ಹಣಕಾಸು ಸಚಿವಾಲಯ
ಆರೋಗ್ಯ ಮತ್ತು ಶಿಕ್ಷಣ ಕಿರುತೆರಿಗೆ(ಸೆಸ್)ಯನ್ನು ವ್ಯವಹಾರ ವೆಚ್ಚವಾಗಿ ತೋರಿಸಲು ನಿರ್ಬಂಧ
ನಿರ್ದಿಷ್ಟ ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳಿಗೆ ನಿಧಿ ಒದಗಿಸುವ ತೆರಿಗೆದಾರನಿಗೆ ಆರೋಗ್ಯ ಮತ್ತು ಶಿಕ್ಷಣ ಕಿರುತೆರಿಗೆಯನ್ನು ಹೆಚ್ಚುವರಿ ಮೇಲ್ತೆರಿಗೆ(ಸರ್ ಚಾರ್ಜ್)ಯಾಗಿ ವಿಧಿಸಲಾಗುತ್ತದೆ
Posted On:
01 FEB 2022 1:07PM by PIB Bengaluru
ಆರೋಗ್ಯ ಮತ್ತು ಶಿಕ್ಷಣ ಸೆಸ್(ಕಿರು ತೆರಿಗೆ) ಅನ್ನು ವ್ಯವಹಾರ ವೆಚ್ಚವಾಗಿ ತೋರಿಸಲು ಸರ್ಕಾರದ ತೆರಿಗೆ ವ್ಯವಸ್ಥೆಯಲ್ಲಿ ಅನುಮತಿ ಇಲ್ಲ. ಸಂಸತ್ತಿನಲ್ಲಿಂದು ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಈ ವಿಷಯ ಸ್ಪಷ್ಟಪಡಿಸಿದರು.
ವ್ಯಾಪಾರ ವ್ಯವಹಾರದ ಆದಾಯ ಲೆಕ್ಕಾಚಾರಗಳನ್ನು ಆದಾಯ ತೆರಿಗೆಯ ವೆಚ್ಚಕ್ಕೆ ತೋರಿಸಲು ಅನುಮತಿ ಇಲ್ಲ. ವ್ಯವಹಾರದಿಂದ ಬರುವ ಆದಾಯಕ್ಕೆ ತೆರಿಗೆ ಮತ್ತು ಮೇಲ್ತೆರಿಗೆ(ಸರ್ ಚರ್ಜ್) ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.
ನಿರ್ದಿಷ್ಟ ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುವ ತೆರಿಗೆದಾರನ 'ಆರೋಗ್ಯ ಮತ್ತು ಶಿಕ್ಷಣ ಸೆಸ್'ಗೆ ಹೆಚ್ಚುವರಿಯಾಗಿ ಮೇಲ್ತೆರಿಗೆ ವಿಧಿಸಲಾಗುತ್ತದೆ. ಕೆಲವು ನ್ಯಾಯಾಲಯಗಳು 'ಆರೋಗ್ಯ ಮತ್ತು ಶಿಕ್ಷಣ ಸೆಸ್' ಅನ್ನು ವ್ಯಾಪಾರ ವೆಚ್ಚವಾಗಿ ತೋರಲು ಅನುಮತಿ ನೀಡಿವೆ. ಇದು ಸರ್ಕಾರದ ಆಡಳಿತ ಉದ್ದೇಶಕ್ಕೆ ವಿರುದ್ಧವಾಗಿದೆ, ಆದಾಯ ಮತ್ತು ಲಾಭದ ಮೇಲಿನ ಯಾವುದೇ ಸರ್ಚಾರ್ಜ್ ಅಥವಾ ಸೆಸ್ ಅನ್ನು ವ್ಯಾಪಾರ ವೆಚ್ಚವಾಗಿ ತೋರಲು ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಪುನರುಚ್ಚರಿಸಿದರು.
***
(Release ID: 1794348)
Read this release in:
English
,
Hindi
,
Bengali
,
Manipuri
,
Punjabi
,
Tamil
,
Urdu
,
Marathi
,
Gujarati
,
Telugu
,
Malayalam