ಹಣಕಾಸು ಸಚಿವಾಲಯ
azadi ka amrit mahotsav

17 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ 9,871 ಕೋಟಿ ರೂ. ಬಿಡುಗಡೆ


ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು 98,710 ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ

Posted On: 06 JAN 2022 1:28PM by PIB Bengaluru

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಬಿಡುಗಡೆ ಮಾಡಿದ 10ನೇ ಕಂತಿನ ಪಿಡಿಆರ್ ಡಿ ಅನುದಾನವಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಅರ್ಹ ರಾಜ್ಯಗಳಿಗೆ 98,710 ಕೋಟಿ ರೂ. ಬದಲಾವಣೆ ನಂತರದ ಆದಾಯ ಕೊರತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ರಾಜ್ಯವಾರು ಬಿಡುಗಡೆ ಮಾಡಿರುವ ಪೋಸ್ಟ್ ಡಿವೊಲ್ಯುಷನ್ ರೆವಿನ್ಸೂ ಡೆಫಿಸಿಟ್ ಅನುದಾನ ಬಿಡುಗಡೆಯ ವಿವರಗಳನ್ನು ಕೆಳಗೆ ಅಡಕಗೊಳಿಸಲಾಗಿದೆ.

ಸಂವಿಧಾನದ ಕಲಂ 275ರಡಿ ರಾಜ್ಯಗಳಿಗೆ ವಿಕೇಂದ್ರೀಕರಣ ನಂತರದ ಆದಾಯ ಕೊರತೆ ಅನುದಾನವನ್ನು ನೀಡಲಾಗುವುಉದ. ವಿಕೇಂದ್ರೀಕರಣದ ನಂತರ ರಾಜ್ಯಗಳು ಅನುಭವಿಸುವ ಆದಾಯ ಕೊರತೆಯ ಅಂತರವನ್ನು ನೀಗಿಸಲು 15ನೇ ಹಣಕಾಸು ಯೋಜನೆಯಡಿ ಶಿಫಾರಸ್ಸಿನಂತೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆಯೋಗ ಪಿಡಿಆರ್ ಡಿ ಅನುದಾನವನ್ನು 17 ರಾಜ್ಯಗಳಿಗೆ ಶಿಫಾರಸು ಮಾಡಿದೆ ಮತ್ತು ಅದನ್ನು ಪ್ರತಿ ತಿಂಗಳು ಕಂತಿನ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

2021-22ನೇ ಹಣಕಾಸು ವರ್ಷದಲ್ಲಿ ಕೊರತೆಯನ್ನು ಅಂದಾಜು ಮಾಡಿ, ರಾಜ್ಯಗಳ ಆದಾಯ ಮತ್ತು ವೆಚ್ಚ ಎರಡರ ನಡುವಿನ ಕೊರತೆಯ ಮೌಲ್ಯಮಾಪನ ಆಧರಿಸಿ ಆಯೋಗ ರಾಜ್ಯಗಳಿಗೆ ಅರ್ಹ ಅನುದಾನವನ್ನು ನಿರ್ಧರಿಸುತ್ತದೆ. 15ನೇ ಹಣಕಾಸು ಆಯೋಗ 2021-22ನೇ ಹಣಕಾಸು ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟಾರೆ ವಿಕೇಂದ್ರೀಕರಣದ ನಂತರ 1,48,452 ಕೋಟಿ ರೂ. ಆದಾಯ ಕೊರತೆ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲು ಶಿಫಾರಸು ಮಾಡಿತ್ತು. ಪೈಕಿ 98,710 ಕೋಟಿ (ಶೇ.83.33) ರಷ್ಟನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ

15ನೇ ಹಣಕಾಸು ಆಯೋಗ ಆದಾಯ ಕೊರತೆ ಅನುದಾನ ಪಡೆಯಲು ಶಿಫಾರಸು ಮಾಡಿರುವ ರಾಜ್ಯಗಳೆಂದರೆ, ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ.

ಬದಲಾವಣೆ ನಂತರ ಆದಾಯ ಕೊರತೆ ಅನುದಾನ ಬಿಡುಗಡೆ ವಿವರ

 (ಕೋಟಿ ರೂ.ಗಳಲ್ಲಿ )

ಕ್ರ.ಸಂ.

ರಾಜ್ಯಗಳ ಹೆಸರು

ಜನವರಿ 2022ರವರೆಗೆ ಬಿಡುಗಡೆಯಾಗಿರುವ ಮೊತ್ತ (10ನೇ ಕಂತು )

2021-22ರಲ್ಲಿ ಬಿಡುಗಡೆ ಆಗಿರುವ ಒಟ್ಟು ಮೊತ್ತ

1

ಆಂಧ್ರಪದೇಶ

1438.08

14380.83

2

ಅಸ್ಸಾಂ

531.33

5313.33

3

ಹರಿಯಾಣ

11.00

110.00

4

ಹಿಮಾಚಲ ಪ್ರದೇಶ

854.08

8540.83

5

ಕರ್ನಾಟಕ

135.92

1359.17

6

ಕೇರಳ

1657.58

16575.83

7

ಮಣಿಪುರ

210.33

2103.33

8

ಮೇಘಾಲಯ

106.58

1065.83

9

ಮಿಜೋರಾಂ

149.17

1491.67

10

ನಾಗಾಲ್ಯಾಂಡ್

379.75

3797.50

11

ಪಂಜಾಬ್

840.08

8400.83

12

ರಾಜಸ್ಥಾನ್

823.17

8231.67

13

ಸಿಕ್ಕಿಂ

56.50

565.00

14

ತಮಿಳುನಾಡು

183.67

1836.67

15

ತ್ರಿಪುರಾ

378.83

3788.33

16

ಉತ್ತರಾಖಂಡ್

647.67

6476.67

17

ಪಶ್ಚಿಮ ಬಂಗಾಳ

1467.25

14672.50

 

ಒಟ್ಟು

9871.00

98710.00

***


(Release ID: 1787972) Visitor Counter : 216