ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜ್ಯಸಭಾ ಸದಸ್ಯ ಡಾ.‌ ಮಹೇಂದ್ರ ಪ್ರಸಾದ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 27 DEC 2021 11:22AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯ ಸಭಾ ಸದಸ್ಯ ಡಾ. ಮಹೇಂದ್ರ ಪ್ರಸಾದ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ ಟ್ವೀಟ್ ಸಂದೇಶದಲ್ಲಿ "ರಾಜ್ಯಸಭಾ ಸದಸ್ಯ ಡಾಮಹೇಂದ್ರ ಪ್ರಸಾದ್ ಜಿ ಅವರ ನಿಧನದಿಂದ ದುಃಖವಾಗಿದೆ‌. ಅವರು ಸಂಸತ್ತಿನಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದಾರೆ ಮತ್ತು ಹಲವು ಸಮುದಾಯ ಸೇವಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರು ಸದಾ ಬಿಹಾರ ಮತ್ತು ರಾಜ್ಯದ ಜನರ ಕಲ್ಯಾಣದ ಬಗ್ಗೆ ಮಾತನಾಡುತ್ತಿದ್ದರು. ಅವರ ಕುಟುಂಬಕ್ಕೆ ಸಾಂತ್ವನಗಳು. ಓಂ ಶಾಂತಿ'. ಎಂದು ಹೇಳಿದ್ದಾರೆ.

***


(Release ID: 1785472) Visitor Counter : 200