ನೀತಿ ಆಯೋಗ
ಅಟಲ್ ನಾವೀನ್ಯ ಮಿಷನ್, ನೀತಿ ಆಯೋಗವು 22 ಮಾತೃ ಭಾಷೆಗಳಲ್ಲಿ ನವೋದ್ಯಮಿಗಳು, ಉದ್ಯಮಿಗಳನ್ನು ಸಬಲೀಕರಣಗೊಳಿಸಲು ವೆರ್ನಾಕ್ಯುಲರ್ ನಾವೀನ್ಯ ಕಾರ್ಯಕ್ರಮ (ವಿಐಪಿ) ಪ್ರಾರಂಭಿಸಿದೆ
Posted On:
22 DEC 2021 1:10PM by PIB Bengaluru
ದೇಶಾದ್ಯಂತ ನವೋದ್ಯಮಿಗಳು ಮತ್ತು ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆ ಗುರಿಯೊಂದಿಗೆ ಅಟಲ್ ನಾವೀನ್ಯ ಮಿಷನ್ (ಎಐಎಂ), ನೀತಿ ಆಯೋಗ ಇದೇ ಮೊದಲ ಬಾರಿ ವೆರ್ನಾಕ್ಯುಲರ್ ನಾವೀನ್ಯ ಕಾರ್ಯಕ್ರಮ (ವಿಐಪಿ) ರೂಪಿಸಿದ್ದು, ಇದು ಭಾರತದಲ್ಲಿನ ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ಭಾರತ ಸರ್ಕಾರದಿಂದ 22 ಅನುಸೂಚಿತ ಭಾಷೆಗಳಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಗೆ ಪ್ರವೇಶಿಸಲು ಅನುವು ಮಾಡಿಕೊಡಲಿದೆ.
ವಿಐಪಿ, ಎಐಎಂಗೆ ಅಗತ್ಯವಾದ ಸಾಮರ್ಥ್ಯವನ್ನು ನಿರ್ಮಿಸಲು ಗುರುತಿಸಲಾಗಿದ್ದು, 22 ನಿಗದಿತ ಭಾಷೆಗಳಲ್ಲಿ ಪ್ರತಿಯೊಂದರಲ್ಲೂ ವರ್ನಾಕ್ಯುಲರ್ ಕಾರ್ಯ ಪಡೆ (ವಿಟಿಎ್) ಗೆ ತರಬೇತಿ ನೀಡಲಿದೆ. ಪ್ರತಿಯೊಂದು ಕಾರ್ಯಪಡೆಯು ಸ್ಥಳೀಯ ಭಾಷಾ ಶಿಕ್ಷಕರು, ವಿಷಯ ತಜ್ಞರು, ತಾಂತ್ರಿಕ ಬರಹಗಾರರು ಮತ್ತು ಪ್ರಾದೇಶಿಕ ಅಟಲ್ ಮುಂದಾಳತ್ವದ ಕೇಂದ್ರಗಳ (ಎಐಸಿ) ನಾಯಕತ್ವವನ್ನು ಒಳಗೊಂಡಿರುತ್ತದೆ.
ಕಾರ್ಯಕ್ರಮ ಅನುಷ್ಠಾನಕ್ಕೆ, ಎಐಎಂ, ನೀತಿ ಆಯೋಗವು ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಇದು ವಿನ್ಯಾಸ ಚಿಂತನೆ ಮತ್ತು ಉದ್ಯಮಶೀಲತೆ ಮತ್ತು 22 ಭಾಷೆಗಳು ಮತ್ತು ಸಂಸ್ಕೃತಿಗಳಲ್ಲಿ ಈ ವಿಷಯಗಳ ರೂಪಾಂತರದಲ್ಲಿ ವಿಟಿಎ್ಗೆ ತರಬೇತಿ ನೀಡಲು ಐಐಟಿ ದೆಹಲಿಯ ವಿನ್ಯಾಸ ವಿಭಾಗದೊಂದಿಗೆ ಸಹಕರಿಸುತ್ತದೆ. ಇದಲ್ಲದೆ, ಉದ್ಯಮದ ಮಾರ್ಗದರ್ಶಕರು, ವಿನ್ಯಾಸ ಚಿಂತನೆಯ ಪರಿಣತಿಯನ್ನು ನೀಡಲು ಕೈಜೋಡಿಸಿದ್ದಾರೆ ಮತ್ತು ಸಿಎಸ್‌ಆರ್ ಪ್ರಾಯೋಜಕರು ಕಾರ್ಯಕ್ರಮವನ್ನು ಉದಾರವಾಗಿ ಬೆಂಬಲಿಸಲು ಒಪ್ಪಿಕೊಂಡಿದ್ದಾರೆ. 2021ರ ಡಿಸೆಂಬರ್‌ನಿಂದ ಏಪ್ರಿಲ್ 2022ರ ಅವಧಿಯಲ್ಲಿ ಕಾರ್ಯಪಡೆಗೆ ತರಬೇತಿ ನೀಡಿದ ನಂತರ, ಪರಿಸರ ವ್ಯವಸ್ಥೆಯನ್ನು ದೇಶೀಯ ನಾವೀನ್ಯಕಾರರಿಗೆ ತೆರೆಯಲಾಗುತ್ತದೆ.
ವಿಐಪಿಅನ್ನು ಬಿಡುಗಡೆ ಮಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಮಾತನಾಡಿ, “ಭಾರತವು ವೈವಿಧ್ಯಮಯ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಯಿಂದ ತನ್ನ ಗುರುತನ್ನು ಪಡೆದುಕೊಂಡಿದೆ ಮತ್ತು ಪ್ರಾದೇಶಿಕ ಭಾಷೆಗಳು ಅತ್ಯಂತ ಪ್ರಮುಖವಾದ ಸಾಂಸ್ಕೃತಿಕ ಆಸ್ತಿಯಾಗಿದೆ. ವರ್ನಾಕ್ಯುಲರ್ ನಾವೀನ್ಯ ಕಾರ್ಯಕ್ರಮ ನಮ್ಮ ಸಮುದಾಯಗಳ ವಿನ್ಯಾಸ ಮತ್ತು ನಾವೀನ್ಯತೆ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಇದರಿಂದಾಗಿ ಸ್ಥಳೀಯ ಉದ್ಯಮಿಗಳು, ಕುಶಲ ಕರ್ಮಿಗಳು ಮತ್ತು ನವೋದ್ಯಮಿಗಳಿಗೆ ಎಐಎಂ ಅಭಿವೃದ್ಧಿಪಡಿಸುವ ಜ್ಞಾನ ಮತ್ತು ತಾಂತ್ರಿಕ ವಸ್ತುಗಳನ್ನು ಮನಬಂದಂತೆ ಸಂಯೋಜಿಸಲು ಸಹಾಯ ಮಾಡುತ್ತದೆ. ವಿನ್ಯಾಸ ತಜ್ಞರು ಮತ್ತು ನಾವೀನ್ಯತೆ ಅಭ್ಯಾಸಕಾರರ ಪ್ರಬಲ ಸ್ಥಳೀಯ ಜಾಲವನ್ನು ನಿರ್ಮಿಸಲು ಇದು ಭಾರತಕ್ಕೆ ಸಹಾಯ ಮಾಡುತ್ತದೆ,” ಎಂದು ಹೇಳಿದರು.
ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, “ಯುವ ಮತ್ತು ಮಹತ್ವಾಕಾಂಕ್ಷಿ ಮನಸ್ಸಿನಲ್ಲಿ ಅರಿವಿನ ಮತ್ತು ವಿನ್ಯಾಸ ಚಿಂತನೆಯ ಮನೋಭಾವವನ್ನು ಭದ್ರಪಡಿಸುವ ಭಾರತೀಯ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯ ಪ್ರಯಾಣದಲ್ಲಿ ಈ ಕಾರ್ಯಕ್ರಮ ಒಂದು ಮೆಟ್ಟಿಲಾಗಿದೆ. ಅಟಲ್ ನಾವೀನ್ಯ ಮಿಷನ್‌ನ ಈ ರೀತಿಯ ಉಪಕ್ರಮವು ಭಾಷೆಯ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ದೇಶದ ದೂರದ ಪ್ರದೇಶಗಳಲ್ಲಿ ನಾವೀನ್ಯಕಾರರನ್ನು ಸಬಲಗೊಳಿಸುತ್ತದೆ, “ ಎಂದು ಅವರು ಹೇಳಿದರು.
ವಿಐಪಿಯು ನಾವೀನ್ಯತೆ ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಭಾಷಾ ತಡೆಗೋಡೆಯನ್ನು ಕಡಿಮೆ ಮಾಡಲು ಒಂದು ಉಪಕ್ರಮವಾಗಿದೆ, ಅದು ಸೃಜನಶೀಲ ಅಭಿವ್ಯಕ್ತಿಗಳು ಮತ್ತು ವ್ಯವಹಾರದ ಭಾಷೆಗಳನ್ನು ವ್ಯವಸ್ಥಿತವಾಗಿ ಬೇರ್ಪಡಿಸುತ್ತದೆ ಎಂದು ಕಾರ್ಯಕ್ರಮದ ಬಿಡುಗಡೆ ಸಮಾರಂಭದಲ್ಲಿ ಎಐಎಂ, ನೀತಿ ಆಯೋಗದ ಮಿಷನ್ ನಿರ್ದೇಶಕ ಡಾ. ಚಿಂತನ್ ವೈಷ್ಣವ್ ಹೇಳಿದರು.
ಒಬ್ಬರ ಕಲ್ಪನೆ ಅಥವಾ ನಾವೀನ್ಯತೆಯನ್ನು ಜಗತ್ತಿಗೆ ಬಹಿರಂಗಪಡಿಸಲು ಸಾಧ್ಯವಾಗದ ಹೋರಾಟವನ್ನು ಪರಿಹರಿಸಲು ಬಹಳ ಮುಖ್ಯವಾಗಿದೆ, ವಿಶೇಷವಾಗಿ ಭಾರತದಲ್ಲಿ ಅದರ ದೊಡ್ಡ ವೈವಿಧ್ಯತೆಯ ಭಾಷೆಗಳು. ಸ್ಥಳೀಯ ಭಾಷೆಯ ನಾವೀನ್ಯಕಾರರು ಎದುರಿಸುತ್ತಿರುವ ಸಮಸ್ಯೆಯ ಪ್ರಮಾಣದಿಂದಾಗಿ ವಿಐಪಿ ರಾಷ್ಟ್ರೀಯ ಪ್ರೇಕ್ಷಕರನ್ನು ಹೊಂದಿದೆ ಎಂದು ಡಾ ಚಿಂತನ್ ನುಡಿದರು.
“2011ರ ಜನಗಣತಿಯನ್ನು ಉಲ್ಲೇಖಿಸಿ, ಕೇವಲ 10.4% ಭಾರತೀಯರು ಇಂಗ್ಲಿಷ್ ಮಾತನಾಡುತ್ತಾರೆ, ಹೆಚ್ಚಿನವರು ಅವರ 2ನೇ, 3ನೇ ಅಥವಾ ನಾಲ್ಕನೇ ಭಾಷೆಯಾಗಿ ಮಾತನಾಡುತ್ತಾರೆ. ಕೇವಲ 0.02% ಭಾರತೀಯರು ಮಾತ್ರ ಇಂಗ್ಲಿಷ್ ಅನ್ನು ತಮ್ಮ ಮೊದಲ ಭಾಷೆಯಾಗಿ ಮಾತನಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಹತ್ತು ವರ್ಷಗಳ ನಂತರ ಈ ಸಂಖ್ಯೆಗಳು ತುಂಬಾ ಭಿನ್ನವಾಗಿರುವುದಿಲ್ಲ. ನಮ್ಮ ಜನಸಂಖ್ಯೆಯ ದಿಗ್ಭ್ರಮೆಗೊಳಿಸುವ 90% ಅನ್ನು ಪ್ರತಿನಿಧಿಸುವ ದೇಶೀಯ ನಾವೀನ್ಯಕಾರರಿಗೆ ನಾವು ಏಕೆ ಸಮಾನ ಅವಕಾಶವನ್ನು ಸೃಷ್ಟಿಸಬಾರದು. ಹೊರಗಿಡಲ್ಪಟ್ಟ ಜನಸಂಖ್ಯೆಯು ಅವರು ಯಾವುದೇ ಭಾರತೀಯ ಭಾಷೆಯನ್ನು ಮಾತನಾಡುತ್ತಿರಲಿ, ಉಳಿದವರಂತೆ ಕನಿಷ್ಠ ಸೃಜನಶೀಲವಾಗಿದೆ ಎಂದು ನಮಗೆ ಖಚಿತವಾಗಿ ತಿಳಿದಿದೆ,” ಎಂದು ಅವರು ಒತ್ತಿ ಹೇಳಿದರು.
22 ಭಾಷೆಗಳು ಮತ್ತು ಇಂಗ್ಲಿಷ್ ಅನ್ನು ಪೂರೈಸುವ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿರುವ ಇಂತಹ ಉಪಕ್ರಮವನ್ನು ಪ್ರಾರಂಭಿಸುವ ವಿಶ್ವದ ಮೊದಲ ರಾಷ್ಟ್ರ ಭಾರತವಾಗಿದೆ. ಒಬ್ಬರ ಭಾಷೆ ಮತ್ತು ಸಂಸ್ಕೃತಿಯಲ್ಲಿ ಕಲಿಕೆಗೆ ಪ್ರವೇಶವನ್ನು ಒದಗಿಸುವ ಮೂಲಕ, ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ನಾವೀನ್ಯತೆ ಜಾಲವನ್ನು ಸಮೃದ್ಧಗೊಳಿಸಲು ಎಐಎಂ ಎದುರುನೋಡುತ್ತದೆ.
***
(Release ID: 1784224)
Visitor Counter : 315