ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು NDRF ತಂಡಕ್ಕೆ ಅವರ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದರು

Posted On: 19 JAN 2022 10:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಕ್ಕೆ ಅವರ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.

 ಸರಣಿ ಟ್ವೀಟ್ ಮಾಡಿರುವ, ಪ್ರಧಾನಿ ಅವರು;

"ಕಠಿಣ ಪರಿಶ್ರಮಿ @NDRFHQ ತಂಡಕ್ಕೆ ಅವರ ಸಂಸ್ಥಾಪನಾ ದಿನದಂದು ಶುಭಾಶಯಗಳು. ಅವರು ಅನೇಕ ರಕ್ಷಣಾ ಕಾರ್ಯಗಳು ಮತ್ತು ಪರಿಹಾರ ಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದಾರೆ, ಆಗಾಗ್ಗೆ ತುಂಬಾ ಸವಾಲಿನ ಸಂದರ್ಭಗಳಲ್ಲಿ. NDRF ನ ಧೈರ್ಯ ಮತ್ತು ವೃತ್ತಿಪರತೆ ಅತ್ಯಂತ ಪ್ರೇರಕವಾಗಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು.

ಸರ್ಕಾರಗಳು ಮತ್ತು ನೀತಿ ನಿರೂಪಕರಿಗೆ ವಿಪತ್ತು ನಿರ್ವಹಣೆ ಒಂದು ಪ್ರಮುಖ ವಿಷಯವಾಗಿದೆ. ವಿಪತ್ತು ನಿರ್ವಹಣಾ ತಂಡಗಳು ವಿಪತ್ತುಗಳ ನಂತರದ ಪರಿಸ್ಥಿತಿಯನ್ನು ತಗ್ಗಿಸುವ ಪ್ರತಿಕ್ರಿಯಾತ್ಮಕ ವಿಧಾನದ ಜೊತೆಗೆ, ನಾವು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯದ ಬಗ್ಗೆ ಯೋಚಿಸಬೇಕು ಮತ್ತು ವಿಷಯದ ಸಂಶೋಧನೆಯ ಮೇಲೆ ಕೇಂದ್ರೀಕರಿಸಬೇಕು,

ಭಾರತವು 'ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ'ದ ರೂಪದಲ್ಲಿ ಪ್ರಯತ್ನವನ್ನು ಕೈಗೊಂಡಿದೆ. ನಮ್ಮ ಎನ್‌ಡಿಆರ್‌ಎಫ್ ತಂಡಗಳ ಕೌಶಲ್ಯಗಳನ್ನು ಇನ್ನಷ್ಟು ಚುರುಕುಗೊಳಿಸುವಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಇದರಿಂದ ಯಾವುದೇ ಸವಾಲಿನ ಸಮಯದಲ್ಲಿ ನಾವು ಗರಿಷ್ಠ ಜೀವ ಮತ್ತು ಆಸ್ತಿಯನ್ನು ಉಳಿಸಬಹುದು, ಎಂದಿದ್ದಾರೆ.

***

 



(Release ID: 1790879) Visitor Counter : 213