ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ಆರೋಗ್ಯ ದಿನಕ್ಕೆ ಶುಭ ಕೋರಿದ ಪ್ರಧಾನಿ ಹಾಗು ಪ್ರತಿಯೊಬ್ಬರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥನೆ

Posted On: 07 APR 2022 9:18AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ಆರೋಗ್ಯ ದಿನದ ಅಂಗವಾಗಿ ಎಲ್ಲರಿಗೂ ಶುಭ ಕೋರಿದ್ದಾರೆ ಮತ್ತು ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಹಾಗೂ ಯೋಗಕ್ಷೇಮ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ. ಆರೋಗ್ಯ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ನಮ್ಮ ನಾಗರಿಕರಿಗೆ ಉತ್ತಮ ಗುಣಮಟ್ಟ ಮತ್ತು ಕೈಗೆಟಕುವ ಆರೋಗ್ಯ ರಕ್ಷಣೆಯಲ್ಲಿ ಆಯುಷ್ಮಾನ್ ಭಾರತ್ ಮತ್ತು ಪಿಎಂ-ಜನೌಷಧಿ ಯೋಜನೆಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಕಳೆದ 8 ವರ್ಷಗಳಿಂದೀಚೆಗೆ ವೈದ್ಯಕೀಯ ಶಿಕ್ಷಣ ವಲಯ ಕ್ಷಿಪ್ರ ಪರಿವರ್ತನೆಯಾಗಿದೆ. ಹಲವು ಹೊಸ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ ಎಂದು ಹೇಳಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲು ಭಾರತ ಸರ್ಕಾರ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಮಾಹಿತಿ ನೀಡಿದ ಅವರು, ಇದರಿಂದ ಅಸಂಖ್ಯಾತ ಯುವ ಜನಾಂಗದ ಆಶೋತ್ತರಗಳಿಗೆ ರೆಕ್ಕೆ ಸಿಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ ಹೀಗೆ ಹೇಳಿದ್ದಾರೆ.

 "आरोग्यं परमं भाग्यं स्वास्थ्यं सर्वार्थसाधनम्॥

“ಆರೋಗ್ಯಂ ಪರಮಂ ಭಾಗ್ಯಂ ಆರೋಗ್ಯಂ ಸರ್ವಾರ್ಥಸಾಧನಂ”

          “ವಿಶ್ವ ಆರೋಗ್ಯ ದಿನದ ಶುಭಾಶಯಗಳು. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಹಾಗೂ ಯೋಗಕ್ಷೇಮದ ಹಾರೈಕೆ, ಇಂದು ಆರೋಗ್ಯ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವ ದಿನವಾಗಿದೆ. ಅವರ ಕಠಿಣ ಪರಿಶ್ರಮದಿಂದಾಗಿ ನಾವು ನಮ್ಮ ಭೂಗ್ರಹವನ್ನು ರಕ್ಷಿಸಿಕೊಂಡಿದ್ದೇವೆ”

          “ಭಾರತದ ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ನಾವು ನಮ್ಮ ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟಕುವ ಆರೋಗ್ಯ ರಕ್ಷಣಾ ಸೇವೆಯನ್ನು ಖಾತ್ರಿಪಡಿಸಲು ಒತ್ತು ನೀಡಿದ್ದೇವೆ. ನಮ್ಮ ರಾಷ್ಟ್ರ ವಿಶ್ವದ ಅತಿ ದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಆಯುಷ್ಮಾನ್ ಭಾರತ್ ಗೆ ತವರೂರು ಎಂಬುದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವಂತಾಗಿದೆ.”

“ಪಿಎಂ ಜನೌಷಧಿ ಯೋಜನೆಯಂತಹ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದಾಗ ನನಗೆ ಅತೀವ ಸಂತೋಷವಾಯಿತು. ನಾವು ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆಗಳಿಗೆ ಒತ್ತು ನೀಡಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದವರ ವೈದ್ಯಕೀಯ ಖರ್ಚು ಗಣನೀಯವಾಗಿ ಉಳಿತಾಯವಾಗಿರುವುದು ಖಾತ್ರಿಯಾಗಿದೆ. ಇದೇ ವೇಳೆ ನಾವು ಒಟ್ಟಾರೆ ಯೋಗಕ್ಷೇಮವನ್ನು ಮತ್ತಷ್ಟು ವೃದ್ಧಿಸಲು ನಮ್ಮ ಆಯುಷ್ ಜಾಲವನ್ನು ಬಲವರ್ಧನೆಗೊಳಿಸುತ್ತಿದ್ದೇವೆ.

ಕಳೆದ 8 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ವಲಯಲ್ಲಿ ಕ್ಷಿಪ್ರ ಪರಿವರ್ತನೆಗಳಾಗಿವೆ. ಹಲವು ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗಿವೆ. ಸ್ಥಳೀಯ ಭಾಷೆಗಳಲ್ಲೇ ವೈದ್ಯಕೀಯ ವ್ಯಾಸಂಗ ಕೈಗೊಳ್ಳುವ ಅವಕಾಶ ದೊರಕಿಸಿ ಕೊಡಲು ನಮ್ಮ ಸರ್ಕಾರ ಪ್ರಯತ್ನಗಳನ್ನು ಕೈಗೊಂಡಿದೆ. ಇದು ಅಸಂಖ್ಯಾತ ಯುವಜನರ ಆಶೋತ್ತರಗಳಿಗೆ ರೆಕ್ಕೆ ನೀಡಲಿದೆ.

 

*** 


(Release ID: 1814438) Visitor Counter : 213