ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19: ಸತ್ಯ ಮತ್ತು ಮಿಥ್ಯೆ


ಭಾರತದಲ್ಲಿ ಅವಧಿ ಮೀರಿದ ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು ಮತ್ತು ದಾರಿ ತಪ್ಪಿಸುವಂತಿವೆ

ಸಿ ಡಿ ಎಸ್ ಸಿ ಒ ಈ ಹಿಂದೆಯೇ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಬಳಕೆಯ ಅವಧಿಯನ್ನು ಕ್ರಮವಾಗಿ 12 ತಿಂಗಳು ಮತ್ತು 9 ತಿಂಗಳುಗಳಿಗೆ ವಿಸ್ತರಿಸಲು ಅನುಮೋದಿಸಿದೆ

Posted On: 03 JAN 2022 4:12PM by PIB Bengaluru

ಭಾರತದ ರಾಷ್ಟ್ರೀಯ ಕೋವಿಡ್ -19 ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಅವಧಿ ಮೀರಿದ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಕೆಲವು ಮಾಧ್ಯಮ ವರದಿಗಳು ಆರೋಪಿಸಿವೆ. ಇವು ತಪ್ಪಾದ ಮತ್ತು ದಾರಿ ತಪ್ಪಿಸುವ ವರದಿಗಳಾಗಿದ್ದು, ಅಪೂರ್ಣ ಮಾಹಿತಿಯನ್ನು ಆಧರಿಸಿವೆ.

ರಾಷ್ಟ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿ ಡಿ ಎಸ್ ಸಿ ) 25ನೇ ಅಕ್ಟೋಬರ್ 2021 ರಂದು, ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಪತ್ರ ಸಂಖ್ಯೆ: BBIL/RA/21/567 ಗೆ ಪ್ರತಿಕ್ರಿಯೆಯಾಗಿ ಕೋವ್ಯಾಕ್ಸಿನ್ ಲಸಿಕೆಯ  ಬಳಕೆಯ ಅವಧಿಯನ್ನು (ಶೆಲ್ಫ್ ಲೈಫ್) 9 ತಿಂಗಳಿಂದ 12 ತಿಂಗಳವರೆಗೆ ಅನುಮೋದಿಸಿದೆ. ಅದೇ ರೀತಿ, ಕೋವಿಶೀಲ್ಡ್‌ನ ಬಳಕೆಯ ಅವಧಿಯನ್ನು ರಾಷ್ಟ್ರೀಯ ನಿಯಂತ್ರಣ ಸಂಸ್ಥೆಯು 22ನೇ ಫೆಬ್ರವರಿ 2021 ರಂದು 6 ತಿಂಗಳಿಂದ 9 ತಿಂಗಳಿಗೆ ವಿಸ್ತರಿಸಿದೆ.

ಲಸಿಕೆ ತಯಾರಕರು ಒದಗಿಸಿದ ದೃಢತೆ ಅಧ್ಯಯನದ ಅಂಕಿಅಂಶಗಳ ಸಮಗ್ರ ವಿಶ್ಲೇಷಣೆ ಮತ್ತು ಪರೀಕ್ಷೆಯ ಆಧಾರದ ಮೇಲೆ ರಾಷ್ಟ್ರೀಯ ನಿಯಂತ್ರಣ ಸಂಸ್ಥೆಯು ಲಸಿಕೆಗಳ ಬಳಕೆಯ ಅವಧಿಯನ್ನು ವಿಸ್ತರಿಸಿದೆ.

***



(Release ID: 1787156) Visitor Counter : 221