ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
"ಆಜಾದಿ ಕಾ ಅಮೃತ್ ಮಹೋತ್ಸವ"ದ ಭಾಗವಾಗಿ ನವೀಕರಿಸಬಹುದಾದ ಇಂಧನದ ಬಗ್ಗೆ "ಹೊಸ ಸೀಮಾ ರೇಖೆಗಳು" ಕಾರ್ಯಕ್ರಮವನ್ನು ಆಯೋಜಿಸಲಿರುವ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ವಿದ್ಯಾರ್ಥಿಗಳು ಮತ್ತು ಚಿಂತಕರ ಚಾವಡಿಯೊಂದಿಗೆ ಸಂವಹನ ನಡೆಸಲಿರುವ ವಿದ್ಯುತ್ ಮತ್ತು ಎಂಎನ್‌ಆರ್‌ಇ ಸಚಿವರು
ತಮ್ಮ ʼಇಂಧನ ಬದ್ಧತೆʼಗಳನ್ನು (ಎನರ್ಜಿ ಕಾಂಪ್ಯಾಕ್ಟ್) ಸಲ್ಲಿಸಿದ ಉದ್ಯಮ ಪ್ರಮುಖರನ್ನು ಸನ್ಮಾನಿಸಲಾಗುವುದು
ನವೀಕರಿಸಬಹುದಾದ ಇಂಧನದ ವಿವಿಧ ಅಂಶಗಳ ಬಗ್ಗೆ ವೆಬಿನಾರ್‌ಗಳು, ಚರ್ಚೆಗಳು ಮತ್ತು ಚಿಂತನಾ ಸಭೆಗಳನ್ನು ಸಚಿವಾಲಯ ಆಯೋಜಿಸಲಿದೆ
Posted On:
15 FEB 2022 10:27AM by PIB Bengaluru
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ʻಆಜಾದಿ ಕಾ ಅಮೃತ್ ಮಹೋತ್ಸವʼ ಆಚರಣೆಯ ಭಾಗವಾಗಿ ನವೀಕರಿಸಬಹುದಾದ ಇಂಧನದ ಬಗ್ಗೆ "ಹೊಸ ಸೀಮಾ ರೇಖೆಗಳು" ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು 2022ರ ಫೆಬ್ರವರಿ 16ರಿಂದ 18ರವರೆಗೆ ನಡೆಯಲಿದೆ.
ಈ ಕಾರ್ಯಕ್ರಮದ ಭಾಗವಾಗಿ, ಸಚಿವಾಲಯವು 2022ರ ಫೆಬ್ರವರಿ 16 ರಂದು ವಿಜ್ಞಾನ ಭವನದಲ್ಲಿ "ಇಂಧನ ಸ್ಥಿತ್ಯಂತರದಲ್ಲಿ ಭಾರತದ ನಾಯಕತ್ವ" ಎಂಬ ಶೀರ್ಷಿಕೆಯ ವಿಷಯದ ಮೇಲೆ ಭೌತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಶ್ರೀ ಭಗವಂತ ಖುಬಾ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಭಾಷಣ ಮಾಡಲಿದ್ದಾರೆ. ʻಇಂಧನ ಬದ್ಧತೆʼಯ(ಎನರ್ಜಿ ಕಾಂಪ್ಯಾಕ್ಟ್) ಮುಖ್ಯಾಂಶಗಳನ್ನು ಒಳಗೊಂಡಂತೆ "ನಾಗರಿಕ ಕೇಂದ್ರಿತ ಇಂಧನ ಸ್ಥಿತ್ಯಂತರ – ಭಾರತದ ಯಶೋಗಾಥೆ” ಕುರಿತ ವೀಡಿಯೊವನ್ನು ಪ್ಲೇ ಮಾಡಲಾಗುತ್ತದೆ. ಆ ನಂತರ ಕೇಂದ್ರ ವಿದ್ಯುತ್ ಮತ್ತು ಎಂಎನ್ ಆರ್ ಇ ಸಚಿವ ಶ್ರೀ ಆರ್.ಕೆ.ಸಿಂಗ್ ಅವರೊಂದಿಗೆ ಸಂವಾದ ನಡೆಯಲಿದೆ. ಬಳಿಕ ವಿದ್ಯಾರ್ಥಿಗಳು ಮತ್ತು ಚಿಂತಕರ ಚಾವಡಿಗಳೊಂದಿಗೆ ಪ್ರಶ್ನೋತ್ತರ ಅಧಿವೇಶನ ನಡೆಯಲಿದೆ. ತಮ್ಮ ʻಇಂಧನ ಬದ್ಧತೆʼಗಳನ್ನು(ಇಸಿ) ಸಲ್ಲಿಸಿದ ಉದ್ಯಮ ನಾಯಕರನ್ನು ಸಚಿವರು ಮತ್ತು ಸಹಾಯಕ ಸಚಿವರು ಸನ್ಮಾನಿಸಲಿದ್ದಾರೆ. ʻಎನರ್ಜಿ ಕಾಂಪ್ಯಾಕ್ಟ್ಸ್ʼ (ಇಸಿ) ಕಿರುಹೊತ್ತಿಗೆಯ ಬಿಡುಗಡೆಯೂ ಅಭಿನಂದನಾ ಕಾರ್ಯಕ್ರಮದ ಭಾಗವಾಗಿದೆ.
ಸಚಿವಾಲಯವು 2022ರ ಫೆಬ್ರವರಿ 17ರಂದು ಮೂರು ವೆಬಿನಾರ್‌ಗಳನ್ನು ಆಯೋಜಿಸಲಿದೆ, ಅವುಗಳೆಂದರೆ, "ಆರ್‌ಇ-ಕಾಲ್ ಫಾರ್ ಆಕ್ಷನ್", "ಇಂಧನ ಸ್ಥಿತ್ಯಂತರದಲ್ಲಿ ಐಎಸ್ಎ ಪಾತ್ರ", ಮತ್ತು "ಶುದ್ಧ ಮತ್ತು ಕೈಗೆಟುಕುವ ಇಂಧನವನ್ನು ಒದಗಿಸುವಲ್ಲಿ ಸ್ವಚ್ಛ-ತಂತ್ರಜ್ಞಾನ ನವೋದ್ಯಮಗಳು ಮತ್ತು ಹವಾಮಾನ ಉದ್ಯಮಿಯ ಪಾತ್ರ".
ಕಾರ್ಯಕ್ರಮದ ಅಂತಿಮ ದಿನವಾದ 2022ರ ಫೆಬ್ರವರಿ 18ರಂದು, "2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸಲು ಮಾರ್ಗಸೂಚಿ" ಕುರಿತ ಚಿಂತನಾ ಸಭೆಯನ್ನು ವರ್ಚುವಲ್ ವೇದಿಕೆಯಲ್ಲಿ ಆಯೋಜಿಸಲಾಗುವುದು. ಈ ಕಾರ್ಯಕ್ರಮವು ʻಎಫ್‌ಐಸಿಸಿಐʼನ ಮಹಾನಿರ್ದೇಶಕರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ. ನಂತರ ಗೌರವಾನ್ವಿತ ವಿದ್ಯುತ್ ಮತ್ತು ಎನ್‌ಆರ್‌ಇ ಸಚಿವರು ಮುಖ್ಯ ಭಾಷಣ ಮಾಡಲಿದ್ದಾರೆ. ಇಂಧನ ಪರಿವರ್ತನೆ ಮತ್ತು ಶೂನ್ಯ ಹೊರಸೂಸುವಿಕೆ ಗುರಿಯ ಪ್ರಮುಖ ವಿಷಯಗಳನ್ನು ಅರ್ಥಮಾಡಿಕೊಳ್ಳಲು ʻಎಂಎನ್‌ಆರ್‌ಇ, ಎಂಒಪಿ, ʻಎಂಒಇಎಫ್‌ಸಿಸಿʼ, ಭಾರತೀಯ ರೈಲ್ವೆ, ನವೀಕರಿಸಬಹುದಾದ ಇಂಧನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ಸಾರ್ವಜನಿಕ ವಲಯದ ಉದ್ಯಮಗಳು (ಬಿಇಇ, ಎನ್‌ಟಿಪಿಸಿ, ಎಸ್‌ಇಸಿಐ, ಪಿಜಿಸಿಐಎಲ್, ಇತ್ಯಾದಿ), ಕೈಗಾರಿಕೆ ಮತ್ತು ಇತರ ಪಾಲುದಾರರನ್ನು (ಸಿಇಎ, ಸಿಇಆರ್‌ಸಿ, ಎಸ್‌ಇಆರ್‌ಸಿ, ಇತ್ಯಾದಿ) ಒಳಗೊಂಡ ಚಿಂತನಾ ಗೋಷ್ಠಿಯನ್ನೂ ನಡೆಸಲಾಗುವುದು.
***
(Release ID: 1798480)
Visitor Counter : 345