ಸಂಪುಟ

ಸೀಮಾ ಸುಂಕದ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ನೆರವು ಕುರಿತಂತೆ ಭಾರತ ಮತ್ತು ಸ್ಪೇನ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 06 JAN 2022 4:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸೀಮಾಸುಂಕ (ಕಸ್ಟಮ್ಸ್) ವಿಷಯಗಳಲ್ಲಿನ ಸಹಕಾರ ಮತ್ತು ಪರಸ್ಪರ ನೆರವು ಕುರಿತ ಭಾರತ ಮತ್ತು ಸ್ಪೇನ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಪ್ರಯೋಜನಗಳು:

ಒಪ್ಪಂದವು ಸೀಮಾಸುಂಕ ಅಪರಾಧಗಳ ತಡೆಗಟ್ಟುವಿಕೆ ಮತ್ತು ತನಿಖೆ ಮತ್ತು ಕಸ್ಟಮ್ಸ್ ಅಪರಾಧಿಗಳನ್ನು ಬಂಧಿಸಲು ಲಭ್ಯವಿರುವ, ವಿಶ್ವಾಸಾರ್ಹ, ತ್ವರಿತ ಮತ್ತು ವೆಚ್ಚ-ಪರಿಣಾಮಕಾರಿಯಾದ ಮಾಹಿತಿ ಮತ್ತು ಬೇಹುಗಾರಿಕೆ ಮಾಹಿತಿ ಲಭ್ಯವಾಗುವಂತೆ ಮಾಡಲು ನೆರವಾಗುತ್ತದೆ.

ಒಪ್ಪಂದವು ಎರಡೂ ದೇಶಗಳ ಸೀಮಾಸುಂಕ ಅಧಿಕಾರಿಗಳ ನಡುವೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಕಾನೂನು ಚೌಕಟ್ಟನ್ನು ಒದಗಿಸುತ್ತದೆ ಮತ್ತು ಸೀಮಾಸುಂಕ ಕಾನೂನುಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಸೀಮಾಸುಂಕ ಅಪರಾಧಗಳನ್ನು ಪತ್ತೆ ಹಚ್ಚಲು ಮತ್ತು ತನಿಖೆ ನಡೆಸಲು ಹಾಗೂ ಕಾನೂನುಬದ್ಧ ವ್ಯಾಪಾರವನ್ನು ಸುಗಮಗೊಳಿಸುವಲ್ಲಿ ನೆರವಾಗುತ್ತದೆ.

ಒಪ್ಪಂದವು ಕೆಳಗಿನ ನಿಬಂಧನೆಗಳನ್ನು ಒಳಗೊಂಡಿದೆ:

  1. ಅಂದರೆ, ಸೀಮಾ ಸುಂಕಗಳ ಸರಿಯಾದ ಮೌಲ್ಯಮಾಪನ, ವಿಶೇಷವಾಗಿ ಸೀಮಾಸುಂಕದ ಮೌಲ್ಯ, ಸುಂಕ ವರ್ಗೀಕರಣ ಮತ್ತು ಎರಡೂ ದೇಶಗಳ ನಡುವೆ ವ್ಯಾಪಾರ ಮಾಡುವ ಸರಕುಗಳ ಮೂಲಕ್ಕೆ ಸಂಬಂಧಿಸಿದ ಮಾಹಿತಿ
  2. ಘೋಷಣೆಗೆ ಬೆಂಬಲವಾಗಿ ಸಲ್ಲಿಸಲಾದ ದಸ್ತಾವೇಜುಗಳ (ಮೂಲ ಪ್ರಮಾಣ ಪತ್ರ, ಇನ್ವಾಯ್ಸ್ ಗಳು ಇತ್ಯಾದಿ) ಕುರಿತಂತೆ ವಿನಂತಿಸಿದ ಪ್ರಾಧಿಕಾರಕ್ಕೆ ಸತ್ಯಾಸತ್ಯತೆ ಮಾಹಿತಿ;
  3. ಕೆಳಗಿನವುಗಳ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ಕಸ್ಟಮ್ಸ್ ಅಪರಾಧ:
  1. ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಸ್ಫೋಟಕ ಸಾಧನಗಳು
  2. ಪುರಾತತ್ವ ಮೌಲ್ಯವುಳ್ಳ ಗಮನಾರ್ಹವಾದ ಐತಿಹಾಸಿಕ, ಸಾಂಸ್ಕೃತಿಕ ಕಲಾಕೃತಿಗಳು ಮತ್ತು ಪ್ರಾಚೀನ ವಸ್ತುಗಳು
  3. ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ವಿಷಕಾರಿಯಾದ ವಸ್ತುಗಳು ಮತ್ತು ಇತರ ವಸ್ತುಗಳು;
  4. ಸರಕುಗಳು ಗಣನೀಯವಾಗಿ ಸೀಮಾ ಸುಂಕಗಳು ಅಥವಾ ತೆರಿಗೆಗಳಿಗೆ ಒಳಪಟ್ಟಿರುತ್ತವೆ;
  5. ಸೀಮಾಸುಂಕ ಶಾಸನದ ವಿರುದ್ಧ ಸೀಮಾಸುಂಕ ಅಪರಾಧಗಳನ್ನು ಮಾಡಲು ಬಳಸುವ ಹೊಸ ಸ್ವರೂಪಗಳು ಮತ್ತು ವಿಧಾನಗಳು.

***



(Release ID: 1788054) Visitor Counter : 227