ನೀತಿ ಆಯೋಗ
ನೀತಿ ಆಯೋಗದಿಂದ ರಾಜ್ಯ ಆರೋಗ್ಯ ಸೂಚ್ಯಂಕದ ನಾಲ್ಕನೇ ಆವೃತ್ತಿ ಬಿಡುಗಡೆ
'ದೊಡ್ಡ ರಾಜ್ಯಗಳಲ್ಲಿ' ಉತ್ತರ ಪ್ರದೇಶ, ಅಸ್ಸಾಂ ಮತ್ತು ತೆಲಂಗಾಣ; ‘ಸಣ್ಣ ರಾಜ್ಯಗಳಲ್ಲಿ’ ಮಿಜೋರಾಂ ಮತ್ತು ಮೇಘಾಲಯ; ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಮತ್ತು ಜಮ್ಮು& ಕಾಶ್ಮೀರದಲ್ಲಿ ವಾರ್ಷಿಕ ಕಾರ್ಯಕ್ಷಮತೆಯಲ್ಲಿ ಗರಿಷ್ಠ ಹೆಚ್ಚಳ
ಆರೋಗ್ಯ ಸೂಚ್ಯಂಕವು ಸ್ಪರ್ಧಾತ್ಮಕತೆ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆ ಎರಡಕ್ಕೂ ಉದಾಹರಣೆಯಾಗಿದೆ: ನೀತಿ ಆಯೋಗದ ಉಪಾಧ್ಯಕ್ಷ ಡಾ ರಾಜೀವ್ ಕುಮಾರ್
Posted On:
27 DEC 2021 3:19PM by PIB Bengaluru
ನೀತಿ ಆಯೋಗವು ಇಂದು 2019-20 ರ ರಾಜ್ಯ ಆರೋಗ್ಯ ಸೂಚ್ಯಂಕದ ನಾಲ್ಕನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. "ಆರೋಗ್ಯಕರ ರಾಜ್ಯಗಳು, ಪ್ರಗತಿಶೀಲ ಭಾರತ" ಎಂಬ ಶೀರ್ಷಿಕೆಯ ವರದಿಯು ಆರೋಗ್ಯದ ಫಲಿತಾಂಶಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರ್ಯಕ್ಷಮತೆ ಮತ್ತು ಅವುಗಳ ಒಟ್ಟಾರೆ ಸ್ಥಿತಿಯ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕವನ್ನು ನೀಡುತ್ತದೆ.
ನಾಲ್ಕನೇ ಸುತ್ತಿನ ವರದಿಯು 2018–19 ರಿಂದ 2019–20 ರ ಅವಧಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸುಧಾರಣೆಯನ್ನು ಮಾಪನ ಮಾಡಿದೆ.
ನೀತಿ ಆಯೋಗದ ಉಪಾಧ್ಯಕ್ಷ ಡಾ ರಾಜೀವ್ ಕುಮಾರ್, ಸಿಇಒ ಅಮಿತಾಬ್ ಕಾಂತ್, ಹೆಚ್ಚುವರಿ ಕಾರ್ಯದರ್ಶಿ ಡಾ ರಾಕೇಶ್ ಸರ್ವಾಲ್ ಮತ್ತು ವಿಶ್ವಬ್ಯಾಂಕ್ ಹಿರಿಯ ಆರೋಗ್ಯ ತಜ್ಞರಾದ ಶೀನಾ ಛಾಬ್ರಾ ಜಂಟಿಯಾಗಿ ವರದಿಯನ್ನು ಬಿಡುಗಡೆ ಮಾಡಿದರು. ವಿಶ್ವಬ್ಯಾಂಕ್‌ನ ತಾಂತ್ರಿಕ ನೆರವು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿಕಟ ಸಮಾಲೋಚನೆಯೊಂದಿಗೆ ನೀತಿ ಆಯೋಗವು ವರದಿಯನ್ನು ಸಿದ್ಧಪಡಿಸಿದೆ.
ವರದಿಯ ಫಲಿತಾಂಶಗಳು
ರಾಜ್ಯ ಆರೋಗ್ಯ ಸೂಚ್ಯಂಕವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ವಾರ್ಷಿಕ ಸಾಧನವಾಗಿದೆ. ಇದು 'ಆರೋಗ್ಯ ಫಲಿತಾಂಶಗಳು', 'ಆಡಳಿತ ಮತ್ತು ಮಾಹಿತಿ' ಮತ್ತು 'ಕೀ ಇನ್‌ಪುಟ್‌ಗಳು/ಪ್ರಕ್ರಿಯೆಗಳು' ಡೊಮೇನ್‌ಗಳ ಅಡಿಯಲ್ಲಿನ 24 ಸೂಚಕಗಳ ಆಧಾರದ ಸಂಯೋಜಿತ ಸೂಚ್ಯಂಕವಾಗಿದೆ. ಫಲಿತಾಂಶದ ಸೂಚಕಗಳಿಗೆ ಹೆಚ್ಚಿನ ಸ್ಕೋರ್‌ನೊಂದಿಗೆ ಅದರ ಪ್ರಾಮುಖ್ಯತೆಯನ್ನು ಆಧರಿಸಿ ಪ್ರತಿಯೊಂದು ಡೊಮೇನ್‌ಗೆ ಅಂಕವನ್ನು ನಿಗದಿಪಡಿಸಲಾಗಿದೆ.
ಒಂದೇ ರೀತಿಯ ಘಟಕಗಳ ನಡುವಿನ ಹೋಲಿಕೆಯನ್ನು ಖಚಿತಪಡಿಸಿಕೊಳ್ಳಲು, ಶ್ರೇಯಾಂಕವನ್ನು 'ದೊಡ್ಡ ರಾಜ್ಯಗಳು', 'ಸಣ್ಣ ರಾಜ್ಯಗಳು' ಮತ್ತು 'ಕೇಂದ್ರಾಡಳಿತ ಪ್ರದೇಶಗಳು' ಎಂದು ವರ್ಗೀಕರಿಸಲಾಗಿದೆ.
'ದೊಡ್ಡ ರಾಜ್ಯಗಳ' ಪೈಕಿ, ವಾರ್ಷಿಕವಾಗಿ ಹೆಚ್ಚಿನ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಉತ್ತರ ಪ್ರದೇಶ, ಅಸ್ಸಾಂ ಮತ್ತು ತೆಲಂಗಾಣ ಮೊದಲ ಮೂರು ಶ್ರೇಯಾಂಕದ ರಾಜ್ಯಗಳಾಗಿವೆ.
ಹೆಚ್ಚುತ್ತಿರುವ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ದೊಡ್ಡ ರಾಜ್ಯಗಳ ವರ್ಗೀಕರಣ
‘ಸಣ್ಣ ರಾಜ್ಯಗಳಲ್ಲಿ’ಮಿಜೋರಾಂ ಮತ್ತು ಮೇಘಾಲಯ ಗರಿಷ್ಠ ವಾರ್ಷಿಕ ಪ್ರಗತಿಯನ್ನು ದಾಖಲಿಸಿವೆ.
ಹೆಚ್ಚುತ್ತಿರುವ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಸಣ್ಣ ರಾಜ್ಯಗಳ ವರ್ಗೀಕರಣ
ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ನಂತರ ಜಮ್ಮು ಮತ್ತು ಕಾಶ್ಮೀರ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಿವೆ.
ಹೆಚ್ಚುತ್ತಿರುವ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಕೇಂದ್ರಾಡಳಿತ ಪ್ರದೇಶಗಳ ವರ್ಗೀಕರಣ
2019-20 ರಲ್ಲಿ ಸಂಯೋಜಿತ ಸೂಚ್ಯಂಕ ಸ್ಕೋರ್ ಆಧರಿಸಿ ಒಟ್ಟಾರೆ ಶ್ರೇಯಾಂಕದಲ್ಲಿ, 'ದೊಡ್ಡ ರಾಜ್ಯಗಳಲ್ಲಿ' ಕೇರಳ ಮತ್ತು ತಮಿಳುನಾಡು, 'ಸಣ್ಣ ರಾಜ್ಯಗಳಲ್ಲಿ' ಮಿಜೋರಾಂ ಮತ್ತು ತ್ರಿಪುರಾ ಮತ್ತು ಯುಟಿಗಳಲ್ಲಿ ಡಿಹೆಚ್ &ಡಿಡಿ ಮತ್ತು ಚಂಡೀಗಢ ಅಗ್ರ ಶ್ರೇಯಾಂಕ ಪಡೆದಿವೆ.
ಕಾರ್ಯವಿಧಾನ
ಕಾರ್ಯಕ್ಷಮತೆಯನ್ನು ಅಳೆಯಲು ದೃಢವಾದ ಮತ್ತು ಸ್ವೀಕಾರಾರ್ಹ ಕಾರ್ಯವಿಧಾನವನ್ನು ಬಳಸಲಾಗುತ್ತದೆ. ನೀತಿ ಆಯೋಗವು ನಿರ್ವಹಿಸುವ ಪೋರ್ಟಲ್ ಮೂಲಕ ಒಪ್ಪಿತ ಸೂಚಕಗಳ ಮೇಲೆ ಡೇಟಾವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆಮಾಡಿದ ಸ್ವತಂತ್ರ ಮೌಲ್ಯೀಕರಣ ಸಂಸ್ಥೆಯು ಡೇಟಾವನ್ನು ಮೌಲ್ಯಮಾಪನ ಮಾಡುತ್ತದೆ ಮೌಲ್ಯೀಕರಿಸಿದ ಡೇಟಾ ಶೀಟ್‌ಗಳನ್ನು ಪರಿಶೀಲನೆಗಾಗಿ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ, ನಂತರ ಯಾವುದೇ ಭಿನ್ನಾಭಿಪ್ರಾಯಗಳು ಅಥವಾ ವಿವಾದಗಳನ್ನು ಪರಿಹರಿಸಲು ರಾಜ್ಯಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಸಭೆ ಮಾಡಲಾಗುತ್ತದೆ. ನಂತರ ಅಂತಿಮ ಡೇಟಾ ಶೀಟ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ಅವುಗಳ ಒಪ್ಪಿಗೆಯ ನಂತರ, ಡೇಟಾವನ್ನು ಅಂತಿಮಗೊಳಿಸಲಾಗುತ್ತದೆ ಮತ್ತು ವಿಶ್ಲೇಷಣೆ ಮತ್ತು ವರದಿ ಸಿದ್ಧಪಡಿಸಲು ಬಳಸಲಾಗುತ್ತದೆ.
'ರಾಜ್ಯಗಳು ರಾಜ್ಯ ಆರೋಗ್ಯ ಸೂಚ್ಯಂಕದಂತಹ ಸೂಚ್ಯಂಕಗಳ ಮಹತ್ವವನ್ನು ಅರಿತುಕೊಳ್ಳಲು ಪ್ರಾರಂಭಿಸಿವೆ ಮತ್ತು ಅವುಗಳನ್ನು ತಮ್ಮ ನೀತಿ ರಚನೆ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಬಳಸಿಕೊಳ್ಳುತ್ತಿವೆ. ಈ ವರದಿಯು ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆ ಎರಡಕ್ಕೂ ಉದಾಹರಣೆಯಾಗಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಹೇಳಿದರು.
‘ನಮ್ಮ ಉದ್ದೇಶವು ಈ ಸೂಚ್ಯಂಕದ ಮೂಲಕ ಕೇವಲ ರಾಜ್ಯಗಳ ಐತಿಹಾಸಿಕ ಸಾಧನೆಯನ್ನು ನೋಡುವುದು ಮಾತ್ರವಲ್ಲದೇ, ಅವುಗಳ ಹೆಚ್ಚುತ್ತಿರುವ ಕಾರ್ಯಕ್ಷಮತೆಯನ್ನೂ ನೋಡುವುದಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಆರೋಗ್ಯಕರ ಪೈಪೋಟಿ ಮತ್ತು ಪರಸ್ಪರ ಕಲಿಯುವಿಕೆಯನ್ನು ಸೂಚ್ಯಂಕ ಪ್ರೋತ್ಸಾಹಿಸುತ್ತದೆ' ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದರು.
2017 ರಿಂದ ಸೂಚ್ಯಂಕವನ್ನು ಒಟ್ಟುಗೂಡಿಸಲಾಗುತ್ತಿದೆ ಮತ್ತು ಪ್ರಕಟಿಸಲಾಗುತ್ತಿದೆ. ವರದಿಗಳು ದೃಢವಾದ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸಲು ಮತ್ತು ಸೇವಾ ವಿತರಣೆಯನ್ನು ಸುಧಾರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗುರಿಯನ್ನು ಸಾಧಿಸಲು ಉತ್ತೇಜಿಸುತ್ತವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ವಾರ್ಷಿಕ ಸೂಚ್ಯಂಕವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿನ ಪ್ರೋತ್ಸಾಹಕಗಳಿಗೆ ಲಿಂಕ್ ಮಾಡಿರುವುದರಿಂದ ಇದರ ಪ್ರಾಮುಖ್ಯತೆಯ ಬಗ್ಗೆ ಮತ್ತಷ್ಟು ಒತ್ತು ನೀಡಿದಂತಾಗಿದೆ. ಬಜೆಟ್ ವೆಚ್ಚ ಮತ್ತು ಇನ್ ಪುಟ್ ಗಳಿಂದ ಔಟ್‌ಪುಟ್‌ಗಳು ಮತ್ತು ಫಲಿತಾಂಶಗಳತ್ತ ಗಮನವನ್ನು ಬದಲಾಯಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.
Read the report here.
Read about the detailed indicators and scores on our dashboard.
Watch the release video here.
****
(Release ID: 1785562)
Visitor Counter : 295
Read this release in:
English
,
Urdu
,
Urdu
,
Hindi
,
Marathi
,
Manipuri
,
Bengali
,
Punjabi
,
Tamil
,
Telugu
,
Malayalam