ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ರುಮೇನಿಯಾದ ಪ್ರಧಾನಮಂತ್ರಿ ಶ್ರೀ ನಿಕೋಲೆ-ಅಯೋನೆಲ್ ಸಿಯುಕಾ ಅವರ ನಡುವೆ ದೂರವಾಣಿ ಸಂಭಾಷಣೆ

ಪ್ರಕಟಣಾ ದಿನಾಂಕ: 28 FEB 2022 10:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘನತೆವೆತ್ತ ರುಮೇನಿಯಾದ ಪ್ರಧಾನಮಂತ್ರಿ ನಿಕೋಲೆ-ಅಯೋನೆಲ್ ಸಿಯುಕಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

ಕಳೆದ ಕೆಲವು ದಿನಗಳಿಂದ ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ರುಮೇನಿಯಾ ನೀಡಿದ ಸಹಾಯಕ್ಕಾಗಿ ಪ್ರಧಾನಮಂತ್ರಿಯವರು ಶ್ರೀ  ನಿಕೋಲೆ-ಅಯೋನೆಲ್ ಸಿಯುಕಾ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತೀಯ ನಾಗರಿಕರಿಗೆ ವೀಸಾ ಇಲ್ಲದೆ ರುಮೇನಿಯಾ ಪ್ರವೇಶಿಸಲು ಅವಕಾಶ ನೀಡುವ ರೊಮೇನಿಯಾದ ನಡೆಯನ್ನು ಮತ್ತು ಸ್ಥಳಾಂತರಕ್ಕಾಗಿ ಭಾರತದಿಂದ ಆಗಮಿಸಿದ ವಿಶೇಷ ವಿಮಾನಗಳಿಗೆ ಅನುಮತಿ ನೀಡಿದ ರುಮೇನಿಯಾದ ನಡೆಯನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.

ಮುಂದಿನ ಕೆಲವು ದಿನಗಳಲ್ಲಿ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಭಾರತೀಯ ನಾಗರಿಕರ ಸ್ಥಳಾಂತರ ಪ್ರಯತ್ನಗಳ ಮೇಲ್ವಿಚಾರಣೆಗಾಗಿ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರನ್ನು ತಮ್ಮ ವಿಶೇಷ ಪ್ರತಿನಿಧಿಯಾಗಿ ನಿಯೋಜಿಸುವ ಬಗ್ಗೆ ಪ್ರಧಾನಮಂತ್ರಿಯವರು ಶ್ರೀ ಸಿಯುಕಾ ಅವರಿಗೆ ಮಾಹಿತಿ ನೀಡಿದರು.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ಪ್ರಧಾನಿ, ಹಗೆತನವನ್ನು ನಿಲ್ಲಿಸಲು ಮತ್ತು ಮಾತುಕತೆಗೆ ಮರಳಲು ಭಾರತ ಮಾಡುತ್ತಿರುವ ನಿರಂತರ ಮನವಿಯನ್ನು ಪುನರುಚ್ಚರಿಸಿದರು. ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

***


(ಪ್ರಕಟಣೆ ಐ.ಡಿ.: 1802263) ವಿಸಿಟರ್ ಕೌಂಟರ್ : 224