ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19: ಸತ್ಯ ಮತ್ತು ಮಿಥ್ಯಗಳು


ಫೆಬ್ರವರಿ ಅಂತ್ಯದ ವೇಳೆಗೆ ಬಳಕೆಯಾಗದ 50 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳು ವ್ಯರ್ಥವಾಗಬಹುದು ಎಂದು ಹೇಳಿರುವ ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾದವು ಮತ್ತು ಹಾದಿ ತಪ್ಪಿಸುವಂಥವು

ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಲಸಿಕೆಯ ಬಳಕೆ ವೇಳೆ "ಮೊದಲು ಅವಧಿ ಮೀರುವಂಥವು ಮೊದಲು" ತತ್ವಕ್ಕೆ ಬದ್ಧರಾಗಿರಲು ರಾಜ್ಯಗಳಿಗೆ ಕೇಂದ್ರವು ಸಲಹೆ ನೀಡಿದೆ

ಯಾವುದೇ ಲಸಿಕೆ ಡೋಸ್‌ಗಳು ವ್ಯರ್ಥವಾಗದಂತೆ ಖಾತರಿಪಡಿಸಿಕೊಳ್ಳಲು ʻಕೋ-ವಿನ್ʼನಲ್ಲಿ ಲಸಿಕೆ ವಿನಿಮಯಕ್ಕೂ ಅವಕಾಶ ಕಲ್ಪಿಸಲಾಗಿದೆ

Posted On: 03 FEB 2022 3:02PM by PIB Bengaluru

ಫೆಬ್ರವರಿ ಅಂತ್ಯದ ವೇಳೆಗೆ 50 ಲಕ್ಷ ಬಳಸದ ಕೋವಿಶೀಲ್ಡ್ ಡೋಸ್‌ಗಳು ವ್ಯರ್ಥವಾಗಬಹುದು ಎಂದು ಆರೋಪಿಸಿ ಕೆಲವು ಮಾಧ್ಯಮ ವರದಿಗಳು ಬಂದಿವೆಅಂತಹ ವರದಿಗಳು ಅಸ್ಪಷ್ಟವಾಗಿದ್ದು, ಬಳಕೆ ಗಡುವು ಅಂತ್ಯ ಸಮೀಪಿಸಿದೆ ಎಂದು ಹೇಳಲಾಗುವ ರಾಜ್ಯವಾರು ಡೋಸ್‌ಗಳ ಸಂಖ್ಯೆಯ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲದೆ ಮಾಡಿದಂತಹ ವರದಿಗಳಾಗಿವೆ.

ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭವಾದಾಗಿನಿಂದ ಸಮಸ್ಯೆಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪೂರ್ವಭಾವಿ ರೀತಿಯಲ್ಲಿ ಸಲಹೆ ನೀಡಿದೆ. ಲಸಿಕೆಯ ಡೋಸ್‌ಗಳ ವ್ಯರ್ಥವನ್ನು ಕನಿಷ್ಠ ಮಟ್ಟದಲ್ಲಿ ಕಾಯ್ದುಕೊಳ್ಳಲು  ಮತ್ತು ಡೋಸ್‌ಗಳು ಅವಧಿ ಮೀರದಂತೆ ತಡೆಯಲು ಎಲ್ಲಾ 60 ಸಾಗಣೆ ಕೇಂದ್ರಗಳಲ್ಲಿ "ಮೊದಲು ಅವಧಿ ಮೀರುವ ಲಸಿಕೆ ಮೊದಲು ಬಳಕೆ” (ಎಫ್‌ಇಎಫ್‌ಒ) ತತ್ವವನ್ನು ಅನುಸರಿಸುವಂತೆ ಒತ್ತಿ ಹೇಳಿದೆ.

ರಾಜ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಗಳಅವಧಿ ಅಂತ್ಯಸ್ಥಿತಿಯನ್ನು ರಾಜ್ಯಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2021 ನವೆಂಬರ್ ತಿಂಗಳಲ್ಲಿ ಸೂಚಿಸಿದೆ.

ಸರ್ಕಾರ ಮತ್ತು ಖಾಸಗಿ ಕೇಂದ್ರಗಳೆರಡರಲ್ಲೂ ಯಾವುದೇ ಲಸಿಕೆಯ ಅವಧಿ ಮೀರಲು ಅವಕಾಶ ನೀಡಬಾರದು ಎಂದು ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಲಸಿಕೆಯ ಡೋಸ್‌ಗಳ ಬಳಕೆಯನ್ನು ಪರಿಶೀಲಿಸಲು ರಾಜ್ಯಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ)/ ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಮಟ್ಟದಲ್ಲಿ ತ್ವರಿತ ವೀಡಿಯೊ-ಕಾನ್ಫರೆನ್ಸ್ ನಡೆಸಬಹುದು ಎಂದು ಸಲಹೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಎಸ್ಆರ್/ ಸಬ್ಸಿಡಿ ದರದಲ್ಲಿ ಲಸಿಕೆ ನೀಡುವಿಕೆಯಂತಹ ಮಧ್ಯಸ್ಥಿಕೆಗಳನ್ನು ಪ್ರಯತ್ನಿಸಬಹುದು ಎಂದು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಇದಲ್ಲದೆ, ನಿರ್ದಿಷ್ಟ ರಾಜ್ಯಗಳ ಮನವಿಯ ಮೇರೆಗೆ, ಲಸಿಕೆಯ ಅವಧಿ ಮುಗಿಯುವುದನ್ನು ತಪ್ಪಿಸಲು ಮತ್ತು ಯಾವುದೇ ಲಸಿಕೆಯ ಡೋಸ್ ವ್ಯರ್ಥವಾಗದಂತೆ ನೋಡಿಕೊಳ್ಳಲು ಖಾಸಗಿ ವಲಯದ ಆರೋಗ್ಯ ಸೌಲಭ್ಯಗಳಿಂದ ರಾಜ್ಯ ಸರ್ಕಾರಿ ಆರೋಗ್ಯ ಸೌಲಭ್ಯಗಳಿಗೆ ಲಸಿಕೆಯನ್ನು ವರ್ಗಾಯಿಸುವ ಪ್ರಸ್ತಾಪದ ವ್ಯವಸ್ಥೆಗೆ ತನ್ನ ಆಕ್ಷೇಪಣೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಇಂತಹ ಲಸಿಕಾ ವಿನಿಮಯವನ್ನು ನಮೂದಿಸುವ ಅವಕಾಶವು ಕೋ-ವಿನ್ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಿದೆ.

ಇದಲ್ಲದೆ, ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ (ಸಿವಿಸಿಗಳು) ಲಭ್ಯವಿರುವ ಕೋವಿಡ್ ಲಸಿಕೆಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಗುಜರಾತ್ ಮತ್ತು ದೆಹಲಿ ಯಂತಹ ರಾಜ್ಯಗಳೊಂದಿಗೆ ಚರ್ಚೆ ನಡೆಸಲಾಗಿದೆ.

***


(Release ID: 1795084) Visitor Counter : 235