ಆಯುಷ್
ಯೋಗ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಭಾರತವು ಜಾಗತಿಕ ನಾಯಕನಾಗಲು ಉತ್ತಮ ಸ್ಥಾನದಲ್ಲಿದೆ - ಶ್ರೀ ಸರ್ಬಾನಂದ ಸೋನೊವಾಲ್
ಆಯುಷ್ ಸಚಿವಾಲಯವು 8ನೇ ʻಅಂತಾರಾಷ್ಟ್ರೀಯ ಯೋಗ ದಿನ-2022ʼ ವರೆಗೆ 100 ದಿನಗಳ ಕ್ಷಣಗಣನೆ ಪ್ರಾರಂಭಿಸಿದೆ
Posted On:
13 MAR 2022 4:34PM by PIB Bengaluru
ಕೇಂದ್ರ ಆಯುಷ್ ಹಾಗೂ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಶ್ರೀ ಸರ್ಬಾನಂದ್ ಸೋನೋವಾಲ್ ಅವರು ʻಯೋಗ ಮಹೋತ್ಸವ-2022ಕ್ಕೆ ನವದೆಹಲಿಯಲ್ಲಿ ಇಂದು ಚಾಲನೆ ನೀಡಿದರು. 8ನೇ ಅಂತಾರಾಷ್ಟ್ರೀಯ ಯೋಗ ದಿನʼ (ಐಡಿವೈ) 2022ರವರೆಗೆ 100 ದಿನಗಳ ಕ್ಷಣಗಣನೆಯಯ ಸ್ಮರಣಾರ್ಥ ಕಾರ್ಯಕ್ರಮ ಇದಾಗಿತ್ತು. ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಖಟ್ಟರ್, ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಪರಿಸರ ಖಾತೆ ಸಚಿವ ಶ್ರೀ ಭೂಪೇಂದರ್ ಯಾದವ್, ಆಯುಷ್ ಖಾತೆ ಸಹಾಯಕ ಸಚಿವ ಡಾ. ಮಹೇಂದ್ರ ಮುಂಜಪಾರಾ, ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ಸಹಾಯಕ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಹಾಗೂ ಋಷಿಕೇಶದ ʻಪರಮಾರ್ಥ ನಿಕೇತನʼದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಅವರು ಉಪಸ್ಥಿತರಿದ್ದರು.
ಈ ವರ್ಷದ ʻಅಂತಾರಾಷ್ಟ್ರೀಯ ಯೋಗ ದಿನ-2022 ಅಭಿಯಾನವು ಜೂನ್ 21, 2022ರವರೆಗೆ ನಡೆಯಲಿದ್ದು, ʻ ವಿಶ್ವಾದ್ಯಂತ 100 ದಿನಗಳು, 100 ನಗರಗಳು ಮತ್ತು 100 ಸಂಸ್ಥೆಗಳುʼ ಎಂಬ ವಿಷಯಾಧಾರಿತವಾಗಿದೆ. ʻಆಜಾದಿ ಕಾ ಅಮೃತ್ ಮಹೋತ್ಸವʼವನ್ನು ಆಚರಿಸಲು ಇದೇ ಮೊದಲ ಬಾರಿಗೆ, ಜೂನ್ 21, 2022 ರಂದು 75 ಪಾರಂಪರಿಕ/ ಅಪ್ರತಿಮ ಸಾಂಸ್ಕೃತಿಕ ತಾಣಗಳಲ್ಲಿ ಯೋಗ ಪ್ರದರ್ಶನ ಏರ್ಪಡಿಸಲಾಗುವುದು. ಈ ಅಭಿಯಾನದಡಿಯ ಇತರ ಕಾರ್ಯಕ್ರಮಗಳಲ್ಲಿ ಯೋಗ ಕಾರ್ಯಕ್ರಮಗಳು, ಯೋಗ ಪ್ರದರ್ಶನಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ನಡೆಯಲಿವೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಹೆಚ್ಒ) ʻಎಂ-ಯೋಗ ಆಪ್ʼ, ʻನಮಸ್ತೆ ಆಪ್ʼ, ʻವೈ-ಬ್ರೇಕ್ ಆಪ್ʼ ಬಳಕೆಯ ಪ್ರಯೋಜನಗಳನ್ನು ಸಚಿವಾಲಯ ಪ್ರಚಾರ ಮಾಡಲಿದೆ. ಫೋಟೋ ಸ್ಪರ್ಧೆ, ರಸಪ್ರಶ್ನೆ, ಚರ್ಚೆ, ಪ್ರತಿಜ್ಞೆ, ಮತದಾನ ಸಮೀಕ್ಷೆ, ಜಿಂಗಲ್ ಸೇರಿದಂತೆ ವಿವಿಧ ಜನ ಕೇಂದ್ರಿತ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ʻಮೈಗವ್ʼ ವೇದಿಕೆಯಲ್ಲಿ ಪ್ರಾರಂಭಿಸಲಾಗುವುದು.
ಶ್ರೀ ಸರ್ಬಾನಂದ ಸೋನೋವಾಲ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ʻಐಡಿವೈ-2022ʼ ನಾವು ಆಯೋಜಿಸಿರುವ ಅಂತಾರಾಷ್ಟ್ರೀಯ ಯೋಗ ದಿನದ 8ನೇ ಆವೃತ್ತಿಯಾಗಲಿದೆ ಎಂದು ಹೇಳಿದರು. ಪ್ರಪಂಚದಾದ್ಯಂತ ಆರೋಗ್ಯ, ಯೋಗಕ್ಷೇಮ ಮತ್ತು ಶಾಂತಿಯನ್ನು ಉತ್ತೇಜಿಸಲು ಜನಾಂದೋಲನಕ್ಕೆ ಇದು ಒಂದು ಉತ್ತಮ ಅವಕಾಶವಾಗಿದೆ. ಈ 100 ದಿನಗಳ ಕ್ಷಣಗಣನೆ ಕಾರ್ಯಕ್ರಮವು ʻಐಡಿವೈ-2022ʼ ಆಚರಣೆಯತ್ತ ನಮ್ಮ ಪ್ರಯಾಣದ ಆರಂಭವನ್ನು ಔಪಚಾರಿಕವಾಗಿ ಸೂಚಿಸುತ್ತದೆ. ಇದು ರೋಗ, ಒತ್ತಡ ಮತ್ತು ಖಿನ್ನತೆಯಿಂದ ಸ್ವಾತಂತ್ರ್ಯದ ಕಡೆಗೆ ಪ್ರಯಾಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ʻಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರʼವನ್ನು ಭಾರತದಲ್ಲಿ ಸ್ಥಾಪಿಸಲಾಗುತ್ತಿದೆ. ಹೀಗಾಗಿ ಯೋಗ ಮತ್ತು ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳ ಆಳವಾದ ಜ್ಞಾನವನ್ನು ಹೊಂದಿರುವ ಭಾರತವು ಜಗತ್ತನ್ನು ಶಾಂತಿ, ಯೋಗಕ್ಷೇಮ, ಉತ್ತಮ ಹಾಗೂ ಅಗ್ಗದ ದರದಲ್ಲಿ ಆರೋಗ್ಯ ಸೇವೆಯ ಹಾದಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದರು.
ನಮ್ಮ ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ, 2015ರಿಂದ ಇದು ಜನಾಂದೋಲನವಾಗಿ ಮಾರ್ಪಟ್ಟಿದೆ ಮತ್ತು ವಿಶ್ವದ ಅತಿದೊಡ್ಡ ಸಾರ್ವಜನಿಕ ಉಪಕ್ರಮವೆಂದು ಗುರುತಿಸಲ್ಪಟ್ಟಿದೆ - ಆಯುಷ್ ಸಚಿವಾಲಯಅಭಿವೃದ್ಧಿಪಡಿಸಿದ ಸಾಮಾನ್ಯ ಯೋಗ ಶಿಷ್ಟಾಚಾರವನ್ನು 250 ದಶಲಕ್ಷಕ್ಕೂ ಹೆಚ್ಚು ಜನರು ಅಭ್ಯಾಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಯೋಗವನ್ನು ವಿಶ್ವ ಶಾಂತಿಗಾಗಿ ಭಾರತೀಯ ಬ್ರಾಂಡ್ ಆಗಿ ಮಾಡಲು ಮತ್ತು "ಏಕ್ ಭಾರತ್ ಶ್ರೇಷ್ಠಭಾರತ್" ಎಂಬ ಧ್ಯೇಯವಾಕ್ಯವನ್ನು ಉತ್ತೇಜಿಸಲು ತಮ್ಮ ಸಚಿವಾಲಯವು ಉಪಕ್ರಮಗಳನ್ನು ಕೈಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರು, ʻಯೋಗ ಆಯೋಗʼವನ್ನು ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಹರಿಯಾಣ ಎಂದು ಹೇಳಿದರು. ನಾವು 100 ಎಕರೆ ಪ್ರದೇಶದಲ್ಲಿ ಹರಿಯಾಣದ ಕುರುಕ್ಷೇತ್ರದಲ್ಲಿ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ. ಹರಿಯಾಣದ ಸುಮಾರು 20 ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ ವೈದ್ಯರನ್ನು ಲಭ್ಯವಾಗುವಂತೆ ಮಾಡಲು ನಾವು ಉಪಕ್ರಮ ಕೈಗೊಂಡಿದ್ದೇವೆ ಎಂದರು.
ಸಿಕ್ಕಿಂನ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಅವರು ಮಾತನಾಡಿ, ಸಿಕ್ಕಿಂನ ಕೃತುಂಗ ಸರೋವರದ ಬಳಿ ರಾಷ್ಟ್ರೀಯ ಯೋಗ ಮತ್ತು ಧ್ಯಾನ ಸಂಸ್ಥೆಯ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದರು. ಇದು ಜಾಗತಿಕ ಸಂಸ್ಥೆಯಾಗಿದ್ದು, ಇದು ಯೋಗದ ಬಗ್ಗೆ ಜ್ಞಾನವನ್ನು ನೀಡುತ್ತದೆ. ಯೋಗವು ಸಿಕ್ಕಿಂನ ಶಾಲಾ ಪಠ್ಯಕ್ರಮದ ಭಾಗವಾಗಿದೆ ಮತ್ತು ಸುಮಾರು 500 ಶಿಕ್ಷಕರು ಈ ಸೇವೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಶ್ರೀ ಭೂಪೇಂದರ್ ಯಾದವ್ ಅವರು ತಮ್ಮ ಭಾಷಣದಲ್ಲಿ, ಪರಿಸರ ಸ್ನೇಹಿ ಜೀವನಶೈಲಿಯ ಹಾದಿಯಲ್ಲಿ, ಯೋಗ ಮತ್ತು ಆಯುಷ್ ಒಟ್ಟಾರೆಯಾಗಿ ಬಹಳಷ್ಟು ಕೊಡುಗೆ ನೀಡಬಲ್ಲವು ಎಂದು ಹೇಳಿದರು. ನಾವು ಜೈವಿಕ ವೈವಿಧ್ಯತೆ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದ್ದೇವೆ. ಇದು ಆಯುಷ್ ವ್ಯವಸ್ಥೆಗಳ ಪ್ರಗತಿಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಲಿದೆ. ಈ ಕ್ಷಣಗಣನೆ ಸರಣಿಯಲ್ಲಿ 49 ಆಯ್ದ ಸರೋವರಗಳು ಮತ್ತು 52 ಹುಲಿ ಸಂರಕ್ಷಿತ ಪ್ರದೇಶಗಳಂತಹ ಅಮೂಲ್ಯ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ಆಯುಷ್ ಸಚಿವರನ್ನು ವಿನಂತಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಯೋಗದ ಉಪಯುಕ್ತತೆಯ ಉದಾಹರಣೆಯನ್ನು ಉಲ್ಲೇಖಿಸಿ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು, ಸಮಗ್ರ ಆರೋಗ್ಯದಲ್ಲಿ ಯೋಗದ ಎಷ್ಟು ಪರಿಣಾಮಕಾರಿ ಎಂಬುದನ್ನು ನೋಡುವ ಯೋಜನೆಯನ್ನು ದೆಹಲಿಯ ಏಮ್ಸ್ ಮಾಡಿದೆ ಎಂದು ಹೇಳಿದರು. ಜಿಮ್‌ಗೆ ಹೋಗುವವರಿಗೆ ಹೋಲಿಸಿದರೆ ಯೋಗದಿಂದ ಆಗುವ ಪರಿಣಾಮಗಳನ್ನು ಏಮ್ಸ್ ಅಧ್ಯಯನ ಮಾಡಿತು. ಎರಡೂ ಗುಂಪುಗಳಲ್ಲಿ ದೈಹಿಕ ಸುಧಾರಣೆ ಬಹುತೇಕ ಒಂದೇ ಆಗಿತ್ತು. ಆದರೆ ಜಿಮ್‌ಗೆ ಹೋಗುವವರಲ್ಲಿ 'ರಜೋ-ಗುಣʼ ಮತ್ತು 'ತಮೋ-ಗುಣ' ಹೆಚ್ಚಾಗಿ ಕಂಡುಬಂದಿತು, ಯೋಗಾಭ್ಯಾಸ ಮಾಡಿದ ಗುಂಪು 'ಸತ್ವ-ಗುಣʼ ಹೆಚ್ಚಾಗಿ ಕಂಡುಬಂದಿದೆ ಎಂದರು.
***
(Release ID: 1805733)
Visitor Counter : 227