ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಾರಿ ಶಕ್ತಿ ಪುರಸ್ಕಾರ 2021ಕ್ಕೆ ಆರ್ಜಿ ಆಹ್ವಾನ


ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಕ್ಷೇತ್ರದಲ್ಲಿ ಉನ್ನತ ಕಾರ್ಯ ಮಾಡಿದವರನ್ನು ಗುರುತಿಸಿ, ಈ ಪುರಸ್ಕಾರ ನೀಡಲಾಗುತ್ತದೆ

ಆನ್‌ ಲೈನ್‌ ಅರ್ಜಿ ಹಾಗೂ ಹೆಸರುಗಳನ್ನು ಶಿಫಾರಸು ಮಾಡಲು ಜನವರಿ 31 ಕೊನೆಯ ದಿನವಾಗಿದೆ

Posted On: 06 JAN 2022 3:06PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2021 ಸಾಲಿನ ನಾರಿ ಶಕ್ತಿ ಪುರಸ್ಕಾರ್‌ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಮತ್ತು ಶಿಫಾರಸುಗಳನ್ನು ಆನ್‌ಲೈನಿನಲ್ಲಿ ಬಂದರೆ ಮಾತ್ರ ಪರಿಗಣಿಸಲಾಗುವುದು. ಆನ್‌ಲೈನ್‌ ಅರ್ಜಿಗಳು  www.awards.gov.in. ವೆಬ್ ಸೈಟಿನಲ್ಲಿ ಲಭ್ಯ ಇವೆ. .31ರವರೆಗೆ ಸಲ್ಲಿಸಿದ ಅರ್ಜಿ ಮತ್ತು ಶಿಫಾರಸುಗಳನ್ನು ಪರಿಗಣಿಸಲಾಗುವುದು.

ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣ ಕ್ಷೇತ್ರದಲ್ಲಿ ಗುರುತರ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ನಾರಿ ಶಕ್ತಿ ಪುರಸ್ಕಾರ್‌ 2021ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರತಿ ವರ್ಷ ಮಾರ್ಚ್‌ 8ರಂದು ಪ್ರಶಸ್ತಿ ನೀಡುತ್ತದೆ. ಸಲವೂ ಅಂತರರಾಷ್ಟ್ರೀಯ ಮಹಿಳಾ ದಿನ ಮಾರ್ಚ್8 2022ರಂದು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.   https://wcd.nic.in/acts/guidelines-nari-shakti-puraskar-2021-onwards ವೆಬ್‌ಸೈಟಿನಲ್ಲಿ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರಿಗೆ ಇರಬೇಕಾದ ಅರ್ಹತೆ, ಮಾನದಂಡಗಳ ಕುರಿತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಾರಿ ಶಕ್ತಿ ಪುರಸ್ಕಾರವನ್ನು ಪ್ರತಿ ವರ್ಷ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ  ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾಮಾಜಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಮಹಿಳೆಯರನ್ನು ಹೆಚ್ಚು ಗುರುತಿಸಲಾಗುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ 2 ಲಕ್ಷ ರೂಪಾಯಿ ಹಾಗೂ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದೆ.

ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ಗರಿಷ್ಠ 15 ಜನರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಖ್ಯೆಯನ್ನು ಮೀರಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವುದಾದರೆ, ಸ್ವಾತಂತ್ರ್ಯವನ್ನು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಬಿಟ್ಟಿರುತ್ತದೆ. ನಿಯಮ ಸಡಲಿಕೆಯ ಸಾಧ್ಯತೆಯನ್ನು ಆಯ್ಕೆ ಸಮಿತಿಯು ನಿರ್ಧರಿಸುತ್ತದೆ. ಆಯ್ಕೆ ಸಮಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಅಧ್ಯಕ್ಷರಾಗಿರುತ್ತಾರೆ

ಪ್ರಶಸ್ತಿಗಾಗಿ ಸ್ವಯಂ ನಾಮಪತ್ರ ಸಲ್ಲಿಸಬಹುದು. ಶಿಫಾರಸುಗಳನ್ನೂ ಲಗತ್ತಿಸಿದರೂ ಪರಿಗಣಿಸಲಾಗುವುದು. ಕೆಲವೊಮ್ಮೆ ಆಯ್ಕೆ ಸಮಿತಿಯು ಸ್ವ ಆಸಕ್ತಿಯಿಂದಲೂ ಕೆಲವು ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳನ್ನೂ ಪರಿಗಣಿಸಿಬಹುದು. ಪ್ರಶಸ್ತಿಗೆ ನ್ಯಾಯ ಸಲ್ಲಿಸುವಂತಹ ಕ್ರಮಕೈಗೊಳ್ಳಲು ಅವರಿಗೆ ಸ್ವಾತಂತ್ರ್ಯ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮೊದಲ ಸುತ್ತಿನ ಆಯ್ಕೆ ನಡೆಯುತ್ತದೆ. ಬಂದಿರುವ ಅರ್ಜಿಗಳನ್ನು ವಿಂಗಡಿಸಿ, ಅಂತಿಮ ಸುತ್ತಿಗೆ ಕೆಲವು ನಾಮನಿರ್ದೇಶನಗಳನ್ನು, ಹಾಗೂ ಅರ್ಜಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಕ್ತಿ ಹಾಗೂ ಸಂಘಸಂಸ್ಥೆಗಳ ಸಾಧನೆ ಏನು? ಕಾರ್ಯವೈಖರಿ ಏನು ಎಂಬುದನ್ನು ಗಮನಿಸಲಾಗುತ್ತದೆ. ನಾಮಪತ್ರ ಸಲ್ಲಿಸಿದವರ, ಶಿಫಾರಸು ಮಾಡಿದವರ ಸಾಧನೆಗಳನ್ನು ಗಮನದಲ್ಲಿರಿಸಿಕೊಂಡು ಮೊದಲ ಸುತ್ತಿನಲ್ಲಿ ಅರ್ಜಿ ಆಹ್ವಾನಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಿಮ ಸುತ್ತಿನ ಆಯ್ಕೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಆಯ್ಕೆ ಸಮಿತಿ ರಚಿಸಲಾಗಿರುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಆಗಿರುತ್ತಾರೆ. ಅವರು ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿ, ಶಿಫಾರಸು ಮಾಡಿರುವ ಕೆಲವು ನಾಮನಿರ್ದೇಶನಗಳನ್ನು ಆಯ್ಕೆ ಸಮಿತಿಯ ಅನುಮೋದನೆಯ ಮೇರೆಗೆ ಮರುಪರಿಶೀಲಿಸಿ, ಪ್ರಶಸ್ತಿಗಾಗಿ ಪರಿಗಣಿಸುತ್ತಾರೆ.

***



(Release ID: 1788081) Visitor Counter : 228