್ಲಿದ್ದಲು ಬ್ಲಾಕ್ ಗಳನ್ನು ತ್ವರಿತವಾಗಿ ಮರು ಬಳಕೆ ಮಾಡಿಕೊಳ್ಳಬಹುದು. ತ್ವರಿತವಾಗಿ ಕಲ್ಲಿದ್ದಲು ಕಾರ್ಯನಿರ್ವಹಣೆ ಮಾಡಿದರೆ ಇದರಿಂದ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದ್ದು, ಹೂಡಿಕೆ ಹೆಚ್ಚಾಗಲಿದೆ, ದೇಶದ ಹಿಂದುಳಿದ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಇದು ಕೊಡುಗೆ ನೀಡುವುದಲ್ಲದೇ ವ್ಯಾಜ್ಯಗಳು ಕಡಿಮೆಯಾಗಲಿವೆ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ಸುಗಮ ವ್ಯವಹಾರ ನಡೆಸುವುದನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.
***
(Release ID: 1815047)
Visitor Counter : 221
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam