ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಎದುರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರವು ಹೊಸ  ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ) ಗಳ ಬಿಡುಗಡೆ

Posted On: 06 JAN 2022 3:25PM by PIB Bengaluru

ಓಮಿಕ್ರಾನ್ ನಿಂದಾಗಿ  ಕೋವಿಡ್ ಪ್ರಕರಣಗಳ ತೀವ್ರ ಏರಿಕೆಯನ್ನು ಎದುರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರವು  ಹೊಸ ಎಸ್‌ಒಪಿ ಯನ್ನು ತಂದಿದೆ. ಕ್ರಮಗಳನ್ನು ವಿವಿಧ ರಾಷ್ಟ್ರೀಯ ಉತ್ಕೃಷ್ಟತೆಯ ಕೇಂದ್ರಗಳು (ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ಎನ್‌ಸಿಒಇ) ಹಾಗೂ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಕಟ್ಟುನಿಟ್ಟಾಗಿ ಅಳವಡಿಸಲಾಗುವುದು.

ತರಬೇತಿ ಕೇಂದ್ರಗಳಿಗೆ ಆಗಮಿಸಿದ ನಂತರ, ಎಲ್ಲಾ ಕ್ರೀಡಾಪಟುಗಳು ಕಡ್ಡಾಯವಾದ ರಾಪಿಡ್ ಆಂಟಿಜೆನ್ ಪರೀಕ್ಷೆಗೆ (ಆರ್‌ ಟಿ) ಒಳಗಾಗುತ್ತಾರೆ. ಪರೀಕ್ಷೆಯು ನಕಾರಾತ್ಮಕವಾಗಿ ಬಂದರೆ, ಅವರು ಸೇರಿದ ಆರನೇ ದಿನದವರೆಗೆ ಪ್ರತ್ಯೇಕವಾಗಿ ಊಟ ಮತ್ತು ತರಬೇತಿ ಮಾಡುತ್ತಾರೆ. ಆರ್‌ಎಟಿ ಯನ್ನು  5 ನೇ ದಿನದಂದು ಪುನರಾವರ್ತಿಸಲಾಗುತ್ತದೆ.   ಧೃಡಪಟ್ಟ ಫಲಿತಾಂಶವನ್ನು ಪಡೆದವರು ಆರ್‌ಟಿಪಿಸಿಆರ್  ಪರೀಕ್ಷೆಗೆ ಒಳಗಾಗುತ್ತಾರೆ ಮತ್ತುಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ.   ಪರೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದ   ಕ್ರೀಡಾಪಟುಗಳು ಸಾಮಾನ್ಯ ತರಬೇತಿಯನ್ನು ಮುಂದುವರಿಸುತ್ತಾರೆ.

ಶಿಬಿರಗಳಾದ್ಯಂತ ಕೋವಿಡ್ ಪಾಸಿಟಿವ್ ಅಥವಾ ರೋಗಲಕ್ಷಣದ ಅಥ್ಲೀಟ್‌ಗಳಿಗೆ ಸರಿಯಾದ ಪ್ರತ್ಯೇಕ ಸೌಲಭ್ಯಗಳನ್ನು ನಿಗದಿಪಡಿಸಲಾಗಿದೆ ಮತ್ತು ಸೌಲಭ್ಯಗಳನ್ನು ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತದೆಮೈಕ್ರೋ ಬಯೋ ಬಬಲ್ ಕೂಡ ಇರುತ್ತದೆ, ಅಲ್ಲಿ ಕ್ರೀಡಾಪಟುಗಳನ್ನು ತರಬೇತಿ ಮತ್ತು ಊಟಕ್ಕಾಗಿ ಸಣ್ಣ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇತರ ಗುಂಪುಗಳೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸಲು ಕ್ರೀಡಾಪಟುಗಳಿಗೆ ಕಟ್ಟುನಿಟ್ಟಾಗಿ ಹೇಳಲಾಗಿದೆ.

ಪ್ರತಿ 15 ದಿನಗಳಿಗೊಮ್ಮೆ ಎನ್‌ಸಿಒಇನಲ್ಲಿ ಕ್ರೀಡಾಪಟುಗಳು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ವಸತಿ ರಹಿತ ಸಿಬ್ಬಂದಿಗಳ ನಿರ್ದಿಷ್ಟಪಡಿಸದ ಪರೀಕ್ಷೆಯೂ ಇರುತ್ತದೆ. ಆಯಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್‌ಎಸ್‌ಎಫ್‌ಗಳು) ಮತ್ತು ಎಸ್‌ಎಐ ಹೆಚ್‌ಕ್ಯು ಅಧಿಕಾರಿಗಳು ಶಿಫಾರಸು ಮಾಡಿದ ಸ್ಪರ್ಧೆಗಳಲ್ಲಿ ಮಾತ್ರ ಕ್ರೀಡಾಪಟುಗಳು ಭಾಗವಹಿಸಬೇಕೆಂದು ಶಿಫಾರಸು ಮಾಡಲಾಗಿದೆ. ಆಹ್ವಾನಿತ ಪಂದ್ಯಾವಳಿಗಳು ಮತ್ತು ಒಲಂಪಿಕ್ ಅಲ್ಲದ ಅರ್ಹತಾ ಈವೆಂಟ್‌ಗಳಿಗೆ, ಎನ್‌ಸಿಒಇ ಗಳ ಸಂಬಂಧಿತ ಪ್ರಾದೇಶಿಕ ನಿರ್ದೇಶಕರು (ಆರ್‌ ಡಿ) ಶಿಫಾರಸುಗಳನ್ನು ಮಾಡುತ್ತಾರೆ.

ಆಯಾ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳು ನಿರ್ದಿಷ್ಟ ರಾಜ್ಯಗಳಲ್ಲಿ   ವಿಧಾನ (ಎಸ್‌ ಪಿ) ಗಳ ಬದಲಾಗಿ ಇರುತ್ತವೆ ಎನ್ನುವುದನ್ನು ಸಹ ಗಮನಿಸಬೇಕು.

***


(Release ID: 1788005) Visitor Counter : 201