ಪ್ರಧಾನ ಮಂತ್ರಿಯವರ ಕಛೇರಿ
ಗೀತ ಜಯಂತಿ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ
Posted On:
14 DEC 2021 2:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೀತ ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಮೋದಿ ಅವರು ಗೀತೆಯ ಕುರಿತಂತೆ ತಾವು ಇತ್ತೀಚೆಗೆ ಮಾಡಿದ ಎರಡು ಭಾಷಣಗಳನ್ನೂ ಹಂಚಿಕೊಂಡಿದ್ದಾರೆ.
ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು; "ಗೀತಾ ಜಯಂತಿಯಾದ ಇಂದು, ಗೀತೆಯ ಕುರಿತು ನಾನು ಇತ್ತೀಚೆಗೆ ನೀಡಿದ: ಸ್ವಾಮಿ ಚಿದ್ಭಾವಾನಂದರ ಭಗವದ್ ಗೀತಾ ಇ-ಪುಸ್ತಕ ಬಿಡುಗಡೆ. ಗೀತಾ ಕುರಿತಂತೆ ವಿವಿಧ ವಿದ್ವಾಂಸರ ಪ್ರತಿಕ್ರಿಯೆಗಳನ್ನು ಒಳಗೊಂಡ ಹಸ್ತಪ್ರತಿಗಳ ಬಿಡುಗಡೆ ವೇಳೆ ಮಾಡಿದ ಎರಡು ಭಾಷಣಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಗೀತೆಯ ಕುರಿತು ವಿವಿಧ ವಿದ್ವಾಂಸರಿಂದ ವ್ಯಾಖ್ಯಾನಗಳಿರುವ ಹಸ್ತಪ್ರತಿ ಬಿಡುಗಡೆ
सर्वोपनिषदो गावो दोग्धा गोपाल नन्दन:।
पार्थो वत्स: सुधीर्भोक्ता दुग्धं गीतामृतं महत्।।
गीता जयंती की हार्दिक शुभकामनाएं।
ಗೀತಾ ಜಯಂತಿ ಸಂದರ್ಭದಲ್ಲಿ ಶುಭಾಶಯಗಳು.
ಜೀವನದ ಹಲವಾರು ಆಯಾಮಗಳಿಗೆ ಪ್ರಾಯೋಗಿಕ ಮಾರ್ಗದರ್ಶಿಯಾದ, ಗೀತಾ ಬೋಧನೆಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತಿರುವುದನ್ನು ನೋಡಲು ಸಂತೋಷವಾಗುತ್ತದೆ"ಎಂದು ತಿಳಿಸಿದ್ದಾರೆ.
***
(Release ID: 1781415)
Visitor Counter : 260
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam