ಕಲ್ಲಿದ್ದಲು ಸಚಿವಾಲಯ
"ಭಾರತದಲ್ಲಿ ಅತ್ಯಂತ ಅವಲಂಬಿತ ಸಾರ್ವಜನಿಕ ವಲಯ" ಪ್ರಶಸ್ತಿಗಾಗಿ ಕೋಲ್ ಇಂಡಿಯಾ ಲಿಮಿಟೆಡ್ ಅನ್ನು ಅಭಿನಂದಿಸಿದ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ
प्रविष्टि तिथि:
20 FEB 2022 5:03PM by PIB Bengaluru
"ಭಾರತದಲ್ಲಿ ಅತ್ಯಂತ ಅವಲಂಬಿತ ಸಾರ್ವಜನಿಕ ವಲಯ" ಪ್ರಶಸ್ತಿಯನ್ನು ಪಡೆದಿರುವುದಕ್ಕಾಗಿ ಕಲ್ಲಿದ್ದಲು ಸಚಿವಾಲಯದ ಅಡಿಯ ʻಕೋಲ್ ಇಂಡಿಯಾ ಲಿಮಿಟೆಡ್ʼಗೆ(ಸಿಐಎಲ್) ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಶ್ರೀ ಜೋಶಿ ಅವರು, ಈ ಪ್ರಶಸ್ತಿಯು ಇಂಧನ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಸಿಐಎಲ್ ಮಾಡಿದ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ. ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಅವರು ಅಪೇಕ್ಷಿತ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಸಿಐಎಲ್‌ಗೆ ಅಭಿನಂದನೆ ಸಲ್ಲಿಸಿದರು.
ಕೋಲ್ಕೊತಾದ ʻಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿʼ ಸಂಘಟನೆಯು "ಎನರ್ಜಿ ಮೀಟ್ & ಎಕ್ಸಲೆನ್ಸ್
ಅವಾರ್ಡ್ಸ್ ಫಂಕ್ಷನ್" ಕಾರ್ಯಕ್ರಮದಲ್ಲಿ ಸಿಐಎಲ್‌ಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
***
(रिलीज़ आईडी: 1799873)
आगंतुक पटल : 235