ಹಣಕಾಸು ಸಚಿವಾಲಯ
14 ರಾಜ್ಯಗಳಿಗೆ ವಿತ್ತೀಯ ಕೊರತೆ ಅನುದಾನ 7183.42 ಕೋಟಿ ರೂಪಾಯಿ ಬಿಡುಗಡೆ
2022-23 ನೇ ಸಾಲಿಗೆ ರಾಜ್ಯಗಳಿಗೆ ಒಟ್ಟು ವಿತ್ತೀಯ ಕೊರತೆ ಅನುದಾನ 86,201 ಕೋಟಿ ರೂಪಾಯಿ ನಿಗದಿ
ಪ್ರಕಟಣಾ ದಿನಾಂಕ:
08 APR 2022 12:35PM by PIB Bengaluru
ಹಣಕಾಸು ಸಚಿವಾಲಯದ ವೆಚ್ಚ ವಿಭಾಗ ಗುರುವಾರ 14 ರಾಜ್ಯಗಳಿಗೆ ಹಣಕಾಸು ವ್ಯವಸ್ಥೆಯ ವಿಕೇಂದ್ರೀಕರಣದಲ್ಲಿ, ವಿತ್ತೀಯಕೊರತೆ [ಪಿ.ಡಿ.ಆರ್.ಡಿ]ಯ ಮೊದಲ ಕಂತಿನ ಮೊತ್ತ 7,183.42 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಹಣ ಬಿಡುಗಡೆ ಮಾಡಲಾಗಿದೆ.
2022- 23 ನೇ ಸಾಲಿಗೆ 14 ರಾಜ್ಯಗಳಿಗೆ ಒಟ್ಟಾರೆ ವಿತ್ತೀಯಕೊರತೆ ಮೊತ್ತ 86,201 ಕೋಟಿ ರೂಪಾಯಿ ಮೊತ್ತವನ್ನು ಹದಿನೈದನೇ ಹಣಕಾಸು ಆಯೋಗ ನಿಗದಿ ಮಾಡಿದೆ. ಶಿಫಾರಸ್ಸು ಮಾಡಲಾದ ಮೊತ್ತವನ್ನು 12 ಸಮಾನ ಮಾಸಿಕ ಕಂತುಗಳ ರೂಪದಲ್ಲಿ ಶಿಫಾರಸ್ಸು ಮಾಡಲಾದ ಮೊತ್ತವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ.
ವಿಕೇಂದ್ರೀಕರಣ ನಂತರದ ವಿತ್ತೀಯ ಕೊರತೆ ಅನುದಾನವನ್ನು ಸಂವಿಧಾನದ 275 ನೇ ವಿಧಿಯಡಿ ರಾಜ್ಯಗಳಿಗೆ ಒದಗಿಸಲಾಗುತ್ತಿದೆ. ವಿಕೇಂದ್ರೀಕರಣದ ವ್ಯವಸ್ಥೆಯಲ್ಲಿ ರಾಜ್ಯಗಳ ಆದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು ಹಣಕಾಸು ಆಯೋಗಗಳ ಶಿಫಾರಸ್ಸಿಗೆ ಅನುಗುಣವಾಗಿ ರಾಜ್ಯಗಳಿಗೆ ಅನುಕ್ರಮವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ.
- ವಿತ್ತೀಯ ಅಂದಾಜು ಮತ್ತು ವೆಚ್ಚಗಳನ್ನು ಪರಿಗಣಿಸಿ ನಿರ್ಣಯಿಸಿದ ಮೊತ್ತವನ್ನು 2020-21 ರಿಂದ 2025-26 ರ ಅವಧಿಗೆ ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಅನುದಾನ ಪಡೆಯಲು ರಾಜ್ಯಗಳು ಅರ್ಹತೆ ಪಡೆಯುತ್ತವೆ.
2022-23 ನೇ ಸಾಲಿಗೆ ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ವಿತ್ತೀಯ ಕೊರತೆ ಅನುದಾನ ಪಡೆಯುತ್ತಿರುವ ರಾಜ್ಯಗಳೆಂದರೆ : ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ್, ಸಿಕ್ಕಿಂ, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.
2022-23 ನೇ ಸಾಲಿಗೆ ವಿತ್ತೀಯ ಕೊರತೆ ಅನುದಾನ ಪಡೆಯುತ್ತಿರುವ ರಾಜ್ಯಗಳ ವಿವರ ಮತ್ತು ಮೊದಲ ಕಂತಿನಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಮೊತ್ತ ಈ ಕೆಳಕಂಡಂತೆ ಇದೆ.
ರಾಜ್ಯವಾರು ವಿಕೇಂದ್ರೀಕರಣದ ನಂತರದ ಆದಾಯ ಕೊರತೆ ಅನುದಾನ [ಪಿ.ಡಿ.ಆರ್.ಡಿ.ಜಿ] ಬಿಡುಗಡೆಯಾಗಿದೆ
(ಕೋಟಿ ರೂಪಾಯಿಗಳಲ್ಲಿ)
|
S.No.
|
ರಾಜ್ಯಗಳ ಹೆಸರು
|
ಪಿ.ಡಿ.ಆರ್.ಡಿ.ಜಿ
2022-23 ನೇ ಸಾಲಿಗೆ ಎಫ್.ಸಿ-14 ಶಿಫಾರಸ್ಸು
|
2022 ರ ಏಪ್ರಿಲ್ ತಿಂಗಳ ಮೊದಲ ಕಂತು ಬಿಡುಗಡೆ
|
|
1
|
ಆಂದ್ರಪ್ರದೇಶ
|
10,549
|
879.08
|
|
2
|
ಅಸ್ಸಾಂ
|
4,890
|
407.50
|
|
3
|
ಹಿಮಾಚಲ ಪ್ರದೇಶ
|
9,377
|
781.42
|
|
4
|
ಕೇರಳ
|
13,174
|
1097.83
|
|
5
|
ಮಣಿಪುರ
|
2,310
|
192.50
|
|
6
|
ಮೇಘಾಲಯ
|
1,033
|
86.08
|
|
7
|
ಮಿಜೋರಾಂ
|
1,615
|
134.58
|
|
8
|
ನಾಗಾಲ್ಯಾಂಡ್
|
4,530
|
377.50
|
|
9
|
ಪಂಜಾಬ್
|
8,274
|
689.50
|
|
10
|
ರಾಜಸ್ಥಾನ್
|
4,862
|
405.17
|
|
11
|
ಸಿಕ್ಕೀಂ
|
440
|
36.67
|
|
12
|
ತ್ರಿಪುರ
|
4,423
|
368.58
|
|
13
|
ಉತ್ತರಾಖಂಡ
|
7,137
|
594.75
|
|
14
|
ಪಶ್ಚಿಮ ಬಂಗಾಳ
|
13,587
|
1132.25
|
****
(ಪ್ರಕಟಣೆ ಐ.ಡಿ.: 1814828)
ವಿಸಿಟರ್ ಕೌಂಟರ್ : 278