ಸಂಪುಟ
ಭಾರತದ ಜಿ20 ಅಧ್ಯಕ್ಷತೆ ಮತ್ತು ಸಿಬ್ಬಂದಿಗಾಗಿ ಜಿ20 ಸಚಿವಾಲಯವನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲು ಸಂಪುಟದ ಅನುಮೋದನೆ
Posted On:
15 FEB 2022 5:23PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಿ 20 ಸಚಿವಾಲಯ ಸ್ಥಾಪಿಸಲು ಮತ್ತು ಭಾರತ ಮುಂಬರುವ ಜಿ 20 ಅಧ್ಯಕ್ಷತೆ ವಹಿಸುವ ನಿಟ್ಟಿನಲ್ಲಿ ಅಗತ್ಯವಾದ ಒಟ್ಟಾರೆ ನೀತಿ ನಿರ್ಣಯಗಳು ಮತ್ತು ಸನ್ನದ್ಧತೆಗಳನ್ನು ಅನುಷ್ಠಾನಗೊಳಿಸಲಿರುವ ಅದರ ವಿವಿಧ ಪ್ರಾಧಿಕಾರಗಳ ನಡುವಿನ ಬಾಂಧವ್ಯ (ರಿಪೋರ್ಟಿಂಗ್ ಸ್ಟ್ರಕ್ಚರ್)ಕ್ಕೆ ತನ್ನ ಅನುಮೋದನೆ ನೀಡಿದೆ.
ಭಾರತವು 2022ರ ಡಿಸೆಂಬರ್ 1 ರಿಂದ 2023ರ ನವೆಂಬರ್ 30 ರವರೆಗೆ ಜಿ20ರ ಅಧ್ಯಕ್ಷತೆಯನ್ನು ವಹಿಸುತ್ತದೆ, ಇದು 2023ರಲ್ಲಿ ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಜಿ20 ಜಾಗತಿಕ ಆರ್ಥಿಕ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿದೆ.
ರೂಢಿಯ ರೀತ್ಯ, ಭಾರತದ ಜಿ20 ಅಧ್ಯಕ್ಷತೆಗಾಗಿ ವಸ್ತುನಿಷ್ಠ/ ಜ್ಞಾನ / ವಸ್ತು ವಿಷಯ, ತಾಂತ್ರಿಕತೆ, ಮಾಧ್ಯಮ, ಭದ್ರತೆ ಮತ್ತು ಸಾರಿಗೆ ಅಂಶಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಜಿ20 ಸಚಿವಾಲಯವನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ಇತರ ಸಂಬಂಧಿತ ಸಚಿವಾಲಯಗಳು / ಇಲಾಖೆಗಳು ಮತ್ತು ಈ ವಿಷಯ ಕುರಿತ ತಜ್ಞರು ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ವಹಿಸುತ್ತಾರೆ. ಫೆಬ್ರವರಿ 2024 ರವರೆಗೆ ಸಚಿವಾಲಯ ಕಾರ್ಯನಿರ್ವಹಿಸುತ್ತದೆ.
ಪ್ರಧಾನಮಂತ್ರಿ ನೇತೃತ್ವದ ಸರ್ವೋಚ್ಚ ಸಮಿತಿಯು ಸಚಿವಾಲಯಕ್ಕೆ ಮಾರ್ಗದರ್ಶನ ಮಾಡುತ್ತದೆ ಮತ್ತು ಭಾರತದ ಜಿ20 ಅಧ್ಯಕ್ಷತೆಗೆ ಒಟ್ಟಾರೆ ಮಾರ್ಗದರ್ಶನ ನೀಡಲು ಹಣಕಾಸು ಸಚಿವರು, ಗೃಹ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಜಿ20 ಶೆರ್ಪಾ (ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು) ಅವರನ್ನು ಒಳಗೊಂಡಿರುತ್ತದೆ. ಇದಲ್ಲದೆ, ಎಲ್ಲಾ ಜಿ20 ಸಿದ್ಧತೆಗಳ ಮೇಲ್ವಿಚಾರಣೆ ಮಾಡಲು ಮತ್ತು ಸರ್ವೋಚ್ಚ ಸಮಿತಿಗೆ ವರದಿ ಮಾಡಲು ಸಮನ್ವಯ ಸಮಿತಿಯನ್ನು ಸಹ ಸಚಿಸಲಾಗುವುದು. ಜಿ20 ಸಚಿವಾಲಯವು ಬಹುಪಕ್ಷೀಯ ವೇದಿಕೆಗಳಲ್ಲಿ ಜಾಗತಿಕ ವಿಷಯಗಳ ಬಗ್ಗೆ ಭಾರತದ ನಾಯಕತ್ವಕ್ಕಾಗಿ ಜ್ಞಾನ ಮತ್ತು ಪರಿಣತಿಯನ್ನು ಒಳಗೊಂಡಂತೆ ದೀರ್ಘಾವಧಿಯ ಸಾಮರ್ಥ್ಯ ನಿರ್ಮಾಣವನ್ನು ಸಕ್ರಿಯಗೊಳಿಸುತ್ತದೆ.
***
(Release ID: 1798566)
Visitor Counter : 260
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam