ಪ್ರಧಾನ ಮಂತ್ರಿಯವರ ಕಛೇರಿ

ನಿವೃತ್ತಿ ಹೊಂದುತ್ತಿರುವ ರಾಜ್ಯಸಭಾ ಸದಸ್ಯರಿಗೆ ಬೀಳ್ಕೊಡುಗೆ ನೀಡಿದ ಪ್ರಧಾನಿ


“ಅನುಭವಿ ಸದಸ್ಯರ ನಿರ್ಗಮನ, ಸದನಕ್ಕೆ ನಷ್ಟ ’’

“ಸದನವು ಇಡೀ ದೇಶದ ಭಾವನೆಗಳು, ಆತ್ಮ, ನೋವು ಮತ್ತು ಭಾವಪರವಶತೆಯನ್ನು ಪ್ರತಿಬಿಂಬಿಸುತ್ತದೆ’’

Posted On: 31 MAR 2022 1:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯ ಎಲ್ಲಾ ನಿವೃತ್ತ ಸದಸ್ಯರ ಕೊಡುಗೆಗಳನ್ನು ಶ್ಲಾಘಿಸಿದರು ಮತ್ತು ಅವರ ಭವಿಷ್ಯಕ್ಕಾಗಿ ಶುಭ ಕೋರಿದರು. ನಿವೃತ್ತಿಯಾಗುತ್ತಿರುವ ಸದಸ್ಯರ ಅನುಭವದ ಮೌಲ್ಯವನ್ನು ಪ್ರಧಾನಿ ಉಲ್ಲೇಖಿಸಿದರು ಮತ್ತು ಅವರ ನಿರ್ಗಮನದೊಂದಿಗೆ ಉಳಿದ ಸದಸ್ಯರ ಹೊಣೆಗಾರಿಕೆ ಹೆಚ್ಚಾಗಲಿದೆ, ಏಕೆಂದರೆ  ಅವರು ನಿರ್ಗಮಿತ ಸದಸ್ಯರ ಹೊಣೆಗಾರಿಕೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದರು.

ಸದನವು ದೇಶದ ಎಲ್ಲಾ ಭಾಗಗಳ ಭಾವನೆಗಳು, ಚೈತನ್ಯ, ನೋವು ಮತ್ತು ಭಾವಪರವಶತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಸದಸ್ಯರಾಗಿ ನಾವು ಸದನಕ್ಕೆ ಸಾಕಷ್ಟು ಕೊಡುಗೆ ನೀಡುತ್ತೇವೆ ಎಂಬುದು ನಿಜ, ಆದರೆ ಸದನವು ಪ್ರತಿದಿನ ಭಾರತ ಸಮಾಜದ ಅಸಂಖ್ಯಾತ ವರ್ಗಗಳ ಸದ್ಯದ ಮತ್ತು ವ್ಯವಸ್ಥೆಗಳನ್ನು ಅರಿಯಲು ಅವಕಾಶ ನೀಡುವುದರಿಂದ ಸದನವೂ ಕೂಡ ನಮಗೆ ಬಹಳಷ್ಟು ನೀಡುತ್ತದೆ ಎಂಬುದು ಕೂಡ ಅಷ್ಟೇ ಸತ್ಯ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಕೆಲವು ಸದಸ್ಯರು ಸದನದಿಂದ ನಿವೃತ್ತರಾಗುತ್ತಿರಬಹುದು, ಆದರೆ ಅವರು ತಮ್ಮ ಶ್ರೀಮಂತ ಅನುಭವವನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. 
ಸದಸ್ಯರು ತಮ್ಮ ನೆನಪುಗಳನ್ನು ಭವಿಷ್ಯದ ಪೀಳಿಗೆಗೆ ಉಪಯುಕ್ತ ಉಲ್ಲೇಖವಾಗಿ ಬರೆದಿಡಬೇಕು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ಸದಸ್ಯರು ದೇಶದ ದಿಕ್ಸೂಚಿಯನ್ನು ರೂಪಿಸುತ್ತಾರೆ ಮತ್ತು ಪರಿಣಾಮ ಬೀರುತ್ತಾರೆ, ಅವರ ನೆನಪುಗಳನ್ನು ಸಾಂಸ್ಥಿಕ ವಿಧಾನದಲ್ಲಿ ದೇಶದ ಅಭಿವೃದ್ಧಿಗೆ ಬಳಸಬಹುದು ಎಂದು ಅವರು ಹೇಳಿದರು. 
ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯಲ್ಲಿ ಜನರಿಗೆ ಸ್ಫೂರ್ತಿ ತುಂಬುವಂತೆ ನಿವೃತ್ತ ಸದಸ್ಯರಲ್ಲಿ ಪ್ರಧಾನಮಂತ್ರಿ  ಮನವಿ ಮಾಡಿದರು. 

 


*********

 

 



(Release ID: 1812123) Visitor Counter : 154