ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಡಿಜಿಟಲ್ ಮೀಡಿಯಾದಲ್ಲಿ ಪಾಲುದಾರಿಕೆ ಸ್ಥಾಪಿಸಲು ಭಾರತ ಮತ್ತು ವಿಯೆಟ್ನಾಂ ನಡುವೆ ಒಪ್ಪಿಗೆ ಪತ್ರಕ್ಕೆ ಸಹಿ

ಹಂಚಿಕೆ ಮತ್ತು ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ ಎಂದ ಶ್ರೀ ಅನುರಾಗ್ ಠಾಕೂರ್

Posted On: 16 DEC 2021 1:42PM by PIB Bengaluru

ಭಾರತ ಮತ್ತು ವಿಯೆಟ್ನಾಂ ನಡುವೆ ಪಾಲುದಾರಿಕೆ ಬಲವರ್ಧನೆಗೆ ದಾರಿ ಮಾಡಿಕೊಡುವ, ಡಿಜಿಟಲ್ ಮೀಡಿಯಾ ವಲಯದಲ್ಲಿ ಸಹಭಾಗಿತ್ವ ಕುರಿತಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ವಿಯೆಟ್ನಾಂ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ನಗುಯೆನ್ ಮನ್ ಹುಂಗ್ ಒಪ್ಪಿಗೆ ಪತ್ರ (ಎಲ್ ಒಐ) ಗೆ ಸಹಿ ಹಾಕಿದರು.

ಒಪ್ಪಿಗೆ ಪತ್ರ (ಎಲ್ ಒಐ) ಅನ್ವಯ ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೀತಿಗಳು ಮತ್ತು ನಿಯಂತ್ರಕ ಚೌಕಟ್ಟುಗಳನ್ನು ಸ್ಥಾಪಿಸುವಲ್ಲಿ ಮಾಹಿತಿ ಮತ್ತು ಅನುಭವದ ಹಂಚಿಕೆ ಮತ್ತು ಎರಡು ದೇಶಗಳಲ್ಲಿನ ಮಾಧ್ಯಮ ವೃತ್ತಿಪರರು ಮತ್ತು ಅಧಿಕಾರಿಗಳಿಗೆ ಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅವಕಾಶ ಒದಗಿಸುತ್ತದೆ.

ಠಾಕೂರ್ ಅವರ ನಿವಾಸದಲ್ಲಿ ಇಬ್ಬರು ಗೌರವಾನ್ವಿತ ಸಚಿವರ ನಡುವೆ ಸೌಹಾರ್ದಯುತ ಚರ್ಚೆಯಲ್ಲಿ ಭಾರತ ಮತ್ತು ವಿಯೆಟ್ನಾಂ ನಡುವಿನ ಸಂಬಂಧ ಪ್ರತಿಫಲಿಸಿತು

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಮತ್ತು ಗೌರವಾನ್ವಿತ ಪ್ರಧಾನಮಂತ್ರಿಗಳ ಇತ್ತೀಚಿನ ವಿಯೆಟ್ನಾಂ ಭೇಟಿಯಿಂದಾಗಿ ಭಾರತ ಮತ್ತು ವಿಯೆಟ್ನಾಂ ನಡುವಿನ ಆಳವಾದ ಸಂಬಂಧವು ಮತ್ತಷ್ಟು ಬಲಗೊಂಡಿದೆ ಮತ್ತು ಇಂದಿನ ಸಭೆಯು ದ್ವಿಪಕ್ಷೀಯ ಸಹಕಾರವನ್ನು ರೂಪಿಸುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು ಬಲವಾಗಿ ಪ್ರತಿಪಾದಿಸಿದರು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಎಲ್ಲ ದೇಶಗಳು ಸೆಣೆಸುತ್ತಿರುವಇನ್ಪೋಡೆಮಿಕ್ನಂತಹ ಎಲ್ಲ ಹೊಸ ತಂತ್ರಜ್ಞಾನಗಳು ಮತ್ತು ಸವಾಲುಗಳ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ರೂಪ ಪಡೆಯಲು ಇಂದಿನ ಸಭೆ ಸಹಕಾರಿಯಾಗಿದೆ ಎಂದರು.

2021 ಫೆಬ್ರವರಿಯಿಂದ ಸರ್ಕಾರ ಡಿಜಿಟಲ್ ಮೀಡಿಯಾ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ ಎಂದು ಶ್ರೀ ಠಾಕೂರ್ ವಿಯೆಟ್ನಾಂ ಸಹವರ್ತಿಗೆ ಮಾಹಿತಿ ನೀಡಿದರು. ಶ್ರೀ ಹುಂಗ್ ಅವರು ಶ್ರೀ ಠಾಕೂರ್ ಅವರನ್ನು ವಿಯೆಟ್ನಾಂಗೆ ಆಹ್ವಾನಿದರು ಮತ್ತು ಯಶೋಗಾಥೆಗಳ ವ್ಯಾಪಕ ಪ್ರಚಾರಕ್ಕಾಗಿ ಮತ್ತು ಜನರ ಜನರ ನಡುವಿನ ಸಂಪರ್ಕ ಬಲವರ್ಧನೆಗಾಗಿ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಎರಡೂ ದೇಶಗಳ ಪತ್ರಕರ್ತರಿಗೆ ಮಾಹಿತಿಯನ್ನು ಒದಗಿಸುವ ಕುರಿತು ಮಾತನಾಡಿದರು.

ಸಭೆಯಲ್ಲಿ ಪ್ರಸಾರ ಭಾರತಿಯ ಸಿಇಒ ಶ್ರೀ ಶಶಿಶೇಖರ್ ವೆಂಪತಿ, ಪಿಐಬಿ ಮಹಾನಿರ್ದೇಶಕ ಶ್ರೀ ಜೈದೀಪ್ ಭಟ್ನಾಗರ್  ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿಕ್ರಂ ಸಹಾಯ್ ಮತ್ತು ಭಾರತ ಮತ್ತು ವಿಯೆಟ್ನಾಂನ ಅಧಿಕಾರಿಗಳು ಭಾವಗಹಿಸಿದ್ದರು.

ವರ್ಷ ಭಾರತ ಮತ್ತು ವಿಯೆಟ್ನಾಂ ನಡುವೆಸಮಗ್ರ ಕಾರ್ಯತಂತ್ರ ಪಾಲುದಾರಿಕೆ’’ ಐದು ವರ್ಷಗಳನ್ನು ಪೂರೈಸಲಿದೆ ಮತ್ತು 2022ನೇ ವರ್ಷ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ 50 ವರ್ಷ ಪೂರೈಸಲಿದೆ.

***(Release ID: 1782232) Visitor Counter : 99