ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19: ಕಲ್ಪನೆ – ವಾಸ್ತವ


ಎರಡು ಡೋಸ್ ಗಳನ್ನು ಹಾಕಿಸಿಕೊಳ್ಳದಿದ್ದರೂ ಡಬಲ್ ಡೋಸ್ ಲಸಿಕೆ ಹಾಕಿರುವುದಾಗಿ ನೋಂದಾಯಿಸಿಕೊಳ್ಳಲಾಗಿದೆ ಎಂಬ ಮಾಧ್ಯಮಗಳ ವರದಿಗಳು ಆರೋಗ್ಯಪೂರ್ಣವಲ್ಲ. ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿದೆ

ಜಗತ್ತಿನ ಅತಿದೊಡ್ಡ ಕೋವಿಡ್ ಲಸಿಕೆ ಅಭಿಯಾನ ಪ್ರಬಲ ಡಿಜಿಟಲ್ ಪೋರ್ಟಲ್ ಕೊವಿನ್ ಮೂಲಕ ನಡೆಯುತ್ತಿದೆ: ಮೋಸದ ಅಭ್ಯಾಸಗಳನ್ನು ಕೊವಿನ್ ನಲ್ಲಿ ತಡೆಗಟ್ಟಲು ಎಸ್.ಒ.ಪಿ ಮತ್ತು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ

ಲಸಿಕೆ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಕೊವಿನ್ ನಲ್ಲಿ ತಿದ್ದುಪಡಿ ಮಾಡುವ ಅಧಿಕಾರ ಹೊಂದಿದ್ದಾರೆ

Posted On: 03 FEB 2022 2:09PM by PIB Bengaluru

ಎರಡೂ ಡೋಸ್ ಗಳನ್ನು ಪಡೆಯದ್ದರೂ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವುದಾಗಿ ಮೋಸದಿಂದ ನೋಂದಣಿ ಮಾಡಲಾಗಿದೆ ಮತ್ತು “ಲಸಿಕೆ ವಂಚನೆ” ಹೆಸರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೆಲವು ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. “ಲಸಿಕೆಯ ಅಂಕಿ ಅಂಶಗಳನ್ನು ಕುಶಲತೆಯಿಂದ ಮಾಡಲಾಗಿದೆ” ಎಂದು ವರದಿಯಾಗಿದೆ.

ಇಂತಹ ಮಾಧ್ಯಮಗಳ ವರದಿಗಳು ದಾರಿತಪ್ಪಿಸುವುದಷ್ಟೇ ಅಲ್ಲದೇ ಸಂಪೂರ್ಣವಾಗಿ ತಪ್ಪು ಮಾಹಿತಿಯಿಂದ ಕೂಡಿದೆ ಮತ್ತು ಆಧಾರ ರಹಿತ ಎಂದು ಸ್ಪಷ್ಟನೆ ನೀಡಿದೆ.

ವರದಿಯಲ್ಲಿನ ಶೀರ್ಷಿಕೆಯೇ ಹಾದಿ ತಪ್ಪಿಸುವಂತಿದೆ. ಕೋವಿನ್ ವ್ಯವಸ್ಥೆಯಲ್ಲಿ ಲಸಿಕೆ ಕಾರ್ಯಕ್ರಮದ ದತ್ತಾಂಶವನ್ನು ನಮೂದಿಸುವುದು ಆರೋಗ್ಯ ಕಾರ್ಯಕರ್ತರು ಎಂಬುದು ವರದಿ ಮಾಡಿದವರಿಗೆ ಬಹುಶಃ ತಿಳಿದಿರುವುದಿಲ್ಲ. ದತ್ತಾಂಶವನ್ನು ನಮೂದಿಸುವ ಆರೋಗ್ಯ ಕಾರ್ಯಕರ್ತರು ಅಕ್ರಮಗಳನ್ನು ಎಸಗಿದ್ದಾರೆ ಎಂದು ಹೇಳಿರುವ ಲೇಖಕರು ಕೊವಿನ್ ನಲ್ಲಿ ಲಸಿಕೆ ಕಾರ್ಯಕ್ರಮದ ದಾಖಲೆ ಪ್ರಕ್ರಿಯೆಗಳ ಬಗ್ಗೆ ಯಾವುದೇ ಮಾಹಿತಿ ಹೊಂದಿದಂತೆ ಕಾಣುವುದಿಲ್ಲ

ಭಾರತದ ಕೋವಿಡ್ ಲಸಿಕಾ ಅಭಿಯಾನ ಜಗತ್ತಿನ ಅತಿದೊಡ್ಡ ಅಭಿಯಾನವಾಗಿದೆ. ಇದಕ್ಕೆ ಬಲಿಷ್ಠ ಕೊವಿನ್ ಡಿಜಿಟಲ್ ವೇದಿಕೆಯಂತಹ ತಾಂತ್ರಿಕ ಬೆಂಬಲವನ್ನು ಒದಗಿಸಲಾಗಿದ್ದು, ಇದು ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಅವಧಿಯಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಲಸಿಕೆಯ ಎಲ್ಲಾ ಮಾಹಿತಿ ಈ ಡಿಜಿಟಲ್ ವೇದಿಕೆಯಲ್ಲಿ ದಾಖಲಾಗಿವೆ.

ಕೊವಿನ್ ವ್ಯವಸ್ಥೆ ಎಲ್ಲವನ್ನು ಒಳಗೊಂಡ ವೇದಿಕೆಯಾಗಿದೆ, ದೇಶಾದ್ಯಂತ ಲಭ್ಯವಿರುವ ಸೀಮಿತ ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯಗಳ ಆಧಾರದ ಮೇಲೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರೊಳಗೆ ಪ್ರವೇಶಿಸಲು ಯಾವುದೇ ಭೌತಿಕ, ಡಿಜಿಟಲ್ ಅಥವಾ ಸಾಮಾಜಿಕ, ಆರ್ಥಿಕ ಅಡಚಣೆಗಳಿಲ್ಲ. ಇದ್ಯಾವುದನ್ನೂ ಲೆಕ್ಕಿಸದೇ ಪ್ರತಿಯೊಬ್ಬ ಅರ್ಹ ವ್ಯಕ್ತಿ ಲಸಿಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ವೈಶಿಷ್ಟ್ಯತೆಗಳನ್ನು ಕೊವಿನ್ ನಲ್ಲಿ ಅಡಕಗೊಳಿಸಲಾಗಿದೆ.

ಇದೇ ಕಾಲಕ್ಕೆ ಲಸಿಕೆ ಸಮಯದಲ್ಲಿ ವಂಚನೆ ಮತ್ತು/ಅಥವಾ ತಪ್ಪು ದತ್ತಾಂಶವನ್ನು ದಾಖಲಿಸಲು ಸಾಧ್ಯವಾಗದಂತೆ ಎಸ್.ಒ.ಪಿ ಮತ್ತು ವಿಶೇಷತೆಗಳನ್ನು ಅಳವಡಿಸಲಾಗಿದೆ.

ಅ. ಪ್ರತಿಯೊಂದು ಲಸಿಕಾ ತಂಡ ಪರಿಶೀಲಕರನ್ನು ಹೊಂದಿದ್ದು, ಲಸಿಕೆಗೆ ಬರುವ ಫಲಾನುಭವಿಗಳ ಗುರುತನ್ನು ಸ್ಥಾಪಿಸುವುದು ಇವರ ಕೆಲಸವಾಗಿದೆ.

ಬಿ. ಲಸಿಕೆ ಪ್ರಕ್ರಿಯೆಯಲ್ಲಿ ಫಲಾನುಭವಿಗಾಗಿ ಲಸಿಕೆಯನ್ನು ಕೋವಿನ್ ನಲ್ಲಿ ದಾಖಲಿಸುವ ಮುನ್ನ ಈ ಕೆಳಗಿನ ಹಂತಗಳನ್ನು ಹೊಂದಿರಬೇಕಾಗುತ್ತದೆ

                       i. ವೇಳಾಪಟ್ಟಿ: ಇದು ಆನ್ ಲೈನ್ ಅಥವಾ ಸ್ಥಳದಲ್ಲಿಯೇ ಆಗಿರಬಹುದು

                      ii. ಪರಿಶೀಲನೆ – ನಿಗದಿತ ಫಲಾನುಭವಿಗಳು [ಆನ್ ಲೈನ್ ಅಥವಾ ಸ್ಥಳದಲ್ಲಿ] ಮಾತ್ರ ಪರಿಶೀಲನೆ ಮಾಡಿದ ನಂತರ ಮುಂದಿನ ಹಂತಕ್ಕೆ ಹೋಗುತ್ತಾರೆ. ಅಲ್ಲಿ ಪರಿಶೀಲಿಸಿದ ತರುವಾಯ ಕೋವಿನ್ ನಲ್ಲಿ ನಮೂದಿಸಿದ ವಿವರಗಳ ಆಧಾರದ ಮೇಲೆ ಫಲಾನುಭವಿಯ ಗುರುತನ್ನು ಸ್ಥಾಪಿಸಲಾಗುತ್ತದೆ.

                    iii. ಲಸಿಕೆ – ಪರಿಶೀಲಕರು/ಲಸಿಕೆದಾರರು ಯಶಸ್ವಿಯಾಗಿ ಪರಿಶೀಲಿಸಿದ ನಂತರ ಫಲಾನುಭವಿಗಳಿಗೆ ಲಸಿಕೆ ಹಾಕಿರುವುದಾಗಿ ಗುರುತು ಮಾಡಲಾಗುತ್ತದೆ.

ಬಿ. ಸ್ಥಳದಲ್ಲಿಯೇ ನೋಂದಣಿ ಮತ್ತುನಮೂದಿಸಬೇಕಾಗುತ್ತದ

                   iv. ಮೊದಲ ಡೋಸ್ ಅಥವಾ ಸ್ಥಳದಲ್ಲಿಯೇ ನೋಂದಣಿಗಾಗಿ ಬರುವ ಯಾವುದೇ ಫಲಾನುಭವಿ ಪರಿಶೀಲನೆ ಸಮಯದಲ್ಲಿ ಪರಿಶೀಲಕರಿಗೆ ಲಸಿಕೆ ಫಲಾನುಭವಿಗಳು ಒದಗಿಸುವ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸಬೇಕಾಗುತ್ತದೆ

                     v. ಆಧಾರ್ ಆಧಾರಿತ ದೃಢೀಕರಣ ಮಾಡುವ ಆಯ್ಕೆಯನ್ನು ಸಹ ಒದಗಿಸಲಾಗಿದೆ.

                   vi. ಹಾಗೊಂದು ವೇಳೆ ಪರೀಕ್ಷಕರು/ಲಸಿಕೆ ಹಾಕುವವರಿಗೆ ಛಾಯಾಚಿತ್ರವಿರುವ ಇತರೆ ಗುರುತುಚೀಟಿ ಒದಗಿಸಿದಲ್ಲಿ ಅಂತಹ ಭಾವಚಿತ್ರವನ್ನು ಗುರುತಿಗಾಗಿ ಫೋಟೋ ತೆಗೆದುಕೊಳ್ಳಲಾಗುತ್ತದೆ.

ಸಿ. ಸ್ಥಳದಲ್ಲಿಯೇ ಎರಡನೇ ಡೋಸ್

                  vii. ಪರಿಶೀಲಕರು / ಲಸಿಕೆದಾರರು ಫಲಾನುಭವಿ ಒದಗಿಸಿದ ವಿವರಗಳ ಪ್ರಕಾರ ಹೆಸರು, ಫಲಾನುಭವಿಯ ಗುರುತು [ ಕೇವಲ ಕೋವಿನ್ ನಿಂದ ರಚಿಸಲಾಗಿದೆ] ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಕೊವಿನ್ ದತ್ತಾಂಶದಿಂದ ಫಲಾನುಭವಿಯನ್ನು ಪತ್ತೆ ಮಾಡಬಹುದು

                viii. ಯಶಸ್ವಿ ಪರಿಶೀಲನೆ ನಂತರ ಫಲಾನುಭವಿಗಳ ಡ್ಯಾಶ್ ಬೊರ್ಡ್ ಗೆ ಆಕೆ/ಆತ ತನ್ನ ಜನ್ಮ ದಿನದ ವಿವರಗಳನ್ನು ಒದಗಿಸಬೇಕು ಮತ್ತು ನಂತರ ಫಲಾನುಭವಿಗೆ ಎಸ್.ಎಂ.ಎಸ್ ಸಂದೇಶ ರವಾನೆಯಾಗಲಿದೆ.

ಡಿ. ಪ್ರತಿಯೊಂದು ಹಂತಗಳಲ್ಲೂ ಫಲಾನುಭವಿಗಳಿಗೆ ಎಸ್.ಎಂ.ಎಸ್ ಸೂಚನೆಯನ್ನು ರವಾನಿಸಲಾಗುತ್ತದೆ

                   ix. ಆನ್ ಲೈನ್/ ಆಫ್ ಲೈನ್ ಸಸಂದರ್ಭದಲ್ಲ

                     x. ಎರಡನೇ ಡೋಸ್/ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲು ನಿಗದಿತ ದಿನಾಂಕದ ಸೂಚನೆ

                   xi. ಲಸಿಕೆ ಪಡೆದಿರುವುದನ್ನು ಖಚಿತಪಡಿಸುವಾಗ

                  xii. ಕಾರಣಗಳೊಂದಿಗೆ ಲಸಿಕೆ ನೀಡಿಕೆಯನ್ನು ತಿರಸ್ಕರಿಸಿದಾಗ

ಫಲಾನುಭವಿಗೆ ಲಸಿಕೆ ಹಾಕಲಾಗಿದೆ ಎಂದು ಗುರುತಿಸುವ ಮೊದಲು ಪರಿಶೀಲನೆ ಸಮಯದಲ್ಲಿ ಫಲಾನುಭವಿಯ ಗುರುತನ್ನು ಸ್ಥಾಪಿಸಲು ಈ ವೈಶಿಷ್ಟ್ಯಗಳೊಂದಿಗೆ ಪರೀಕ್ಷಕರು/ಲಸಿಕೆದಾರರಿಗೆ ಅಧಿಕಾರ ನೀಡಲಾಗಿದೆ. ಈ ಮೇಲೆ ಸಕ್ರಿಯಗೊಳಿಸುವ ಪ್ರಕ್ರಿಯೆ ನಡುವೆಯೂ ಲಸಿಕೆ ತಂಡ ಎಸ್.ಒ.ಪಿ ದತ್ತಾಂಶವನ್ನು ಕಡೆಗಣಿಸುವ ಸಂದರ್ಭಗಳು ಬರಬಹುದು. ಇದರಿಂದ ದತ್ತಾಂಶ ನಮೂದು ಮತ್ತು ದಾಖಲೆಯಲ್ಲಿ ದೋಷಕ್ಕೆ ಕಾರಣವಾಗುತ್ತದೆ. ಕೋವಿನ್ ಮೂಲಕ ಫಲಾನುಭವಿಗಳೊಂದಿಗೆ ಎಸ್.ಎಂ.ಎಸ್ ಸಂವಹನ ವ್ಯವಸ್ಥೆಯಿಂದಾಗಿ ಅಂತಹ ಪ್ರಕರಣಗಳನ್ನು ತಕ್ಷಣವೇ ಕುಂದುಕೊರತೆ ವ್ಯವಸ್ಥೆ ಮೂಲಕ ವರದಿ ಮಾಡಲಾಗುತ್ತದೆ. ಇಂತಹ ದೂರುಗಳನ್ನು ಸ್ವೀಕರಿಸಿದ ನಂತರ ಅಂತಹ ಪ್ರಕರಣಗಳು ವರದಿಯಾದ ಲಸಿಕೆ ತಂಡ ಮತ್ತು ಸಿವಿಸಿಯ ಎಲ್ಲಾ ವಿವರಗಳನ್ನು ಸರಿಪಡಿಸುವಂತೆ ಸಂಬಂಟ್ಟಪಟ್ಟ ರಾಜ್ಯಗಳ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಬಳಿಕ ಫಲಾನುಭವಿಗಳು ಕೋವಿನ್ ನಲ್ಲಿ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಅಧಿಕಾರ ಹೊಂದಲಿದ್ದಾರೆ. ಫಲಾನುಭವಿಗಳು ಡ್ಯಾಶ್ ಬೋರ್ಡ್ ನಲ್ಲಿರುವ ಸಮಸ್ಯೆಯನ್ನು ಪರಿಗಣಿಸಿ ಹೆಸರು, ವಯಸ್ಸು, ಲಿಂಗ, ಮೂಲಭೂತವಾಗಿ ಭಾವಚಿತ್ರವಿರುವ ಗುರುತಿನ ಚೀಟಿಯಂತಹ ಜನಸಂಖ್ಯಾ ವಿವರಗಳನ್ನು ಹೊರತುಪಡಿಸಿ ಈ ಕೆಳಕಂಡಂತೆ ಬದಲಾವಣೆ ಮಾಡಲು ಅವಕಾಶವಿದೆ

a. ಎರಡು ಡೋಸ್ ಗಳನ್ನು ವಿಲಿನಗೊಳಿಸಿ, ಒಂದೇ ಪ್ರಮಾಣಪತ್ರ ಪಡೆಯುವ

b. ತಮ್ಮ ಕೊವಿನ್ ಖಾತೆಯಲ್ಲಿ ನೋಂದಾಯಿಸಲಾದ ಅಪರಿಚಿತ ಸದಸ್ಯರ ಬಗ್ಗೆ ವರದಿ ಮಾಡುವುದು

c. ಲಸಿಕೆಯನ್ನು ಹಿಂಪಡೆಯಿರಿ – ಸಂಫೂರ್ಣ ಲಸಿಕೆಯಿಂದ ಭಾಗಶಃ ಲಸಿಕೆ ಮತ್ತು ಭಾಗಶಃದಿಂದ ಲಸಿಕೆ ಹಾಕದವರೆಗೆ

ಪ್ರಕಟವಾದ ಮಾಧ್ಯಮ ವರದಿಗೆ ಭಾರತ ಸರ್ಕಾರದಿಂದ ಸಂಕ್ಷಿಪ್ತ ಹೇಳಿಕೆಯನ್ನು ಸಹ ಈ ಕೆಳಕಂಡಂತೆ ನೀಡಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ:

“ಯಾವುದೇ ಲಸಿಕೆ ವಂಚನೆ ನಡೆಯುತ್ತಿದೆ ಎಂಬುದನ್ನು ಸರ್ಕಾರ ತನ್ನ ಹೇಳಿಕೆಯಲ್ಲಿ ನಿರಾಕರಿಸಿದೆ. ಪ್ರತಿಯೊಂದು ಲಸಿಕೆ ತಂಡ ಪರಿಶೀಲಕರನ್ನು ಹೊಂದಿದ್ದು, ಅವರ ಏಕೈಕ ಕೆಲಸವೆಂದರೆ ಲಸಿಕೆ ಪಡೆದವರ ಗುರುತುಗಳನ್ನು ದೃಢೀಕರಿಸುವುದಾಗಿದೆ. [ದಿ] ಕೊವಿನ್ ವ್ಯವಸ್ಥೆಯು ಅಂತರ್ಗತ ವೇದಿಕೆಯಾಗಿದೆ ಮತ್ತು ದೇಶಾದ್ಯಂತ ಸೀಮಿತ ಮೊಬೈಲ್ ಮತ್ತು ಇಂಟರ್ನೆಟ್ ಲಭ್ಯತೆ ಮತ್ತು ಸವಾಲುಗಳ ಆಧಾರದ ಮೇಲೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಸರ್ಕಾರ ಹೇಳಿದೆ. “ಅಗತ್ಯವಾದ ವೈಶಿಷ್ಟ್ಯಗಳು ಮತ್ತು ಪ್ರವೇಶಕ್ಕೆ ಯಾವುದೇ ಭೌತಿಕ, ಡಿಜಿಟಲ್ ಅಥವಾ ಸಾಮಾಜಿಕ, ಆರ್ಥಿಕ ಅಡೆತಡೆಗಳನ್ನು ಲೆಕ್ಕಿಸದೇ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಲಸಿಕೆಗೆ ಪ್ರವೇಶ ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೊವಿನ್ ನಲ್ಲಿ ಸಂಯೋಜಿಸಲಾಗಿದೆ. ಇದೇ ಸಮಯಕ್ಕೆ ಎಸ್.ಒ.ಪಿ [ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ಸ್] ಮತ್ತು ವಂಚನೆ ಮತ್ತು/ಅಥವಾ ತಪ್ಪು ದತ್ತಾಂಶ ದಾಖಲಿಸುವುದನ್ನು ತಡೆಗಟ್ಟಲು ನಿಯಂತ್ರಣ ಕ್ರಮಗಳನ್ನು ಸಹ ಅಡಕಗೊಳಿಸಲಾಗಿದೆ”

ಭಾರತ ಅತಿ ದೊಡ್ಡ ಜನಸಂಖ್ಯೆ ಹೊಂದಿದ್ದರೂ ಸಹ ರಾಷ್ಟ್ರವ್ಯಾಪಿ ಕೊವಿಡ್ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಮತ್ತು ಈ ದಿನಾಂಕದ ವೇಳೆಗೆ 167 ಕೋಟಿ ಗೂ ಹೆಚ್ಚು ಡೋಸ್ ಗಳನ್ನು ಹಾಕಲಾಗಿದೆ. ಇದರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ ಜನಸಂಖ್ಯೆಯ 76% ರಷ್ಟು ಮಂದಿಗೆ ಎರಡನೇ ಡೋಸ್ ಹಾಕಲಾಗಿದೆ.

***



(Release ID: 1795190) Visitor Counter : 243