ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

“ವಲಸಿಗರು ಮತ್ತು ತಾಯ್ನಾಡಿಗೆ ಹಿಂತಿರುಗಿದವರ ಪರಿಹಾರ ಮತ್ತು ಪುನರ್ವಸತಿ” ಯೋಜನೆಯ ಗುಚ್ಛದಡಿ ಹಾಲಿ ಇರುವ ಏಳು ಉಪಯೋಜನೆಗಳನ್ನು 2021-22ರಿಂದ 2025-26ರವರೆಗೆ ಮುಂದುವರಿಕೆಗೆ ನರೇಂದ್ರ ಮೋದಿ ಸರ್ಕಾರ ಅನುಮೋದನೆ 


ಗುಚ್ಛದಡಿ ಲಭ್ಯವಿರುವ ಯೋಜನೆಗಳ ಒಟ್ಟು ಮೊತ್ತ 1,452 ಕೋಟಿ ರೂ.

ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಗೃಹ ಸಚಿವಾಲಯದ ಮೂಲಕ ಗುಚ್ಛ ಯೋಜನೆಯ ಮುಂದುವರಿಕೆಗೆ ಅನುಮೋದನೆ ನೀಡಿರುವುದರಿಂದ ಫಲಾನುಭವಿಗಳಿಗೆ ನೆರವು ಖಾತ್ರಿ

Posted On: 02 MAR 2022 3:01PM by PIB Bengaluru

ವಲಸಿಗರು ಮತ್ತು ತಾಯ್ನಾಡಿಗೆ ಹಿಂತಿರುಗಿದವರ ಪರಿಹಾರ ಮತ್ತು ಪುನರ್ವಸತಿ ಯೋಜನೆಯ ಗುಚ್ಛದಡಿ ಹಾಲಿ ಇರುವ ಏಳು ಉಪಯೋಜನೆಗಳನ್ನು ಒಟ್ಟು 1,452 ಕೋಟಿ ರೂ. ಮೊತ್ತದೊಂದಿಗೆ  2021-22ರಿಂದ 2025-26ರವರೆಗೆ ಮುಂದುವರಿಕೆ ಪ್ರಸ್ತಾವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಅನುಮೋದನೆ  ನೀಡಿದೆಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯದ ಮೂಲಕ ಗುಚ್ಛ ಯೋಜನೆಯಡಿ ನೆರವು ಫಲಾನುಭವಿಗಳಿಗೆ ತಲುಪುವುದನ್ನು ಅನುಮೋದನೆ ಖಾತ್ರಿಪಡಿಸುತ್ತದೆ.

ಯೋಜನೆಯು ನಿರಾಶ್ರಿತರಾಗಿ  ಬಳಲುತ್ತಿರುವ ವಲಸಿಗರು ಮತ್ತು ಸ್ವದೇಶಕ್ಕೆ ವಾಪಸ್ಸಾದವರಿಗೆ ಸಮಂಜಸ ಆದಾಯವನ್ನು ಗಳಿಸಲು ಮತ್ತು ಮುಖ್ಯವಾಹಿನಿಯ ಆರ್ಥಿಕ ಚಟುವಟಿಕೆಗಳಲ್ಲಿ ಅವರ ಸೇರ್ಪಡೆಗೆ ಅನುಕೂಲ ಕಲ್ಪಿಸುತ್ತದೆ.

ಸರ್ಕಾರವು ಬೇರೆ ಬೇರೆ ಸಮಯದಲ್ಲಿ ನಾನಾ ಯೋಜನೆಗಳನ್ನು ಆರಂಭಿಸಿತ್ತು.

ಕೆಳಗಿನ ಏಳು ಯೋಜನೆಗಳು ಸಹಾಯವನ್ನು ನೀಡುತ್ತವೆ

  1. ಜಮ್ಮು ಮತ್ತು ಕಾಶ್ಮೀರ ಮತ್ತು ಛಾಂಬ್‌ನ ಪಾಕಿಸ್ತಾನ ಆಕ್ರಮಿತ ಪ್ರದೇಶಗಳ ಸ್ಥಳಾಂತರಗೊಂಡ ಕುಟುಂಬಗಳ ಪರಿಹಾರ ಮತ್ತು ಪುನರ್ವಸತಿ,
  2. ಶ್ರೀಲಂಕಾ ತಮಿಳು ನಿರಾಶ್ರಿತರಿಗೆ ಪರಿಹಾರದ ನೆರವು
  3. ತ್ರಿಪುರಾದಲ್ಲಿನ ಪರಿಹಾರ ಶಿಬಿರಗಳಲ್ಲಿ ಇರುವ ಬ್ರೂಸ್‌ಗಳಿಗೆ ನೆರವಿನ ಪರಿಹಾರ
  4. 1984 ಸಿಖ್ ವಿರೋಧಿ ಗಲಭೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ
  5. ಭಯೋತ್ಪಾದನಾ ಚಟುವಟಿಕೆ, ದಂಗೆ, ಕೋಮು/ಎಡಪಂಥೀಯ ಉಗ್ರಗಾಮಿ ಹಿಂಸಾಚಾರ ಮತ್ತು ಗಡಿಯಾಚೆಯಿಂದ ಗುಂಡಿನ ದಾಳಿ ಮತ್ತು ಭಾರತೀಯ ಭೂಪ್ರದೇಶದಲ್ಲಿ ಗಣಿ/ಅತ್ಯಾಧುನಿಕ ಸ್ಫೋಟಕ್ಕೆ ಬಲಿಪಶುಗಳಾದವರು ಸೇರಿದಂತೆ ಭಯೋತ್ಪಾದನಾ ಹಿಂಸಾಕೃತ್ಯಗಳಿಂದ ಸಂತ್ರಸ್ತ ನಾಗರಿಕರ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳು
  6. ಕೇಂದ್ರ ಟಿಬೆಟಿಯನ್ ಪರಿಹಾರ ಸಮಿತಿಗೆ (ಸಿಟಿಆರ್ ಸಿ) ಸಹಾಯಧನ
  7. ಕೂಚ್ ಬೆಹಾರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಭಾರತದಲ್ಲಿನ 51 ಹಿಂದಿನ ಬಾಂಗ್ಲಾದೇಶದಿಂದ ಸುತ್ತವರಿದಿರುವ ಪ್ರದೇಶಗಳಲ್ಲಿ  ಮೂಲಸೌಕರ್ಯ ಅಭಿವೃದ್ಧಿಗಾಗಿ ಮತ್ತು ಬಾಂಗ್ಲಾದೇಶದಲ್ಲಿನ ಹಿಂದಿನ ಭಾರತದಿಂದ ಸುತ್ತುವರಿದ ಪ್ರದೇಶಗಳಿಂದ ವಾಪಸ್ಸಾದ 922 ಜನರಿಗೆ ಪುನರ್ವಸತಿಗೆ  ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಹಾಯಧನ ಒದಗಿಸುತ್ತಿದೆ.

***


(Release ID: 1802321) Visitor Counter : 282