ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

‘ಜನಸ್ನೇಹಿ ಮತ್ತು ಪ್ರಗತಿಪರ ಬಜೆಟ್‘ಗಾಗಿ ಹಣಕಾಸು ಸಚಿವರು ಮತ್ತು ಅವರ ತಂಡವನ್ನು ಅಭಿನಂದಿಸಿದ ಪ್ರಧಾನಿ


“ಶತಮಾನಕ್ಕೊಮ್ಮೆ ಬರುವ ವಿಪತ್ತಿನ ನಡುವೆ ಈ ವರ್ಷದ ಬಜೆಟ್ ಅಭಿವೃದ್ಧಿಯ ಹೊಸ ವಿಶ್ವಾಸ ಮೂಡಿಸಿದೆ”

“ಈ ಬಜೆಟ್ ಆರ್ಥಿಕತೆಗೆ ಶಕ್ತಿ ತುಂಬುವ ಜೊತೆಗೆ ಸಾಮಾನ್ಯ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ”

“ಹೆಚ್ಚಿನ ಮೂಲಸೌಕರ್ಯ, ಅಧಿಕ ಬಂಡವಾಳ, ಹೆಚ್ಚಿನ ಪ್ರಗತಿ ಮತ್ತು ಅಧಿಕ ಉದ್ಯೋಗವಕಾಶಗಳ ಸೃಷ್ಟಿಗೆ ಬಜೆಟ್ ನಲ್ಲಿ ವಿಫುಲ ಅವಕಾಶಗಳಿವೆ”

“ಬಡವರ ಕಲ್ಯಾಣ ಈ ಬಜೆಟ್ ಗಳ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ”

“ಕೃಷಿಯನ್ನು ಲಾಭದಾಯಕ ಮತ್ತು ವಿಫುಲ ಹೊಸ ಅವಕಾಶಗಳ ವಲಯನ್ನಾಗಿ ರೂಪಿಸುವ ಗುರಿಯನ್ನು ಬಜೆಟ್ ಅಂಶಗಳು ಒಳಗೊಂಡಿದೆ”

Posted On: 01 FEB 2022 3:57PM by PIB Bengaluru

ಶತಮಾನಕ್ಕೊಮ್ಮೆ ಸಂಭವಿಸುವ ವಿಪತ್ತಿನ ನಡುವೆಯೇ ವರ್ಷದ ಬಜೆಟ್ ಅಭಿವೃದ್ಧಿಯ ಹೊಸ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. " ಬಜೆಟ್ ಆರ್ಥಿಕತೆಗೆ ಶಕ್ತಿ ತುಂಬುವ ಜೊತೆಗೆ ಸಾಮಾನ್ಯ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಯಾದ ನಂತರ ಪ್ರಧಾನಿಯವರು ಬಜೆಟ್ ಕುರಿತ ತಮ್ಮ ಪ್ರತಿಕ್ರಿಯೆಯಲ್ಲಿ  ಬಜೆಟ್ಹೆಚ್ಚಿನ ಮೂಲಸೌಕರ್ಯ, ಅಧಿಕ ಹೂಡಿಕೆ, ಹೆಚ್ಚಿನ ಬೆಳವಣಿಗೆ ಮತ್ತು ಅಧಿಕ ಉದ್ಯೋಗಗಳಿಗೆ ಇದು ಸಂಪೂರ್ಣ ಅವಕಾಶಗಳನ್ನು ನೀಡಲಿದೆಎಂದು ಹೇಳಿದರು. “ಇದು ಹಸಿರು ಉದ್ಯೋಗ ವಲಯವನ್ನು ಮತ್ತಷ್ಟು ವಿಸ್ತಾರಗೊಳಿಸುತ್ತದೆ. ಬಜೆಟ್ ಕೇವಲ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸುವುದೇ ಅಲ್ಲದೆ ಯುವಜನರಿಗೆ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು.

ರೈತರಿಗಾಗಿ ಡ್ರೋನ್‌ಗಳು, ವಂದೇ ಭಾರತ್ ರೈಲುಗಳು, ಡಿಜಿಟಲ್ ಕರೆನ್ಸಿ, 5 ಜಿ ಸೇವೆಗಳು, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪೂರಕ ವ್ಯವಸ್ಥೆ ಮುಂತಾದ ಕ್ರಮಗಳ ಮೂಲಕ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕತೆ ಮತ್ತು ತಂತ್ರಜ್ಞಾನದ ಹುಡುಕಾಟವು ನಮ್ಮ ಯುವಜನತೆ, ಮಧ್ಯಮ ವರ್ಗ, ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಬಡವರ ಕಲ್ಯಾಣವು ಬಜೆಟ್‌ನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ  ಹೇಳಿದರು. ಪ್ರತಿ ಬಡ ಕುಟುಂಬಕ್ಕೂ ಪಕ್ಕಾ ಮನೆ, ಶೌಚಾಲಯ, ನಲ್ಲಿ ಮೂಲಕ ನೀರು ಮತ್ತು ಅನಿಲ ಸಂಪರ್ಕವನ್ನು ಖಾತ್ರಿಪಡಿಸುವುದು ಬಜೆಟ್ನ ಗುರಿಯಾಗಿದೆ. ಇದೇ ವೇಳೆ ಆಧುನಿಕ ಅಂತರ್ಜಾಲ ಸಂಪರ್ಕದ ಮೇಲೂ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ ಎಂದರು.

ದೇಶದಲ್ಲಿ ಮೊದಲ ಬಾರಿಗೆಪರ್ವತಮಾಲಾಯೋಜನೆಯನ್ನು ಹಿಮಾಚಲ, ಉತ್ತರಾಖಂಡ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಯೋಜನೆಯಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಆಧುನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಕೋಟ್ಯಾಂತರ ಭಾರತೀಯರ ನಂಬಿಕೆಯ ಕೇಂದ್ರಬಿಂದುವಾಗಿರುವ ಗಂಗಾ ನದಿಯ ಶುದ್ಧೀಕರಣದ ಜೊತೆಗೆ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಐದು ರಾಜ್ಯಗಳಲ್ಲಿ ನದಿಯ ದಡದಲ್ಲಿ ನೈಸರ್ಗಿಕ ಕೃಷಿಯನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ರೈತರ ಏಳಿಗೆಯ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಗಂಗಾ ನದಿಯನ್ನು ರಾಸಾಯನಿಕ ಮುಕ್ತವಾಗಿಸಲು ಇದು ಸಹಕಾರಿಯಾಗಲಿದೆ ಎಂದರು.

ಬಜೆಟ್‌ನ ಅಂಶಗಳು ಕೃಷಿಯನ್ನು ಲಾಭದಾಯಕ ಮತ್ತು ವಿಫುಲ ಹೊಸ ಅವಕಾಶಗಳ ನೀಡುವ ಗುರಿಯನ್ನು ಹೊಂದಿವೆ. ಹೊಸ ಕೃಷಿ ನವೋದ್ಯಮಗಳನ್ನು ಪ್ರೋತ್ಸಾಹಿಸಲು ವಿಶೇಷ ನಿಧಿ ಮತ್ತು ಆಹಾರ ಸಂಸ್ಕರಣಾ ಉದ್ಯಮಕ್ಕೆ ಪ್ಯಾಕೇಜ್‌ನಂತಹ ಹೊಸ ಉಪಕ್ರಮಗಳು ರೈತರ ಆದಾಯವೃದ್ಧಿಗೆ ಸಹಕಾರಿಯಾಗಲಿವೆ. ಬೆಂಬಲ ಬೆಲೆ ಖರೀದಿ (ಎಂಎಸ್‌ಪಿ) ಖರೀದಿ ಮೂಲಕ ರೈತರ ಖಾತೆಗೆ 2.25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ವರ್ಗಾವಣೆಯಾಗುತ್ತಿದೆ ಎಂದು ಪ್ರಧಾನಮಂತ್ರಿ  ಹೇಳಿದರು.

ಬಜೆಟ್ ನಲ್ಲಿ ಸಾಲ ಖಾತ್ರಿಯಲ್ಲಿ ದಾಖಲೆಯ ಹೆಚ್ಚಳ ಜೊತೆಗೆ ಬಜೆಟ್‌ನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ. “ರಕ್ಷಣಾ  ಬಂಡವಾಳದ ಬಜೆಟ್‌ನ ಶೇ.68ರಷ್ಟು  ದೇಶೀಯ ಉದ್ಯಮಕ್ಕೆ ಮೀಸಲಿರುವುದರಿಂದ ಭಾರತದ ಎಂಎಸ್ ಎಂಇ ವಲಯಗೆ ಅಧಿಕ ಪ್ರಯೋಜನವಾಗಲಿದೆ. 7.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಹೂಡಿಕೆಯು ಆರ್ಥಿಕತೆಗೆ ಹೊಸ ಉತ್ತೇಜನ ನೀಡುತ್ತದೆ ಮತ್ತು ಸಣ್ಣ ಮತ್ತು ಇತರ ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಜನಸ್ನೇಹಿ ಮತ್ತು ಪ್ರಗತಿಪರ ಬಜೆಟ್ಗಾಗಿ ಹಣಕಾಸು ಸಚಿವರು ಮತ್ತು ಅವರ ತಂಡವನ್ನು ಅಭಿನಂದಿಸುವುದಾಗಿ ಹೇಳುವ ಮೂಲಕ ಪ್ರಧಾನಮಂತ್ರಿ ತಮ್ಮ ಮಾತುಗಳನ್ನು ಸಮಾಪನಗೊಳಿಸಿದರು.

***


(Release ID: 1794414) Visitor Counter : 220