ಗೃಹ ವ್ಯವಹಾರಗಳ ಸಚಿವಾಲಯ
ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ್ 2022
ಈ ವರ್ಷದ ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರಕ್ಕೆ ಗುಜರಾತ್ ನ ವಿಪತ್ತು ನಿರ್ವಹಣಾ ಸಂಸ್ಥೆ (ಅಂತಾರಾಷ್ಟ್ರೀಯ ವಿಭಾಗದಲ್ಲಿ) ಮತ್ತು ಪ್ರೊ.ವಿನೋದ್ ಶರ್ಮಾ (ವೈಯಕ್ತಿಕ ವಿಭಾಗದಲ್ಲಿ) ಆಯ್ಕೆ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಅಂಗವಾಗಿ ಇಂದು ಸಂಜೆ ನೇತಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ 2019, 2020 ಮತ್ತು 2021ನೇ ಸಾಲಿನ ಪುರಸ್ಕೃತರೊಂದಿಗೆ ಇವರಿಗೂ ಪ್ರಶಸ್ತಿ ಪ್ರದಾನ
Posted On:
23 JAN 2022 9:06AM by PIB Bengaluru
ಭಾರತ ಸರ್ಕಾರವು ವಿಪತ್ತು ನಿರ್ವಹಣಾ ವಲಯದಲ್ಲಿ ದೇಶದಲ್ಲಿನ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು, ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ್ ಎಂದು ಕರೆಯುವ ವಾರ್ಷಿಕ ಪ್ರಶಸ್ತಿಗಳನ್ನು ಸ್ಥಾಪಿಸಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪ್ರತಿ ವರ್ಷ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಪ್ರಶಸ್ತಿಯು ಸಂಸ್ಥೆಗಳ ವಿಭಾಗದಲ್ಲಿ 51 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರ ಹಾಗೂ ವೈಯಕ್ತಿಕ ವಿಭಾಗದಲ್ಲಿ 5 ಲಕ್ಷ ರೂ. ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ.
ಈ ವರ್ಷ ಪ್ರಶಸ್ತಿಗಾಗಿ 2021ರ ಜುಲೈ1 ರಿಂದ ನಾಮನಿರ್ದೇಶನಗಳನ್ನು ಕೋರಲಾಗಿತ್ತು. 2022 ರ ಪ್ರಶಸ್ತಿಯ ಕುರಿತು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಯಿತು. ಪ್ರಶಸ್ತಿ ಪ್ರಸ್ತಾವಕ್ಕೆ ಪ್ರತಿಯಾಗಿ, ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ 243 ಅರ್ಹ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ.
2022ನೇ ಸಾಲಿನಲ್ಲಿ ವಿಪತ್ತು ನಿರ್ವಹಣೆಯಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರಕ್ಕೆ (i) ಗುಜರಾತ್ ನ ವಿಪತ್ತು ನಿರ್ವಹಣಾ ಸಂಸ್ಥೆ (ಸಂಸ್ಥೆಗಳ ವಿಭಾಗದಲ್ಲಿ) ಮತ್ತು (ii) ಪ್ರೊಫೆಸರ್ ವಿನೋದ್ ಶರ್ಮಾ (ವೈಯಕ್ತಿಕ ವಿಭಾಗದಲ್ಲಿ) ಆಯ್ಕೆಯಾಗಿದ್ದಾರೆ.
ವಿಪತ್ತು ನಿರ್ವಹಣಾ ವಲಯದಲ್ಲಿ 2022ನೇ ಸಾಲಿನ ಪ್ರಶಸ್ತಿ ವಿಜೇತರ ಅಸಾಮಾನ್ಯ ಕಾರ್ಯದ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.
- ಗುಜರಾತ್ ವಿಪತ್ತು ನಿರ್ವಹಣಾ ಸಂಸ್ಥೆ (ಜಿಐಡಿಎಂ), 2012 ರಲ್ಲಿ ಸ್ಥಾಪಿಸಲಾಯಿತು. ಗುಜರಾತ್ ನ ವಿಪತ್ತು ಅಪಾಯ ಕಡಿತ (ಡಿಆರ್ ಆರ್) ಸಾಮರ್ಥ್ಯ ವೃದ್ಧಿಗೆ ಗುಜರಾತ್ ವಿಪತ್ತು ನಿರ್ವಹಣಾ ಸಂಸ್ಥೆ (ಜಿಐಡಿಎಂ) ಕೆಲಸ ಮಾಡುತ್ತಿದೆ. ವ್ಯೂಹಾತ್ಮಕವಾಗಿ ವಿನ್ಯಾಸಗೊಳಿಸಲಾದ ಸಾಮರ್ಥ್ಯ ಅಭಿವೃದ್ಧಿ ಸರಣಿಯ ಕಾರ್ಯಕ್ರಮಗಳ ಮೂಲಕ, ಸಾಂಕ್ರಾಮಿಕ ಸಮಯದಲ್ಲಿ ಬಹು-ಅಪಾಯದ ಅಪಾಯ ನಿರ್ವಹಣೆ ಮತ್ತು ಕಡಿತಕ್ಕೆ ಸಂಬಂಧಿಸಿದ ವೈವಿಧ್ಯಮಯ ವಿಷಯಗಳ ಕುರಿತು ಜಿಐಡಿಎಂ 12,000 ಕ್ಕೂ ಅಧಿಕ ವೃತ್ತಿಪರರಿಗೆ ತರಬೇತಿ ನೀಡಿದೆ. ಕೆಲವು ಇತ್ತೀಚಿನ ಪ್ರಮುಖ ಉಪಕ್ರಮಗಳಲ್ಲಿ ಬಳಕೆದಾರ ಸ್ನೇಹಿ ಗುಜರಾತ್ ಅಗ್ನಿ ಸುರಕ್ಷತೆ ಅನುಸರಣೆ ಪೋರ್ಟಲ್ ಅಭಿವೃದ್ಧಿ, ಮತ್ತು ಸಮಗ್ರ ರೋಗ ಕಣ್ಗಾವಲು ಯೋಜನೆಯ ಕೋವಿಡ್-19 ಕಣ್ಗಾವಲು ಪ್ರಯತ್ನಗಳಿಗೆ ಪೂರಕವಾಗಿ ಮೊಬೈಲ್ ಅಪ್ಲಿಕೇಶನ್ ತಂತ್ರಜ್ಞಾನ ಆಧಾರಿತ ಸುಧಾರಿತ ಕೋವಿಡ್-19 ಸಿಂಡ್ರೋಮ್ ಕಣ್ಗಾವಲು (ಎಸಿಎಸ್ ವೈಎಸ್) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
- ಪ್ರೊ.ವಿನೋದ್ ಶರ್ಮಾ, ಭಾರತೀಯ ಸಾರ್ವಜನಿಕ ಆಡಳಿತ ಕೇಂದ್ರದ ಹಿರಿಯ ಪ್ರೊಫೆಸರ್ ಮತ್ತು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ರಾಷ್ಟ್ರೀಯ ಕೇಂದ್ರದ ಸಂಸ್ಥಾಪಕ ಸಂಯೋಜಕರಾಗಿದ್ದರು, ಇದೀಗ ಅದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವೆಂದು ಕರೆಯಲಾಗುತ್ತದೆ. ಅವರು ವಿಪತ್ತು ಅಪಾಯ ಕಡಿತ (ಡಿಆರ್ಆರ್) ಅನ್ನು ರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಮುಂಚೂಣಿಗೆ ತರಲು ಅವಿರತವಾಗಿ ಶ್ರಮಿಸಿದ್ದಾರೆ. ಭಾರತದಲ್ಲಿನ ಡಿಆರ್ ಆರ್ ನಲ್ಲಿನ ಅವರ ಪ್ರವರ್ತಕ ಕೆಲಸವು ಅವರಿಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ ಮತ್ತು ಅವರು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ತರಬೇತಿ ಅಕಾಡೆಮಿ (ಎಲ್ ಬಿ ಎಸ್ ಎನ್ ಎಎ) ಮತ್ತು ವಿಪತ್ತು ನಿರ್ವಹಣೆಗಾಗಿ ಎಲ್ಲಾ ಆಡಳಿತಾತ್ಮಕ ತರಬೇತಿ ಸಂಸ್ಥೆಗಳಿಗೆ (ಎಟಿಐಗಳಿಗೆ) ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ಅವರು ಪಂಚಾಯತ್ ಮಟ್ಟದ ಸನ್ನದ್ಧತೆ ಯೋಜನೆಗಳನ್ನು ಆರಂಭಿಸುವ ಮೂಲಕ ಮತ್ತು ಹವಾಮಾನ ಬದಲಾವಣೆ ಮತ್ತು ಡಿಆರ್ ಆರ್ ನಡುವೆ ಅನ್ನು ಸಂಯೋಜಿಸುವ ಮೂಲಕ ಡಿಆರ್ ಆರ್ ಅನ್ನು ಅನುಷ್ಠಾನಗೊಳಿಸುವಲ್ಲಿ ಸಿಕ್ಕಿಂ ಅನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಸ್ಮರಣಾರ್ಥ ಇಂದು ಸಂಜೆ ನಡೆಯಲಿರುವ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019, 2020 ಮತ್ತು 2021 ನೇ ಸಾಲಿನ ಪ್ರಶಸ್ತಿ ಪುರಸ್ಕೃತರೊಂದಿಗೆ ಇವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡುವರು.
***
(Release ID: 1791927)
Visitor Counter : 344