ಹಣಕಾಸು ಸಚಿವಾಲಯ
2022-23ನೇ ಸಾಲಿನ ಕೇಂದ್ರ ಆಯವ್ಯಯವನ್ನು 2022ರ ಫೆಬ್ರವರಿ 1ರಂದು ಕಾಗದರಹಿತ ರೂಪದಲ್ಲಿ ಮಂಡಿಸಲಾಗುವುದು
ಕೇಂದ್ರ ಬಜೆಟ್ ತಯಾರಿಕೆ ಪ್ರಕ್ರಿಯೆಯ ಅಂತಿಮ ಹಂತವನ್ನು ಗುರುತಿಸುವ ಸಲುವಾಗಿ ಪ್ರತಿ ಬಾರಿ ನಡೆಸಲಾಗುವ “ಹಲ್ವಾ ಸಮಾರಂಭ”ದ ಬದಲಿಗೆ,
ಪ್ರಸ್ತುತ ಸಾಂಕ್ರಾಮಿದಕ ಹಿನ್ನೆಲೆಯಲ್ಲಿ ತಮ್ಮ ಕೆಲಸದ ಸ್ಥಳದಲ್ಲಿ "ಬಂಧಿ”ಯಾಗಿರುವ ಪ್ರಮುಖ ಸಿಬ್ಬಂದಿಗೆ ಸಿಹಿತಿಂಡಿಗಳನ್ನು ನೀಡಲಾಯಿತು
ಸಂಸತ್ತಿನಲ್ಲಿ ಮಂಡಿಸಿದ ನಂತರ 2022-23ನೇ ಸಾಲಿನ ಕೇಂದ್ರ ಬಜೆಟ್ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಿರಲಿದೆ
ಕೇಂದ್ರ ಬಜೆಟ್ ಕುರಿತ ಮಾಹಿತಿಯನ್ನು ಎಲ್ಲರೂ ಸುಲಭ ಮತ್ತು ತ್ವರಿತವಾಗಿ ಪಡೆಯುವಂತಾಗಲು "ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್" ತಂತ್ರಾಂಶ ಒದಗಿಸಲಾಗಿದೆ
ಇದು ದ್ವಿಭಾಷಾ (ಇಂಗ್ಲಿಷ್ ಮತ್ತು ಹಿಂದಿ) ಮೊಬೈಲ್ ತಂತ್ರಾಂಶವಾಗಿದ್ದು ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳೆರಡರಲ್ಲೂ ಲಭ್ಯವಿದೆ
ಕೇಂದ್ರ ಬಜೆಟ್ ವೆಬ್ ಪೋರ್ಟಲ್‌ನಿಂದ (www.indiabudget.gov.in) ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು
ಎಲ್ಲಾ ಬಜೆಟ್ ದಾಖಲೆಗಳು ಕೇಂದ್ರ ಬಜೆಟ್ ವೆಬ್ ಪೋರ್ಟಲ್‌ನಲ್ಲಿ ಸಹ ಡೌನ್‌ಲೋಡ್ ಮಾಡಲು ಲಭ್ಯವಿರುತ್ತವೆ
Posted On:
27 JAN 2022 6:53PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಕೇಂದ್ರ ಆಯವ್ಯಯವನ್ನು 2022ರ ಫೆಬ್ರವರಿ 1ರಂದು ಕಾಗದರಹಿತ ರೂಪದಲ್ಲಿ ಮಂಡಿಸಲಿದ್ದಾರೆ.
ಕೇಂದ್ರ ಬಜೆಟ್ ತಯಾರಿಕೆ ಪ್ರಕ್ರಿಯೆಯ ಅಂತಿಮ ಹಂತವನ್ನು ಗುರುತಿಸುವ ಸಲುವಾಗಿ ಪ್ರತಿಬಾರಿ “ಹಲ್ವಾ ಸಮಾರಂಭ” ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಆರೋಗ್ಯ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವ ಅಗತ್ಯದ ಹಿನ್ನೆಲೆಯಲ್ಲಿ ತಮ್ಮ ಕೆಲಸದ ಸ್ಥಳಗಳಲ್ಲಿ "ಬಂಧಿ”ಯಾಗಿರುವ ಪ್ರಮುಖ ಸಿಬ್ಬಂದಿಗೆ ಸಿಹಿತಿಂಡಿಗಳನ್ನು ಒದಗಿಸಲಾಯಿತು.
ಆಯವ್ಯಯದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಆಯವ್ಯಯ ತಯಾರಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು "ನಿರ್ಬಂಧ”ಕ್ಕೆ ಒಳಗಾಗುತ್ತಾರೆ. ಕೇಂದ್ರ ಬಜೆಟ್ ಮಂಡನೆವರೆಗೆ ನಾರ್ತ್ ಬ್ಲಾಕ್‌ನಲ್ಲಿರುವ ಬಜೆಟ್ ಮುದ್ರಣಾಲಯದಲ್ಲೇ ಎಲ್ಲಾ ಅಧಿಕಾರಿಗಳು ಇರುತ್ತಾರೆ. ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವರು ಬಜೆಟ್ ಮಂಡಿಸಿದ ನಂತರವೇ ಈ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸಂಪರ್ಕಕ್ಕೆ ಬರುತ್ತಾರೆ.
ಐತಿಹಾಸಿಕ ಕ್ರಮದ ಭಾಗವಾಗಿ, 2021-22ನೇ ಸಾಲಿನ ಕೇಂದ್ರ ಆಯವ್ಯಯವನ್ನು ಮೊದಲ ಬಾರಿಗೆ ಕಾಗದರಹಿತ ರೂಪದಲ್ಲಿ ಮಂಡಿಸಲಾಯಿತು. ಬಜೆಟ್ ದಾಖಲೆಗಳನ್ನು ಸಂಸತ್ ಸದಸ್ಯರು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗಲು "ಕೇಂದ್ರ ಬಜೆಟ್ ಮೊಬೈಲ್ ಆ್ಯಪ್"ಅನ್ನು ಸಹ ಪ್ರಾರಂಭಿಸಲಾಗಿದೆ. 2022ರ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರ 2022-23ನೇ ಸಾಲಿನ ಕೇಂದ್ರ ಆಯವ್ಯಯವು ಮೊಬೈಲ್ ಆ್ಯಪ್‌ನಲ್ಲಿಯೂ ಲಭ್ಯವಿರಲಿದೆ.
ಬಜೆಟ್ ಭಾಷಣ, ವಾರ್ಷಿಕ ಹಣಕಾಸು ತಃಖ್ತೆ(ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲಾಗುತ್ತದೆ), ಅನುದಾನಗಳ ಬೇಡಿಕೆ (ಡಿಜಿ), ಹಣಕಾಸು ವಿಧೇಯಕ ಸೇರಿದಂತೆ ಕೇಂದ್ರ ಬಜೆಟ್‌ಗೆ ಸಂಬಂಧಿಸಿದ 14 ದಾಖಲೆಗಳಿಗೆ ಸಂವಿಧಾನದ ಪ್ರಕಾರ ಸಂಪೂರ್ಣ ಪ್ರವೇಶಾವಕಾಶವನ್ನು ಮೊಬೈಲ್ ಆ್ಯಪ್ ಮೂಲಕ ಅನುಮತಿಸಲಾಗುತ್ತದೆ. ಈ ಮೊಬೈಲ್ ತಂತ್ರಾಂಶವು ದ್ವಿಭಾಷಾ (ಇಂಗ್ಲಿಷ್ ಮತ್ತು ಹಿಂದಿ) ಸೌಲಭ್ಯ ಹೊಂದಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ವೇದಿಕೆಗಳಲ್ಲಿ ಲಭ್ಯವಿದೆ.
ಈ ಆ್ಯಪ್ ಅನ್ನು ಕೇಂದ್ರ ಬಜೆಟ್ ವೆಬ್ ಪೋರ್ಟಲ್(www.indiabudget.gov.in) ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬಜೆಟ್ ದಾಖಲೆಗಳು ಜನಸಾಮಾನ್ಯರಿಗೆ ಕೇಂದ್ರ ಬಜೆಟ್ ವೆಬ್ ಪೋರ್ಟಲ್‌ನಲ್ಲೂ (www.indiabudget.gov.in) ಸಹ ಡೌನ್‌ಲೋಡ್ ಮಾಡಲು ಲಭ್ಯವಿರುತ್ತವೆ.
***
(Release ID: 1793240)
Visitor Counter : 369