ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಾಸಿಯಲ್ಲಿ ಶ್ರೀ ಕಾಶಿ ಧಾಮ ಉದ್ಘಾಟಿಸಿದ ಪ್ರಧಾನಿ


“ವಿಶ್ವನಾಥ ಧಾಮ ಕೇವಲ ಒಂದು ಭವ್ಯ ಕಟ್ಟಡವಲ್ಲ. ಇದು ಭಾರತದ ಸನಾತನ ಸಂಸ್ಕೃತಿಯ ಪ್ರತೀಕ. ಇದು ನಮ್ಮ ಆಧ್ಯಾತ್ಮದ ಆತ್ಮದ ಸಂಕೇತ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳು, ಭಾರತದ ಶಕ್ತಿ ಮತ್ತು ಕ್ರಿಯಾಶೀಲತೆಯ ಸಂಕೇತವಾಗಿದೆ”

“ಮೊದಲು ದೇವಾಲಯದ ಪ್ರದೇಶವು ಕೇವಲ 3000 ಚದರ ಅಡಿ ಇತ್ತು, ಇದೀಗ 5 ಲಕ್ಷ ಚದರ ಅಡಿಗೆ ವಿಸ್ತರಣೆಗೊಂಡಿದೆ. ಈಗ 50 ಸಾವಿರದಿಂದ 75 ಸಾವಿರ ಭಕ್ತರು ದೇವಾಲಯಕ್ಕೆ ಮತ್ತು ದೇವಾಲಯದ ಪ್ರಾಂಗಣಕ್ಕೆ ಭೇಟಿ ನೀಡಬಹುದು”

“ಕಾಶಿ ವಿಶ್ವನಾಥ ಧಾಮದ ಸಮರ್ಪಣೆಯು ದೇಶಕ್ಕೆ ನಿರ್ಣಾಯಕ ದಿಕ್ಸೂಚಿ ನೀಡುತ್ತದೆ ಮತ್ತು ಭವಿಷ್ಯ ಉಜ್ವಲಗೊಳಿಸುತ್ತದೆ. ಈ ಪ್ರಾಂಗಣ ನಮ್ಮ ಸಾಮರ್ಥ್ಯ ಮತ್ತು ನಮ್ಮ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ದೃಢ ಸಂಕಲ್ಪ ಮತ್ತು ಸಮಗ್ರ ಚಿಂತನೆಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ”

“ನನಗೆ ದೇವರು ಜನರ ರೂಪದಲ್ಲಿ ಕಾಣಿಸುತ್ತಾರೆ. ನನಗೆ ಪ್ರತಿಯೊಬ್ಬ ಮನುಷ್ಯರೂ ದೇವರ ಭಾಗ. ಈ ದೇಶದ ಜನರಿಂದ ನಾನು ಮೂರು ಸಂಕಲ್ಪಗಳನ್ನು ಕೇಳುತ್ತೇನೆ- ಅವೆಂದರೆ ಶುಚಿತ್ವ, ಸೃಷ್ಟಿ ಮತ್ತು ಸ್ವಾವಲಂಬಿ ಭಾರತಕ್ಕೆ ನಿರಂತರ ಪ್ರಯತ್ನ”

“ದೀರ್ಘಾವಧಿಯ ಗುಲಾಮಗಿರಿಯು ನಮ್ಮ ಆತ್ಮವಿಶ್ವಾಸವನ್ನು ಮುರಿದಿತ್ತು, ನಮ್ಮ ಸೃಷ್ಟಿಯ ಬಗ್ಗೆಯೇ ನಮಗೆ ನಂಬಿಕೆ ಹೋಗಿತ್ತು. ಇಂದು, ಸಹಸ್ರಾರು ವರ್ಷಗಳ ಪರಂಪರೆ ಹೊಂದಿರುವ ಕಾಶಿಯಿಂದ ನಾನು ದೇಶವಾಸಿಗಳಿಗೆ ಕರೆ ನೀಡುವುದೆಂದರೆ – ಸಂಪೂರ್ಣ ವಿಶ್ವಾಸದಿಂದ ಸೃಷ್ಟಿಸಿ, ಆವಿಷ್ಕರಿಸಿ, ನವೀನ ವಿಧಾನದಲ್ಲಿ ಕಾರ್ಯ ಮಾಡಿ’’

ಕಾಶಿ ವಿಶ್ವನಾಥ ಥಾಮ ನಿರ್ಮಾಣಕ್ಕಾಗಿ ಶ್ರಮಿಸಿದ ಕಾರ್ಮಿಕರನ್ನು ಗೌರವಿಸಿದರು ಮತ್ತು ಅವರೊಂದಿಗೆ ಭೋಜನ ಸ್ವೀಕರಿಸಿದರು

Posted On: 13 DEC 2021 3:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಾಸಿಯಲ್ಲಿ ಶ್ರೀ ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಿದರು. ಅವರು ಕಾಶಿಯ ಕಾಶಿ ವಿಶ್ವನಾಥ ಧಾಮ ಮಯತ್ತು ಕಾಲ ಬೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಗಂಗಾನದಿಯಲ್ಲಿ ಪ್ರವಿತ್ರ ಸ್ನಾನ ಮಾಡಿದರು.

ನಗರ್ ಕೊತ್ವಲ್” (ಕಾಲ ಭೈರವ ದೇವ) ಪಾದಕ್ಕೆ ಪ್ರಣಾಮಗಳನ್ನು ಸಲ್ಲಿಸಿ ತಮ್ಮ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ಅವರು ಅವರು ಆಶೀರ್ವಾದವಿಲ್ಲದೆ ಯಾವುದೇ ವಿಶೇಷವೂ ಘಟಿಸುವುದಿಲ್ಲ ಎಂದರು. ಪ್ರಧಾನಿಯವರು ದೇಶವಾಸಿಗಳಿಗಾಗಿ ದೇವನ ಆಶೀರ್ವಾದವನ್ನು ಕೋರಿದರು. ಕಾಶಿಯನ್ನು ಪ್ರವೇಶಿಸಿದ ಕೂಡಲೇ ಎಲ್ಲ ಬಂಧನಗಳಿಂದ ಮುಕ್ತನಾಗುತ್ತಾನೆ ಎಂಬ ಪುರಾಣಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. “ವಿಶ್ವೇಶ್ವರದ ದೇವರ ಆಶೀರ್ವಾದದಿಂದಾಗಿ ನಾವು ಇಲ್ಲಿಗೆ ಬಂದ ಕೂಡಲೇ ಅಲೌಕಿಕ ಶಕ್ತಿಯು ನಮ್ಮ ಅಂತರಾತ್ಮವನ್ನು ಜಾಗೃತಗೊಳಿಸಲಿದೆಎಂದರು. ಇಡೀ ವಿಶ್ವನಾಥ ಧಾಮದ ಪ್ರಾಂಗಣ ಕೇವಲ ಒಂದು ಭವ್ಯ ಕಟ್ಟಡವಲ್ಲ ಎಂದು ಅವರು ಹೇಳಿದರು.  ಇದು ಭಾರತದ ಸನಾತನ ಸಂಸ್ಕೃತಿಯ ಪ್ರತೀಕ. ಇದು ನಮ್ಮ ಆಧ್ಯಾತ್ಮದ ಆತ್ಮದ ಸಂಕೇತ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳು, ಭಾರತದ ಶಕ್ತಿ ಮತ್ತು ಕ್ರಿಯಾಶೀಲತೆಯ ಸಂಕೇತವಾಗಿದೆ ಎಂದರು. “ಯಾರು ಇಲ್ಲಿಗೆ ಬರುತ್ತಾರೆ ಅವರು ಕೇವಲ ನಂಬಿಕೆ ಮಾತ್ರವಲ್ಲ, ಪ್ರಾಚೀನ ವೈಭವನ್ನೂ ಸಹ ಅನುಭವಿಸುತ್ತಾರೆಎಂದು ಪ್ರಧಾನಮಂತ್ರಿ ಹೇಳಿದರು. ಪ್ರಾಚೀನತೆ ಮತ್ತು ನವೀನತೆ ಹೇಗೆ ಒಟ್ಟಿಗೆ ಜೀವಂತವಾಗಿದೆ. ಪುರಾತನ ಕಾಲದ ಪ್ರೇರಣೆಗಳು ಭವಿಷ್ಯಕ್ಕೆ ಹೇಗೆ ದಿಕ್ಕನ್ನು ನೀಡುತ್ತವೆ ಎಂಬುದನ್ನು ವಿಶ್ವನಾಥ ಧಾಮ ಸಂಕೀರ್ಣದಲ್ಲಿ ನಾವು ಸಾಕ್ಷಿಯಾಗುತ್ತಿದ್ದೇವೆಎಂದು ತಿಳಸಿದರು.

ಮೊದಲು ದೇವಾಲಯದ ಪ್ರದೇಶವು ಕೇವಲ 3000 ಚದರ  ಅಡಿ ಇತ್ತು, ಇದೀಗ  ಅದು 5ಲಕ್ಷ ಚದರ ಅಡಿಗೆ ವಿಸ್ತರಣೆಗೊಂಡಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈಗ 50ಸಾವಿರದಿಂದ 75 ಸಾವಿರ ಭಕ್ತರು ದೇವಾಲಯಕ್ಕೆ ಮತ್ತು ದೇವಾಲಯದ ಪ್ರಾಂಗಣಕ್ಕೆ ಭೇಟಿ ನೀಡಬಹುದು. ಮೊದಲು ಗಂಗಾಮಾತೆಯಲ್ಲಿ ಸ್ನಾನ ಮತ್ತು ದರ್ಶನ ಹಾಗೂ ಆನಂತರ ನೇರವಾಗಿ ವಿಶ್ವನಾಥ ಧಾಮ ಪ್ರವೇಶಿಸಬಹುದು ಎಂದರು.

ಕಾಶಿಯ ಮಹಿಮೆಯನ್ನು ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಕಾಶಿ ಎಂದಿಗೂ ಕೊಳೆಯುವುದಿಲ್ಲ, ಏಕೆಂದರೆ ಅದು ಶಿವನ ಕೃಪಾಶೀರ್ವಾದಲ್ಲಿದೆ ಎಂದರು. ಭವ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಪ್ರತಿಯೊಬ್ಬ ಕೆಲಸಗಾರರಿಗೂ ಪ್ರಧಾನಿ ಕೃತಜ್ಞತೆಗಳನ್ನು ಸಲ್ಲಿಸಿದರು ಮತ್ತು ಕೊರೊನಾ ಕೂಡ ಅವರ ಕೆಲಸ ಕಾರ್ಯಗಳನ್ನು ನಿಲ್ಲಿಸಲಿಲ್ಲ ಎಂದು ಹೇಳಿದರು. ಅವರು ಕಾರ್ಮಿಕರನ್ನು ಭೇಟಿ ಮಾಡಿದ್ದರು ಮತ್ತು ಅವರನ್ನು ಗೌರವಿಸಿದರು. ಧಾಮ ನಿರ್ಮಾಣಕ್ಕೆ ಶ್ರಮಿಸಿದ ಕೂಲಿಕಾರರೊಂದಿಗೆ ಪ್ರಧಾನಮಂತ್ರಿ ಅವರು ಭೋಜನ ಸ್ವೀಕರಿಸಿದರು. ಅಲ್ಲದೆ, ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗಿದ್ದ ಜನರು, ಕರಕುಶಲ ಕರ್ಮಿಗಳು ಮತ್ತು ಅಲ್ಲಿ ಮನೆಗಳನ್ನು ಹೊಂದಿರುವ ಆಡಳಿತಗಾರರ ಕುಟುಂಬಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಇದೆಲ್ಲದರ ಜೊತೆಗೆ ಕಾಶಿ ವಿಶ್ವನಾಥ ಧಾಮ ಯೋಜನೆ ಪೂರ್ಣಗೊಳಿಸಲು ಅಹರ್ನಿಶಿ ಶ್ರಮಿಸಿದ ಉತ್ತರ ಪ್ರದೇಶ ಸರ್ಕಾರ, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯ ನಾಥ್ ಅವರನ್ನು ಪ್ರಧಾನಿ ಅಭಿನಂದಿಸಿದರು.

ಆಕ್ರಮಣದಾರರು ನಗರದ ಮೇಲೆ ದಾಳಿ ಮಾಡಿದ್ದರು ಮತ್ತು ನಾಶಗೊಳಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ನಗರ ಔರಂಗಜೇಬನ ಕ್ರೌರ್ಯ ಮತ್ತು ದಾಳಿಗೆ ತುತ್ತಾದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಆತ ಖಡ್ಗದಿಂದಲೇ ನಾಗರೀಕತೆಯನ್ನು ಬದಲಾಯಿಸಲು ಪ್ರಯತ್ನಿಸಿದ್ದನು, ಆತ ಮತಾಂಧತೆಯಿಂದ ಸಂಸ್ಕೃತಿಯನ್ನು ಹೊಸಕಿಹಾಕಲು ಪ್ರಯತ್ನಿಸಿದ್ದನು. ಆದರೆ ದೇಶದ ನೆಲ ಜಗತ್ತಿನ ಇತರೆಡೆಗಿಂತ ಭಿನ್ನವಾಗಿದೆ. ಅಂತಹ ಔರಂಗಜೇಬನಿದ್ದರೆ, ಇತ್ತ ಶಿವಾಜಿಯೂ ಸಹ ಇದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಯಾವುದೇ ಸಾಲಾರ್ ಮಸೂದ್ ಬಂದರೆ, ದೊರೆ ಸುಹೇಲ್ ದೇವ್ ಅಂತಹ ವೀರ ಯೋಧರು, ಭಾರತದ ಏಕತೆಯ ರುಚಿ ತೋರಿಸಿದರು. ಮತ್ತು ಬ್ರಿಟಿಷರ ಆಳ್ವಿಕೆ ಸಮಯದಲ್ಲೂ ಸಹ, ಹೇಸ್ಟಿಂಗ್ ಗೆ ಏನಾಯಿತು ಎಂಬುದನ್ನು ಕಾಶಿಯ ಜನತೆಗೆ ತಿಳಿದಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ಕಾಶಿಯ ಕೃಪೆ ಮತ್ತು ಅದರ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಹೋದರು. ಕಾಶಿ ಎಂದರೆ ಕೇವಲ ಪದಗಳನ್ನು ವರ್ಣಿಸುವಂತಹದ್ದಲ್ಲ, ಅದು ಸಂವೇದನೆಗಳ ಸೃಷ್ಟಿಯಾಗಿದೆ. ಕಾಶಿ ಎಂದರೆ ಬದಕು ಜಾಗೃತಗೊಳ್ಳುತ್ತದೆ, ಕಾಶಿ ಎಂದರೆ  ಅಲ್ಲಿ ಮರಣವವೂ ಒಂದು ಹಬ್ಬವೇ, ಕಾಶಿ ಎಂದರೆ ಅಲ್ಲಿ ಸತ್ಯವೇ ಸಂಸ್ಕೃತಿ , ಕಾಶಿ ಎಂದರೆ ಅಲ್ಲಿ ಪ್ರೀತಿಯೇ ಪರಂಪರೆ ಎಂದರು. ಶ್ರೀ ಗುಮ್ಮಟರಾಜರ ಪರಿಶುದ್ಧತೆಯಿಂದ ಸ್ಪೂರ್ತಿಪಡೆದು ಜಗದ್ಗುರು ಶಂಕರಾಚಾರ್ಯರು ದೇಶವನ್ನು ಏಕತೆಯ ಎಳೆಯಲ್ಲಿ ಒಗ್ಗೂಡಿಸಲು ಸಂಕಲ್ಪ ಮಾಡಿದ ನಗರವೇ ವಾರಾಣಾಸಿ ನಗರಿ ಎಂದು ಅವರು ಹೇಳಿದರು. ಗೋಸ್ವಾಮಿ ತುಳಸೀದಾಸರು ಭಗವಾನ್ ಶಂಕರರ ಪ್ರೇರಣೆಯಿಂದ ರಾಮಚರಿತ ಮಾನಸದಂತಹ ಮಹಾನ್ ಕೃತಿಯನ್ನು ಸೃಷ್ಟಿಸಿದ ಸ್ಥಳವೂ ಹೌದು ಎಂದರು.

ಮಾತು ಮುಂದುವರಿಸಿದ ಪ್ರಧಾನಮಂತ್ರಿ ಅವರು, ಇಲ್ಲಿಯೇ ಭಗವಾನ ಬುದ್ದನಿಗೆ ಜ್ಞಾನೋದಯವಾಗಿ ಸಾರನಾಥದಲ್ಲಿ ಜಗತ್ತಿಗೆ ಬಹಿರಂಗಗೊಂಡಿದ್ದು ಎಂದರು. ಸಮಾಜದ ಒಳಿತಿಗಾಗಿ ಕಬೀರದಾಸರಂತಹ ಸಂತರು ಇಲ್ಲಿ ಕಾಣಿಸಿಕೊಂಡರು. ಸಮಾಜವನ್ನು ಒಗ್ಗೂಡಿಸುವ ಅಗತ್ಯವಿದ್ದಲ್ಲಿ ಕಾಶಿಯು ಸಂತ ರೈ ದಾಸರ ಭಕ್ತಿಯ ಶಕ್ತಿಯ ಕೇಂದ್ರವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಾಶೀ ನಾಲ್ಕು ಜೈನ ತೀರ್ಥಂಕರರ ನಾಡು ಮತ್ತು ಅಹಿಂಸೆ ಮತ್ತು ತಪಸ್ಸಿನ ಪ್ರತಿರೂಪವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜಾ ಹರಿಶ್ಚಂದ್ರನ ಏಕತೆಯಿಂದ ವಲ್ಲಭಾಚಾರ್ಯ, ರಮಾನಂದ ಜೀ ಅವರ ಜ್ಞಾನದವರೆಗೆ, ಚೈತನ್ಯ ಮಹಾ ಪ್ರಭುಮ ಸಮರ್ಥ ಗುರು ರಾಮದಶಸ್ ರಿಂದ ಸ್ವಾಮಿ ವಿವೇಕಾನಂದ, ಮದನ್ ಮೋಹನ್ ಮಾಳವೀಯದರೆಗೆ, ಪವಿತ್ರ ಕಾಶೀ ಭೂಮಿಯು ಅಸಂಖ್ಯಾತ ಸಂತರು, ಆಚಾರ್ಯರ ನೆಲೆವೀಡಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಇಲ್ಲಿಗೆ ಆಗಮಿಸಿದ್ದರು ಎಂದು ಪ್ರಧಾನಿ ಉಲ್ಲೇಖಿಸಿದರು. ರಾಣಿ ಲಕ್ಷ್ಮೀಭಾಯಿ ಅವರಿಂದ ಚಂದ್ರಶೇಖರ್ ಆಜಾದ್ ವರೆಗೆ ಹಲವು ಸ್ವಾತಂತ್ರ ಹೋರಾಟಗಾರರಿಗೆ ಇದು ಕರ್ಮಭೂಮಿಯಾಗಿದೆ. ಪ್ರತಿಭಾವಂತರಾದ ಭರತೇಂದು ಹರಿಶ್ಚಂದ್ರ, ಜೈ ಶಂಕರ್ ಪ್ರಸಾದ್, ಮುನ್ಷಿ ಪ್ರೇಮ್ ಚಂದ್, ಪಂಡಿತ್ ರವಿಶಂಕರ್ ಮತ್ತು ಬಿಸ್ಮಿಲ್ಲಾಖಾನ್ ಅವರು ಇದೇ ಶ್ರೇಷ್ಠ  ನಗರಿಯವರು ಎಂದು ಪ್ರಧಾನಿ ಹೇಳಿದರು.

ಕಾಶಿ ವಿಶ್ವನಾಥ ಧಾಮದ ಸಮರ್ಪಣೆಯು ದೇಶಕ್ಕೆ ನಿರ್ಣಾಯಕ ದಿಕ್ಸೂಚಿಯನ್ನು ನೀಡಲಿದೆ ಮತ್ತು ಉಜ್ವಲ ಭವಿಷ್ಯಕ್ಕೆ ಕಾರಣವಾಗಲಿದೆ ಎಂದು ಪ್ರಧಾನಿ ಹೇಳಿದರು. ಪ್ರಾಂಗಣ ನಮ್ಮ ಸಾಮರ್ಥ್ಯ ಮತ್ತು ನಮ್ಮ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ದೃಢ ಸಂಕಲ್ಪ ಮತ್ತು ಸಮಗ್ರ ಚಿಂತನೆಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದರು.

ಊಹೆಗೆ ನಿಲುಕದ್ದನ್ನು ನನಸಾಗಿಸುವ ಶಕ್ತಿ ಭಾರತೀಯರಿಗೆ ಇದೆ. ನಮಗೆ ತಪಸ್ಸು ಗೊತ್ತಿದೆ ಮತ್ತು ನಮಗೆ ಸಂಯಮವಿದೆ ಮತ್ತು ನಮಗೆ ಹೇಗೆ ಹಗಲು ಮತ್ತು ರಾತ್ರಿ ಕಳೆಯಬೇಕೆಂಬುದು ತಿಳಿದಿದೆ. ಸವಾಲು ಎಷ್ಟೇ ದೊಡ್ಡದಾಗಿದ್ದರೂ ಸಹ ಭಾರತೀಯರು ಒಟ್ಟಾಗಿ ಅದನ್ನು ಸೋಲಿಸಬಲ್ಲರು“  ಎಂದು ಪ್ರಧಾನಮಂತ್ರಿ ಹೇಳಿದರು.

ಇಂದಿನ ಭಾರತ ಕಳೆದುಹೋದ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ಕಾಶಿಯಲ್ಲಿ ಮಾತೆ ಅನ್ನಪೂರ್ಣಕೂಡ ನೆಲೆಸಿದ್ದಾರೆ. ಕಾಶಿಯಿಂದ ಕಳ್ಳತನವಾಗಿದ್ದ ಮಾತೆ ಅನ್ನಪೂರ್ಣ ಮೂತಿಯು ಶತಮಾನಗಳ ಕಾಯುವಿಕೆ ನಂತರ ಇದೀಗ ಕಾಶಿಯಲ್ಲಿ ಪುನರ್ ಪ್ರತಿಷ್ಠಾಪಿಸಲಾಗಿದೆ ಎಂದರು.

ನನಗೆ ದೇವರು ಜನರ ರೂಪದಲ್ಲಿ ಕಾಣಿಸುತ್ತಾರೆ. ನನಗೆ ಪ್ರತಿಯೊಬ್ಬ ಮನುಷ್ಯರೂ ದೇವರ ಭಾಗ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಜನರಿಂದ ನಾನು ಮೂರು ಸಂಕಲ್ಪಗಳನ್ನು ಕೇಳುತ್ತೇನೆ- ಅವೆಂದರೆ ಶುಚಿತ್ವ, ಸೃಷ್ಟಿ ಮತ್ತು ಸ್ವಾವಲಂಬಿ ಭಾರತಕ್ಕೆ ನಿರಂತರ ಪ್ರಯತ್ನಮಾಡುವುದು ಎಂದು ತಿಳಿಸಿದರು.

ಸ್ಚಚ್ಛತೆಯು ಜೀವನದ ವಿಧಾನ ಎಂದ ಪ್ರಧಾನಿ ಅವರು, ಕಾರ್ಯದಲ್ಲಿ ವಿಶೇಷವಾಗಿ ನಮಾಮಿ ಗಂಗಾ ಯೋಜನೆಯಡಿ ಜನರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ದೀರ್ಘಾವಧಿಯ ಗುಲಾಮಗಿರಿಯು ನಮ್ಮ ಆತ್ಮವಿಶ್ವಾಸವನ್ನು ಮುರಿದಿತ್ತು, ನಮ್ಮ ಸೃಷ್ಟಿಯ ಬಗ್ಗೆಯೇ ನಮಗೆ ನಂಬಿಕೆ ಹೋಗಿತ್ತು ಎಂದು ಪ್ರಧಾನಿ ತಿಳಿಸಿದರು. ಇಂದು, ಸಹಸ್ರಾರು ವರ್ಷಗಳ ಇತಿಹಾಸವಿರುವ ಕಾಶಿಯಿಂದ ನಾನು ದೇಶವಾಸಿಗಳಿಗೆ ಕರೆ ನೀಡುವುದೆಂದರೆಸಂಪೂರ್ಣ ವಿಶ್ವಾಸದಿಂದ ಸೃಷ್ಟಿಸಿ, ಆವಿಷ್ಕರಿಸಿ, ನವೀನ ವಿಧಾನದಲ್ಲಿ ಕಾರ್ಯ ಮಾಡಿ ಎಂದು.

ಇಂದು ನಾವು ಕೈಗೊಳ್ಳಲೇಬೇಕಾದ ಮೂರನೇ ನಿರ್ಣಯವೆಂದರೆ ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಎಂದು ಪ್ರಧಾನಮಂತ್ರಿ ಹೇಳಿದರು. 75ನೇ ಸ್ವಾತಂತ್ರೋತ್ಸವದ ಅಮೃತ ಕಾಲದಲ್ಲಿ ಭಾರತವು 100 ವರ್ಷಗಳ ಸ್ವಾತಂತ್ರೋತ್ಸವವನ್ನು ಆಚರಿಸುವಾಗ ಭಾರತ ಹೇಗಿರಬೇಕು ಎಂಬುದಕ್ಕಾಗಿ ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿ ಪ್ರಧಾನಿ ಅವರು ತಮ್ಮ ಭಾಷಣವನ್ನು ಸಮಾಪನಗೊಳಿಸಿದರು.

***



(Release ID: 1781000) Visitor Counter : 288