ಪ್ರಧಾನ ಮಂತ್ರಿಯವರ ಕಛೇರಿ
ಇಸ್ರೇಲ್ನ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನಫ್ತಾಲಿ ಬೆನೆಟ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
Posted On:
04 APR 2022 6:37PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಸ್ರೇಲ್ ಪ್ರಧಾನಿ ಗೌರವಾನ್ವಿತ ಶ್ರೀ ನಫ್ತಾಲಿ ಬೆನೆಟ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಗೌರವಾನ್ವಿತ ಬೆನೆಟ್ ಅವರ ಕೋವಿಡ್ -19 ರೋಗ ನಿಯಂತ್ರಣಾ ಕಾರ್ಯಗಳ ನಂತರ ಆರಂಭಿಕ ಚೇತರಿಕೆಗಾಗಿ ಪ್ರಧಾನಮಂತ್ರಿಯವರು ತಮ್ಮ ಶುಭಾಶಯ ತಿಳಿಸಿದರು. ಇತ್ತೀಚೆಗೆ ಇಸ್ರೇಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಮಂತ್ರಿಯವರು ಸಂತಾಪ ವ್ಯಕ್ತಪಡಿಸಿದರು.
ಉಕ್ರೇನ್ನಲ್ಲಿನ ಪರಿಸ್ಥಿತಿ ಸೇರಿದಂತೆ ಇತ್ತೀಚಿನ ಭೌಗೋಳಿಕ-ರಾಜಕೀಯ ಬೆಳವಣಿಗೆಗಳ ಕುರಿತು ನಾಯಕರು ವಿವರವಾಗಿ ಚರ್ಚೆ ನಡೆಸಿದರು. ದೇಶಗಳ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರ ಉಪಕ್ರಮಗಳನ್ನು ಇಬ್ಬರೂ ಪರಿಶೀಲಿಸಿದರು.
ಗೌರವಾನ್ವಿತ ಇಸ್ರೇಲ್ನ ಪ್ರಧಾನಮಂತ್ರಿ ಶ್ರೀ ನಫ್ತಾಲಿ ಬೆನೆಟ್ ಅವರನ್ನು ಮುಂಬರುವ ಲಭ್ಯ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಲು ಪ್ರಧಾನಮಂತ್ರಿಯವರು ಆಹ್ವಾನಿಸಿದರು
***
(Release ID: 1813666)
Visitor Counter : 183
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam