ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮೀಡಿಯಾ ಒನ್ ಚಾನೆಲ್‌ನ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಅನುಮತಿಯನ್ನು ರದ್ದುಪಡಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್

प्रविष्टि तिथि: 08 FEB 2022 2:33PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮೀಡಿಯಾ ಒನ್ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನ ಚಾನೆಲ್‌ಗೆ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಅನುಮತಿಯನ್ನು ರದ್ದುಗೊಳಿಸಿರುವುದನ್ನು ಕೇರಳ ಹೈಕೋರ್ಟ್ ಇಂದು ಎತ್ತಿಹಿಡಿದಿದೆ. ಗೃಹ ಸಚಿವಾಲಯವು ಚಾನೆಲ್‌ಗೆ ಭದ್ರತಾ ಅನುಮತಿಯನ್ನು ನಿರಾಕರಿಸಿದ ನಂತರ ಚಾನೆಲ್‌ಗೆ ನಿರ್ಬಂಧವನ್ನು ವಿಧಿಸಲಾಗಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶದ ವಿರುದ್ಧದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಚಾನೆಲ್‌ಗೆ ಗೃಹ ಸಚಿವಾಲಯದ ಭದ್ರತಾ ಅನುಮತಿ ನಿರಾಕರಣೆಯು ಗುಪ್ತಚರ ಮಾಹಿತಿಗಳನ್ನು ಆಧರಿಸಿದೆ ಎಂದು ತಿಳಿಸಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು 2022 ಜನವರಿ 31 ರಂದು ಮೀಡಿಯಾ ಒನ್ ಚಾನೆಲ್ ಅನ್ನು ನಿರ್ವಹಿಸುವ M/s ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್‌ಗೆ ನೀಡಲಾದ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಅನುಮತಿಯನ್ನು ಹಿಂತೆಗೆದುಕೊಳ್ಳುವ ಆದೇಶವನ್ನು ಹೊರಡಿಸಿದೆ. ಆದೇಶವು  ಅನುಮತಿ ನೀಡಲಾದ ಚಾನಲ್‌ಗಳ ಪಟ್ಟಿಯಿಂದ ಮೀಡಿಯಾ ಒನ್ ಚಾನಲ್‌ನ ಹೆಸರನ್ನು ತೆಗೆದುಹಾಕಿದೆ.

30.9.2011 ರಂದು 29.09.2021 ರವರೆಗೆ ಅಪ್‌ಲಿಂಕ್ ಮಾಡಲು ಮತ್ತು ಡೌನ್‌ಲಿಂಕ್ ಮಾಡಲು ಚಾನೆಲ್‌ಗೆ ಹಿಂದೆ ಅನುಮತಿ ನೀಡಲಾಗಿತ್ತು.

***


(रिलीज़ आईडी: 1796528) आगंतुक पटल : 206
इस विज्ञप्ति को इन भाषाओं में पढ़ें: English , Urdu , हिन्दी , Marathi , Punjabi , Gujarati , Tamil , Telugu , Malayalam