ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲೋಕ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಅವರ ಉತ್ತರ

Posted On: 07 FEB 2022 11:53PM by PIB Bengaluru

ಗೌರವಾನ್ವಿತ ಶ್ರೀ ಸ್ಪೀಕರ್ ಅವರೇ,

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಲು ನಾನಿಲ್ಲಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿಗಳು ಆತ್ಮ ನಿರ್ಭರ ಭಾರತ ಮತ್ತು ಆಶೋತ್ತರಗಳ ಭಾರತದ ನಿಟ್ಟಿನಲ್ಲಿ ಆಗುತ್ತಿರುವ ಇತ್ತೀಚಿನ ಪ್ರಯತ್ನಗಳ ಬಗ್ಗೆ ತಮ್ಮ ಭಾಷಣದಲ್ಲಿ ಬಹಳ ವಿವರವಾಗಿ ಮಾತನಾಡಿದ್ದಾರೆ. ಪ್ರಮುಖ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನಾನು ಕೃತಜ್ಞ.

ಗೌರವಾನ್ವಿತ ಸ್ಪೀಕರ್ ಅವರೇ,

ನಾನು ಮಾತನಾಡುವುದಕ್ಕೆ ಮೊದಲು, ನಿನ್ನೆ ನಡೆದ ಘಟನೆಯೊಂದರ ಬಗ್ಗೆ ನಾನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಬಹಳ ದೀರ್ಘ ಕಾಲ ದೇಶವನ್ನು ಹಿಡಿದಿಟ್ಟ, ಪ್ರೇರೇಪಣೆ ನೀಡಿದ ಮತ್ತು ಭಾವನೆಗಳನ್ನು ತುಂಬಿದ ಧ್ವನಿಯನ್ನು ಹೊಂದಿದ ಗೌರವಾನ್ವಿತ ಲತಾ ದೀದಿಯವರನ್ನು ದೇಶವು ಕಳೆದುಕೊಂಡಿದೆ. ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಏಕತೆಯನ್ನು ಬಲಪಡಿಸಿದ ಅವರು ಸುಮಾರು 36 ಭಾಷೆಗಳಲ್ಲಿ ಹಾಡಿದ್ದಾರೆ. ಇದು ಕೂಡಾ ಭಾರತದ ಏಕತೆ ಮತ್ತು ಸಮಗ್ರತೆಯ ಪ್ರೇರಣಾದಾಯಕ ಉದಾಹರಣೆಯಾಗಿದೆ. ಇಂದು ನಾನು ಗೌರವಾನ್ವಿತ ಲತಾ ದೀದಿ ಅವರಿಗೆ ನನ್ನ ಗೌರವದ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.

ಗೌರವಾನ್ವಿತ ಸ್ಪೀಕರ್ ಅವರೇ,

ಎರಡನೇ ಜಾಗತಿಕ ಯುದ್ಧದ ಬಳಿಕ ಜಗತ್ತಿನಲ್ಲಿ ವ್ಯಾಪಕವಾದ ಬದಲಾವಣೆಗಳಾದುದಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ಹೊಸ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಜಗತ್ತು ಹೊಸ ಜಾಗತಿಕ ವ್ಯವಸ್ಥೆಯತ್ತ ಬಹಳ ವೇಗದಿಂದ ಧಾವಿಸುತ್ತಿರುವುದನ್ನು ನಾನು ಬಹಳ ಸ್ಪಷ್ಟವಾಗಿ ನೋಡುತ್ತಿದ್ದೇನೆ. ಕೊರೊನಾ ಅವಧಿಯ ಬಳಿಕ ಹೊಸ ವ್ಯವಸ್ಥೆಗಳತ್ತ ಅದು ಚಲಿಸುತ್ತಿದೆ. ಪರಿವರ್ತನೆಯ ಬಿಂದುವನ್ನು, ಹೊರಳು ದಾರಿಯನ್ನು ನಾವು, ಭಾರತೀಯರು ಕಳೆದುಕೊಳ್ಳಬಾರದು. ಮುಖ್ಯ ಮೇಜಿನ ಮೇಲೆ ಭಾರತದ ಧ್ವನಿ ಬಹಳ ಗಟ್ಟಿ ಧ್ವನಿಯಾಗಿರಬೇಕಾಗಿದೆ. ಭಾರತವು ನಾಯಕತ್ವದ ಪಾತ್ರ ವಹಿಸುವುದಕ್ಕೆ ತನ್ನನ್ನು ತಾನು ಕೀಳಂದಾಜು ಮಾಡಿಕೊಂಡು ಹಿಂದುಳಿಯಬಾರದು. ಮತ್ತು ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು 75 ವರ್ಷಗಳ  ಸ್ವಾತಂತ್ರ್ಯ ತನ್ನೊಳಗೇ ನಮಗೆ ಪ್ರೇರಣೆಯನ್ನು ತುಂಬಿಕೊಂಡಿದೆ. ಪ್ರೇರಣಾದಾಯಕ ಅವಕಾಶ ಮತ್ತು ಹೊಸ ದೃಢ ನಿರ್ಧಾರಗಳೊಂದಿಗೆ  ದೇಶವು ಸ್ವಾತಂತ್ರ್ಯದ ನೂರು ವರ್ಷಗಳನ್ನು ಆಚರಿಸುವಾಗ ದೇಶವನ್ನು  ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪೂರ್ಣ ಸಾಮರ್ಥ್ಯದ, ಶಕ್ತಿವಂತ, ಅರ್ಪಣಾಭಾವದ ಮತ್ತು ದೃಢ ಸಂಕಲ್ಪಗಳ ಮೂಲಕ ನಾವು ಪ್ರಯತ್ನ ಮಾಡಬೇಕು.

ಗೌರವಾನ್ವಿತ ಸ್ಪೀಕರ್ ಅವರೇ,  

ವರ್ಷಗಳಿಂದ ಹಲವಾರು ವಲಯಗಳಲ್ಲಿ ದೇಶವು ಮೂಲ ವ್ಯವಸ್ಥೆಗಳನ್ನು ಮೈಗೂಢಿಸಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಮತ್ತು ಬಹಳ ಶಕ್ತಿ ಗಳಿಸಿಕೊಂಡು ಮುನ್ನಡೆದಿದ್ದೇವೆ. ಬಡವರಿಗೆ ಮನೆ ಒದಗಿಸುವ  ಪ್ರಧಾನ ಮಂತ್ರಿ ಆವಾಸ್ ಯೋಜನಾ ಕಾರ್ಯಕ್ರಮ ಬಹಳ ಕಾಲದಿಂದ ನಡೆಯುತ್ತಿದೆ, ಅದರೆ ಅದರ ವೇಗ ಮತ್ತು ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇಂದು ಬಡವರ ಮನೆಗಳು ಹಲವಾರು ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದವಾಗಿವೆ. ರೀತಿಯಲ್ಲಿ ಪಕ್ಕಾ ಮನೆ ಹೊಂದಿದ ಬಡವರು ಇಂದು ಲಕ್ಷಾಧೀಶರೆಂದು ಕರೆಸಿಕೊಳ್ಳುತ್ತಿದ್ದಾರೆ. ಬಡವರಲ್ಲಿ ಬಡವರ ಮನೆಗಳಲ್ಲಿಯೂ ಇಂದು ಶೌಚಾಲಯಗಳಿವೆ. ಇದು ಯಾವ ಭಾರತೀಯರಿಗೆ ಹೆಮ್ಮೆ ತರುವುದಿಲ್ಲ?. ದೇಶದ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾದ ಸಂಗತಿ ಯಾರಿಗೆ ತಾನೇ ಸಂತೋಷ ತರುವುದಿಲ್ಲ?. ನಾನು ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಅರಂಭ ಮಾಡುತ್ತೇನೆ. ನಿಮಗೆಲ್ಲ ಬಹಳ ಬಹಳ ಧನ್ಯವಾದಗಳು. ನಿಮ್ಮ ಪ್ರೀತಿ ನಿರಂತರವಾಗಿರಲಿ!.

ಸ್ವಾತಂತ್ರ್ಯದ ಹಲವಾರು ವರ್ಷಗಳ ಬಳಿಕ ಬಡವರ ಮನೆಯಲ್ಲಿ ಬೆಳಕು ಬಂದಾಗ ಅದು ದೇಶದ ಸಂತೋಷಕ್ಕೆ ಬಲವನ್ನು ತಂದುಕೊಡುತ್ತದೆ. ಮನೆಯಲ್ಲಿ ಅಡುಗೆ ಅನಿಲ ಸಂಪರ್ಕ ಸ್ಥಾನ ಮಾನದ ಸಂಕೇತವಾಗಿದ್ದ ದೇಶದಲ್ಲಿ ಬಡವರು ಮನೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದುವುದು ಮತ್ತು ಬಡ ತಾಯಂದಿರು ಹೊಗೆಯುಗುಳುವ ಸ್ಟೌವ್ ಗಳಿಂದ ಮುಕ್ತರಾಗುವುದು  ಹಾಗು ಅದರ ಸಂತೋಷ ಅನುಭವಿಸುವಂತಾಗುವುದು ಬಹಳ ಅಪೂರ್ವ ಸಂಗತಿ.

ನೀವು ತಳಮಟ್ಟದಲ್ಲಿದ್ದರೆ ಮತ್ತು ಜನರ ಮಧ್ಯದಲ್ಲಿದ್ದರೆ ಸಂಗತಿಗಳೆಲ್ಲ ನಿಮಗೆ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಬಡವರು ತಮ್ಮದೇ ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಮತ್ತು ಅವರು ಬ್ಯಾಂಕುಗಳಿಗೆ ಹೋಗದೆ ತಮ್ಮ ಮೊಬೈಲ್ ಫೋನ್ ಗಳಲ್ಲಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿರುವುದು ಮತ್ತು ಸರಕಾರ ನೀಡುವ ಹಣ ನೇರಾವಾಗಿ ನೇರ ನಗದು ವರ್ಗಾವಣೆಯ ಮೂಲಕ ಅವರ ಖಾತೆಗಳಿಗೆ ಸೇರುತ್ತಿರುವುದು ನಿಮಗೆ ಕಾಣಿಸುತ್ತಿತ್ತು. ಆದರೆ ದುರ್ದೈವವಶಾತ್ ನಿಮ್ಮಲ್ಲಿ ಅನೇಕರು 2014ರಲ್ಲೇ ಸ್ಥಗಿತಗೊಂಡಿದ್ದಾರೆ. ಮತ್ತು ಅದರಿಂದ ಹೊರಗೆ ಬರಲು ಅಸಮರ್ಥರಾಗಿದ್ದಾರೆ. ನೀವು ನಿಮ್ಮ ಮನಸ್ಥಿತಿಯ ಕಾರಣದಿಂದಾಗಿ ತೊಂದರೆ ಅನುಭವಿಸುತ್ತಿರುವಿರಿ. ದೇಶದ ಜನತೆ ನಿಮ್ಮನ್ನು ಗುರುತಿಸಿದ್ದಾರೆ. ಕೆಲವರಿಗೆ ಈಗಾಗಲೇ ಅರ್ಥವಾಗಿದೆ ಮತ್ತು ಇನ್ನು ಕೆಲವರಿಗೆ ತಡವಾಗಿ ಅರ್ಥವಾಗುತ್ತಿದೆ. ಮತ್ತು ಇನ್ನುಳಿದವರು ಮುಂದೆ ಮನಗಾಣುತ್ತಾರೆ. ನೀವು ಬಹಳ ದೊಡ್ಡ ಉಪದೇಶಗಳನ್ನು ನೀಡುತ್ತೀರಿ ಆದರೆ ನಿಮಗೆ ಇಲ್ಲಿ (ಆಡಳಿತ ಪಕ್ಷದಲ್ಲಿ) 50 ವರ್ಷಗಳ ಕಾಲ ಕುಳಿತುಕೊಳ್ಳುವ ಅವಕಾಶ ಇತ್ತು ಎಂಬುದನ್ನು ಮರೆತು ಬಿಡುತ್ತೀರಿ. ಆದರೆ ನೀವು ಇದರ ಹಿಂದಿರುವ ಕಾರಣಗಳ ಆಳವನ್ನು ನೋಡುವುದಿಲ್ಲ, (ನಿಮ್ಮ ಪತನದ)

ಈಗ ನೀವು ನೋಡಿ, ನಾಗಾಲ್ಯಾಂಡಿನ ಜನತೆ ಕಾಂಗ್ರೆಸ್ಸಿಗೆ ಮತ ನೀಡದೆ 24 ವರ್ಷಗಳಾದವು. ಅವರು ನಿಮಗೆ ಮತ ಹಾಕಿದ್ದು 1998 ರಲ್ಲಿ. ಒಡಿಷಾ 1995 ರಲ್ಲಿ ನಿಮ್ಮ ಪರವಾಗಿ ಮತ ಹಾಕಿತ್ತು, ಈಗ ನಿಮಗೆ ಅಲ್ಲಿ ಪ್ರವೇಶ ಸಿಗದೆ 27 ವರ್ಷಗಳಾಗಿವೆ. 1994 ರಲ್ಲಿ ನೀವು ಗೋವಾದಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದಿರಿ. ಗೋವಾ ನಿಮ್ಮನ್ನು ಒಪ್ಪಿಕೊಳ್ಳದೆ ಈಗ 28 ವರ್ಷಗಳಾಗಿವೆ. 1988 ರಲ್ಲಿ ತ್ರಿಪುರಾದ ಜನರು ನಿಮಗೆ ಮತ ಹಾಕಿದ್ದಾರೆ. ಈಗ ಅದಕ್ಕೆ 34 ವರ್ಷಗಳ ಇತಿಹಾಸ. ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತಿನಲ್ಲಿ ಕಾಂಗ್ರೆಸ್ಸಿನ ಸ್ಥಿತಿ ಹೇಗಿದೆ ಎಂದರೆ ಅವರಿಗೆ ಬಹುಮತ ದಕ್ಕಿರುವುದು 37 ವರ್ಷಗಳ ಹಿಂದೆ, ಅಂದರೆ 1985 ರಲ್ಲಿ. ಪಶ್ಚಿಮ ಬಂಗಾಳದ ಜನರು ನಿಮ್ಮ ಪರವಾಗಿ ಕೊನೆಯ ಬಾರಿಗೆ ಮತ ನೀಡಿದ್ದು 1972 ರಲ್ಲಿ ಸುಮಾರು 50 ವರ್ಷಗಳ ಹಿಂದೆ. ನೀವು ಘನತೆಯನ್ನು ಅನುಸರಿಸಿದರೆ ಮತ್ತು ಸದನವನ್ನು ಬಳಸಿಕೊಳ್ಳದಿದ್ದರೆ ಅದು ದೇಶದ ದುರಾದೃಷ್ಟ. ಸದನವು ದೇಶಕ್ಕೆ ಉತ್ಪಾದಕತೆಯನ್ನು ತರುವಂತಿರಬೇಕು. ಆದರೆ ಅದನ್ನು ಪಕ್ಷಕ್ಕಾಗಿ ಬಳಸುವ ಪ್ರಯತ್ನಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ ನಾವು ಉತ್ತರಿಸಲು ಬದ್ಧರಾಗಿದ್ದೇವೆ.

ಗೌರವಾನ್ವಿತ ಸ್ಪೀಕರ್ ಅವರೇ,

ತಮಿಳುನಾಡು ಅವಕಾಶವನ್ನು 1962 ರಲ್ಲಿ ಅಂದರೆ ಸುಮಾರು 60 ವರ್ಷಗಳ ಹಿಂದೆ ಕೊಟ್ಟಿತು. ನೀವು ತೆಲಂಗಾಣ ರಚಿಸಿದ ಕೀರ್ತಿಯನ್ನು ಪಡೆದುಕೊಳ್ಳಿ, ಆದರೆ ಬಳಿಕವೂ ಅಂದರೆ ತೆಲಂಗಾಣ ರಚನೆಯಾದ ಬಳಿಕವೂ ಅಲ್ಲಿಯ ಜನರು ನಿಮಗೆ ಮತ ಹಾಕಲಿಲ್ಲ. ಜಾರ್ಖಂಡವಾಗಿ 20 ವರ್ಷಗಳು ಕಳೆದಿವೆ. ಕಾಂಗ್ರೆಸ್ ಎಂದೂ ಸ್ಪಷ್ಟ ಬಹುಮತ ಪಡೆದಿಲ್ಲ. ಆದರೆ ಅದು ಹಿಂಬಾಗಿಲಿನ ಮೂಲಕ ಪ್ರವೇಶ ಪಡೆಯಲು ಪ್ರಯತ್ನಿಸುತ್ತದೆ

ಗೌರವಾನ್ವಿತ ಸ್ಪೀಕರ್ ಅವರೇ,  

ಇದು ಚುನಾವಣಾ ಫಲಿತಾಂಶಗಳ ಪ್ರಶ್ನೆ ಮಾತ್ರವಲ್ಲ. ಇದು ಜನತೆಯ ಉದ್ದೇಶಗಳು ಮತ್ತು ಕೃಪೆಯ ಪ್ರತಿಫಲನ ಕೂಡಾ. ಇಂತಹ ಬಹಳ ದೊಡ್ಡ ಪ್ರಜಾಪ್ರಭುತ್ವದಲ್ಲಿ ಹಲವಾರು ವರ್ಷಗಳ ಕಾಲ ದೇಶವನ್ನಾಳಿದವರನ್ನು ದೇಶದ ಜನರು ಯಾಕೆ ಸತತ ತಿರಸ್ಕರಿಸುತ್ತಿದ್ದಾರೆ?. ಮತ್ತು ಜನರು ಎಲ್ಲೆಲ್ಲಿ ಸರಿಯಾದ ನಿರ್ಧಾರ ಕೈಗೊಂಡಿದ್ದಾರೋ ಅಲ್ಲಿ ನಿಮಗೆ ಕಾಲಿಡಲೂ ಅವಕಾಶ ಲಭಿಸಿಲ್ಲ. ನಾವು ಚುನಾವಣೆಯಲ್ಲಿ ಸೋತರೆ ನಮ್ಮ ಇಡೀ ವ್ಯವಸ್ಥೆಯೇ ತಿಂಗಳುಗಳ ಕಾಲ ಕುಸಿದಿರುತ್ತರೆ, ಅಸ್ತವ್ಯಸ್ತಗೊಳ್ಳುತ್ತದೆ. ಆದರೆ ಹಲವಾರು ಸೋಲುಗಳ ನಡುವೆಯೂ ನಿಮ್ಮ ಅಹಂಕಾರ ತೊಲಗುವುದಿಲ್ಲ.ಮತ್ತು ನಿಮ್ಮ ಪರಿಸರ ವ್ಯವಸ್ಥೆ ಅದಕ್ಕೆ ಅವಕಾಶ ಕೊಡುವುದಿಲ್ಲ. ಬಾರಿ ಅಧೀರ ರಂಜನ್ ಜೀ ಅವರು ಬಹಳಷ್ಟು ಕವನಗಳನ್ನು ವಾಚಿಸಿದರು. ನಾನು ಕೂಡಾ ಒಂದು ಅವಕಾಶವನ್ನು ಉಪಯೋಗಿಸುತ್ತೇನೆ. ನಾನು ಅಹಂಕಾರವನ್ನು ಕುರಿತು ಮಾತನಾಡುವಾಗ ನಾನು ಇದನ್ನು ಹೇಳಬೇಕಾಗುತ್ತದೆ

वो जब दिन को रात कहें तो तुरंत मान जाओ,

नहीं मानोगे तोवो दिन में नकाब ओढ़ लेंगे। जरूरत हुई तो हकीकत को थोड़ा-बहुत मरोड़ लेंगे।

वो मगरूर है खुद की समझ पर बेइन्तिहा, उन्‍हें आईना मत दिखाओ। वो आईने को भी तोड़ देंगे।

(ಅವರು ಹಗಲನ್ನು ರಾತ್ರಿ ಎಂದರೆ, ಅದನ್ನು ತಕ್ಷಣ ಒಪ್ಪಿಕೊಳ್ಳಿ,

ನೀವು ಇಲ್ಲ ಎಂದರೆ, ಅವರು ಹಗಲಿನಲ್ಲಿ ಮುಸುಕನ್ನು ಹಾಕಿ ಕೊಳ್ಳುತ್ತಾರೆ, ಅಗತ್ಯ ಬಿದ್ದರೆ ಅವರು ನಿಜವನ್ನು ಸ್ವಲ್ಪ ಮಟ್ಟಿಗೆ ತಿರುಚುತ್ತಾರೆ.

ಅವರು ತಮ್ಮ ಬುದ್ಧಿಮತ್ತೆಯ ಬಗ್ಗೆ ಬಹಳ ಹೆಮ್ಮೆಯನ್ನು ಹೊಂದಿರುತ್ತಾರೆ.

ಅವರಿಗೆ ಕನ್ನಡಿಯನ್ನು ತೋರಿಸಬೇಡಿ, ಅವರು ಕನ್ನಡಿಯನ್ನು ಕೂಡಾ ಒಡೆದು ಹಾಕುತ್ತಾರೆ. )

ಗೌರವಾನ್ವಿತ ಸ್ಪೀಕರ್ ಅವರೇ

ಇಂದು ದೇಶವು ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಮತ್ತು ಅದು ಪುಣ್ಯ ಕಾಲಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾರೆಲ್ಲಾ ಕಾಣಿಕೆ ನೀಡಿದರು ಮತ್ತು ಯಾವ ಪಕ್ಷದವರು ಕಾಣಿಕೆ ನೀಡಿದರು ಎಂಬುದು ಇಲ್ಲಿ ಅವಶ್ಯ ಇಲ್ಲ. ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸಿಕೊಂಡು ಅವರ ಕನಸುಗಳನ್ನು ನೆನಪಿನಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಬೇಕಾದ ಕಾಲಘಟ್ಟ ಇದು

ಗೌರವಾನ್ವಿತ ಸ್ಪೀಕರ್ ಅವರೇ

ಶತಮಾನಗಳಿಂದ ನಾವು ಸಂಸ್ಕೃತಿ, ಪ್ರಕೃತಿ ಮತ್ತು ವ್ಯವಸ್ಥೆಯ ಮೂಲಕ ಪ್ರಜಾಪ್ರಭುತ್ವಕ್ಕೆ ಬದ್ಧರಾಗಿದ್ದೇವೆ. ರೋಮಾಂಚಕ ಪ್ರಜಾಪ್ರಭುತ್ವಕ್ಕೆ ಟೀಕೆ ಎಂಬುದು ಆಭರಣ ಇದ್ದಂತೆ ಎಂಬುದೂ ಸತ್ಯದ ಸಂಗತಿ. ಆದರೆ ಕುರುಡು ಟೀಕೆ ಪ್ರಜಾಪ್ರಭುತ್ವಕ್ಕೆ ಅವಮಾನ. ಇದುವರೆಗೆ ಭಾರತದ ಸಾಧನೆಗೆಸಬ್ ಕಾ ಪ್ರಯಾಸ್ಕಾರಣ ಎಂಬುದನ್ನು ಮುಕ್ತ ಮನಸ್ಸಿನಿಂದ ಅಂಗೀಕರಿಸುವುದು ಮತ್ತು ಸ್ವಾಗತಿಸುವುದು ಬಹಳ ಉತ್ತಮ

ಕಳೆದ ಎರಡು ವರ್ಷಗಳಲ್ಲಿ ಇಡೀ ಜಗತ್ತಿನ ಮನುಕುಲ ನೂರು ವರ್ಷಕ್ಕೊಮ್ಮೆ ಎದುರಾಗುವಂತಹ ಜಾಗತಿಕ ಸಾಂಕ್ರಾಮಿಕದ ಬಹಳ ದೊಡ್ಡ ಬಿಕಟ್ಟನ್ನು ಎದುರಿಸುತ್ತಿದೆ. ಭೂತಕಾಲದ ಆಧಾರದ ಮೇಲೆ ಭಾರತವನ್ನು ನಿರ್ಣಯಿಸಲು, ಮೌಲ್ಯಮಾಪನ ಮಾಡಲು  ಹೊರಟವರು  ಬಹಳ ದೊಡ್ಡ ಜನಸಂಖ್ಯೆ ಹೊಂದಿರುವ ಮತ್ತು ವೈವಿಧ್ಯತೆಯನ್ನು, ಅಭ್ಯಾಸಗಳನ್ನು  ಹೊಂದಿರುವ ಬೃಹತ್ ದೇಶ ಇಂತಹ ದೊಡ್ಡ ಹೋರಾಟ ಮಾಡಲಾರದು ಮತ್ತು ತನ್ನನ್ನು ರಕ್ಷಿಸಿಕೊಳ್ಳಲಾರದು ಎಂದು ಭಯಪಟ್ಟಿದ್ದರು. ಅದು ಅವರ ಚಿಂತನಾಕ್ರಮವಾಗಿತ್ತು. ಅದರೆ ಇಂದು ಎಂತಹ ಸ್ಥಿತಿ ಇದೆ?.ಭಾರತದಲ್ಲಿ ತಯಾರಾದ ಕೋವಿಡ್ ಲಸಿಕೆಗಳು ಜಗತ್ತಿನಲ್ಲಿಯೇ ಅತ್ಯಂತ ಪರಿಣಾಮಕಾರಿಯಾಗಿವೆ. ಇಂದು ಭಾರತವು ಮೊದಲ ಡೋಸನ್ನು ಶೇಖಡಾ ನೂರು ಜನರಿಗೆ ನೀಡಿದ ಸಾಧನೆಯನ್ನು ಮಾಡುವ ಸನಿಹದಲ್ಲಿದೆ. ಮತ್ತು ಸುಮಾರು 80 ಪ್ರತಿಶತ ಜನರು ಎರಡನೇ ಡೋಸ್ ಲಸಿಕೆಯನ್ನು ಕೂಡಾ ಪಡೆದಿದ್ದಾರೆ.

ಗೌರವಾನ್ವಿತ ಸ್ಪೀಕರ್ ಅವರೇ,  

ಕೊರೊನಾ ಜಾಗತಿಕ ಸಾಂಕ್ರಾಮಿಕ, ಆದರೆ ಇದನ್ನು ಪಕ್ಷ ರಾಜಕೀಯಕ್ಕಾಗಿ ಬಳಸಲಾಯಿತು. ಇದು ಮಾನವತೆಗೆ ಒಳಿತಿನ ಸಂಗತಿಯೇ?.

 

ಗೌರವಾನ್ವಿತ ಸ್ಪೀಕರ್ ಅವರೇ

ಕಾಂಗ್ರೆಸ್ಸು ಕೊರೊನಾ ಅವಧಿಯಲ್ಲಿ ತನ್ನ ಮಿತಿಗಳನ್ನು ದಾಟಿದೆ

 

ಗೌರವಾನ್ವಿತ ಸ್ಪೀಕರ್ ಅವರೇ,

ಮೊದಲ ಅಲೆಯಲ್ಲಿ, ದೇಶವು ಲಾಕ್ ಡೌನ್ ಅನುಸರಿಸುತ್ತಿರುವಾಗ, ಡಬ್ಲ್ಯು.ಎಚ್..ವಿಶ್ವದಾದ್ಯಂತ ಜನರಿಗೆ ಸಲಹೆಗಳನ್ನು ನೀಡುತ್ತಿರುವಾಗ   ಮತ್ತು ಕೊರೊನಾ ಬಾಧಿತರು, ಸೋಂಕಿತರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿಗೆಲ್ಲ ಕೊರೊನಾ ಕೊಂಡೊಯ್ಯುತ್ತಾರೆ ಎಂಬ ಕಾರಣಕ್ಕಾಗಿ ಎಲ್ಲಾ ಆರೋಗ್ಯ ತಜ್ಞರು ಜನರಿಗೆ ಅವರು ಎಲ್ಲಿದ್ದಾರೋ ಅಲ್ಲಿಯೇ ನಿಲ್ಲಲು ಹೇಳುತ್ತಿರುವಾಗ ಕಾಂಗ್ರೆಸ್ ಸದಸ್ಯರು ಏನು ಮಾಡಿದರು?. ಅವರು ಮುಂಬಯಿಯ ಕಾರ್ಮಿಕರಿಗೆ ಉಚಿತ ರೈಲ್ವೇ ಟಿಕೇಟುಗಳನ್ನು ನೀಡಿದರು ಮತ್ತು ಅವರಿಗೆ ಮುಂಬಯಿ ತೊರೆಯಲು ಉತ್ತೇಜನ ನೀಡಿದರು. “ನೀವು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸೇರಿದವರು. ನೀವು ಮಹಾರಾಷ್ಟ್ರ ತೊರೆಯಿರಿ, ಅದರಿಂದ ಮಹಾರಾಷ್ಟ್ರದ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂದರು. ನೀವು ಅಲ್ಲಿಗೆ ಹೋಗಿ ಕೊರೊನಾ ಹರಡಿ ಎಂದರು. ನೀವು ಬಹಳ ದೊಡ್ಡ ಪಾಪ ಮಾಡಿದ್ದೀರಿ. ಇದರಿಂದ ಸಾಮೂಹಿಕ ಗೊಂದಲದ ವಾತಾವರಣ ನಿರ್ಮಾಣವಾಯಿತು. ನೀವು ನಮ್ಮ ಕಾರ್ಮಿಕ ಸಹೋದರರನ್ನು ಮತ್ತು ಸಹೋದರಿಯರನ್ನು ಹಲವಾರು ಸಮಸ್ಯೆಗಳಿಗೆ ದೂಡಿದಿರಿ.

ಗೌರವಾನ್ವಿತ ಸ್ಪೀಕರ್ ಅವರೇ,

ದಿಲ್ಲಿಯಲ್ಲಿ ಸರಕಾರವೊಂದಿತ್ತು ಆಗ, ಅದು ಈಗಲೂ ಇದೆ. ಸರಕಾರ ಜೀಪ್ ಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ  ಅವುಗಳನ್ನು ದಿಲ್ಲಿಯ ಕೊಳೆಗೇರಿಗಳಿಗೆ ಕೊಂಡೊಯ್ದು ಹೇಳಿತು: “ ಬಹಳ ದೊಡ್ಡ ಸಂಕಷ್ಟ ಬಂದಿದೆ, ನೀವು ನಿಮ್ಮ ಮನೆಗಳಿಗೆ ಹೋಗಿ, ಹಳ್ಳಿಗಳಿಗೆ ಹೋಗಿ”.  ಅವರು ದಿಲ್ಲಿಯಿಂದ ಬಸ್ಸುಗಳನ್ನು ಒದಗಿಸಿ ಅರ್ಧ ದಾರಿಯಲ್ಲಿ ಕೈಬಿಟ್ಟರು ಮತ್ತು ಜನರಿಗೆ ನಾನಾ ಸಂಕಷ್ಟಗಳನ್ನು ತಂದಿಟ್ಟರು. ಪಾಪದ ಪರಿಣಾಮವಾಗಿ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಗಳಲ್ಲಿ ಕೊರೊನಾ ಹರಡಿತು, ಅಲ್ಲಿ ಅದುವರೆಗೆ ಕೊರೊನಾ ಸೋಂಕಿನ ದರ ಅಷ್ಟೊಂದು ಹೆಚ್ಚಿರಲಿಲ್ಲ.

ಗೌರವಾನ್ವಿತ ಸ್ಪೀಕರ್ ಅವರೇ,

ಮಾನವ ಕುಲವೇ ಸಂಕಷ್ಟಕ್ಕೆ ಸಿಲುಕಿರುವಾಗ ಇದು ಯಾವ ರೀತಿಯ ರಾಜಕೀಯ?. ರೀತಿಯ ಪಕ್ಷ ರಾಜಕೀಯ ಎಷ್ಟು ಕಾಲ ಬಾಳುತ್ತದೆ?.

ಗೌರವಾನ್ವಿತ ಸ್ಪೀಕರ್ ಅವರೇ,

ನಾನು ಮಾತ್ರವಲ್ಲಿ ಇಡೀ ದೇಶವೇ ಕಾಂಗ್ರೆಸ್ಸಿನ ನಡತೆಯಿಂದ ದಿಗ್ಭ್ರಮೆಗೊಂಡಿತು. ಎರಡು ವರ್ಷಗಳಿಂದ ದೇಶವು ಕಳೆದ ನೂರು ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೆಲವು ವ್ಯಕ್ತಿಗಳ ವರ್ತನೆ ನೋಡಿದರೆ, ದೇಶ ಅವರಿಗೆ ಸೇರಿದ್ದಲ್ಲವೇ ಎಂದು ದೇಶವೇ ಚಿಂತಿಸುವಂತೆ ಮಾಡಿದೆ. ದೇಶದ ಜನರು ನಿಮ್ಮವರಲ್ಲವೇ?. ಅವರ ಸಂತೋಷ ಮತ್ತು ದುಖಗಳು ನಿಮ್ಮವು ಅಲ್ಲವೇ?. ಇಂತಹ ದೊಡ್ಡ ಬಿಕ್ಕಟ್ಟು ಉದ್ಭವಿಸಿರುವಾಗ ಹಲವು ರಾಜಕೀಯ ಪಕ್ಷಗಳ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿತ್ತುಕೊರೊನಾ ಜಾಗತಿಕ ಸಾಂಕ್ರಾಮಿಕವಾದ ಬಿಕ್ಕಟ್ಟು ಆಗಿದ್ದರೂ ಅವರು ಎಂದಾದರೂ ಜನರಿಗೆ ಮುಖಗವಸು ಧರಿಸುವಂತೆ, ನಿಯಮಿತವಾಗಿ ಕೈಗಳನ್ನು ತೊಳೆಯುವಂತೆ ಮತ್ತು ಎರಡು ಯಾರ್ಡ್ ದೈಹಿಕ ದೂರ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದರೇ?. ಬಿ.ಜೆ.ಪಿ. ಸರಕಾರಕ್ಕೆ ಏನು ಗಳಿಕೆಯಾಗುತ್ತದೆ  ಎಂಬುದನ್ನು ಅವರು ದೇಶದ ಜನರಿಗೆ ತಿಳಿಯಪಡಿಸಿದರೇ? ಮೋದಿಗೆ ಏನು ಗಳಿಕೆಯಾಗುತ್ತದೆ ಎಂದು ತಿಳಿಸಿದರೇ?.ಆದರೆ ಅವರು ಇಂತಹ ದೊಡ್ಡ ಬಿಕ್ಕಟ್ಟಿನಲ್ಲಿಯೂ ಇಂತಹ ಪವಿತ್ರ ಸಂಗತಿಯನ್ನು ಅವರು ಕಳೆದುಕೊಂಡರು.

ಗೌರವಾನ್ವಿತ ಸ್ಪೀಕರ್ ಅವರೇ,

ಕೊರೊನಾ ವೈರಸ್ ಮೋದಿ ಅವರ ಇಮೇಜನ್ನು ನುಂಗಿ ಬಿಡುವಂತೆ ಆಗುವ ಸ್ಥಿತಿಯನ್ನು ಕೆಲವು ಜನರು ಎದುರು ನೋಡುತ್ತಿದ್ದರು. (ಅವರು) ಬಹಳ ದೀರ್ಘ ಕಾಲ ಕಾಯುತ್ತ ಕುಳಿತರು ಮತ್ತು ಕೊರೊನಾ ಕೂಡಾ ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಿತು. ಇತರರನ್ನು ಚುಚ್ಚಲು ನೀವು ಪ್ರತೀ ದಿನ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಪ್ರಸ್ತಾಪಿಸುತ್ತೀರಿ. “ಸ್ವದೇಶೀಕುರಿತಂತೆ ಮಹಾತ್ಮಾ ಗಾಂಧೀಜಿ ಅವರ ಸಂದೇಶವನ್ನು ಪುನರುಚ್ಛರಿಸಲು ನಮ್ಮನ್ನು ಯಾರು ತಡೆದು ನಿಲ್ಲಿಸುತ್ತಾರೆ?. ಮೋದಿವೋಕಲ್ ಫಾರ್ ಲೋಕಲ್ಎಂದಾಗ ಅವುಗಳನ್ನು ಕೈಬಿಡುತ್ತೀರಿ. ದೇಶ ಸ್ವಾವಲಂಬಿಯಾಗುವುದು ನಿಮಗೆ ಬೇಕಿಲ್ಲವೇ?.ನೀವು ಮಹಾತ್ಮಾ ಗಾಂಧಿ ಅವರ ಆದರ್ಶಗಳನ್ನು ಮಾತನಾಡುವುದಾದರೆ, ಆಗ ಭಾರತದಲ್ಲಿ ಆಂದೋಲನಕ್ಕೆ ಸೇರ್ಪಡೆಗೊಂಡು ಬಲ ನೀಡುವುದರಿಂದ ನೀವು ಏನನ್ನು ಕಳೆದುಕೊಳ್ಳುತ್ತೀರಿ?. ನೀವು ನಾಯಕತ್ವ ವಹಿಸಿ. ಮಹಾತ್ಮಾ ಗಾಂಧೀಜಿ ಅವರ ಸ್ವದೇಶಿ ಸಂದೇಶವನ್ನು ಪ್ರಸಾರಿಸಿ, ದೇಶಕ್ಕೆ ಲಾಭವಾಗುತ್ತದೆ. ಬಹುಷಃ ನಿಮಗೆ ಮಹಾತ್ಮಾ ಗಾಂಧಿ ಅವರ ಕನಸುಗಳು ನನಸಾಗುವುದು ಬೇಕಾಗಿಲ್ಲ.

ಗೌರವಾನ್ವಿತ ಸ್ಪೀಕರ್ ಅವರೇ,

ಇಂತಹ ಸ್ಥಿತಿಯಲ್ಲಿ  ಕೊರೊನಾ ಕಾಲದಲ್ಲಿ ಯೋಗವು ತನ್ನನ್ನು ತಾನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿಕೊಂಡಿತು. ವಿಶ್ವದಲ್ಲಿರುವ ಯಾವ ಭಾರತೀಯ ತಾನೇ ಯೋಗದ ಬಗ್ಗೆ ಹೆಮ್ಮೆ ಪಡುವುದಿಲ್ಲ?. ಆದರೆ ನೀವು ಅದನ್ನು ತಮಾಷೆ ಮಾಡಿದಿರಿ ಮತ್ತು ಅದನ್ನು ವಿರೋಧಿಸಿದಿರಿ ಕೂಡಾ. ಬಿಕ್ಕಟ್ಟಿನಿಂದ ಕಂಗೆಟ್ಟು ಮನೆಯಲ್ಲಿರುವಾಗ ಯೋಗವನ್ನು ಮಾಡಿ ಎಂದು ಜನರಿಗೆ ನೀವು ಹೇಳುತ್ತಿದ್ದರೆ, ಅದರಿಂದ ಜನರಿಗೆ ಪ್ರಯೋಜನವಾಗುತ್ತಿತ್ತು. ಅದರಲ್ಲಿ ಹಾನಿ ಏನಿತ್ತು?. ನಿಮಗೆ ಮೋದಿಯ ಜೊತೆ ಸಮಸ್ಯೆ ಇರಬಹುದು, ಆದರೆಫಿಟ್ ಇಂಡಿಯಾ ಆಂದೋಲನಮುಂದುವರಿಯಲಿ, ದೇಶದ ಯುವ ಜನತೆ ಬಲಿಷ್ಟರಾಗಲಿ ಮತ್ತು ಸಮರ್ಥರಾಗಲಿ, ಅದನ್ನು ಬೆಂಬಲಿಸಿ. ರಾಜಕೀಯ ಪಕ್ಷಗಳು ಸಣ್ಣ ಯುವ ವೇದಿಕೆಗಳನ್ನು ಹೊಂದಿರುತ್ತವೆ. ಮತ್ತು ಅವುಗಳು ವೇದಿಕೆಗಳನ್ನು ದೇಶದ ಯುವಕರಿಗೆಫಿಟ್ ಇಂಡಿಯಾ ಆಂದೋಲನ ಜೊತೆ ಸಾಮರ್ಥ್ಯ ಗಳಿಸಿಕೊಳ್ಳಲು ಮುಂದಡಿ ಇಡುವಂತೆ ಪ್ರೇರೇಪಿಸಲು ಬಳಸಿಕೊಳ್ಳಬಹುದಿತ್ತು. ಆದರೆ ಅಲ್ಲಿ ಅದಕ್ಕೆ ವಿರೋಧ ಬಂದಿತ್ತು. ಮಾತ್ರವಲ್ಲ ಇದನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ನಿಮಗೆಲ್ಲಾ ಏನಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನೀವು ಎಲ್ಲಿದ್ದೀರಿ? ಎಂಬುದನ್ನು ತಿಳಿದುಕೊಳ್ಳಿ ಎಂಬುದಕ್ಕಾಗಿ ನಾನಿದನ್ನು ಹೇಳುತ್ತಿದ್ದೇನೆ. ನಾನು ಹಿಂದಿನದನ್ನು ಮಾತನಾಡಿದ್ದೇನೆ. ಮತ್ತು ಕಳೆದ 15 ರಿಂದ 60 ವರ್ಷಗಳಲ್ಲಿ ಎಷ್ಟು ರಾಜ್ಯಗಳು ನಿಮಗೆ ಅವಕಾಶ ನೀಡಿಲ್ಲ ಎಂಬುದನ್ನೂ ಹೇಳಿದ್ದೇನೆ.  

ಗೌರವಾನ್ವಿತ ಸ್ಪೀಕರ್ ಅವರೇ,

ನಾನಿದನ್ನು ಬಹಳ ಪ್ರೀತಿ ಪೂರ್ವಕವಾಗಿ ಹೇಳುತ್ತಿದ್ದೇನೆ. ಆದುದರಿಂದ ಸಿಟ್ಟಿಗೇಳಬೇಡಿ. ಕೆಲವೊಮ್ಮೆ ನನಗನಿಸುತ್ತದೆ ಗೌರವಾನ್ವಿತ ಸ್ಪೀಕರ್ ಅವರೇ, ಅವರು ತಮ್ಮ ಹೇಳಿಕೆಗಳ, ಕಾರ್ಯಕ್ರಮಗಳು ಮತ್ತು ಕೃತ್ಯಗಳ ಮೂಲಕ ಮತ್ತು ಅವರು ಮಾತನಾಡುತ್ತಿರುವ ರೀತಿಯ ಮೂಲಕ ಹಾಗು ವಿಷಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಮುಂದಿನ ನೂರು ವರ್ಷ ಅಧಿಕಾರಕ್ಕೆ ಮರಳಬಾರದು ಎಂಬ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದಾರೇನೋ ಎಂಬುದಾಗಿ. ದಯವಿಟ್ಟು ಇದನ್ನು ಮಾಡಬೇಡಿ. ದೇಶವು ನಿಮಗೆ ಇನ್ನೊಮ್ಮೆ ಹಾರ ಹಾಕುತ್ತದೆ ಎಂಬ ಬಗ್ಗೆ ನಿಮಗೆ ಕಿಂಚಿತ್ತಾದರೂ ಭರವಸೆ ಇದ್ದರೆ, ನೀವು ಇದನ್ನು ಮಾಡುತ್ತಿರಲಿಲ್ಲ. ಒಳ್ಳೆಯದು, ನೀವು ಈಗಾಗಲೇ ಮುಂದಿನ ನೂರು ವರ್ಷಕ್ಕೆ ನಿಮ್ಮ ಮನಸ್ಸನ್ನು ತಯಾರು ಮಾಡಿಕೊಂಡಿರುವುದರಿಂದ ನಾನು ಕೂಡಾ ಅದಕ್ಕೆ ತಯಾರಾಗಿದ್ದೇನೆ.

ಗೌರವಾನ್ವಿತ ಸ್ಪೀಕರ್ ಅವರೇ,

ಕೊರೊನಾ ಜಾಗತಿಕ ಸಾಂಕ್ರಾಮಿಕ ತಲೆದೋರಿದ ಬಳಿಕ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಮೊದಲ ದಿನದಿಂದ ಯಾವೆಲ್ಲ ವ್ಯೂಹಗಳನ್ನು ರೂಪಿಸಲಾಗಿತ್ತೋ, ಅದರ ಬಗ್ಗೆ  ಏನೆಲ್ಲ ಹೇಳಲಾಗಿದೆಯೋ ಅದಕ್ಕೆಲ್ಲ ಸದನ ಸಾಕ್ಷಿಯಾಗಿದೆ. ಸಮಯದಲ್ಲಿ ಏನೆಲ್ಲಾ ಹೇಳಿರುವರೋ ಈಗ ಅವರ ಹೇಳಿಕೆಗಳಿಗೆ ಅವರೇ ಆಶ್ಚರ್ಯಚಕಿತರಾಗುವಂತಹ ಸ್ಥಿತಿ ಬಂದಿದೆ. ಜಗತ್ತಿನ ವಿವಿಧ ಭಾಗಗಳ ದೊಡ್ಡ ಜನರನ್ನು ಕರೆದು ದೊಡ್ಡ ಸಮ್ಮೇಳನಗಳನ್ನು ನಡೆಸಲಾಯಿತು ಮತ್ತು ಜಗತ್ತಿನಲ್ಲಿ ಭಾರತವನ್ನು ಅವಮಾನ ಮಾಡುವಂತಹ ಹೇಳಿಕೆಗಳನ್ನು ಕೊಡಿಸಲಾಯಿತು. ದೇವರೇ, ಸಮಯದಲ್ಲಿ ಏನೆಲ್ಲಾ ಹೇಳಲಾಯಿತು, ಬರೇ ಅವರು ಚಲಾವಣೆಯಲ್ಲಿ ಉಳಿಯುವುದಕ್ಕಾಗಿ!. ತಜ್ಞರು ಹೇಗೆ ನಿಮ್ಮ ಇಡೀ ಪರಿಸರ ವ್ಯವಸ್ಥೆ ಒಳಗೊಂಡಿತ್ತು ಎಂಬುದನ್ನು ನೋಡಿದ್ದಾರೆ. ಆದರೆ ನಮಗಿರುವ ತಿಳುವಳಿಕೆಯ ಪ್ರಕಾರ, ದೇವರು ನಮಗೆ ಕೊಟ್ಟಿರುವ ತಿಳುವಳಿಕೆಯ ಪ್ರಕಾರ ಮತ್ತು ಅರ್ಪಣಾ ಭಾವ ತಿಳುವಳಿಕೆಗಿಂತ ಹೆಚ್ಚು ಶಕ್ತಿಶಾಲಿಯಾಗಿರುವುದರಿಂದ ಅಲ್ಲಿ ದೇಶಕ್ಕೆ ಮತ್ತು ಜಗತ್ತಿಗೆ  ಕೊಡುವಂತಹ ಶಕ್ತಿ ಇತ್ತು. ಮತ್ತು ನಾವದನ್ನು ಮಾಡಿದ್ದೇವೆ. ಆರ್ಥಿಕ ಜಗತ್ತಿನ ಎಲ್ಲಾ ತಜ್ಞರೂ ಭಾರತವು ಕೊರೊನಾ ಅವಧಿಯಲ್ಲಿ ಅನುಸರಿಸಿದ  ಆರ್ಥಿಕ ನೀತಿಗಳು ಬಹಳ ಅತ್ಯಪೂರ್ವವಾದವು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಮತ್ತು ನಾವೂ ಇದನ್ನು ನೋಡಿ ಅನುಭವಿಸಿದ್ದೇವೆ.

ಗೌರವಾನ್ವಿತ ಸ್ಪೀಕರ್ ಅವರೇ,

ಇಂದು ಜಗತ್ತಿನ ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ಕೊರೊನಾದ ಕಾಲಘಟ್ಟದಲ್ಲಿಯೂ ಕೂಡಾ, ನಮ್ಮ ರೈತರು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಮಾಡಿದ್ದಾರೆ. ಮತ್ತು ಸರಕಾರ ಕೂಡಾ ದಾಖಲೆ ಪ್ರಮಾಣದಲ್ಲಿ ಖರೀದಿ ಮಾಡಿದೆ. ನೂರು ವರ್ಷಗಳ ಹಿಂದೆ ಸಂಭವಿಸಿದ ಜಾಗತಿಕ ಸಾಂಕ್ರಾಮಿಕದ ವರದಿ ರೋಗದಿಂದ ಸತ್ತವರ ಸಂಖ್ಯೆ ಮತ್ತು ಹಸಿವಿನಿಂದ ಸತ್ತವರ ಸಂಖ್ಯೆ ಸಮಾನವಾಗಿತ್ತು ಎಂದು ಹೇಳಿರುವುದು ನಿಮಗೆ ಗೊತ್ತಾಗಿರಬಹುದು. ದೇಶ ಯಾರೊಬ್ಬರೂ ಹಸಿವೆಯಿಂದ ಸಾಯಲು ಬಿಡಲಿಲ್ಲ. ಅದು 80 ಕೋಟಿಗೂ ಅಧಿಕ ದೇಶವಾಸಿಗಳಿಗೆ ಉಚಿತ ಆಹಾರ ಧಾನ್ಯ ಒದಗಿಸಿತು ಮತ್ತು ಅದನ್ನು ಈಗಲೂ ಮಾಡುತ್ತಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ನಮ್ಮ ರಫ್ತು ಚಾರಿತ್ರಿಕವಾಗಿ ಅತ್ಯಂತ ಗರಿಷ್ಟ ಪ್ರಮಾಣದಲ್ಲಿದೆ. ಮತ್ತು ಇದೂ ಕೊರೊನಾ ಅವಧಿಯಲ್ಲಿ. ಕೃಷಿ ರಫ್ತು ದಾಖಲೆ ಪ್ರಮಾಣದಲ್ಲಿದೆ. ಸಾಫ್ಟ್ ವೇರ್ ರಫ್ತು ಕೂಡಾ ಹೊಸ ಎತ್ತರವನ್ನು ತಲುಪುವ ಹಂತದಲ್ಲಿದೆ. ಮೊಬೈಲ್ ಫೋನುಗಳ ರಫ್ತು ಕೂಡಾ ಹೆಚ್ಚಾಗಿದೆ. ಇದು ಅನೇಕರಿಗೆ ಅಸಹನೆ, ಟೆನ್ಷನ್ ತಂದಿರಬಹುದು, ಆದರೆ ಇದು ಆತ್ಮ ನಿರ್ಭರ ಭಾರತದ ಅದ್ಭುತ, ರಕ್ಷಣಾ ರಫ್ತು ಕೂಡಾ ಹೆಚ್ಚಳವಾಗುತ್ತಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ಸದನದಲ್ಲಿ ಅಡೆ ತಡೆಗಳು, ಅಡ್ಡಿಗಳು  ಚರ್ಚೆ ಬಿಸಿಯೇರುತ್ತಿದ್ದರೆ ಅವಶ್ಯ. ಆದರೆ ನಾವು ಮಿತಿ ದಾಟಿ ಹೋದಾಗ, ನಮ್ಮ ಸಂಗಾತಿಗಳು ಹಾಗೆ ಮಾಡುತ್ತಿರುವಂತೆ ಕಾಣುತ್ತಿದೆ

ಗೌರವಾನ್ವಿತ ಸ್ಪೀಕರ್ ಅವರೇ,

ಅವರ ಪಕ್ಷದ ಓರ್ವ ಸಂಸತ್ ಸದಸ್ಯರು ಚರ್ಚೆಯನ್ನು ಆರಂಭ ಮಾಡಿದರು ಮತ್ತು ಅಲ್ಲಿ ಆಡಳಿತ ಪಕ್ಷದಿಂದ ಕೆಲವು ಸಣ್ಣ ಪುಟ್ಟ ಮಧ್ಯಪ್ರವೇಶಗಳುಂಟಾದವು. ಮತ್ತು ನಾನು ನನ್ನ ಕೊಠಡಿಯಿಂದ ಪರದೆಯಲ್ಲಿ ನೋಡುತ್ತಿದ್ದೆ, ನಮ್ಮ ಸಚಿವರಾದ ಪ್ರಹ್ಲಾದ ಜೋಶಿ ಅವರು ಹಿಂಭಾಗಕ್ಕೆ ಹೋಗಿ ಪ್ರತಿಯೊಬ್ಬರನ್ನೂ ತಡೆಯುತ್ತಿದ್ದರು. ಆಗ ಕಡೆಯಿಂದ ಸವಾಲು ಬಂತು ಏನೆಂದರೆನೀವು ನಮ್ಮನ್ನು ತಡೆದರೆ, ನಾವದನ್ನು ನಿಮ್ಮ ನಾಯಕರಿಗೂ ಮಾಡುತ್ತೇವೆ”. ಹೀಗಾಗುತ್ತಿರುವುದಕ್ಕೆ ಇದೊಂದು ಕಾರಣವೇ?.

ಗೌರವಾನ್ವಿತ ಸ್ಪೀಕರ್ ಅವರೇ,

ನೀವು ಮತ್ತು ನೀವೆಲ್ಲರೂ ನಿಮ್ಮ ಸಿ.ಆರ್. ನ್ನು ಸುಧಾರಿಸಲು ಪ್ರಯತ್ನಿಸಬೇಕು. ನಿಮ್ಮ ಸಿ.ಆರ್. ಸುಧಾರಿಸಿದೆ ಎಂದು ನಾನು ನಂಬುತ್ತೇನೆ. ತಾವು ಮಾಡಿರುವುದನ್ನು ದಾಖಲಿಸಲು (ಪ್ರತಿಭಟನೆ) ಇಚ್ಛಿಸುವವರು, ನೀವದನ್ನು ಸಾಧಿಸಿದ್ದೀರಿ, ನೀವು ಇಷ್ಟೆಲ್ಲ ಯಾಕೆ ಮಾಡುತ್ತೀರಿ?. ನನ್ನನ್ನು ನಂಬಿ, ನಿಮ್ಮನ್ನು ಯಾರೂ ಸದನದಿಂದ ಹೊರಗೆ ಹಾಕುವುದಿಲ್ಲ. ನಾನು ನಿಮಗೆ ಗ್ಯಾರಂಟಿ ಕೊಡುತ್ತೇನೆ.

ಗೌರವಾನ್ವಿತ ಸ್ಪೀಕರ್ ಅವರೇ,

ಭಾರತದಲ್ಲಿ ಇಂದು ದಾಖಲೆ ಪ್ರಮಾಣದ ಎಫ್.ಡಿ.. ಮತ್ತು ಎಫ್.ಪಿ.. ಹೂಡಿಕೆ ಸಾಧ್ಯವಾಗುತ್ತಿದೆ.ಮರುನವೀಕೃತ ಇಂಧನ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮುಂಚೂಣಿ ಅಗ್ರಗಣ್ಯ ಐದು ರಾಷ್ಟ್ರಗಳಲ್ಲಿ ಒಂದಾಗಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ಇವೆಲ್ಲ ಸಾಧ್ಯವಾಗಿರುವುದು ಸುಧಾರಣೆಗಳ ಮೂಲಕ. ಕೊರೊನಾ ಕಾಲದಲ್ಲಿ ದೇಶವನ್ನು ರಕ್ಷಿಸಲು ಅವು ಅವಶ್ಯವಾಗಿದ್ದವು. ಮತ್ತು ಸುಧಾರಣೆಗಳ ಪರಿಣಾಮವಾಗಿ ಇಂದು ನಾವು ಸ್ಥಿತಿಯಲ್ಲಿದ್ದೇವೆ.

ಗೌರವಾನ್ವಿತ ಸ್ಪೀಕರ್ ಅವರೇ,

ನಾವು ಎಂ.ಎಸ್.ಎಂ.. ಸಹಿತ ಪ್ರತೀ ಉದ್ಯಮಕ್ಕೂ ಅವಶ್ಯ ಬೆಂಬಲವನ್ನು ಒದಗಿಸಿದೆವು, ಕಾನೂನು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಿದೆವು. ನಾವು ಆತ್ಮ ನಿರ್ಭರ ಭಾರತ ಆಂದೋಲನವನ್ನು ಈಡೇರಿಸಲು ಸಾಧ್ಯ ಇರುವ ಎಲ್ಲ ಉತ್ತಮ ಪ್ರಯತ್ನಗಳನ್ನು ನಡೆಸಿದೆವು. ಇಂದು ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹತ್, ವ್ಯಾಪಕವಾದ ಆರ್ಥಿಕ ವಿಪ್ಲವಗಳು ನಡೆಯುತ್ತಿರುವಾಗ ಭಾರತ ಎಲ್ಲಾ ಸಾಧನೆಗಳನ್ನು ಮಾಡಿತು.ಪೂರೈಕೆ ಸರಪಳಿ ಸಂಪೂರ್ಣ ಕುಸಿದಿತ್ತು. ಲಾಗಿಸ್ಟಿಕ್ ಬೆಂಬಲದಲ್ಲಿ ಗಂಭೀರ ಬಿಕ್ಕಟ್ಟು ಇತ್ತು. ಭಾರತವು ಆಮದನ್ನು ನೆಚ್ಚಿಕೊಂಡದ್ದರಿಂದ ಪೂರೈಕೆ ಜಾಲ ಅಸ್ತವ್ಯಸ್ತಗೊಂಡ ಪರಿಣಾಮ ರಾಸಾಯನಿಕ ಗೊಬ್ಬರಗಳ  ಒದಗಣೆಯಲ್ಲಿ ಸಂಕಷ್ಟ ಇತ್ತು. ಭಾರತವು ಬಹಳ ದೊಡ್ಡ ಆರ್ಥಿಕ ಹೊರೆಯನ್ನು ಎದುರಿಸುತ್ತಿತ್ತು. ಇಂತಹ ಪರಿಸ್ಥಿತಿಗಳಿದ್ದರೂ ಕೂಡಾ ಭಾರತವು ಭಾರವನ್ನು ರೈತರ ಮೇಲೆ ಹಾಕಲಿಲ್ಲ. ಭಾರತವು ಇಡೀ ಹೊರೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿತು. ಮತ್ತು ಅದನ್ನು ರೈತರ ಮೇಲೆ ವರ್ಗಾಯಿಸಲಿಲ್ಲ. ಭಾರತವು ನಿರಂತರವಾಗಿ ರೈತರಿಗೆ ರಸಗೊಬ್ಬರಗಳನ್ನು ಪೂರೈಕೆಯನ್ನು ಮಾಡಿತು. ಸಣ್ಣ ರೈತರನ್ನು ಮತ್ತು ಕೃಷಿಯನ್ನು ಬಿಕ್ಕಟ್ಟಿನಿಂದ ಹೊರತರಲು ಭಾರತವು ಹಲವಾರು ನಿರ್ಧಾರಗಳನ್ನು ಮಾಡಿತು. ಕೆಲವೊಮ್ಮೆ ನನಗನಿಸುತ್ತದೆ, ಬೇರುಗಳಿಂದ ಕತ್ತರಿಸಿಕೊಂಡ ಮನುಷ್ಯರು, ಮೂರು-ನಾಲ್ಕು ತಲೆಮಾರುಗಳಿಂದ ಅರಮನೆಗಳಲ್ಲಿ ಬದುಕು ರೂಢಿಸಿಕೊಂಡವರು ದೇಶದ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು. ಅವರು ತಮಗೆ ಗೊತ್ತಿರುವ ಕೆಲವು ರೈತರಿಗಿಂತ ಮುಂದೆ ನೋಡುವುದಕ್ಕೆ ಶಕ್ತರಾಗಿಲ್ಲ. ಅಂತಹ ಜನರಿಗೆ ನಾನು ಕೇಳಲು ಇಚ್ಛಿಸುತ್ತೇನೆ ನಿಮಗೆ ಸಣ್ಣ ರೈಅತರ ಬಗ್ಗೆ ಯಾಕೆ ಇಷ್ಟು ವೈರತ್ವ?. ನೀವು ಸಣ್ಣ ರೈತರ ಅಭ್ಯುದಯಕ್ಕೆ ಯಾಕೆ ಅಡೆ ತಡೆಗಳನ್ನು ಸೃಷ್ಟಿ ಮಾಡುತ್ತೀರಿ. ಮತ್ತು ರೈತರನ್ನೇಕೆ ಸಂಕಷ್ಟಕ್ಕೆ ದೂಡುತ್ತೀರಿ?.

ಗೌರವಾನ್ವಿತ ಸ್ಪೀಕರ್ ಅವರೇ,

ನಮಗೆ ಬಡತನದಿಂದ ವಿಮೋಚನೆ ಬೇಕಿದ್ದರೆ ನಾವು ನಮ್ಮ ಸಣ್ಣ ರೈತರನ್ನು ಬಲಿಷ್ಟರನ್ನಾಗಿಸಬೇಕಾಗಿದೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬೇಕಿದ್ದರೆ ನಾವು ನಮ್ಮ ಸಣ್ಣ ರೈತರನ್ನು ಬಲಪಡಿಸಬೇಕು. ನಮ್ಮ ಸಣ್ಣ ರೈತರು ಸಮರ್ಥರಾದರೆ ಅವರು ತಮ್ಮ ಎರಡು ಹೆಕ್ಟೇರ್ ಸಣ್ಣ ಹಿಡುವಳಿಯನ್ನು ಕೂಡಾ ಆಧುನೀಕರಿಸಲು ಪ್ರಯತ್ನ ಮಾಡುತ್ತಾರೆ ಮತ್ತು ಹೊಸ ಸಂಗತಿಗಳನ್ನು ಕಲಿತುಕೊಳ್ಳುತ್ತಾರೆ. ಅವರು ಸಶಕ್ತೀಕರಣಗೊಂಡಾಗ ದೇಶದ ಆರ್ಥಿಕತೆ ಕೂಡಾ ಬಲಗೊಳ್ಳುತ್ತದೆ. ಆದುದರಿಂದ ಸಣ್ಣ ರೈತರತ್ತ ಗಮನ ಕೊಡುವುದು ನನ್ನ ಉದ್ದೇಶವಾಗಿದೆ. ಸಣ್ಣ ರೈತರ ವಿಷಯದಲ್ಲಿ ಸಹಾನುಭೂತಿ ಇಲ್ಲದ ಜನರು, ಸಣ್ಣ ರೈತರ ಸಂಕಷ್ಟಗಳ ಬಗ್ಗೆ ಅರಿವಿಲ್ಲದ ಜನರಿಗೆ ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಯಾವುದೇ ಹಕ್ಕಿಲ್ಲ.

ಗೌರವಾನ್ವಿತ ಸ್ಪೀಕರ್ ಅವರೇ,

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಹ ಕೆಲವು ಜನರು ನೂರಾರು ವರ್ಷಗಳ ಗುಲಾಮಗಿರಿಯ ಮನಸ್ಥಿತಿಯನ್ನು ಬದಲಾಯಿಸಲು ಸಮರ್ಥರಾಗಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಗುಲಾಮಗಿರಿಯ ಮನಸ್ಥಿತಿ ಯಾವುದೇ ದೇಶದ ಪ್ರಗತಿಗೆ ಬಹಳ ದೊಡ್ಡ ಅಡ್ಡಿ.

ಗೌರವಾನ್ವಿತ ಸ್ಪೀಕರ್ ಅವರೇ,

ನಾನು ದೇಶದ ಚಿತ್ರವನ್ನು ನೋಡುವಾಗ ಇಂದಿಗೂ ಕೂಡಾ ಗುಲಾಮಗಿರಿಯ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವೊಂದನ್ನು ಮತ್ತು ವರ್ಗವೊಂದನ್ನು ಕಾಣುತ್ತಿದ್ದೇನೆ. ಇಂದು ಕೂಡಾ ಅದು 19 ನೇ ಶತಮಾನದ ಧೋರಣೆಗೆ ಅಂಟಿಕೊಂಡಿದೆ ಮತ್ತು 20 ನೇ ಶತಮಾನದ ಕಾನೂನುಗಳ ಪರವಾಗಿದೆ

ಗೌರವಾನ್ವಿತ ಸ್ಪೀಕರ್ ಅವರೇ,

ಗುಲಾಮಗಿರಿಯ ಮನಸ್ಥಿತಿ, 19 ನೇ ಶತಮಾನದ ಜೀವನ ಮಟ್ಟ, 20 ನೇ ಶತಮಾನದ ಕಾನೂನುಗಳು 21 ನೇ ಶತಮಾನದ ಆಶೋತ್ತರಗಳನ್ನು ಈಡೇರಿಸಲಾರವು. 21 ನೇ ಶತಮಾನಕ್ಕೆ ಹೊಂದಿಕೊಳ್ಳಲು ಬದಲಾವಣೆ ಬಹಳ ಮುಖ್ಯ.

ಗೌರವಾನ್ವಿತ ಸ್ಪೀಕರ್ ಅವರೇ,

ನಾವು ಬದಲಾವಣೆಗಳನ್ನು ತಿರಸ್ಕರಿಸಿದ್ದರ ಪರಿಣಾಮ ಏನು?.ಸರಕು ಸಾಗಾಣಿಕೆ ಕಾರಿಡಾರ್‍ ಗಳಿಗೆ ಯೋಜನೆಗಳನ್ನು ಹಲವಾರು ವರ್ಷಗಳ ಬಳಿಕ ಮಾಡಲಾಯಿತು. ಇದನ್ನು 2006 ರಲ್ಲಿ ಯೋಜಿಸಲಾಯಿತು ಮತ್ತು ಮತ್ತು 2006 ರಿಂದ 2014ರವರೆಗೆ ಅದರ ಪ್ರಗತಿಯತ್ತ ನೋಡಿ. ಇದಕ್ಕೆ 2014 ಬಳಿಕವಷ್ಟೇ ವೇಗ ದೊರೆಯಿತು.ಉತ್ತರ ಪ್ರದೇಶದಲ್ಲಿ ಸರಯೂ ಕಾಲುವೆ ಯೋಜನೆ 70 ದಶಕದಲ್ಲಿ ಆರಂಭವಾಯಿತು ಮತ್ತು ಅದರ ವೆಚ್ಚ 100 ಪಟ್ಟು ಅಧಿಕವಾಯಿತು. ನಮ್ಮ ಸರಕಾರ ಬಂದ ಬಳಿಕ ನಾವದನ್ನು ಪೂರ್ಣಗೊಳಿಸಿದೆವು. ಇದು ಯಾವ ರೀತಿಯ ಧೋರಣೆ?. ಉತ್ತರ ಪ್ರದೇಶದಲ್ಲಿ ಅರ್ಜುನ ಧಾಮ ಯೋಜನೆ 2009ರಲ್ಲಿ ಆರಂಭವಾಯಿತು.2017 ರವರೆಗೆ ಮೂರನೇ ಒಂದರಷ್ಟು ಹಣ ಖರ್ಚು ಮಾಡಲಾಯಿತು. ನಾವದನ್ನು ಬಹಳ ಸಣ್ಣ ಅವಧಿಯಲ್ಲಿ ಪೂರ್ಣ ಮಾಡಿದೆವು. ಕಾಂಗ್ರೆಸ್ ಬಹಳ ವರ್ಷಗಳ ಕಾಲ ಅಧಿಕಾರದಲ್ಲಿದ್ದುದರಿಂದ ಅದು ಚಾರ್ ಧಾಮಕ್ಕೆ ಸರ್ವಋತು ರಸ್ತೆಗಳನ್ನು ಒದಗಿಸಬಹುದಿತ್ತು. ಆದರೆ ಮಾಡಲಿಲ್ಲ. ಇಡೀ ಜಗತ್ತು ಜಲಮಾರ್ಗಗಳ ಮಹತ್ವವನ್ನು ಮನಗಂಡಿದೆ. ನಮ್ಮ ದೇಶ ಜಲಮಾರ್ಗಗಳನ್ನು ತಿರಸ್ಕರಿಸಿತ್ತು. ಇಂದು ನಮ್ಮ ಸರಕಾರ ಜಲಮಾರ್ಗಗಳ ಮೇಲೆ ಕೆಲಸ ಮಾಡುತ್ತಿದೆ. ಹಳೆಯ ಧೋರಣೆಯಿಂದಾಗಿ ಗೋರಖ್ಪುರದ ಕಾರ್ಖಾನೆಗಳು ಮುಚ್ಚಲ್ಪಟ್ಟವು.ಆದರೆ ನಮ್ಮ ಧೋರಣೆಯಿಂದಾಗಿ ಗೋರಖ್ಪುರ ರಸಗೊಬ್ಬರ ಕಾರ್ಖಾನೆ ಮತ್ತೆ ಕಾರ್ಯಾರಂಭ ಮಾಡುವಂತೆ ಆಯಿತು.

ಗೌರವಾನ್ವಿತ ಸ್ಪೀಕರ್ ಅವರೇ,

ಜನರು ನೆಲದಿಂದ ವಿಮುಖರಾಗಿದ್ದಾರೆ, ಮತ್ತು ಅದರ ಪರಿಣಾಮವಾಗಿ ಕಡತಗಳ ಚಲನೆ ಮತ್ತು ಅವುಗಳ ಮೇಲೆ ಸಹಿಗಳು ಮತ್ತು ಮುಂದೆ ಬರುವ ಸಂದರ್ಶಕರು ಬಹಳ ಮುಖ್ಯ. ಕಡತ ಎಂದರೆ ನಿಮಗೆ ಎಲ್ಲವೂ ಆಗಿರಬಹುದು, ಆದರೆ ನಮಗೆ 130 ಕೋಟಿ ದೇಶವಾಸಿಗಳ ಜೀವನ ಮುಖ್ಯ. ನೀವು ಕಡತಗಳಲ್ಲಿಯೇ ಕಳೆದು ಹೋಗಿದ್ದೀರಿ ಮತ್ತು ನಾವು ಜನರ ಬದುಕಿನಲ್ಲಿ ಪರಿವರ್ತನೆ ತರಲು ಕಠಿಣ ಪರಿಶ್ರಮ ಹಾಕುತ್ತಿದ್ದೇವೆ. ಇದರ ಪರಿಣಾಮವಾಗಿ ಪ್ರಧಾನ ಮಂತ್ರಿ ಅವರ ಗತಿ ಶಕ್ತಿ ಮಹಾ ಯೋಜನೆ ಸಮಗ್ರ ಧೋರಣೆಯಲ್ಲಿ ಮುಂದುವರೆಯುತ್ತಿದೆಯೇ ಹೊರತು ತುಂಡು ತುಂಡಾಗಿ ಅಲ್ಲ. ಹಿಂದೆ ರಸ್ತೆ ನಿರ್ಮಾಣ ಆಗುತ್ತಿರುವಾಗ ವಿದ್ಯುತ್ ಇಲಾಖೆಯವರು ಬಂದು ರಸ್ತೆ ಅಗೆಯುತ್ತಿದ್ದರು. ಅದು ಪೂರ್ಣಗೊಂಡಾಗ ಜಲ ಇಲಾಖೆಯವರು ಬಂದು ಮತ್ತೆ ಅಗೆಯುತ್ತಿದ್ದರು. ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಲು ನಾವು ಗತಿಶಕ್ತಿ ಮಹಾ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ತರುವುದಕ್ಕೂ ಕಾರ್ಯನಿರತರಾಗಿದ್ದೇವೆ. ಅದೇ ರೀತಿ ನಾವು ಬಹುಮಾದರಿ ಸಾರಿಗೆ ವ್ಯವಸ್ಥೆ ಮತ್ತು ಸಂಪರ್ಕಕ್ಕೆ ಆದ್ಯತೆಯನ್ನು ನೀಡಿದ್ದೇವೆ. ಸ್ವಾತಂತ್ರ್ಯದ ಬಳಿಕ ಗ್ರಾಮೀಣ ರಸ್ತೆಗಳು ಅತ್ಯಂತ ತ್ವರಿತಗತಿಯಿಂದ ನಿರ್ಮಾಣ ಆಗಿದ್ದರೆ, ಅದು ಐದು ವರ್ಷಗಳ ಅವಧಿಯಲ್ಲಿ.

ಗೌರವಾನ್ವಿತ ಸ್ಪೀಕರ್ ಅವರೇ,

ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ರೈಲು ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡಲಾಗುತಿದೆ. ಇಂದು ದೇಶವು ಹೊಸ ವಿಮಾನ ನಿಲ್ದಾಣಗಳ, ಹೆಲಿಪೋರ್ಟ್ ಗಳ ಮತ್ತು ಜಲ ಡ್ರೋನ್ ಗಳ ಜಾಲವನ್ನು ನಿರ್ಮಾಣ ಮಾಡುತ್ತಿದೆ. ದೇಶದ 6 ಲಕ್ಷ ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಜಾಲ ಕಾರ್ಯ ಪ್ರಗತಿಯಲ್ಲಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ಎಲ್ಲಾ ಯೋಜನೆಗಳೂ ಉದ್ಯೋಗಾವಕಾಶ ಸೃಷ್ಟಿಸುವಂತಹವು ಆದುನಿಕ ಮೂಲಸೌಕರ್ಯ ಇಂದು ದೇಶದ ಆವಶ್ಯಕತೆಯಾಗಿದೆ ಮತ್ತು ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ ಹಾಗು ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಅಭಿವೃದ್ಧಿಯ ವೇಗ ಕೂಡಾ ಹೆಚ್ಚುತ್ತಿದೆ ಮತ್ತು ದೇಶವು ಇಂದು ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ

ಗೌರವಾನ್ವಿತ ಸ್ಪೀಕರ್ ಅವರೇ,

ಆರ್ಥಿಕತೆ ಹೆಚ್ಚು ಹೆಚ್ಚು ಬೆಳವಣಿಗೆ ಸಾಧಿಸಿದಂತೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಮತ್ತು ಮನಸ್ಸಿನಲ್ಲಿ ಗುರಿಯನ್ನು ಇಟ್ಟುಕೊಂಡು ಕಳೆದ ಏಳು ವರ್ಷಗಳಲ್ಲಿ ನಾವದರ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಮತ್ತು ಇದರ ಫಲ ನಮ್ಮ ಆತ್ಮ ನಿರ್ಭರ ಭಾರತ ಆಂದೋಲನ. ಉತ್ಪಾದನಾ ರಂಗವಾಗಿರಲಿ, ಅಥವಾ ಸೇವಾ ವಲಯವಾಗಿರಲಿ, ಪ್ರತೀ ವಲಯದಲ್ಲಿಯೂ ನಮ್ಮ ಉತ್ಪಾದನೆ ಹೆಚ್ಚುತ್ತಿದೆ. ಇಂದು ನಾವು ಆತ್ಮ ನಿರ್ಭರ ಭಾರತ ಆಂದೋಲನ ಮೂಲಕ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗುತ್ತಿದ್ದೇವೆ. ಭಾರತಕ್ಕಿದು ಉತ್ತಮ ಸಂಕೇತ. ಎಂ.ಎಸ್.ಎಂ..ಗಳು ಮತ್ತು ಜವಳಿಯಂತಹ ಕಾರ್ಮಿಕ ಕೇಂದ್ರಿತ ವಲಯಗಳಿಗೆ ನಮ್ಮ ಆದ್ಯ ಗಮನವನ್ನು ನೀಡಿದ್ದೇವೆ. ಎಂ.ಎಸ್.ಎಂ.. ವ್ಯಾಖ್ಯೆಯನ್ನು ಸುಧಾರಿಸುವ ಮೂಲಕ ನಾವು ಹೊಸ ಅವಕಾಶಗಳನ್ನು ಸೃಷ್ಟಿಸಿದ್ದೇವೆ. ಸಣ್ಣ ಕೈಗಾರಿಕೆಗಳನ್ನು ರಕ್ಷಿಸಲು ಮೂರು ಲಕ್ಷ ಕೋ.ರೂ.ಗಳ ಮೌಲ್ಯದ ವಿಶೇಷ ಯೋಜನೆಯನ್ನು ಕೊರೊನಾದ ಕಠಿಣ ಪರಿಸ್ಥಿತಿಯಲ್ಲಿ ಎಂ.ಎಸ್.ಎಂ..ಗಳಿಗಾಗಿ ಸರಕಾರ ಆರಂಭ ಮಾಡಿದೆ. ಮತ್ತು ನಮ್ಮ ಎಂ.ಎಸ್.ಎಂ..ಗಳಿಗೆ ಅದರ ಲಾಭ ದಕ್ಕಿದೆ. ಬಗ್ಗೆ ಎಸ್.ಬಿ.. ಅಧ್ಯಯನ ನಡೆಸಿದೆ. ಯೋಜನೆಯಿಂದ 13.5 ಲಕ್ಷ ಎಂ.ಎಸ್.ಎಂ.. ಗಳು ಜೀವದಾನ ಪಡೆದವು ಮತ್ತು 1.5 ಕೋಟಿ ಉದ್ಯೋಗಗಳು ರಕ್ಷಿಸಲ್ಪಟ್ಟವು ಎಂದು ಎಸ್.ಬಿ.. ಅಧ್ಯಯನ ಹೇಳುತ್ತದೆಸುಮಾರು 14 ಪ್ರತಿಶತದಷ್ಟು ಎಂ.ಎಸ್.ಎಂ.. ಗಳು, ಎನ್.ಪಿ.. ಗಳಾಗುವ ಸಾಧ್ಯತೆ ಇದ್ದಂತಹವು, ಯೋಜನೆ ಅಡಿಯಲ್ಲಿ ನೀಡಲಾದ ಸಾಲದಿಂದಾಗಿ ಬದುಕುಳಿದಿವೆ.

ಗೌರವಾನ್ವಿತ ಸ್ಪೀಕರ್ ಅವರೇ,

ತಳಮಟ್ಟದ ಜೊತೆ ಸಂಪರ್ಕದಲ್ಲಿರುವ ಜನರು ಪರಿಣಾಮವನ್ನು ಕಾಣಬಲ್ಲರು. ಹಲವು ವಿಪಕ್ಷ ಸ್ನೇಹಿತರು ಬಿಕ್ಕಟ್ಟಿನ ಸಮಯದಲ್ಲಿ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ ಮತ್ತು ಎಂ.ಎಸ್.ಎಂ..ಗೆ ಬಹಳ ಬೆಂಬಲ ಕೊಟ್ಟಿದೆ ಎಂದು ನನಗೆ ತಿಳಿಸಿದ್ದಾರೆ.

ಗೌರವಾನ್ವಿತ ಸ್ಪೀಕರ್ ಅವರೇ,

ಅದೇ ರೀತಿ ಮುದ್ರಾ ಯೋಜನೆ ನಮ್ಮ ತಾಯಂದಿರಿಗೆ ಮತ್ತು ಸಹೋದರಿಯರಿಗೆ ಯಶಸ್ವಿಯಾಗಿ ತಲುಪುತ್ತಿದೆ. ಇಂದು ಲಕ್ಷಾಂತರ ಜನರು ಬ್ಯಾಂಕುಗಳಿಂದ ಯಾವುದೇ ಭದ್ರತೆ ಇಲ್ಲದೆ ಸಾಲ ಪಡೆದು ಸ್ವ ಉದ್ಯೋಗದ ನಿಟ್ಟಿನಲ್ಲಿ ಮುಂದುವರೆದಿದ್ದಾರೆ ಮತ್ತು ಅವರು  ಓರ್ವರು ಅಥವಾ ಇಬ್ಬರಿಗೆ ಉದ್ಯೋಗ ಕೊಟ್ಟಿದ್ದಾರೆ. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳಿಗಾಗಿರುವ  ಸ್ವ ನಿಧಿ ಯೋಜನಾ!. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳಿಂದ ಸಾಲ ಪಡೆಯುತ್ತಿದ್ದಾರೆ. ಮತ್ತು ಅವರು ಡಿಜಿಟಲ್ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಮತ್ತು ಕೋಟ್ಯಾಂತರ ಕಾರ್ಮಿಕರಿಗೆ ಪ್ರಯೋಜನಗಳು ಲಭಿಸುತ್ತಿವೆ. ನಾವು ಬಡ ಕಾರ್ಮಿಕರ ಮೇಲೆ ಎರಡು ಲಕ್ಷ ಕೋ.ರೂ. ಗಳಿಗೂ ಅಧಿಕ ಮೊತ್ತವನ್ನು ವಿನಿಯೋಗಿಸಿದ್ದೇವೆ. ಆತ್ಮ ನಿರ್ಭರ ಭಾರತ್ ರೋಜ್ ಗಾರ್ ಯೋಜನಾ ಅಡಿಯಲ್ಲಿ ಸಾವಿರಾರು ಫಲಾನುಭವಿಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿದ್ದೇವೆ.

ಗೌರವಾನ್ವಿತ ಸ್ಪೀಕರ್ ಅವರೇ,

ಕೈಗಾರಿಕೋದ್ಯಮಕ್ಕೆ ವೇಗ ನೀಡಲು ಉತ್ತಮ ಮೂಲಸೌಕರ್ಯದ ಅವಶ್ಯಕತೆ ಬಹಳವಿದೆ. ಪ್ರಧಾನ ಮಂತ್ರಿ ಗತಿಶಕ್ತಿ ಮಹಾ ಯೋಜನೆ ಸಾಗಾಟದ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಮತ್ತು ಇದರಿಂದಾಗಿ ಬಹಳ ಕಡಿಮೆ ಖರ್ಚಿನಲ್ಲಿ ಸರಕುಗಳು ದೇಶಾದ್ಯಂತ ತಲುಪಲಿವೆ ಮತ್ತು ರಫ್ತಿನಲ್ಲಿ ತೊಡಗಿಸಿಕೊಂಡವರಿಗೂ ಜಗತ್ತಿನ ಜೊತೆ ಸ್ಪರ್ಧಿಸಲು ಸಾಧ್ಯವಾಗಲಿದೆ. ಆದುದರಿಂದ ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯು ಬರಲಿರುವ ದಿನಗಳಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ಸರಕಾರ ಇನ್ನೊಂದು ಮಹತ್ವದ ಕೆಲಸವನ್ನು ಮಾಡಿದೆ. ನಾವು ಉದ್ಯಮಿಗಳಿಗೆ ಹೊಸ ವಲಯಗಳನ್ನು ತೆರೆದಿದ್ದೇವೆ. ಆತ್ಮ ನಿರ್ಭರ ಭಾರತ ಯೋಜನೆ ಅಡಿಯಲ್ಲಿ ನಾವು ದೇಶದ ಬಾಹ್ಯಾಕಾಶ, ರಕ್ಷಣಾ, ಡ್ರೋನ್ ಗಳು, ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಸಹಭಾಗಿಯಾಗುವಂತೆ ಖಾಸಗಿ ವಲಯಕ್ಕೆ  ಆಹ್ವಾನ ನೀಡಿದ್ದೇವೆ. ದೇಶದಲ್ಲಿಯ ಉದ್ಯಮಿಗಳಿಗೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಸುಮಾರು 25,000 ಅನುಸರಣಾ ವಿಧಾನಗಳನ್ನು ತೆಗೆದು ಹಾಕಿ ಸರಳ ತೆರಿಗೆ ವ್ಯವಸ್ಥೆಯನ್ನು ಆರಂಭ ಮಾಡಲಾಗಿದೆ. ರಾಜ್ಯಗಳು ಇಂತಹ ಅನುಸರಣಾ ವಿಧಾನಗಳನ್ನು ಹುಡುಕಿ ಅವುಗಳನ್ನು ತೆಗೆದು ಹಾಕಬೇಕು ಎಂದು ನಾನು ಮನವಿ ಮಾಡುತ್ತೇನೆ. ದೇಶದ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ನೀವದನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಅಂತಹ ಅಡೆ ತಡೆಗಳನ್ನು ನಿವಾರಿಸಲಾಗುತ್ತಿದೆ. ದೇಶೀಯ ಉದ್ಯಮಗಳಿಗೆ ಸಮಾನ ಅವಕಾಶವನ್ನು ಒದಗಿಸಲು ನಾವು ಒಂದೊಂದೇ ಕ್ರಮಗಳನ್ನು ಅನುಷ್ಟಾನಕ್ಕೆ ತರುತ್ತಿದ್ದೇವೆ.

ಗೌರವಾನ್ವಿತ ಸ್ಪೀಕರ್ ಅವರೇ,

ಸರಕಾರ ಅದೃಷ್ಟವನ್ನು ರೂಪಿಸುತ್ತದೆ ಎಂಬ ಹಳೆಯ ತಾತ್ವಿಕತೆಯಿಂದ ಇಂದು ದೇಶವು ಹೊರಗೆ ಬರುತ್ತಿದೆ. ನೀವು ಸರಕಾರವನ್ನು ಅವಲಂಬಿಸಿರಬೇಕು, ಸರಕಾರ ಹೊರತುಪಡಿಸಿದರೆ ಬೇರೆ ಯಾರೂ ನಿಮ್ಮ ಆಶೋತ್ತರಗಳನ್ನು ಈಡೇರಿಸಲಾರರು ಮತ್ತು ಸರಕಾರ ಎಲ್ಲವನ್ನೂ ಒದಗಿಸುತ್ತದೆ ಎಂಬ ಸಿದ್ಧಾಂತ ಅದು. ಇಂತಹ ಬಹಳ ದೊಡ್ಡ ಅಹಂಕಾರದಿಂದ ದೇಶದ ಸಾಮರ್ಥ್ಯಕ್ಕೂ ಗಾಯಗಳಾಗಿವೆ. ಆದುದರಿಂದ ಯುವ ಜನತೆಯ ಕನಸುಗಳು ಮತ್ತು ಯುವ ಜನತೆಯ ಕೌಶಲ್ಯಗಳಿಗೆ ಸಂಬಂಧಿಸಿ ನಾವು ಹೊಸ ಆರಂಭವನ್ನು ಮಾಡಿದೆವು. ಸರಕಾರ ಎಲ್ಲವನ್ನೂ ಮಾಡುತ್ತದೆ ಎಂದಲ್ಲ. ದೇಶವಾಸಿಗಳಲ್ಲಿ ಹಲವು ಪಟ್ಟು ಶಕ್ತಿ ಇದೆ. ಅವರ ಶಕ್ತಿ ಮತ್ತು ದೃಢ ನಿರ್ಧಾರಗಳು ಜೊತೆಗೂಡಿದಾಗ ಫಲಿತಾಂಶ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿರುತ್ತದೆ. 2014ಕ್ಕೆ ಮೊದಲು ನಮ್ಮ ದೇಶದಲ್ಲಿ ಬರೇ 500 ನವೋದ್ಯಮಗಳು ಇದ್ದವು. ದೇಶದ ಯುವ ಜನರಿಗೆ ಅವಕಾಶ ಕೊಟ್ಟಾಗ ಫಲಿತಾಂಶ ಏನಾಯಿತು?. ಏಳು ವರ್ಷಗಳಲ್ಲಿ 60,000 ನವೋದ್ಯಮಗಳು ದೇಶದಲ್ಲಿ ಕಾರ್ಯಾಚರಿಸುತ್ತಿವೆ. ಇದು ನನ್ನ ದೇಶದ ಯುವ ಜನತೆಯ ತಾಕತ್ತು. ಮತ್ತು ಈಗ ಯುನಿಕಾರ್ನ್ ಗಳ ನಿರ್ಮಾಣ ಆಗುತ್ತಿದೆ. ಮತ್ತು ಪ್ರತೀ ಯೂನಿಕಾರ್ನ್ ಗಳ ಮೌಲ್ಯ ಸಾವಿರಾರು ಕೋಟಿ ರೂಪಾಯಿಗಳು.

ಗೌರವಾನ್ವಿತ ಸ್ಪೀಕರ್ ಅವರೇ,

ಬಹಳ  ಕಡಿಮೆ ಅವಧಿಯಲ್ಲಿ ಭಾರತದ ಯೂನಿಕಾರ್ನ್ ಗಳು ದೇಶವನ್ನು ರೂಪಿಸುವ ಕಾರ್ಯದಲ್ಲಿ ನಿರತವಾಗಿವೆ. ಅದೂ ಬಹಳ ದೊಡ್ಡ ಪ್ರಮಾಣದಲ್ಲಿ. ಮೊದಲು ಸಾವಿರಾರು ಕೋಟಿ ರೂಪಾಯಿಗಳ ಕಂಪೆನಿ ಆಗಲು ದಶಕಗಳ ಕಾಲಾವಧಿ ಬೇಕಾಗುತ್ತಿತ್ತು. ಇಂದು ನಮ್ಮ ಯುವಜನತೆಯ ತಾಕತ್ತು ಮತ್ತು ಸರಕಾರದ ನೀತಿಗಳಿಂದಾಗಿ ವ್ಯಾಪಾರೋದ್ಯಮಗಳು ಒಂದು  ಅಥವಾ ಎರಡು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯಾಪಾರೋದ್ಯಮಗಳಾಗಿ ಪರಿವರ್ತನೆಗೊಳ್ಳುತ್ತಿವೆ.

ಗೌರವಾನ್ವಿತ ಸ್ಪೀಕರ್ ಅವರೇ,

ನವೋದ್ಯಮಗಳಿಗೆ ಸಂಬಂಧಿಸಿ ಮತ್ತು ಯುನಿಕಾರ್ನ್ ಗಳಿಗೆ ಸಂಬಂಧಿಸಿ ನಾವು ಜಗತ್ತಿನಲ್ಲಿಯೇ ಮೊದಲ ಮೂರು ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ಯಾವ ಭಾರತೀಯರು ಇದಕ್ಕಾಗಿ ಹೆಮ್ಮೆ ಪಡುವುದಿಲ್ಲ?. ಆದರೆ ಇಂತಹ ಸಮಯದಲ್ಲಿ ಅವರು ಸರಕಾರವನ್ನು ವಿರೋಧಕ್ಕೆ ಈಡು ಮಾಡುತ್ತಿದ್ದಾರೆ. ಅವರು ಬೆಳಿಗ್ಗೆ ಆರಂಭ ಮಾಡುತ್ತಾರೆ ಮತ್ತು ನಾನಿಲ್ಲಿ ನೋಡಿದ್ದೇನೆ, ನಮ್ಮ ಅಧೀರ್ ರಂಜನ್ ಜೀ ಅವರು ಮೋದಿ-ಮೋದಿ ಎಂದು ನೀವೇನು ಮಾಡುತ್ತಿದ್ದೀರಿ ಎಂದು?. ಅದು ನೀವು ಹೇಳುತ್ತಿರುವುದು. ಹೌದಲ್ಲವೇ! ನೀವು ಬೆಳಿಗ್ಗೆ ಮುಂಚೆಯೇ ಆರಂಭ ಮಾಡುತ್ತೀರಿ. ಮೋದಿ ಇಲ್ಲದೆ ನಿಮಗೆ ಕ್ಷಣವನ್ನೂ ಕಳೆಯುವುದು ಸಾಧ್ಯವಿಲ್ಲ. ಮೋದಿ ನಿಮ್ಮ ಜೀವ ಶಕ್ತಿ.

ಗೌರವಾನ್ವಿತ ಸ್ಪೀಕರ್ ಅವರೇ,

ಯುವಕರನ್ನು, ಉದ್ಯಮಿಗಳನ್ನು ಮತ್ತು ದೇಶದ ಉತ್ತಮ ನಿರ್ಮಾಣಕಾರರನ್ನು ಬೆದರಿಸುವ ಮೂಲಕ ಕೆಲವರು ಸಂತೋಷ ಅನುಭವಿಸುತ್ತಾರೆ. ಅವರನ್ನು ಬೆದರಿಸಿದರೆ ಅವರಿಗೆ ಸಂತೋಷ ಲಭಿಸುತ್ತದೆ ಮತ್ತು ತಪ್ಪು ದಾರಿಗೆಳೆಯುವ ಮೂಲಕ ಅವರಿಗೆ ಸಂತೋಷ ಒದಗುತ್ತದೆ. ದೇಶದ ಯುವಜನರು ಅವರಿಗೆ ಕಿವಿಗೊಡುತ್ತಿಲ್ಲ ಮತ್ತು ಅದರಿಂದಾಗಿ ದೇಶ ಪ್ರಗತಿ ಸಾಧಿಸುತ್ತಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ನಮ್ಮ ಕೆಲವು ಯೂನಿಕಾರ್ನ್ ಗಳು ಬಹುರಾಷ್ಟ್ರೀಯ ಕಂಪೆನಿಗಳಾಗುವುದಕ್ಕೆ ಸಾಮರ್ಥ್ಯವನ್ನು ಪಡೆದಿವೆ. ಆದರೆ ಕಾಂಗ್ರೆಸ್ಸಿನಲ್ಲಿ ಇರುವ ಜನರು ಉದ್ಯಮಿ ಜನರಿಗೆಹೇಳುತ್ತಾರೆ ಇದು ಅವರಿಗಾಗಿ ಎಂದು. ಮತ್ತು ನಿಮಗೆ ಆಶ್ಚರ್ಯವಾಗಬಹುದು-ಅವರು ಕೊರೊನಾ ವೈರಸ್ಸಿನ ಹೊಸ ತಳಿಗಳು ಎಂದೂ ಹೇಳುತ್ತಾರೆ. ಏನಾಗಿದೆ?. ನಮ್ಮ ದೇಶದ ಉದ್ಯಮಪತಿಗಳು ಕೊರೊನಾವೈರಸ್ಸಿನ ಹೊಸ ರೂಪಾಂತರಿತ ತಳಿಗಳೇ?. ನಾವು ಏನು ಹೇಳುತ್ತಿದ್ದೇವೆ ಮತ್ತು ಯಾರ ಬಗ್ಗೆ ಹೇಳುತ್ತಿದ್ದೇವೆ? ಇದು ಕಾಂಗ್ರೆಸ್ ಪಕ್ಷಕ್ಕೆ  ಹಾನಿ ಮಾಡುತ್ತಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ಚರಿತ್ರೆಯಿಂದ ಕಲಿಯಲಾರದವರು, ಚರಿತ್ರೆಯಲ್ಲಿಯೇ ಕಳೆದು ಹೋಗುತ್ತಾರೆ.

ಗೌರವಾನ್ವಿತ ಸ್ಪೀಕರ್ ಅವರೇ,

ನಾನಿದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಅವರ ಎಲ್ಲಾ ಪ್ರಮುಖ ನಾಯಕರು, 60 ರಿಂದ 80 ದಶಕದ ನಡುವಿನ ದಶಕಗಳಲ್ಲಿ ದೇಶವನ್ನು ಮುನ್ನಡೆಸಿದ್ದಾರೆ.60 ಮತ್ತು 80 ದಶಕದ ನಡುವೆ ಇದ್ದ ವಿವರಣೆ ಏನು?. ಕಾಂಗ್ರೆಸ್ಸಿನ ಜೊತೆ ಅಧಿಕಾರ ಅನುಭವಿಸುತ್ತಿದ್ದ ಮಿತ್ರಪಕ್ಷಗಳು ಸರಕಾರವನ್ನು ಪಂಡಿತ್ ನೆಹರೂ ಜೀ ಮತ್ತು ಶ್ರೀಮತಿ ಇಂದಿರಾ ಗಾಂಧಿ ಅವರ ಸರಕಾರಗಳನ್ನು ಟಾಟಾ-ಬಿರ್ಲಾ ಸರಕಾರಗಳು ಎಂದು ಕರೆಯುತ್ತಿದ್ದರು. ಸರಕಾರಗಳನ್ನು ಟಾಟಾ-ಬಿರ್ಲಾ ನಡೆಸುತ್ತಿದ್ದರು. ಇದನ್ನು 60-80 ದಶಕದಲ್ಲಿ ನೆಹರೂ ಜೀ ಮತ್ತು ಇಂದಿರಾ ಜೀ ಅವರಿಗೆ ಹೇಳಲಾಗುತ್ತಿತ್ತು. ನೀವು ಅವರ ಜೊತೆ ಅಧಿಕಾರ ಹಂಚಿಕೊಂಡಿದ್ದೀರಿ. ಅವರ ಅಭ್ಯಾಸಗಳನ್ನು ನೀವು ಅಳವಡಿಸಿಕೊಂಡಿದ್ದೀರಿ. ನೀವು ಕೂಡಾ ಅದೇ ಭಾಷೆಯಲ್ಲಿ ಮಾತನಾಡುತ್ತಿರುವಿರಿ. ನೀವು ಇಷ್ಟೊಂದು ಅಧಃಪತನಕ್ಕೆ ಬಿದ್ದಿದ್ದೀರಿ. ಇಂದಿನ ಪಂಚಿಂಗ್ ಬ್ಯಾಗ್ ಬದಲಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನಿಮ್ಮ ಅಭ್ಯಾಸಗಳು ಬದಲಾಗಿಲ್ಲಮೇಕ್ ಇನ್ ಇಂಡಿಯಾ  ಸಾಧ್ಯವಾಗದು ಎಂದು ಸದನದಲ್ಲಿ ಮತ್ತು ಹೊರಗೆ ಮಾತನಾಡುವ ಧೈರ್ಯ ತೋರಿಸಿದವರು ಜನರು. ಭಾರತದ ಬಗ್ಗೆ ಯಾರೇ ಆದರೂ ರೀತಿಯಲ್ಲಿ ಯೋಚಿಸಲು ಸಾಧ್ಯವಿದೆಯೇ?. ಭಾರತೀಯ ನಿರ್ಮಿತ ಅಂದರೆ ಮೇಕ್ ಇನ್ ಇಂಡಿಯಾ ಸಾಧ್ಯವಿಲ್ಲ ಎಂಬುದು!. ನೀವೇಕೆ ದೇಶಕ್ಕೆ ಅಪಮಾನ ಮಾಡುತ್ತಿದ್ದೀರಿ?. ನೀವು ದೇಶದ ವಿರುದ್ಧ ಯಾಕೆ ಮಾತನಾಡುತ್ತಿದ್ದೀರಿ?. ಮೇಕ್ ಇನ್ ಇಂಡಿಯಾವನ್ನು ಅಣಕ ಮಾಡಲಾಯಿತು. ಮತ್ತು ಇಂದು ದೇಶದ ಯುವ ಶಕ್ತಿ, ದೇಶದ ಉದ್ಯಮಪತಿಗಳು ಅದನ್ನು ಸಾಬೀತು ಮಾಡಿದ್ದಾರೆ ಮತ್ತು ನೀವು ತಮಾಷೆಯ ಹಿಡಿಕೆಗಳಾಗಿದ್ದೀರಿ. ಮತ್ತು ಮೇಕ್ ಇನ್ ಇಂಡಿಯಾದ ಯಶಸ್ಸು ನಿಮಗೆ ಎಷ್ಟೊಂದು ನೋವು ಕೊಡುತ್ತಿದೆ ಎಂಬುನ್ನು ಅರಿತುಕೊಳ್ಳಲು ನಾನು ಬಹಳ ಸಮರ್ಥನಾಗಿದ್ದೇನೆ.

ಗೌರವಾನ್ವಿತ ಸ್ಪೀಕರ್ ಅವರೇ,

ಮೇಕ್ ಇನ್ ಇಂಡಿಯಾದ ಜೊತೆ ಕೆಲ ಜನರಿಗೆ ಸಮಸ್ಯೆಗಳಿವೆ, ಯಾಕೆಂದರೆ ಮೇಕ್ ಇನ್ ಇಂಡಿಯಾ ಅಂದರೆ ಕಮಿಷನ್ ಗಳಿಗೆ, ಭ್ರಷ್ಟಾಚಾರಕ್ಕೆ ಮತ್ತು ತಮ್ಮ ಖಜಾನೆ ತುಂಬಿಕೊಳ್ಳುವುದಕ್ಕೆ ಅಂತ್ಯ ಬೀಳುತ್ತದೆ ಮತ್ತು ಅದರಿಂದಾಗಿ ಅವರು ಮೇಕ್ ಇನ್ ಇಂಡಿಯಾವನ್ನು ವಿರೋಧಿಸುತ್ತಿದ್ದಾರೆ. ಭಾರತದ ಜನರ ಸಾಮರ್ಥ್ಯವನ್ನು ಕಡೆಗಣಿಸುವುದು ಪಾಪಕೃತ್ಯ. ದೇಶದ ಸಣ್ಣ ಉದ್ಯಮಿಗಳ ಸಾಮರ್ಥ್ಯದ ಅವಮಾನ ಮತ್ತು ದೇಶದ ಯುವ ಜನತೆಗೆ ಮಾಡುವ ಅಪಮಾನ ಮತ್ತು ದೇಶದ ಅನ್ವೇಷಣಾ ಸಾಮರ್ಥ್ಯದ ಅವಹೇಳನ.

ಗೌರವಾನ್ವಿತ ಸ್ಪೀಕರ್ ಅವರೇ,

ಅವರು ಯಶಸ್ಸು ಸಂಪಾದಿಸಲಾರರು, ಆದುದರಿಂದ ಅವರು ನಕಾರಾತ್ಮಕತೆಯನ್ನು ಮತ್ತು ದೇಶದಲ್ಲಿ ಇಂತಹ ಹತಾಶೆಯ ಸ್ಥಿತಿಯನ್ನು ಉಂಟು ಮಾಡುತ್ತಿದ್ದಾರೆ!. ಆದರೆ ದೇಶದ ಯುವ ಜನತೆ ದೇಶವನ್ನು ಹಳಿತಪ್ಪಿಸಲು ಮಾಡುವ ಆಟಗಳ ಬಗ್ಗೆ ಜಾಗ್ರತರಾಗಿದ್ದಾರೆ.

ಗೌರವಾನ್ವಿತ ಸ್ಪೀಕರ್ ಅವರೇ,

ಮೊದಲು ಸರಕಾರಗಳನ್ನು ನಡೆಸಿದವರು, 50 ವರ್ಷಗಳ ಕಾಲ ಸರಕಾರಗಳನ್ನು ನಡೆಸಿದವರು  ಮೇಕ್ ಇನ್ ಇಂಡಿಯಾ ಬಗ್ಗೆ ಯಾವ ರೀತಿಯ ಧೋರಣೆಯನ್ನು ಹೊಂದಿದ್ದರು?.ನಾವು ಬರೇ ರಕ್ಷಣಾ ವಲಯದತ್ತ ಮಾತ್ರವೇ ನೋಡಿದರೂ, ಆಗ ಅವರು ಏನು ಮಾಡುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಅದನ್ನು ಅವರು ಹೇಗೆ ಮಾಡುತ್ತಿದ್ದರು ಮತ್ತು ಯಾರಿಗಾಗಿ ಮಾಡುತ್ತಿದ್ದರು ಎಂಬುದೂ ತಿಳಿಯುತ್ತದೆ. ಮೊದಲು ಏನಾಗುತ್ತಿತ್ತು?. ಹೊಸ ಸಲಕರಣೆಯ ಖರೀದಿ ಪ್ರಕ್ರಿಯೆಗೆ ವರ್ಷಗಳೇ ತಗಲುತ್ತಿದ್ದವು. ಮತ್ತು ಅಂತಿಮ ನಿರ್ಧಾರ ಕೈಗೊಳ್ಳುವಾಗ ಸಲಕರಣೆ ಹಳೆಯ ಮಾದರಿಯಾಗಿರುತ್ತಿತ್ತು. ಈಗ ಹೇಳಿ ನನಗೆ, ಇದರಿಂದ ದೇಶಕ್ಕೆ ಏನು ಒಳಿತಾಗುತ್ತದೆ. ಅದು ಹಳೆಯ ಕಾಲದ್ದಾಗಿರುತ್ತದೆ ಮತ್ತು ಅದಕ್ಕೆ ನಾವು ಹಣ ಪಾವತಿಸುತ್ತೇವೆ. ನಾವು ಎಲ್ಲಾ ಪ್ರಕ್ರಿಯೆಗಳನ್ನು ಸರಳೀಕರಣ ಮಾಡಿದ್ದೇವೆ. ಹಲವಾರು ವರ್ಷಗಳಿಂದ ರಕ್ಷಣಾ ವಲಯದಲ್ಲಿ ಬಾಕಿಯಾಗಿದ್ದಂತಹ ವಿಷಯಗಳನ್ನು ಬಗೆಹರಿಸಿದ್ದೇವೆ. ಮೊದಲು ನಾವು ಯಾವುದೇ ಉಪಕರಣ ಖರೀದಿಸಬೇಕಾದರೆ ಇತರ ದೇಶಗಳತ್ತ ನೋಡಬೇಕಾಗುತ್ತಿತ್ತು. ಅಗತ್ಯ ಇದ್ದಾಗ ಅದನ್ನು ತರಾತುರಿಯಲ್ಲಿ ತರಲಾಗುತ್ತಿತ್ತು. ಬಿಡಿ ಭಾಗಗಳಿಗೂ  ನಾವು ಇತರ ದೇಶಗಳನ್ನು ಅವಲಂಬಿಸಿದ್ದೆವು. ಇತರರನ್ನು ಅವಲಂಬಿಸಿ ಯಾರೇ ಆದರೂ ದೇಶದ ಭದ್ರತೆಯನ್ನು ಖಾತ್ರಿ ಮಾಡಲಾಗದು. ನಾವು ನಮ್ಮದೇ ಆದ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿರಬೇಕು. ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದು ರಾಷ್ಟ್ರ ಸೇವೆಯ ಬಹಳ ದೊಡ್ಡ ಕೆಲಸ ಮತ್ತು ಇಂದು ನಾನು ದೇಶದ ಯುವಜನರು ತಮ್ಮ ವೃತ್ತಿಗಾಗಿ ವಲಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಆಗ ನಾವು ಶಕ್ತಿವಂತರಾಗಿ ಎದ್ದು ನಿಲ್ಲುತ್ತೇವೆ.

ಗೌರವಾನ್ವಿತ ಸ್ಪೀಕರ್ ಅವರೇ,

ಭಾರತದಲ್ಲಿಯೇ ಹೆಚ್ಚು ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಮತ್ತು ಭಾರತೀಯ ಕಂಪೆನಿಗಳಿಂದ ಖರೀದಿ ಮಾಡುವುದಕ್ಕೆ ಬಜೆಟ್ ನಲ್ಲಿ ಅವಕಾಶಗಳನ್ನು ಒದಗಿಸಲಾಗಿದೆ. ಹೊರಗಿನ ಖರೀದಿಯನ್ನು ಕೊನೆಗೊಳಿಸುವುದಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಪಡೆಗಳ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ನಾವು ಬೃಹತ್ ರಕ್ಷಣಾ ಸಲಕರಣೆಗಳ ರಫ್ತುದಾರರಾಗುವ ಕನಸಿನೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ. ಮತ್ತು ನನಗೆ ಖಚಿತವಾಗಿ ಗೊತ್ತಿದೆ, ದೃಢ ನಿರ್ಧಾರ ಈಡೇರಿಸಲ್ಪಡುತ್ತದೆ. ಮೊದಲು ಪ್ರಭಾವೀ ಶಕ್ತಿಗಳು ರಕ್ಷಣ ಖರೀದಿಯಲ್ಲಿ ಹೇಗೆ ಪ್ರಭಾವ ಬೀರುತ್ತಿದ್ದವು ಎಂಬುದು ನನಗೆ ಗೊತ್ತಿದೆ. ಮೋದಿ ಶಕ್ತಿಗಳಿಗೆ ಸವಾಲು ಹಾಕಿದ್ದಾರೆ. ಆದುದರಿಂದ ಮೋದಿಯ ಬಗ್ಗೆ ಅವರು ಅಸಂತುಷ್ಟಿ ವ್ಯಕ್ತಪಡಿಸುವುದು ಮತ್ತು ಅವರ ವಿರುದ್ಧ ಕೋಪಗೊಳ್ಳುವುದು ಸಹಜ. ಮತ್ತು ಅವರ ಸಿಟ್ಟೂ ಅಧಿಕಗೊಳ್ಳುತ್ತಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ವಿಪಕ್ಷದ ನಮ್ಮ ಕೆಲವು ಸಹೋದ್ಯೋಗಿಗಳು ಇಲ್ಲಿ ಹಣದುಬ್ಬರದ ಕಳವಳವನ್ನು ಪ್ರಸ್ತಾಪಿಸಿದರು. ನೀವಿದನ್ನು ಕಾಂಗ್ರೆಸ್ ನೇತೃತ್ವದ ಯು.ಪಿ.. ಸರಕಾರದ ಕಾಲದಲ್ಲಿ ಪ್ರಸ್ತಾಪಿಸಿದ್ದರೆ ದೇಶಕ್ಕೆ ಒಳಿತಾಗುತ್ತಿತ್ತು. ಇದರ ನೋವು ನಿಮಗೆ ಕಾಲದಲ್ಲಿಯು ಆಗಿರಬೇಕಿತ್ತು. ನೀವು ಮರೆತಿರಬಹುದು, ಆದರೆ ನಾನು ನಿಮಗೆ ನೆನಪು ಮಾಡಲಿಚ್ಛಿಸುತ್ತೇನೆ. ಕಾಂಗ್ರೆಸ್ ಸರಕಾರದ ಕೊನೆಯ ಐದು ವರ್ಷಗಳಲ್ಲಿ ಬಹುತೇಕ ಇಡೀ ಅವಧಿಯಲ್ಲಿ ದೇಶವು ಎರಡಂಕಿಯ ಹಣದುಬ್ಬರವನ್ನು ಎದುರಿಸಿತು. ನಾವು ಸರಕಾರ ರಚಿಸುವುದಕ್ಕೆ ಮೊದಲು ಸ್ಥಿತಿ ಇತ್ತು. ಹಣದುಬ್ಬರ ನಿಯಂತ್ರಣ ತನ್ನ ಕೈಯಲ್ಲಿ ಇಲ್ಲ ಎಂದು ಸರಕಾರವೇ ನಂಬಲು ಆರಂಭ ಮಾಡುವಂತಹ ರೀತಿಯ ನೀತಿಗಳು ಕಾಂಗ್ರೆಸ್ಸಿನದಾಗಿದ್ದವು. 2011 ರಲ್ಲಿ ಆಗಿನ ಹಣಕಾಸು ಸಚಿವರು ನಾಚಿಕೆ ಇಲ್ಲದಂತೆ ಇಲ್ಲದಂತೆ ಹಣದುಬ್ಬರ ತಡೆಯಲು ಅಲ್ಲಾವುದ್ದೀನನ ಯಾವುದೇ ಇಂದ್ರಜಾಲವನ್ನು ನಿರೀಕ್ಷೆ ಮಾಡಬೇಡಿ ಎಂದು ಜನರಿಗೆ ಹೇಳಿದ್ದರು. ಇದು ನಿಮ್ಮ ನಾಯಕರ ಅಸೂಕ್ಷ್ಮತ್ವಕ್ಕೆ ಉದಾಹರಣೆ. ಇಂದಿನ ದಿನಗಳಲ್ಲಿ ಆರ್ಥಿಕತೆಯ ಬಗ್ಗೆ ವಾರ್ತಾಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿರುವ ನಮ್ಮ ಚಿದಂಬರಂ ಜೀ ಅವರು 2012ರಲ್ಲಿ ಹೇಳಿದ್ದರು, ಒಂದು ನೀರಿನ ಬಾಟಲಿಗೆ 15 ರೂಪಾಯಿ ಪಾವತಿಸಲು ಮತ್ತು ಐಸ್ ಕ್ರೀಂಗೆ 20 ರೂಪಾಯಿ ಪಾವತಿಸಲು ಜನರಿಗೇನು ತೊಂದರೆ ಇಲ್ಲ ಎಂಬುದಾಗಿ. ಆದರೆ ಅವರು ಗೋಧಿ ಅಥವಾ ಅಕ್ಕಿಗೆ ಒಂದು ರೂಪಾಯಿ ಜಾಸ್ತಿಯಾದರೂ ಸಹಿಸಲು ತಯಾರಿಲ್ಲ. ಇದು ನಿಮ್ಮ ನಾಯಕರ ಹೇಳಿಕೆ. ಹಣದುಬ್ಬರದ ಬಗ್ಗೆ ಇಂತಹ ಅಸೂಕ್ಷ್ಮತ್ವದ ಧೋರಣೆ!.ಇದು ಕಳವಳಕ್ಕೆ ಕಾರಣ.

ಗೌರವಾನ್ವಿತ ಸ್ಪೀಕರ್ ಅವರೇ,

ಹಣದುಬ್ಬರವು ದೇಶದಲ್ಲಿಯ ಜನ ಸಾಮಾನ್ಯರ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಮತ್ತು ನಮ್ಮ ಎನ್.ಡಿ.. ಸರಕಾರ ವಿಷಯವನ್ನು ಮೊದಲ ದಿನದಿಂದಲೇ ಜಾಗ್ರತೆಯಿಂದ ಮತ್ತು ಸೂಕ್ಷ್ಮತ್ವದಿಂದ ನಿಭಾಯಿಸಲು ಪ್ರಯತ್ನಿಸಿದೆ. ಮತ್ತು ನಮ್ಮ ಹಣಕಾಸು ನೀತಿಯ ಆದ್ಯ ಗುರಿ ಹಣದುಬ್ಬರವನ್ನು ತಡೆಯುವುದು.

ಗೌರವಾನ್ವಿತ ಸ್ಪೀಕರ್ ಅವರೇ,

ನೂರು ವರ್ಷಗಳಲ್ಲಿಯೇ ಅತ್ಯಂತ ಭೀಕರವಾದ ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿ ಹಣದುಬ್ಬರ ಮತ್ತು ಅವಶ್ಯ ವಸ್ತುಗಳ ಬೆಲೆ ಏರಿಕೆ ತಡೆಯುವುದಕ್ಕೆ ನಾವು ಪ್ರಯತ್ನ ಮಾಡಿದ್ದೇವೆ. ಮತ್ತು ಜನಸಾಮಾನ್ಯರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಹಣದುಬ್ಬರದ ಪರಿಣಾಮ  ಸಹಿಸಲಸಾಧ್ಯವಾದ ಮಿತಿ ದಾಟದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ನಾವು ಏನೆಲ್ಲ ಮಾಡಿದ್ದೇವೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತವೆ. ಕಾಂಗ್ರೆಸ್ ಆಡಳಿತದಲ್ಲಿ ಹಣದುಬ್ಬರ ಎರಡಂಕಿ ಮಟ್ಟದಲ್ಲಿತ್ತು, ಅದು 10 ಪ್ರತಿಶತಕ್ಕಿಂತ ಅಧಿಕವಿತ್ತು. ಆದರೆ 2014 ರಿಂದ 2020 ಕಾಲಾವಧಿಯಲ್ಲಿ ಹಣದುಬ್ಬರ 5 ಪ್ರತಿಶತಕ್ಕಿಂತ ಕಡಿಮೆ ಇತ್ತು. ಕೊರೊನಾ ಇದ್ದಾಗಲೂ ವರ್ಷ ಹಣದುಬ್ಬರ ಪ್ರತಿಶತ 5.2 ಮತ್ತು ಆಹಾರ ಹಣದುಬ್ಬರ ಪ್ರತಿಶತ 3 ಕ್ಕಿಂತ ಕಡಿಮೆ ಇದೆ. ನಿಮ್ಮ ಆಡಳಿತದಲ್ಲಿ ನೀವು ಜಾಗತಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಓಡಿ ಹೋಗುತ್ತಿದ್ದಿರಿ. ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ ಕಾಂಗ್ರೆಸ್ ಆಡಳಿತದಲ್ಲಿ ಕೆಂಪು ಕೋಟೆಯಿಂದ ಪಂಡಿತ್ ನೆಹರೂ ಜೀ ಹಣದುಬ್ಬರದ ಬಗ್ಗೆ ಏನು ಹೇಳಿದ್ದರು ಎಂಬುದನ್ನು. ನೋಡಿ, ನೀವು ಸದಾ ಹೇಳುತ್ತೀರಿ, ನಾನು ಪಂಡಿತ್ ಜೀ ಹೆಸರನ್ನು ಎಂದೂ ಪ್ರಸ್ತಾಪಿಸುವುದಿಲ್ಲ ಎಂಬುದಾಗಿ. ನಾನು ಅವರನ್ನು ಪದೇ ಪದೇ ಪ್ರಸ್ತಾಪಿಸುತ್ತಲೇ ಹೋಗುತ್ತೇನೆ. ಇಂದು ನಿಮ್ಮನ್ನು ನೀವು ಹರ್ಷಚಿತ್ತರಾಗಿರಿಸಿಕೊಳ್ಳಿ. ನಿಮ್ಮ ನಾಯಕರೂ ಬಹಳ ವಿನೋದಕರವಾಗಿತ್ತು  ಎಂದೂ ಹೇಳಬಹುದು.

ಗೌರವಾನ್ವಿತ ಸ್ಪೀಕರ್ ಅವರೇ,

ಜಾಗತೀಕರಣ ಇಲ್ಲದೇ ಇದ್ದಾಗ ಪಂಡಿತ್ ನೆಹರೂ ಜೀ ಇದನ್ನು ಕೆಂಪುಕೋಟೆಯಿಂದ ಹೇಳಿದ್ದರು. ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುವಾಗ ನೆಹರೂ ಜೀ ಹೇಳಿದ್ದರು: “ಕೆಲವೊಮ್ಮೆ ಕೊರಿಯಾದಲ್ಲಿಯ ಯುದ್ಧ ನಮ್ಮ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಸರಕುಗಳ ದರದಲ್ಲಿ ಏರಿಕೆಯಾಗುತ್ತದೆ ಮತ್ತು ಅದು ನಿಯಂತ್ರಣ ಮೀರುತ್ತದೆಇದನ್ನು ಭಾರತದ ಮೊದಲ ಪ್ರಧಾನ ಮಂತ್ರಿ ನೆಹರೂ ಜೀ ಹೇಳಿದ್ದು. ದೇಶದ ಮೊದಲ ಪ್ರಧಾನ ಮಂತ್ರಿ ದೇಶದೆದುರು ತಮ್ಮ ಕೈಚಾಚಿ ಹೇಳುತ್ತಾರೆ. ಅವರು ಮತ್ತೆ ಹೇಳುತ್ತಾರೆಅಮೇರಿಕಾದಲ್ಲಿ ಏನಾದರೂ ನಡೆದರೆ ಅದೂ ಸಾಮಗ್ರಿಗಳ ದರದ ಮೇಲೆ ಪರಿಣಾಮ ಬೀರುತ್ತದೆ”. ಆಗಲೂ ಹಣದುಬ್ಬರದ ಸಮಸ್ಯೆ ಎಷ್ಟೊಂದು ತೀವ್ರವಾಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ, ನೆಹರೂ ಜೀ ಕೆಂಪು ಕೋಟೆಯಿಂದ ರಾಷ್ಟ್ರದೆದುರು ತಮ್ಮ ಕೈಚೆಲ್ಲುತ್ತಾರೆ

ಗೌರವಾನ್ವಿತ ಸ್ಪೀಕರ್ ಅವರೇ,

ಕಾಂಗ್ರೆಸ್ ಸರಕಾರ ಇಂದು ಅಧಿಕಾರದಲ್ಲಿದ್ದಿದ್ದರೆ...ಇಂದು ದೇಶಕ್ಕೆ ಉತ್ತಮ ಭವಿಷ್ಯವಿರುತ್ತಿತ್ತೇ. (ಅದು ಅಧಿಕಾರದಲ್ಲಿಲ್ಲ) . ದೇಶ ಬಚಾವಾಗಿದೆ. ಇಂದು ನೀವು ಅಲ್ಲಿದ್ದಿದ್ದರೆ, ನೀವು ಕೊರೊನಾ ಹೆಸರನ್ನು ಉಲ್ಲೇಖಿಸಿ  ಹಣದುಬ್ಬರವನ್ನು ಕೈಬಿಡುತ್ತಿದ್ದಿರಿ. ಆದರೆ ಸಮಸ್ಯೆಯನ್ನು ಬಹಳ ಸೂಕ್ಷ್ಮತ್ವದೊಂದಿಗೆ ಪರಿಗಣಿಸಿ ನಾವು ಪೂರ್ಣ ಶಕ್ತಿಯೊಂದಿಗೆ ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಇಂದು ಅಮೇರಿಕಾದಲ್ಲಿ ಮತ್ತು ..ಸಿ.ಡಿ.ದೇಶಗಳಲ್ಲಿ ಹಣದುಬ್ಬರ ಬಹುತೇಕ 7 ಪ್ರತಿಶತ ಇದೆ. ಆದರೆ ಗೌರವಾನ್ವಿತ ಸ್ಪೀಕರ್ ಅವರೇ ನಾವು ಯಾರನ್ನಾದರೂ ದೂರಿ ಓಡಿ ಹೋಗುವವರಲ್ಲ. ನಾವು ಜವಾಬ್ದಾರಿಯೊಂದಿಗೆ ದೇಶವಾಸಿಗಳ ಜೊತೆ ನಿಂತು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇವೆ.

ಗೌರವಾನ್ವಿತ ಸ್ಪೀಕರ್ ಅವರೇ,

ಬಡತನ ನಿವಾರಣೆಗೆ ಸಂಬಂಧಿಸಿ ಅನೇಕ ಅಂಕಿ ಅಂಶಗಳನ್ನು ಸದನದಲ್ಲಿ ಉಲ್ಲೇಖಿಸಲಾಯಿತು. ಆದರೆ ಒಂದು ಸಂಗತಿಯನ್ನು ಮರೆಯಲಾಯಿತು. ದೇಶದ ಬಡವರು ಅವರ ಕಲ್ಯಾಣಕ್ಕಾಗಿ ಕೆಲಸ ಮಾಡಿದರೆ ಯಾವುದೇ ಸರಕಾರವನ್ನು ಕಿತ್ತೊಗೆಯುವಷ್ಟು ವಿಶ್ವಾಸ ಘಾತುಕರಲ್ಲ. ಇದು ದೇಶದ ಬಡವರ ಪದ್ಧತಿ, ಕ್ರಮ ಅಲ್ಲ. ನೀವು ಘೋಷಣೆಗಳ ಮೂಲಕ ಬಡವರನ್ನು ನಿಮ್ಮ ಹಿಡಿತದಲ್ಲಿ ಬಂಧಿಯಾಗಿರಿಸಿಕೊಳ್ಳಬಹುದು ಎಂದು  ನೀವು ಊಹಿಸಿಕೊಂಡದ್ದು ನಿಮ್ಮ ಸ್ಥಿತಿಗೆ ಕಾರಣ. ಆದರೆ ಬಡವರು ಎಚ್ಚೆತ್ತುಕೊಂಡಿದ್ದಾರೆ. ಬಡವರು ನಿಮ್ಮನ್ನು ಗುರುತಿಸಿದ್ದಾರೆ. ದೇಶದ ಬಡವರು ನಿಮ್ಮನ್ನು 44 ಸ್ಥಾನಗಳೊಳಗೆ ಬಂಧಿಸಿಡುವಷ್ಟು ಪ್ರಜ್ಞಾವಂತರಾಗಿದ್ದಾರೆ. ಕಾಂಗ್ರೆಸ್ಸು 1971 ರಿಂದಗರೀಬಿ ಹಟಾವೋಘೋಷಣೆಯ ಮೂಲಕ ಚುನಾವಣೆಗಳನ್ನು ಗೆಲ್ಲುತ್ತಲೇ ಬಂದಿದೆ. 40 ವರ್ಷಗಳ ಬಳಿಕವೂ ಬಡತನ ತೊಲಗಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಹೊಸ ವ್ಯಾಖ್ಯಾನ ನೀಡಿತು

ಗೌರವಾನ್ವಿತ ಸ್ಪೀಕರ್ ಅವರೇ,

ಸಂಗತಿಗಳು ದೇಶದ ಯುವಜನತೆಗೆ ತಿಳಿಯುವುದು ಬಹಳ ಮುಖ್ಯ ಮತ್ತು ಮಾನ್ಯ ಸ್ಪೀಕರ್ ಅವರೇ, ಅವರು ಬಹಳ ಬಲವಾದ ಹೊಡೆತ ತಿನ್ನುತ್ತಾರೆ ಎಂಬುದು ಗೊತ್ತಾದಾಗ ಅವರು ಅಸ್ತವ್ಯಸ್ತ ಮಾಡುತ್ತಾರೆ. ಇಂದು ಅವರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಎಂಬುದು ಅವರಿಗೆ ತಿಳಿದಿತ್ತು. ಕೆಲವರು ತಮ್ಮ ಭಾಷಣದ ಬಳಿಕ ಸದನದಿಂದ ಓಡಿ ಹೋದರು ಮತ್ತು ಅವರ ಬಡಪಾಯಿ ಸಹೋದ್ಯೋಗಿಗಳು ಅದರ ಹೊಡೆತವನ್ನು ಸಹಿಸಬೇಕಾಗಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

40 ವರ್ಷಗಳ ಬಳಿಕವೂ ಬಡತನ ತೊಲಗಲಿಲ್ಲ, ಆದರೆ ಬಡವರು ಕಾಂಗ್ರೆಸ್ಸನ್ನು ತೊಲಗಿಸಿದರು. ಮತ್ತು ಕಾಂಗ್ರೆಸ್ ಏನು ಮಾಡಿತು?, ಗೌರವಾನ್ವಿತ ಸ್ಪೀಕರ್ ರೇ, ಕಾಂಗ್ರೆಸ್ ಬಡತನದ ವ್ಯಾಖ್ಯೆಯನ್ನು ಬದಲಾಯಿಸಿತು. 2013 ರಲ್ಲಿ ಒಂದೇ ಗೆರೆಯಲ್ಲಿ 17 ಕೋಟಿ ಬಡ ಜನರನ್ನು ಕಾಗದದ ಮೇಲೆ ಶ್ರೀಮಂತರನ್ನಾಗಿಸಿತು. ದೇಶದ ಯುವಜನತೆ ಸತ್ಯವನ್ನು ಅರಿಯಬೇಕು. ನಾನು ಒಂದು ಉದಾಹರಣೆಯನ್ನು ಕೊಡುತ್ತೇನೆ. ನಿಮಗೆ ಗೊತ್ತಿರಬಹುದು, ಮೊದಲು ರೈಲ್ವೇಯಲ್ಲಿ ಮೊದಲ ದರ್ಜೆ, ಎರಡನೇ ದರ್ಜೆ ಮತ್ತು ಮೂರನೇ ದರ್ಜೆ (ಬೋಗಿಗಳು) ಇದ್ದವು. ಮೊದಲ ದರ್ಜೆಗೆ ಒಂದು ಗೆರೆಯನ್ನು  (ಬೋಗಿಗಳ ಬಾಗಿಲಿನಹತ್ತಿರ ಎಳೆಯಲಾಗುತ್ತಿತ್ತು. ಎರಡನೇ ದರ್ಜೆಗೆ ಎರಡು ಗೆರೆಗಳನ್ನು ಎಳೆಯಲಾಗುತ್ತಿತ್ತು. ಮತ್ತು ಮೂರನೇ ದರ್ಜೆಗೆ ಮೂರು ಗೆರೆಗಳನ್ನು ಎಳೆಯಲಾಗುತ್ತಿತ್ತು. ಮೂರನೇ ದರ್ಜೆಯ ಸಂದೇಶ ಸರಿಯಾದುದಲ್ಲ ಎಂದವರು ಭಾವಿಸಿದರು, ಹಾಗಾಗಿ ಅವರು ಒಂದು ಗೆರೆಯನ್ನು ತೆಗೆದು ಹಾಕಿದರು. ಇದು ಅವರ ವಿಧಾನಗಳು ಮತ್ತು ಬಡತನ ತೊಲಗಿದೆ ಎಂದು ಅವರು ಭಾವಿಸುತ್ತಾರೆ. ಎಲ್ಲಾ ಮೂಲಭೂತ ಮಾನದಂಡಗಳನ್ನು ಬದಲಾಯಿಸುವ ಮೂಲಕ ಅವರು ಹೇಳಿದರು, 17 ಕೋಟಿ ಜನರನ್ನು ಬಡವರೆಂದು ಲೆಕ್ಕ ಹಾಕಲಾಗದು ಎಂದು. ಅವರು ಅಂಕಿ ಅಂಶಗಳನ್ನು ರೀತಿಯಲ್ಲಿ ಬದಲಾಯಿಸುವಲ್ಲಿ ಕಾರ್ಯನಿರತರಾಗಿದ್ದಾರೆ.

ಗೌರವಾನ್ವಿತ ಸ್ಪೀಕರ್ ಅವರೇ,

ಕೆಲವು ಮೂಲ ವಿಷಯಗಳನ್ನು ಇಲ್ಲಿ ಎತ್ತಲು ಪ್ರಯತ್ನಗಳನ್ನು ಮಾಡಲಾಯಿತು. ಬಹಳ ಕಷ್ಟದಿಂದ ಇದನ್ನು ಅರ್ಥ ಮಾಡಿಕೊಳ್ಳಲು ನಾನು ಪ್ರಯತ್ನಪಟ್ಟೆ. ಬೇರೆ ಯಾರಿಗಾದರೂ ಅರ್ಥ ಆಗಿರಬಹುದು. ಆದರೆ ನನಗಾರೂ ಸಿಕ್ಕಿಲ್ಲ. ಆದರೆ ಯಾರಿಗಾದರೂ ಅರ್ಥ ಆಗಿದ್ದರೆ, ನಾನು ಅರ್ಥ ಮಾಡಿಕೊಳ್ಳಲು ತಯಾರಾಗಿದ್ದೇನೆ. ಗೌರವಾನ್ವಿತ ಸ್ಪೀಕರ್ ಅವರೇ ಸದನದಲ್ಲಿ ರಾಷ್ಟ್ರದ ಬಗ್ಗೆ ಪ್ರಸ್ತಾಪಿಸಲಾಯಿತು. ಇವುಗಳು ಆಶ್ಚರ್ಯಕರವಾದಂತಹವು. ನಾನು ಇನ್ನಷ್ಟು ಮಾತನಾಡುವುದಕ್ಕೆ ಮೊದಲು ನಾನು ಒಂದು ಸಂಗತಿಯನ್ನು ಪುನರುಚ್ಚರಿಸಲು ಬಯಸುತ್ತೇನೆ. ಮತ್ತು ನಾನು ಉಲ್ಲೇಖಿಸುತ್ತೇನೆ

ಬೆಂಗಾಲಿಗಳು, ಮರಾಠಾರು, ಗುಜರಾತಿಗಳು, ತಮಿಳರು, ಆಂಧ್ರದವರು, ಒರಿಯಾದವರು, ಅಸ್ಸಾಮೀಯರು, ಕೆನರಾದವರು, ಮಲಯಾಳಿಗಳು, ಸಿಂಧಿಗಳುಪಂಜಾಬಿಗಳು, ಪಠಾಣರು, ಕಾಶ್ಮೀರಿಗಳು, ರಜಪೂತರು ಮತ್ತು ಹಿಂದೂಸ್ಥಾನಿ ಮಾತನಾಡುವ ಜನರನ್ನು ಒಳಗೊಂಡಿರುವ   ಬಹಳ ದೊಡ್ಡ ಕೇಂದ್ರೀಯ ಭಾಗದಲ್ಲಿರುವ ಜನರನ್ನುಅವರು ನೂರಾರು ವರ್ಷಗಳಿಂದ ಅವರ ನಿರ್ದಿಷ್ಟ ಗುಣ ಲಕ್ಷಣಗಳನ್ನು ಕಾಪಾಡಿಕೊಂಡಿರುವುದನ್ನು ಮತ್ತು ಅವರು ಈಗಲೂ ಹೆಚ್ಚು ಕಡಿಮೆ ಅದೇ ಸದ್ಗುಣಗಳನ್ನು ಮತ್ತು ಕೆಲವು ವೈಫಲ್ಯಗಳನ್ನು ಹೊಂದಿರುವುದನ್ನು ನೋಡುವುದು ಬಹಳ ಆಕರ್ಷಕ ಮತ್ತು ಎಲ್ಲಾ ಕಾಲದಲ್ಲಿಯೂ ಅದೇ ರಾಷ್ಟ್ರೀಯ ಪರಂಪರೆ ಮತ್ತು ಅದೇ ನೈತಿಕ ಹಾಗು ಮಾನಸಿಕ ಗುಣಗಳೊಂದಿಗೆ ಸ್ಪಷ್ಟವಾಗಿ ಭಾರತೀಯರಾಗಿರುವುದನ್ನೂ ದಾಖಲೆ ಹೇಳುತ್ತದೆ

ಗೌರವಾನ್ವಿತ ಸ್ಪೀಕರ್ ಅವರೇ,

ಭಾರತೀಯರ ಗುಣವನ್ನು ವಿವರಿಸುವ ಎರಡು ಶಬ್ದಗಳು ಉದ್ಧೃತ ಪಂಕ್ತಿಯಲ್ಲಿವೆ, ಅದನ್ನು ಗಮನಿಸಬೇಕಾಗಿದೆ-“ರಾಷ್ಟ್ರೀಯ ಪರಂಪರೆಮತ್ತು ಉದ್ಧೃತ ಭಾಗ ಪಂಡಿತ್ ನೆಹರೂ ಅವರ ಪುಸ್ತಕ  “ಭಾರತ್ ಕಿ ಖೋಜ್ನಲ್ಲಿದೆ. ನಮ್ಮ ರಾಷ್ಟ್ರೀಯ ಪರಂಪರೆ ಒಂದೇನಮ್ಮ ನೈತಿಕ ಮತ್ತು ಮಾನಸಿಕ ಗುಣಮಟ್ಟಗಳೂ  ಒಂದೇ ಆಗಿವೆ. ಇದು ರಾಷ್ಟ್ರ ಇಲ್ಲದಿದ್ದರೆ ಸಾಧ್ಯವೇ?”. ಸದನಕ್ಕೆ ಅವಮಾನ ಮಾಡುವ ರೀತಿಯಲ್ಲಿರಾಷ್ಟ್ರಎಂಬ ಶಬ್ದ ನಮ್ಮ ಸಂವಿಧಾನದಲ್ಲಿ ಕಾಣಸಿಗುವುದಿಲ್ಲ ಎಂದು ಹೇಳಲಾಯಿತು. ಸಂವಿಧಾನದ ಪೀಠಿಕೆಯಲ್ಲಿಯೇರಾಷ್ಟ್ರಎಂಬ ಶಬ್ದವಿದೆ. ಹಾಗಿರುವಾಗ ಅದು ಅಲ್ಲಿಲ್ಲದೇ ಇರುವುದು ಹೇಗೆ ಸಾಧ್ಯ?. ಇದಕ್ಕೆ ಕಾಂಗ್ರೆಸ್ ಯಾಕೆ ಅವಮಾನ ಮಾಡುತ್ತಿದೆ?. ನಾನು ನನ್ನ ಚಿಂತನೆಯನ್ನು ವಿವರವಾಗಿ ಹಂಚಿಕೊಳ್ಳುತ್ತೇನೆ.

ಗೌರವಾನ್ವಿತ ಸ್ಪೀಕರ್ ಅವರೇ,

ರಾಷ್ಟ್ರಎಂದರೆ ಅಧಿಕಾರದ ಅಥವಾ ಸರಕಾರದ ವ್ಯವಸ್ಥೆ ಅಲ್ಲ. ಗೌರವಾನ್ವಿತ ಸ್ಪೀಕರ್ ಅವರೇ, “ರಾಷ್ಟ್ರಎಂದರೆ ನಮಗದು ಜೀವಂತ ಆತ್ಮ. ಮತ್ತು ದೇಶವಾಸಿಗಳು ಸಾವಿರಾರು ವರ್ಷಗಳಿಂದ ಇದರೊಂದಿಗೆ ಸಂಪರ್ಕ ಇರಿಸಿಕೊಂಡು ಹೋರಾಡುತ್ತ ಬಂದಿದ್ದಾರೆ. ವಿಷ್ಣು ಪುರಾಣದಲ್ಲಿ  ಬರೆಯಲಾಗಿದೆ ಮತ್ತು ಅದನ್ನು ಯಾವ ಪಕ್ಷವೂ ಬರೆದುದಲ್ಲ.-

उत्‍तरम यश समुदक्षय हिमावरे चरु दक्षिणम

वर्षतत भारतम नाम भारत यत्र संतित

ಅಂದರೆ, ಸಮುದ್ರದ ಉತ್ತರಕ್ಕೆ ಇರುವ ದೇಶ ಮತ್ತು ಹಿಮಾಲಯದ ದಕ್ಷಿಣಕ್ಕೆ ಇರುವ ನಾಡು  ಭಾರತ ಮತ್ತು ಅದರ ಮಕ್ಕಳು ಭಾರತೀಯರೆಂದು ಕರೆಯಲ್ಪಡುತ್ತಾರೆ. ವಿಷ್ಣು ಪುರಾಣದ ಪದ್ಯ ಪಂಕ್ತಿ ಕಾಂಗ್ರೆಸ್ಸಿನ ಜನರಿಗೆ ಒಪ್ಪಿತವಲ್ಲದಿದ್ದರೆ, ಆಗ ನಾನು ಇನ್ನೊಂದು ಉಲ್ಲೇಖವನ್ನು ಉದಾಹರಿಸುತ್ತೇನೆ, ಯಾಕೆಂದರೆ ನಿಮಗೆ ಕೆಲವು ವಿಷಯಗಳ ಬಗ್ಗೆ ಅಲರ್ಜಿ ಇದೆ. ನಾನು ಉಲ್ಲೇಖಿಸುತ್ತೇನೆ: “ ಒಂದು ಸಂದರ್ಭ ಬಂದಾಗ, ಅಂತಹದು ಚರಿತ್ರೆಯಲ್ಲಿ ಬಹಳ ವಿರಳವಾಗಿ ಬರುತ್ತದೆ, ನಾವು ಹಳೆಯದರಿಂದ ಹೊಸತಿಗೆ ಹೋಗುವಾಗವಯಸ್ಸು ಕೊನೆಗೊಂಡಾಗ  ಮತ್ತು ದೇಶದ ಆತ್ಮವು ಬಹಳ ದೀರ್ಘ ಕಾಲದಿಂದ ದಮನಿಸಲ್ಪಟ್ಟಿದ್ದರೆ ಆಗ ಅದೂ ಅಬ್ಬರಿಸತೊಡಗುತ್ತದೆಇವುಗಳು ಕೂಡಾ ನೆಹರೂ ಜೀ ಅವರ ಮಾತುಗಳು. ಅಷ್ಟಾಗಿಯೂ ನೆಹರೂ ಜೀ ಅವರು ಹೇಳುತ್ತಿರುವ ದೇಶ ಯಾವುದು?. 

ಗೌರವಾನ್ವಿತ ಸ್ಪೀಕರ್ ಅವರೇ,

ತಮಿಳು ಭಾವನೆಯನ್ನು ಉದ್ದೀಪಿಸಲು ಮತ್ತು ಕೆರಳಿಸಲು ಇಲ್ಲಿ ಬಹಳ ಪ್ರಯತ್ನಗಳನ್ನು ಮಾಡಲಾಯಿತು. ಬ್ರಿಟಿಷರ ಆಡಳಿತದಲ್ಲಿಯೇ ರಾಜಕೀಯಕ್ಕಾಗಿ ಕಾಂಗ್ರೆಸ್ಸಿನ ಸಂಪ್ರದಾಯ ಏನು ಎಂಬುದು ಗೊತ್ತಾಗಿದೆ. “ಒಡೆದು ಆಳುನೀತಿ ಅದು. ಆದರೆ ಇಂದು ನಾನು ಇಲ್ಲಿ ತಮಿಳಿನ ಬಹಳ ಶ್ರೇಷ್ಟ ಕವಿ ಮತ್ತು ಸ್ವಾತಂತ್ರ್ಯಹೋರಾಟಗಾರ ಸುಬ್ರಮಣ್ಯ ಭಾರತಿ ಬರೆದಿರುವುದನ್ನು ಪುನರುಚ್ಛರಿಸಲು ಬಯಸುತ್ತೇನೆನನ್ನ ಉಚ್ಚರಣೆಯಲ್ಲಿ ದೋಷಗಳೇನಾದರೂ ಇದ್ದರೆ ತಮಿಳು ಮಾತನಾಡುವ ಜನರು ನನ್ನನ್ನು ಕ್ಷಮಿಸುತ್ತಾರೆ ಎಂದು ಭಾವಿಸುತ್ತೇನೆ. ಆದರೆ ನನ್ನ ಗೌರವದಲ್ಲಿ ಮತ್ತು ಭಾವನೆಗಳಲ್ಲಿ ಯಾವುದೇ ದೋಷ, ಕೊರತೆ ಇಲ್ಲ. ಸುಬ್ರಮಣ್ಯ ಭಾರತಿ ಅವರು ಹೇಳಿದ್ದಾರೆ-

मनुम इमये मले एंगल मले, पनरुम उपनिक नुलेंगल दुले

पारमिसे एदोरू नुलइदहू पोले, पोनेरो भारत नाडेंगन नाड़े

पोडरूओम इते इम्‍मकिलेड़े

ಅವರು ತಮಿಳು ಭಾಷೆಯಲ್ಲಿ ಏನು ಹೇಳಿದ್ದಾರೆ ಎಂಬುದನ್ನು ನಾನು ಭಾಷಾಂತರಿಸುತ್ತೇನೆ.:

ವಿವರಣಾತ್ಮಕ ಉಪನಿಷತ್ತುಗಳು ನಮ್ಮ ಅಮೂಲ್ಯ  ಭಂಡಾರ

ಇಡೀ ಜಗತ್ತಿನಲ್ಲಿಯೇ ಪ್ರಮಾಣದ ಕೃತಿಗಳು ಇಲ್ಲ.

ಓಹ್, ಸುವರ್ಣ ಭಾರತ ನಿಜವಾಗಿಯೂ ನಮ್ಮದೇ ಭೂಮಿ

ನಮ್ಮ ಭೂಮಿಯನ್ನು ಕೊಂಡಾಡಿ, ನಮ್ಮದು  ಹೋಲಿಕೆಗೆ ನಿಲುಕದ ಗುರುತಿಸುವಿಕೆ.!!

ಇದು ಸುಬ್ರಮಣ್ಯ ಭಾರತಿ ಜೀ ಅವರ ಕವನದ ಸಾರ. ನಾನು ಇಂದು ತಮಿಳುನಾಡಿನ ಸರ್ವ ನಾಗರಿಕರಿಗೂ ನಮಿಸಲು ಬಯಸುತ್ತೇನೆ.

ನಮ್ಮ ಸಿ.ಡಿ.ಎಸ್. ರಾವತ್ ದಕ್ಷಿಣದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅವಘಡದಲ್ಲಿ ಇದ್ದಕ್ಕಿದ್ದಂತೆ ಹುತಾತ್ಮರಾದಾಗ ಮತ್ತು ಅವರ ಮೃತ ದೇಹವನ್ನು ತಮಿಳುನಾಡಿನಲ್ಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯುತ್ತಿರುವಾಗ ಲಕ್ಷಾಂತರ ತಮಿಳು ಸಹೋದರರು ಮತ್ತು ಸಹೋದರಿಯರು ರಸ್ತೆಗಳಲ್ಲಿ ಗಂಟೆಗಳ ಕಾಲ ಸರತಿಯಲ್ಲಿ ನಿಂತಿದ್ದರು. ಅವರು ಸುದ್ದಿಗಾಗಿ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುತ್ತ ನಿಂತಿದ್ದರು. ಮತ್ತು ಸಿ.ಡಿ.ಎಸ್. ರಾವತ್ ಅವರ ಮೃತದೇಹ ಕೊಂಡೊಯ್ಯುವಾಗ ಪ್ರತಿಯೊಬ್ಬ ತಮಿಳರೂ ತಮ್ಮ ಕೈಗಳನ್ನು ಹೆಮ್ಮೆಯಿಂದ ಮೇಲೆತ್ತಿ ತಮ್ಮ ಕಣ್ಣುಗಳಲ್ಲಿ  ನೀರು ತುಂಬಿಕೊಂಡುವೀರ ವಣಕ್ಕಂ, ವೀರ ವಣಕ್ಕಂ ಘೋಷಣೆಗಳನ್ನು ಕೂಗುತ್ತಿದ್ದರು. ಇದು ನನ್ನ ದೇಶ. ಆದರೆ ಕಾಂಗ್ರೆಸ್ಸು ಸದಾ ಸಂಗತಿಗಳನ್ನು ಕಡೆಗಣಿಸುತ್ತದೆ. ಅವರ ಡಿ.ಎನ್..ಯಲ್ಲಿ ವಿಭಜಕ ಮನೋಸ್ಥಿತಿ ಬೇರೂರಿದೆ. ಬ್ರಿಟಿಷರು ಹೊರಟು ಹೋಗಿದ್ದಾರೆ, ಆದರೆ ಕಾಂಗ್ರೆಸ್ಸು ಮಾತ್ರಒಡೆದು ಆಳುಎಂಬ ನೀತಿಯನ್ನು ತನ್ನ ಗುಣನಡತೆಯ ನೀತಿಯನ್ನಾಗಿ ಮಾಡಿಕೊಂಡಿದೆ. ಮತ್ತು ಅದರಿಂದಾಗಿಯೇ ಕಾಂಗ್ರೆಸ್ ಇಂದುತುಕ್ಡೆತುಕ್ಡೆತಂಡದ ನಾಯಕನಾಗಿದೆ.

ಗೌರವಾನ್ವಿತ ಸ್ಪೀಕರ್ ಅವರೇ,

ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ನಮ್ಮನ್ನು ತಡೆದು ನಿಲ್ಲಿಸಲು ಸಾಧ್ಯವಾಗದವರು ಈಗ ಅಶಿಸ್ತಿನ ಕೃತ್ಯಗಳ ಮೂಲಕ ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರದರಲ್ಲಿ ಯಶಸ್ವಿಯಾಗಲಾರರು

ಗೌರವಾನ್ವಿತ ಸ್ಪೀಕರ್ ಅವರೇ,

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಮರಳುವ ಯಾವುದೇ ಆಶಯ ಇಲ್ಲ. ಅವರಿಗೆ ಸಾಧಿಸಲು ಸಾಧ್ಯವಿಲ್ಲದ್ದರಿಂದ ಪ್ರತಿಯೊಂದಕ್ಕೂ ಅಡ್ಡಿ  ಮಾಡುವ  ನಿರಾಶಾಭಾವದ ಮನೋಭೂಮಿಕೆ ಅವರದಾಗಿದೆ. ಆದರೆ ಅತ್ಯಾಸೆಯಲ್ಲಿ ಅವರು ದೇಶದಲ್ಲಿ ವಿಭಜನವಾದಿ ಶಕ್ತಿಗಳನ್ನು ಬಲಪಡಿಸುವ ಬೀಜಗಳನ್ನು ಬಿತ್ತುತ್ತಿದ್ದಾರೆ. ಸದನದಲ್ಲಿ ಹಲವಾರು ವಿಷಯಗಳನ್ನು ಮಾತನಾಡಲಾಗಿದೆ ಮತ್ತು ದೇಶದ ಕೆಲವು ಜನರನ್ನು ಪ್ರಚೋದಿಸುವುದಕ್ಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರತೀ ಕಾರ್ಯ ಮತ್ತು ಚಟುವಟಿಕೆಗಳನ್ನು ನಾವು ನಿಕಟವಾಗಿ ಗಮನಿಸಿದರೆ ಅವರ ಆಟದ ಸೂತ್ರ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಮತ್ತು ಅದನ್ನೇ ನಾನಿವತ್ತು ಹೊರಗೆಡಹುತ್ತಿದ್ದೇನೆ.

ಗೌರವಾನ್ವಿತ ಸ್ಪೀಕರ್ ಅವರೇ

ನಿಮ್ಮ ಆಟದ ಸೂತ್ರ ಏನೇ ಆಗಿರಲಿ, ಅಂತಹ ಹಲವಾರು ಮಂದಿ ಬಂದಿದ್ದಾರೆ ಮತ್ತು ಹೋಗಿದ್ದಾರೆ. ಸ್ವಾರ್ಥದ ಕಾರಣಕ್ಕಾಗಿ ಲಕ್ಷಾಂತರ ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ದೇಶ ಶಾಶ್ವತ, ದೇಶಕ್ಕೆ ಏನೂ ಆಗಲಾರದು. ಅಂತಹ ಪ್ರಯತ್ನಗಳನ್ನು ಮಾಡುತ್ತಿರುವವರು ಎಲ್ಲಾ ಸಂದರ್ಭಗಳಲ್ಲಿಯೂ ಒಂದಲ್ಲ ಒಂದನ್ನು ಕಳೆದುಕೊಂಡಿದ್ದಾರೆ. ದೇಶ ಒಂದು ಎಂಬ ನಂಬಿಕೆಯೊಂದಿಗೆ, ಅತ್ಯುತ್ತಮವಾಗಿತ್ತು, ದೇಶ ಒಂದಾಗಿ ದೇಶ ಅತ್ಯುತ್ತಮವಾಗಿ ಉಳಿಯುತ್ತದೆ ಎಂಬ ನಂಬಿಕೆಯೊಡನೆ ನಾವು ಮುಂದೆ ಸಾಗುತ್ತೇವೆ.

ಗೌರವಾನ್ವಿತ ಸ್ಪೀಕರ್ ಅವರೇ

ಕರ್ತವ್ಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಆಕ್ಷೇಪವನ್ನು ಎತ್ತಲಾಗಿದೆ. ದೇಶದ ಪ್ರಧಾನ ಮಂತ್ರಿ ಕರ್ತವ್ಯದ ಬಗ್ಗೆ ಯಾಕೆ ಮಾತನಾಡುತ್ತಾರೆ ಎಂಬುದು ಕೆಲ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಚಾರದ ಮುಂಚೂಣಿಯಲ್ಲಿರುವುದಕ್ಕಾಗಿ ತಿಳುವಳಿಕೆ ರಹಿತವಾಗಿ ಅಥವಾ ದುರುದ್ದೇಶದಿಂದಾಗಿ ಕೆಲವು ಜನರು ವಿವಾದವನ್ನು ಉಂಟು ಮಾಡುತ್ತಾರೆ. ಕಾಂಗ್ರೆಸ್ಸಿಗೆ ಇದ್ದಕ್ಕಿದ್ದಂತೆ ಕರ್ತವ್ಯದ ಬಗ್ಗೆ ಚಿವುಟಿದಂತಹ ಭಾವನೆ ಆರಂಭವಾಗಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ.

ಗೌರವಾನ್ವಿತ ಸ್ಪೀಕರ್ ಅವರೇ

ನೀವು ಆಗಾಗ ಹೇಳುತ್ತಿರುತ್ತೀರಿ, ಮೋದಿ ಅವರು ನೆಹರೂ ಜೀ ಅವರ ಹೆಸರು ಉಲ್ಲೇಖಿಸುವುದಿಲ್ಲ ಎಂಬುದಾಗಿ, ಆದುದರಿಂದ ಇಂದು ನಾನು ನಿಮ್ಮ ಆಶಯಗಳನ್ನು ಈಡೇರಿಸುತ್ತಿದ್ದೇನೆ. ನೋಡಿ, ಕರ್ತವ್ಯಗಳ ಬಗ್ಗೆ ನೆಹರೂ ಜೀ ಏನು ಹೇಳಿದ್ದರು ಎಂಬುದನ್ನು.ನಾನವರನ್ನು ಉಲ್ಲೇಖಿಸುತ್ತೇನೆ

ಗೌರವಾನ್ವಿತ ಸ್ಪೀಕರ್ ಅವರೇ

ಪಂಡಿತ್ ನೆಹರೂ ಜೀ, ದೇಶದ  ಮೊದಲ ಪ್ರಧಾನ ಮಂತ್ರಿಗಳು ಹೇಳಿದ್ದಾರೆ: “ನಾನು ಮತ್ತೆ ನಿಮಗೆ ಹೇಳುತ್ತೇನೆ. ಅಲ್ಲಿ ಸ್ವತಂತ್ರ ಹಿಂದೂಸ್ತಾನ ಇದೆ. ನಾವು ಹಿಂದೂಸ್ಥಾನದ ಸ್ವಾತಂತ್ರ್ಯವನ್ನು ಆಚರಿಸುತ್ತೇವೆ, ಆದರೆ ಸ್ವಾತಂತ್ರ್ಯ ಜವಾಬ್ದಾರಿಯನ್ನೂ ಹೊರಿಸುತ್ತದೆಮತ್ತು ಇನ್ನೊಂದು ಮಾತುಗಳಲ್ಲಿ ಹೇಳುವುದಾದರೆ ಕರ್ತವ್ಯವೇ ಜವಾಬ್ದಾರಿ. ಯಾರಿಗಾದರೂ ಇದು ಅರ್ಥವಾಗಬೇಕಿದ್ದರೆ ನಾನವರಿಗೆ ಅರ್ಥ ಮಾಡಿಸುತ್ತೇನೆ. ಇನ್ನೊಂದು ಮಾತುಗಳಲ್ಲಿ ಹೇಳುವುದಾದರೆ ಕರ್ತವ್ಯವನ್ನು ಜವಾಬ್ದಾರಿ ಎಂದು ಕರೆಯಲಾಗುತ್ತದೆ. ಈಗ ಉದ್ದೃತ ಮಾತುಗಳು ಪಂಡಿತ್ ನೆಹರೂ ಅವರವು-“ನಾನು ನಿಮಗೆ ಮತ್ತೊಮ್ಮೆ ಹೇಳುತ್ತೇನೆ ಅಲ್ಲಿ ಸ್ವತಂತ್ರ ಹಿಂದೂಸ್ಥಾನವಿದೆ. ನಾವು ಹಿಂದೂಸ್ಥಾನದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ.ಆದರೆ ಸ್ವಾತಂತ್ರ್ಯದೊಂದಿಗೆ ಜವಾಬ್ದಾರಿಯೂ ಉದ್ಭವಿಸುತ್ತದೆ. ಜವಾಬ್ದಾರಿ ಸರಕಾರದ ಮೇಲೆ ಮಾತ್ರವೇ ಇರುವುದಲ್ಲ. ಅದು ಪ್ರತಿಯೊಬ್ಬ ಸ್ವತಂತ್ರ ವ್ಯಕ್ತಿಯ ಮೇಲೂ ಇರುತ್ತದೆ. ನಿಮಗೆ ಜವಾಬ್ದಾರಿ  ಅರ್ಥವಾಗದಿದ್ದರೆ, ಆಗ ನಿಮಗೆ ಸ್ವಾತಂತ್ರ್ಯದ ಪೂರ್ಣ ಅರ್ಥ ಗೊತ್ತಾಗಿಲ್ಲ ಮತ್ತು ನೀವು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲಾರಿರಿ”.  ಇದು ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ನೆಹರೂ ಜೀ ಕರ್ತವ್ಯಗಳ ಬಗ್ಗೆ ಹೇಳಿದ ಮಾತುಗಳು ಮತ್ತು ಅದನ್ನು ಕೂಡಾ ನೀವು ಮರೆತಿದ್ದೀರಿ.

ಗೌರವಾನ್ವಿತ ಸ್ಪೀಕರ್ ಅವರೇ

ನಾನು ಸದನದ ಇನ್ನಷ್ಟು ಸಮಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಮತ್ತು ಅವರಿಗೂ ಆಯಾಸವಾಗಿದೆ. ಗೌರವಾನ್ವಿತ ಅಧ್ಯಕ್ಷರೇ, ಅಲ್ಲೊಂದು ಹೇಳಿಕೆ ಇದೆ:

क्षणशः कणश: श्चैव विद्यामर्थं साधयेत्।

क्षणे नष्टे कुतो विद्या कणे नष्टे कुतो धनम्।।

ಅಂದರೆ, ಕಲಿಕೆಗೆ ಪ್ರತಿಯೊಂದು ಸಂದರ್ಭವೂ ಮುಖ್ಯ. ಪ್ರತಿಯೊಂದು ಸಣ್ಣ ಕಣವೂ ಸಂಪನ್ಮೂಲಕ್ಕೆ ಬಹಳ ಅವಶ್ಯಕ. ಪ್ರತಿಯೊಂದು ಕಣವನ್ನೂ ವ್ಯರ್ಥ ಮಾಡಿದರೆ ನಾವು ಜ್ಞಾನವನ್ನು ಗಳಿಸಲಾಗದು. ಮತ್ತು ಪ್ರತೀ ಕಣವನ್ನೂ ವ್ಯರ್ಥ ಮಾಡಿದರೆ, ಸಣ್ಣ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸದೇ ಇದ್ದರೆ ಆಗ ಸಂಪನ್ಮೂಲಗಳೇ ಮುಗಿದು ಹೋಗುತ್ತವೆ. ನಾನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ನೀವು ಚರಿತ್ರೆಯ ಬಹಳ ಮುಖ್ಯ ಸಂದರ್ಭವನ್ನು ಹಾಳುಗೆಡವುತ್ತಿಲ್ಲವೇ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸಿ ಎಂದು ಹೇಳಲು ಬಯಸುತ್ತೇನೆ. ನನ್ನನ್ನು ಟೀಕಿಸಲು ಅಲ್ಲಿ ಬಹಳಷ್ಟಿದೆ, ನನ್ನ ಪಕ್ಷಕ್ಕೆ ಶಾಪ ಹಾಕಲು ಬಹಳಷ್ಟಿದೆ, ಅದನ್ನು ನೀವು ಮಾಡಬಹುದು. ಮತ್ತು ಭವಿಷ್ಯದಲ್ಲಿಯೂ ನೀವದನ್ನು ಮಾಡುತ್ತಲೇ ಬರಬಹುದು, ಅಲ್ಲಿ ಅವಕಾಶಗಳಿಗೆ ಕೊರತೆ ಇರಲಾರದು. ಆದರೆ ಸ್ವಾತಂತ್ರ್ಯದ ಪುಣ್ಯಕರ ಸಂದರ್ಭದಲ್ಲಿ, 75 ವರ್ಷಗಳ ಕಾಲಘಟ್ಟ ಭಾರತದ ಅಭಿವೃದ್ಧಿಯ ಪಯಣದಲ್ಲಿ ಧನಾತ್ಮಕ ಕೊಡುಗೆಯ ಸಂದರ್ಭ. ವಿಪಕ್ಷಗಳು ಮತ್ತು ಇಲ್ಲಿ ಕುಳಿತಿರುವ ಎಲ್ಲಾ ಸಹೋದ್ಯೋಗಿಗಳಿಗೆ ಮತ್ತು ಸದನದ ಮೂಲಕ  ದೇಶವಾಸಿಗಳಿಗೆ ನನ್ನ ಮನವಿ ಏನೆಂದರೆ  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ಆತ್ಮ ನಿರ್ಭರ ಭಾರತದ ನಿರ್ಧಾರಕ್ಕಾಗಿ  ನಾವೆಲ್ಲರೂ ಒಟ್ಟಾಗೋಣ. ಕಳೆದ 75 ವರ್ಷಗಳಲ್ಲಿ ನಾವೆಲ್ಲಿ ಹಿಂದೆ ಬಿದ್ದಿದ್ದೇವೆ ಎಂಬುದನ್ನು ಅರಿತುಕೊಂಡು ಅದನ್ನು ತುಂಬಿಕೊಳ್ಳುತ್ತಾ ಹೊಸ ದೃಢ ನಿರ್ಧಾರಗಳೊಂದಿಗೆ ಮುನ್ನಡೆಯಲು, ಸ್ವಾತಂತ್ರ್ಯದ ಶತಮಾನೋತ್ಸವದ ವರ್ಷವಾದ 2047 ರೊಳಗೆ ದೇಶವನ್ನು ಹೇಗೆ ಅಭಿವೃದ್ಧಿ ಮಾಡಬೇಕು ಎಂಬುದನ್ನು ಚಿಂತಿಸುತ್ತ ದೇಶದ ಅಭಿವೃದ್ಧಿಗಾಗಿ ಒಟ್ಟಾಗಿ ದುಡಿಯೋಣ. ರಾಜಕೀಯ ಅದರಷ್ಟಕ್ಕೆ ಅದರ ಜಾಗದಲ್ಲಿ ಇರುತ್ತದೆ.ನಾವು ಪಕ್ಷದ ಭಾವುಕತೆಯಿಂದ ಹೊರಗೆ ಬಂದು ದೇಶದ ಭಾವನೆಗಳಿಗೆ ಮೊದಲಾದ್ಯತೆ ನೀಡೋಣ. ಚುನಾವಣೆಗಳಲ್ಲಿ ಏನು ಬೇಕಾದರೂ ಮಾಡಿ, ಆದರೆ ನಾವು ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮತ್ತು ಅದರಂತೆ ನಡೆಯಬೇಕು. ಇದು ನನ್ನ ನಿರೀಕ್ಷೆ. ಸ್ವಾತಂತ್ರ್ಯದ ನೂರು ವರ್ಷಗಳ ಕಾಲಘಟ್ಟದಲ್ಲಿ ಸದನದಲ್ಲಿ ಕುಳಿತಿರುವವರು ಖಂಡಿತವಾಗಿಯೂ ಅಂತಹ ಭದ್ರ ನೆಲೆಗಟ್ಟಿನ ಮೇಲಿನ ಪ್ರಗತಿಯ ಬಗೆ ಖಂಡಿತವಾಗಿಯೂ ಚರ್ಚೆ ನಡೆಸುತ್ತಾರೆ. ದೇಶವನ್ನು ಮುಂದಕ್ಕೆ ಕೊಂಡೊಯ್ಯುವಂತಹ ಆಶಯವುಳ್ಳ ಜನರ ಕೈಗೆ ದೇಶ ಹೋಗಬೇಕು. ನಮಗಿರುವ ಸಮಯವನ್ನು ನಾವು ಉತ್ತಮವಾಗಿ ಬಳಸಿಕೊಳ್ಳಬೇಕು. ನಾವು ನಮ್ಮ ಸುವರ್ಣ ಭಾರತವನ್ನು ನಿರ್ಮಾಣ ಮಾಡುವುದಕ್ಕೆ ಹಿಂಜರಿಯುವುದು ಬೇಡ. ನಮ್ಮೆಲ್ಲಾ ಇಚ್ಛಾಶಕ್ತಿಯೊಂದಿಗೆ ನಾವು ಪ್ರಯತ್ನದಲ್ಲಿ ತೊಡಗಿಕೊಳ್ಳೋಣ

ಗೌರವಾನ್ವಿತ ಸ್ಪೀಕರ್ ಅವರೇ

ನಾನು ಮತ್ತೊಮ್ಮೆ ರಾಷ್ಟ್ರಪತಿಗಳ ಭಾಷಣದ ಮೇಲಣ ವಂದನಾ ನಿರ್ಣಯವನ್ನು ಬೆಂಬಲಿಸುತ್ತೇನೆ. ಸದನದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ಗೌರವಾನ್ವಿತ ಸದಸ್ಯರಿಗೆ  ನಾನು ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನಗೆ ಮಾತನಾಡಲು ನೀವು ಅವಕಾಶ ಕೊಟ್ಟಿರುವಿರಿ ಮತ್ತು ನನಗೆ ಅಡ್ಡಿಯುಂಟು ಮಾಡಲು ಪ್ರಯತ್ನಿಸಿದಿರಿ, ಆದಾಗ್ಯೂ ನಾನು ಎಲ್ಲಾ ವಿಷಯಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದೇನೆ. ಬಹಳ ಬಹಳ ಧನ್ಯವಾದಗಳು!.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ

***


(Release ID: 1799201) Visitor Counter : 340