ಪ್ರಧಾನ ಮಂತ್ರಿಯವರ ಕಛೇರಿ

ಯುನೈಟೆಡ್ ಕಿಂಗ್ಡಂ ಪ್ರಧಾನ ಮಂತ್ರಿ ಗೌರವಾನ್ವಿತ ಬೋರಿಸ್ ಜಾನ್ಸನ್ ಎಂ.ಪಿ. ಜೊತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ದೂರವಾಣಿ ಮಾತುಕತೆ.

Posted On: 22 MAR 2022 9:56PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಯುನೈಟೆಡ್ ಕಿಂಗ್ಡಂನ ಪ್ರಧಾನ ಮಂತ್ರಿ ಗೌರವಾನ್ವಿತ ಬೋರಿಸ್ ಜಾನ್ಸನ್ ಎಂ.ಪಿ. ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದರು.

ಉಕ್ರೇನಿನ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ವಿವರವಾದ ಮಾತುಕತೆ ನಡೆಸಿದರು. ಪ್ರಧಾನ ಮಂತ್ರಿ ಮೋದಿ ಅವರು ಪರಸ್ಪರ ಶತೃತ್ವ ತೊರೆಯುವ ನಿಟ್ಟಿನಲ್ಲಿ ಭಾರತದ ಮನವಿಯನ್ನು ಪುನರುಚ್ಚರಿಸಿದರಲ್ಲದೆ, ರಾಜತಾಂತ್ರಿಕ ಮತ್ತು ಮಾತುಕತೆಯ ಹಾದಿಗೆ ಮರಳುವಂತೆಯೂ ಮಾಡಿರುವ ಮನವಿಯನ್ನು ಪುನರುಚ್ಚರಿಸಿದರು. ಸಮಕಾಲೀನ ಜಾಗತಿಕ ವ್ಯವಸ್ಥೆಯ ಮೂಲಾಧಾರವಾಗಿರುವ ಅಂತಾರಾಷ್ಟ್ರೀಯ ಕಾನೂನು ಮತ್ತು ಭೌಗೋಳಿಕ ಸಮಗ್ರತೆ ಹಾಗು ಎಲ್ಲಾ ದೇಶಗಳ ಸಾರ್ವಭೌಮತ್ವಕ್ಕೆ ಗೌರವ ನೀಡುವ ಭಾರತದ ನಂಬಿಕೆಯನ್ನು ಅವರು ಒತ್ತಿ ಹೇಳಿದರು.    

ಉಭಯ ನಾಯಕರೂ ದ್ವಿಪಕ್ಷೀಯ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು ಹಾಗು ವ್ಯಾಪಾರ, ತಂತ್ರಜ್ಞಾನ, ಹೂಡಿಕೆ, ರಕ್ಷಣೆ ಮತ್ತು ಭದ್ರತೆ,  ಜನತೆ ಮತ್ತು ಜನತೆಯ ನಡುವಣ ಬಾಂಧವ್ಯ ಸಹಿತ ವಿವಿಧ ವಲಯಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆಯೂ ಒಪ್ಪಿಗೆ ಸೂಚಿಸಿದರು. ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಾತುಕತೆಗಳು ಧನಾತ್ಮಕ ವೇಗದಲ್ಲಿ ಸಾಗುತ್ತಿರುವುದಕ್ಕೆ ಪ್ರಧಾನ  ಮಂತ್ರಿ ಮೋದಿ ತೃಪ್ತಿ ವ್ಯಕ್ತಪಡಿಸಿದರು. ಕಳೆದ ವರ್ಷ ಉಭಯ ನಾಯಕರ ನಡುವೆ ನಡೆದ ವರ್ಚುವಲ್ ಶೃಂಗದಲ್ಲಿ ಅಂಗೀಕರಿಸಿದ  “ಭಾರತ-ಯು.ಕೆ. ರೋಡ್ ಮ್ಯಾಪ್ 2030” ಅನುಷ್ಠಾನದಲ್ಲಿ ಸಾಧಿತವಾಗಿರುವ ಪ್ರಗತಿಯ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆದಷ್ಟು ಬೇಗ, ಪರಸ್ಪರ ಅನುಕೂಲಕರವಾದ ದಿನದಂದು ಪ್ರಧಾನ ಮಂತ್ರಿ ಜಾನ್ಸನ್ ಅವರನ್ನು ಭಾರತದಲ್ಲಿ ಸ್ವಾಗತಿಸುವ ಆಶಯವನ್ನು  ಪ್ರಧಾನ ಮಂತ್ರಿ ಅವರು ವ್ಯಕ್ತಪಡಿಸಿದರು.

***



(Release ID: 1808752) Visitor Counter : 141