ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ  ನಡೆದ ಉನ್ನತ ಮಟ್ಟದ ಸಮಿತಿ ಸಭೆ 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1,682.11 ಕೋಟಿ ರೂ. ಕೇಂದ್ರದ ಹೆಚ್ಚುವರಿ ಸಹಾಯಧನಕ್ಕೆ ಅನುಮೋದನೆ


ಕರ್ನಾಟಕ ರಾಜ್ಯಕ್ಕೆ 459 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ

Posted On: 03 MAR 2022 10:43AM by PIB Bengaluru

2021 ಸಂಭವಿಸಿದ ಪ್ರವಾಹ/ಭೂಕುಸಿತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪುದುಚೇರಿಗೆ ನಿಧಿ ಹಂಚಿಕೆ 

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು (ಎಚ್ ಎಲ್ ಸಿ) ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ (ಎನ್ ಡಿಆರ್ ಎಫ್ ) ಅಡಿಯಲ್ಲಿ 2021ನೇ ಸಾಲಿನಲ್ಲಿ ಪ್ರವಾಹ / ಭೂಕುಸಿತದಿಂದ ಹಾನಿಗೊಳಗಾದ ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರದ ಹೆಚ್ಚುವರಿ ಸಹಾಯಧನವನ್ನು ಅನುಮೋದಿಸಿದೆ. ಇದು ನೈಸರ್ಗಿಕ ವಿಕೋಪಗಳನ್ನು ಎದುರಿಸಿದ ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಜನರಿಗೆ ಸಹಾಯ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಂಕಲ್ಪವನ್ನು ತೋರುತ್ತದೆ.

ಎನ್‌ಡಿಆರ್‌ಎಫ್‌ನಿಂದ ಐದು ರಾಜ್ಯಗಳಿಗೆ 1,664.25 ಕೋಟಿ ರೂ. ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ 17.86 ಕೋಟಿ ರೂ.ಗಳನ್ನು ಕೇಂದ್ರದ ಹೆಚ್ಚುವರಿ ನೆರವು ರೂಪದಲ್ಲಿ ನೀಡಲು ಎಚ್‌ಎಲ್‌ಸಿ ಅನುಮೋದಿಸಿದೆ. ಹಂಚಿಕೆಯ ವಿವರ ಹೀಗಿದೆ:-

ಕರ್ನಾಟಕಕ್ಕೆ 492.39 ಕೋಟಿ ರೂ.;

ಆಂಧ್ರಪ್ರದೇಶಕ್ಕೆ 351.43 ಕೋಟಿ ರೂ.;

ಹಿಮಾಚಲಪ್ರದೇಶಕ್ಕೆ 112.19 ಕೋಟಿ ರೂ.;

ಮಹಾರಾಷ್ಟ್ರಕ್ಕೆ 355.39 ಕೋಟಿ ರೂ;

ತಮಿಳುನಾಡು ರಾಜ್ಯಕ್ಕೆ 352.85 ಕೋಟಿ ರೂ.; ಮತ್ತು

ಪುದುಚೇರಿಗೆ 17.86 ಕೋಟಿ ರೂ.

ಹೆಚ್ಚುವರಿ ನೆರವು ಈಗಾಗಲೇ ರಾಜ್ಯಗಳ ಮೀಸಲಾಗಿ ಇಟ್ಟಿರುವ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ (ಎಸ್ ಡಿಆರ್ ಎಫ್) ರಾಜ್ಯಗಳಿಗೆ ಕೇಂದ್ರವು ಬಿಡುಗಡೆ ಮಾಡಿದ ನಿಧಿಗಿಂತ ಅಧಿಕವಾಗಿದೆಕೇಂದ್ರ ಸರ್ಕಾರವು 2021-22 ಹಣಕಾಸು ವರ್ಷದಲ್ಲಿ ಈವರೆಗೆ 28 ರಾಜ್ಯಗಳಿಗೆ ಅವುಗಳ ಎಸ್‌ಡಿಆರ್‌ಎಫ್‌ ನಿಧಿಯಿಂದ 17,747.20 ಕೋಟಿ ರೂ. ಮತ್ತು ಎನ್‌ಡಿಆರ್‌ಎಫ್‌ನಿಂದ 8 ರಾಜ್ಯಗಳಿಗೆ 4,645.92 ಕೋಟಿ ರೂ.ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರವು ರಾಜ್ಯಗಳ ಮನವಿಗೆ ಕಾಯದೆ ವಿಪತ್ತುಗಳು ಸಂಭವಿಸಿದ ಕೂಡಲೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಂತರ-ಸಚಿವಾಲಯದ ಕೇಂದ್ರ ತಂಡಗಳನ್ನು (ಐಎಂಸಿಟಿಗಳು) ನಿಯೋಜಿಸಿತ್ತು.

***(Release ID: 1802569) Visitor Counter : 206