ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಆರೋಗ್ಯ ಸಂಘಟನೆಯ ‘ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರ’ ಸ್ಥಾಪನೆ ಒಪ್ಪಂದಕ್ಕೆ ಆಯುಷ್ ಸಚಿವಾಲಯ-ವಿಶ್ವ ಆರೋಗ್ಯ ಸಂಘಟನೆ ಸಹಿ ; ಪ್ರಧಾನ ಮಂತ್ರಿ ಸ್ವಾಗತ
Posted On:
26 MAR 2022 9:14AM by PIB Bengaluru
ವಿಶ್ವ ಆರೋಗ್ಯ ಸಂಘಟನೆಯು ಭಾರತದಲ್ಲಿ ‘ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರ’ ತೆರೆಯುವ ಪ್ರಸ್ತಾವನೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ)ಯ ನಿರ್ಧಾರದಿಂದ ಭಾರತವು ಸಾಂಪ್ರದಾಯಿಕ ಔಷಧಗಳ ತವರೂರು ಆಗಲಿದೆ. ಇದು ಅತೀವ ಸಂತಸ ತಂದಿದೆ. ಈ ಜಾಗತಿಕ ಕೇಂದ್ರವು ಓಪೃಥ್ವಿಯನ್ನು ಆರೋಗ್ಯಕರವಾಗಿಸಲು ಮತ್ತು ನಮ್ಮ ಶ್ರೀಮಂತ ಸಾಂಪ್ರದಾಯಿಕ ಔಷಧ ಅಭ್ಯಾಸಗಳನ್ನು ಜಾಗತಿಕ ಒಳಿತಿಗಾಗಿ ಕೇಂದ್ರವು ಕೊಡುಗೆ ನೀಡಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
‘ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರ’ ತೆರೆಯುವ ಉದ್ದೇಶದಿಂದ ಕೇಂದ್ರದ ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ) ‘ಆತಿಥೇಯ ರಾಷ್ಟ್ರ ಒಪ್ಪಂದ’ಕ್ಕೆ ಸಹಿ ಹಾಕಿವೆ.
ಆಯುಷ್ ಸಚಿವಾಲಯ ಮತ್ತು ಡಬ್ಲ್ಯುಎಚ್ಒ ಟ್ವೀಟ್ ಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ;
"ವಿಶ್ವ ಆರೋಗ್ಯ ಸಂಘಟನೆಯ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರದ ನೆಲೆಯಾಗಿದೆ ಎಂಬ ಗೌರವಕ್ಕೆ ಭಾರತ ಪಾತ್ರವಾಗಿದೆ. ಈ ಕೇಂದ್ರವು ನಮ್ಮ ಪೃಥ್ವಿಯನ್ನು ಆರೋಗ್ಯಕರವಾಗಿಸಲು ಮತ್ತು ಜಾಗತಿಕ ಒಳಿತಿಗಾಗಿ ನಮ್ಮ ಶ್ರೀಮಂತ ಸಾಂಪ್ರದಾಯಿಕ ಔಷಧ ಅಭ್ಯಾಸಗಳನ್ನು ಬಳಸಿಕೊಳ್ಳುವಲ್ಲಿ ಕೊಡುಗೆ ನೀಡುತ್ತದೆ" ಎಂದಿದ್ದಾರೆ.
"ಭಾರತದ ಸಾಂಪ್ರದಾಯಿಕ ಔಷಧಗಳು ಮತ್ತು ಯೋಗಕ್ಷೇಮ ಅಭ್ಯಾಸಗಳು ಮತ್ತು ಆಚರಣೆಗಳು ವಿಶ್ವಾದ್ಯಂತ ಬಹಳ ಜನಪ್ರಿಯವಾಗಿವೆ. ಡಬ್ಲ್ಯುಎಚ್ಒದ ಈ ಕೇಂದ್ರವು ನಮ್ಮ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುವಲ್ಲಿ ಬಹು ದೂರ ಸಾಗಲಿದೆ" ಎಂದು ಪ್ರಧಾನ ಮಂತ್ರಿ ಆಶಾವಾದ ವ್ಯಕ್ತಪಡಿಸಿದ್ದಾರೆ.
*****
(Release ID: 1810039)
Visitor Counter : 196
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam