ಪರಿಸರ ಮತ್ತು ಅರಣ್ಯ ಸಚಿವಾಲಯ
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ 2016ರಡಿ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಗೆ ಸಂಬಂಧಿಸಿದಂತೆ ವಿಸ್ತೃತ ಉತ್ಪಾದಕರ ಹೊಣೆಗಾರಿಕೆ ಮಾರ್ಗಸೂಚಿ ಕುರಿತು ಅಧಿಸೂಚನೆ ಹೊರಡಿಸಿದ ಸರ್ಕಾರ
ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಕುರಿತ ಆರ್ಥಿಕ ಚಲಾವಣೆ ಬಲವರ್ಧನೆ ಮತ್ತು ಸುಸ್ಥಿರ ಪ್ಲಾಸ್ಟಿಕ್ ಪ್ಯಾಕೇಜಿಂಗ್ ನಿಟ್ಟಿನಲ್ಲಿ ವ್ಯಾಪಾರಕ್ಕೆ ನೀಲನಕ್ಷೆ ಒದಗಿಸಲಾಗುವುದು: ಶ್ರೀ ಭೂಪೇಂದ್ರ ಯಾದವ್
Posted On:
18 FEB 2022 9:23AM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ 2016ರಡಿ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಕುರಿತು ವಿಸ್ತೃತ ಉತ್ಪಾದಕರ ಹೊಣೆಗಾರಿಕೆ ಕುರಿತ ಮಾರ್ಗಸೂಚಿಯ ಅಧಿಸೂಚನೆ ಹೊರಡಿಸಿದೆ. ಈ ಮಾರ್ಗಸೂಚಿ 2022ರ ಜುಲೈ 1 ರಿಂದ ಜಾರಿಗೆ ಬರಲಿರುವ ಹೆಚ್ಚಿನ ಮಾಲಿನ್ಯದ ಸಂಭವನೀಯತೆ ಮತ್ತು ಇದೀಗ ಬಳಕೆಯಲ್ಲಿರುವ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧದ ಜೊತೆ ವಿಸ್ತೃತ ಉತ್ಪಾದಕರಿಗೂ ಹೊಣೆಗಾರಿಕೆಯಾಗಿದ್ದು, ಇದು ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವುದರಿಂದ ಆಗುವ ಮಾಲಿನ್ಯವನ್ನು ತಗ್ಗಿಸುವಲ್ಲಿ ಪ್ರಮುಖ ಹೆಜ್ಜೆಯಾಗದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಭೂಪೇಂದ್ರ ಯಾದವ್ ತಮ್ಮ ಟ್ವೀಟ್ ಸಂದೇಶದಲ್ಲಿ ಈ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ನೀಡಿ, ಈ ಮಾರ್ಗಸೂಚಿಗಳು ಪ್ಲಾಸ್ಟಿಕ್ ಗೆ ಹೊಸ ಪರ್ಯಾಯಗಳನ್ನು ಅಭಿವೃದ್ಧಿಗೊಳಿಸಲು ಉತ್ತೇಜಿಸುತ್ತವೆ ಮತ್ತು ಸುಸ್ಥಿರ ಪ್ಲಾಸ್ಟಿಕ್ ಪ್ಯಾಕೇಜಿಂಗ್ ನಿಟ್ಟಿನಲ್ಲಿ ನಡೆಯಲು ವ್ಯಾಪಾರಕ್ಕೆ ನೀಲನಕ್ಷೆಯನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.
ಈ ಮಾರ್ಗಸೂಚಿಗಳು ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ, ಆರ್ಥಿಕ ಚಲಾವಣೆಯನ್ನು ಬಲವರ್ಧನೆಗೊಳಿಸಲು ನೀತಿಯನ್ನು ಒದಗಿಸುವುದು ಮತ್ತು ಪ್ಲಾಸ್ಟಿಕ್ ಗೆ ಹೊಸ ಪರ್ಯಾಯಗಳನ್ನು ಅಭಿವೃದ್ಧಿಗೊಳಿಸಲು ಉತ್ತೇಜಿಸುತ್ತದೆ ಹಾಗೂ ಸುಸ್ಥಿರ ಪ್ಲಾಸ್ಟಿಕ್ ಪ್ಯಾಕೇಜಿಂಗ್ ನಿಟ್ಟಿನಲ್ಲಿ ಮುನ್ನಡೆಯಲು ವ್ಯವಹಾರಿಕವಾಗಿ ಮುಂದಿನ ಹೆಜ್ಜೆಗಳನ್ನು ಒದಗಿಸಲಿದೆ. ಪ್ಯಾಕೇಜಿಂಗ್ ನಲ್ಲಿ ತಾಜಾ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವುದನ್ನು ತಗ್ಗಿಸುವಲು ಕಠಿಣವಾದ ಪ್ಲಾಸ್ಟಿಕ್ ಪ್ಯಾಕೇಜ್ ವಸ್ತುಗಳು ಮರುಬಳಕೆಯನ್ನು ಮಾರ್ಗಸೂಚಿಯಲ್ಲಿ ಕಡ್ಡಾಯಗೊಳಿಸಲಾಗಿದೆ.
ಇಪಿಆರ್ ಅಡಿಯಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಮರುಬಳಕೆ ಕನಿಷ್ಠ ಮಟ್ಟಕ್ಕೇರಿಸಲು ಮರುಸಂಸ್ಕರಿತ ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಮತ್ತಷ್ಟು ತಗ್ಗಿಸಲಿದೆ ಮತ್ತು ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಮರುಸಂಸ್ಕರಣೆಯನ್ನು ಬೆಂಬಲಿಸಲಿದೆ.
ಇಪಿಆರ್ ಮಾರ್ಗಸೂಚಿಗಳು ಸಾಂಸ್ಥೀಕರಣಕ್ಕೆ ಉತ್ತೇಜನ ನೀಡುವುದಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ವಲಯದ ಮತ್ತಷ್ಟು ಅಭಿವೃದ್ಧಿಗೂ ಮತ್ತಷ್ಟು ನೆರವಾಗಲಿದೆ. ಇದೇ ಮೊದಲ ಬಾರಿಗೆ ಹೆಚ್ಚುವರಿ ವಿಸ್ತೃತ ಉತ್ಪಾದಕರ ಹೊಣೆಗಾರಿಕೆ ಪ್ರಮಾಣಪತ್ರ ಖರೀದಿ ಮತ್ತು ಮಾರಾಟಕ್ಕೆ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಮಾರುಕಟ್ಟೆ ಕಾರ್ಯತಂತ್ರವನ್ನು ವ್ಯವಸ್ಥೆ ಮಾಡಲಾಗಿದೆ.
ಇಪಿಆರ್ ಅನ್ನು ಸಮಗ್ರ ಆನ್ ಲೈನ್ ವೇದಿಕೆಯ ಮೂಲಕ ಜಾರಿಗೊಳಿಸಲಾಗುವುದು. ಅದು ವ್ಯವಸ್ಥೆಯ ಡಿಜಿಟಲ್ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿದೆ. ಈ ಆನ್ ಲೈನ್ ವೇದಿಕೆ ಇಪಿಆರ್ ನಿಬಂಧನೆಗಳ ಮೇಲೆ ನಿಗಾ ಮತ್ತು ಮೇಲ್ವಿಚಾರಣೆ ನಡೆಸಲು ಅವಕಾಶ ನೀಡಲಿದೆ ಮತ್ತು ಆನ್ ಲೈನ್ ನೋಂದಣಿ ಮೂಲಕ ಹಾಗೂ ವಾರ್ಷಿಕ ರಿಟನ್ಸ್ ಸಲ್ಲಿಕೆ ಮೂಲಕ ಕಂಪನಿಗಳ ಅನುಪಾಲನಾ ಹೊರೆಯನ್ನು ತಗ್ಗಿಸಲಿದೆ. ಇಪಿಆರ್ ನಿಬಂಧನೆಗಳ ಪಾಲನೆಯ ಮೇಲ್ವಿಚಾರಣೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಮಾರ್ಗಸೂಚಿಯಲ್ಲಿ ಉದ್ದಿಮೆಗಳ ಪರಿಶೀಲನೆ ಮತ್ತು ಆಡಿಟ್ ವ್ಯವಸ್ಥೆಯನ್ನು ನಿಗದಿಪಡಿಸಲಾಗಿದೆ.
ಮಾರ್ಗಸೂಚಿಯಲ್ಲಿ ಮಾಲಿನ್ಯ ಮಾಡುವವರು ಪರಿಸರಾತ್ಮಕ ಪರಿಹಾರ ವಿಧಿಸಲು ನಿರ್ದಿಷ್ಟ ನಿಯಮವಿದೆ ಹಾಗೂ ವಿಸ್ತೃತ ಉತ್ಪಾದಕರ ಹೊಣೆಗಾರಿಕೆ ಗುರಿಗಳನ್ನು ಪಾಲಿಸದ ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್ ಮಾಲಿಕರಿಗೆ ಈ ಪರಿಹಾರವನ್ನು ವಿಧಿಸಲಾಗುವುದು. ಪರಿಸರದ ಸಂರಕ್ಷಣೆ ಮತ್ತು ಗುಣಮಟ್ಟ ಸುಧಾರಣೆ ಹಾಗೂ ಮಾಲಿನ್ಯ ನಿಯಂತ್ರಣ ತಡೆ ಉದ್ದೇಶವನ್ನು ಇದು ಹೊಂದಿದೆ. ಇದರಡಿ ಸಂಗ್ರಹವಾಗುವ ನಿಧಿಯನ್ನು ಸಂಗ್ರಹ ಮತ್ತು ಮರು ಸಂಸ್ಕರಣೆಗಾಗಿ ಬಳಸಲಾಗುವುದು ಮತ್ತು ಸಂಗ್ರಹಿಸಲಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರಾತ್ಮಕ ವಿಧಾನದಲ್ಲಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
ಈ ಮಾರ್ಗಸೂಚಿಯಡಿ ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್ ಮಾಲಿಕರು ಠೇವಣಿ ಮರುಪಾವತಿ ವ್ಯವಸ್ಥೆ ಅಥವಾ ಪುನಃ ಖರೀದಿ(ಬೈ ಬ್ಯಾಕ್) ಅಥವಾ ಇತರೆ ಮಾದರಿಗಳನ್ನು ಅನುಸರಿಸಬಹುದು. ಆ ಮೂಲಕ ಘನತ್ಯಾಜ್ಯದ ಜತೆ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಮಿಶ್ರಣವಾಗುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.
ವಿವರವಾದ ಅಧಿಸೂಚನೆಗಾಗಿ ಇಲ್ಲಿ ನೋಡಿ:
***
(Release ID: 1799229)
Visitor Counter : 429