ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav g20-india-2023

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಜರ್ಮನಿಯ ಡಾಯ್ಚ ಫೋರ್‌ಸ್ಚುಂಗ್ಸ್‌ಗೆಮಿನ್ಸ್‌ಚಾಫ್ಟ್ ಇ.ವಿ (ಡಿ ಎಫ್ ಜಿ) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 09 MAR 2022 1:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಜರ್ಮನಿಯ ಡಾಯ್ಚ ಫೋರ್‌ಸ್ಚುಂಗ್ಸ್‌ಗೆಮಿನ್‌ಶಾಫ್ಟ್ .ವಿ (ಡಿ ಎಫ್ ಜಿ) ನಡುವೆ ಡಿಸೆಂಬರ್ 2021 ರಲ್ಲಿ ಸಹಿ ಮಾಡಿದ ತಿಳಿವಳಿಕೆ ಒಪ್ಪಂದ (ಎಂಒಯು) ಕ್ಕೆ ಅನುಮೋದನೆ ನೀಡಿದೆ. ಭಾರತ ಸರ್ಕಾರದ ಎರಡನೇ ಶೆಡ್ಯೂಲ್ (ವ್ಯಾಪಾರ ವಹಿವಾಟು) ನಿಯಮಗಳು 1961 ನಿಯಮ 7(d)(i) ಗೆ ಅನುಗುಣವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಎಂಒಯು ಉದ್ದೇಶಗಳು

ಟಾಕ್ಸಿಕಾಲಜಿ, ಉಷ್ಣಕಾರಕ ರೋಗ, ಅಪರೂಪದ ಕಾಯಿಲೆಗಳು ಮತ್ತು ಪರಸ್ಪರ ಆಸಕ್ತಿಯ ಇತರ ಯಾವುದೇ ಕ್ಷೇತ್ರಗಳು ಸೇರಿದಂತೆ ವೈದ್ಯಕೀಯ ವಿಜ್ಞಾನಗಳು/ಆರೋಗ್ಯ ಸಂಶೋಧನೆಯ ಕ್ಷೇತ್ರದಲ್ಲಿ ಸಹಕಾರ ನೀಡಲಾಗುವುದು. ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿನ ಸಹಕಾರವು ವೈಜ್ಞಾನಿಕ ಸಂಶೋಧನಾ ಯೋಜನೆಗಳ ಜಂಟಿ ಧನಸಹಾಯ ಮತ್ತು ಸಂಶೋಧಕರ ವಿನಿಮಯ, ಜಂಟಿ ಸೆಮಿನಾರ್‌ಗಳು, ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳಿಗೆ ಧನಸಹಾಯವನ್ನು ಒಳಗೊಂಡಿರುತ್ತದೆ, ಇದು ಉನ್ನತ ವೈಜ್ಞಾನಿಕ ಗುಣಮಟ್ಟ ಮತ್ತು ವಿಜ್ಞಾನದ ಪ್ರಗತಿಗೆ ಪ್ರಯೋಜನಕಾರಿಯಾಗಿದೆ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಮಹತ್ವದ್ದಾಗಿದೆ.

ಹಣಕಾಸಿನ ಪರಿಣಾಮಗಳು

ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿನ ಸಹಕಾರವು ವೈಜ್ಞಾನಿಕ ಸಂಶೋಧನಾ ಯೋಜನೆಗಳ ಜಂಟಿ ಧನಸಹಾಯ ಮತ್ತು ಸಂಶೋಧಕರ ವಿನಿಮಯ, ಜಂಟಿ ಸೆಮಿನಾರ್‌ಗಳು, ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳಿಗೆ ಧನಸಹಾಯವನ್ನು ಒಳಗೊಂಡಿರುತ್ತದೆ, ಇದು ಉನ್ನತ ವೈಜ್ಞಾನಿಕ ಗುಣಮಟ್ಟ ಮತ್ತು ವಿಜ್ಞಾನದ ಪ್ರಗತಿಗೆ ಪ್ರಯೋಜನಕಾರಿಯಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ಮಹತ್ವದ್ದಾಗಿದೆ.

***(Release ID: 1804382) Visitor Counter : 143