ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಡಿಸೆಂಬರ್ 11ರಂದು ಉತ್ತರಪ್ರದೇಶದ ಬಲರಾಂಪುರಕ್ಕೆ ಭೇಟಿ ಮತ್ತು ಸರಯು ನಹರ್ ರಾಷ್ಟ್ರೀಯ ಯೋಜನೆ ಉದ್ಘಾಟನೆ


ಸುಮಾರು 4 ದಶಕಗಳಿಂದ ಬಾಕಿಯಿದ್ದ ಯೋಜನೆ ಕೇವಲ 4 ವರ್ಷಗಳಲ್ಲಿ ಪೂರ್ಣ

ದೀರ್ಘಾವಧಿಯಿಂದ ಬಾಕಿ ಇರುವ ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳಿಗೆ ಆದ್ಯತೆ ನೀಡುವ ಮತ್ತು ರೈತರ ಕಲ್ಯಾಣ ಹಾಗೂ ಸಬಲೀಕರಣದ ಕಡೆಗೆ ಬದ್ಧತೆ ತೋರುವ ಪ್ರಧಾನಮಂತ್ರಿ ಅವರು ದೂರದೃಷ್ಟಿಯ ಪರಿಣಾಮವಾಗಿ ಯೋಜನೆ ಜಾರಿ

ಯೋಜನೆಯಿಂದ ಸುಮಾರು 14 ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಖಾತ್ರಿ ಮತ್ತು ಪೂರ್ವ ಉತ್ತರಪ್ರದೇಶದ ಸುಮಾರು 6200 ಗ್ರಾಮದ 29 ಲಕ್ಷ ರೈತರಿಗೆ ಅನುಕೂಲ

ಆ ಪ್ರದೇಶದಲ್ಲಿ ರೈತರು ತಮ್ಮ ಕೃಷಿ ಸಾಮರ್ಥ್ಯ ಗರಿಷ್ಠಗೊಳಿಸಲು ಸಾಧ್ಯ

ಯೋಜನೆಯು ಐದು ನದಿಗಳನ್ನು ಅಂದರೆ –ಘಘರಾ, ಸರಯು, ರಪ್ತಿ, ಬಾನ್ ಗಂಗಾ ಮತ್ತು ರೋಹಿಣಿ ನದಿಗಳ ಅಂತರ ಜೋಡಣೆ ಒಳಗೊಂಡಿದೆ

Posted On: 10 DEC 2021 8:25AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಲರಾಂಪುರಕ್ಕೆ ಡಿಸೆಂಬರ್ 11ರಂದು ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಲಿದ್ದಾರೆ ಮತ್ತು ಸರಯು ನಹರ್ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಈ ಯೋಜನೆಯ ಕೆಲಸವು 1978ರಲ್ಲಿ ಪ್ರಾರಂಭವಾಯಿತು, ಆದರೆ ನಂತರ ನಿರಂತರ ಬಜೆಟ್ ಬೆಂಬಲವಿಲ್ಲದೆ, ಅಂತರ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಮತ್ತು ಸೂಕ್ತ ಮೇಲ್ವಿಚಾರಣೆ ಇಲ್ಲದೆ ಅದು ವಿಳಂಬವಾಯಿತು ಮತ್ತು ಸುಮಾರು 4 ದಶಕ ಕಳೆದರೂ ಅದು ಪೂರ್ಣಗೊಂಡಿರಲಿಲ್ಲ. ಆದರೆ ಪ್ರಧಾನಮಂತ್ರಿ ಅವರು ರೈತರ ಕಲ್ಯಾಣ ಮತ್ತು ಸಬಲೀಕರಣದ ದೂರದೃಷ್ಟಿ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ದೀರ್ಘಾವಧಿ ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸುವ ಪ್ರಧಾನಮಂತ್ರಿ ಅವರ ಬದ್ಧತೆಯಿಂದಾಗಿ ಯೋಜನೆಯನ್ನು ಪೂರ್ಣಗೊಳಿಸಲು ಹೆಚ್ಚು ಗಮನಹರಿಸಲು ನೆರವಾಯಿತು. ಅದರ ಪರಿಣಾಮವಾಗಿ 2016ರಲ್ಲಿ, ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ವ್ಯಾಪ್ತಿಗೆ ತರಲಾಯಿತು ಮತ್ತು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಯಿತು. ಈ ಪ್ರಯತ್ನದಲ್ಲಿ ಹೊಸ ಕಾಲುವೆಗಳನ್ನು ನಿರ್ಮಿಸಲು ಹೊಸದಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಮತ್ತು ಯೋಜನೆಯಲ್ಲಿನ ನಿರ್ಣಾಯಕ ಅಂತರಗಳನ್ನು ತುಂಬಲು ಹಾಗೂ ಹಿಂದಿನ ಭೂ ಸ್ವಾಧೀನ ಕುರಿತು ಬಾಕಿ ಇದ್ದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ನವೀನ ಪರಿಹಾರಗಳನ್ನು ಕಂಡುಕೊಳ್ಳಲಾಯಿತು. ಯೋಜನೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ ಪರಿಣಾಮ ಯೋಜನೆಯು ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿದೆ.

ಸರಯು ನಹರ್ ರಾಷ್ಟ್ರೀಯ ಯೋಜನೆಗೆ ಒಟ್ಟು 9800 ಕೋಟಿ ರೂ,ಗೂ ಅಧಿಕ ಹಣ ವ್ಯಯಿಸಲಾಗಿದೆ ಮತ್ತು ಅದರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ 4600 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಯೋಜನೆಯಡಿ ಐದು ಅಂತರ ನದಿಗಳ ಜೋಡಣೆ ಮಾಡಲಾಗುವುದು, ಅವುಗಳೆಂದರೆ- ಘಘರ, ಸರಯು, ರಪ್ತಿ, ಬಾನ್ ಗಂಗಾ ಮತ್ತು ರೋಹಿಣಿ, ಇವುಗಳ ಮೂಲಕ ಆ ಪ್ರದೇಶದಲ್ಲಿ ಜಲಸಂಪನ್ಮೂಲದ ಗರಿಷ್ಠ ಬಳಕೆ ಖಾತ್ರಿಪಡಿಸಲಾಗುವುದು.

ಈ ಯೋಜನೆಯಡಿ 14 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಖಾತ್ರಿಪಡಿಸಿದಂತಾಗುತ್ತದೆ ಮತ್ತು 6200 ಗ್ರಾಮಗಳ ಸುಮಾರು 29 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆ ಪೂರ್ವ ಉತ್ತರ ಪ್ರದೇಶದ 9 ಜಿಲ್ಲೆಗಳಿಗೆ ಅನುಕೂಲವಾಗಲಿದೆ, ಅವುಗಳೆಂದರೆ ಬಹರೈಚ್, ಶ್ರಾವಸ್ತಿ, ಬಲರಾಂ ಪುರ್, ಗೊಂಡಾ, ಸಿದ್ದಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಗೋರಖ್ ಪುರ್ ಮತ್ತು ಮಹಾರಾಜ್ ಗಂಜ್. ಯೋಜನೆ ದೀರ್ಘಾವಧಿ ವಿಳಂಬದಿಂದ ಹೆಚ್ಚು ಬಳಲಿದ ಆ ಭಾಗದ ರೈತರು ಇದೀಗ ಮೇಲ್ದರ್ಜೆಗೇರಿಸಿದ ನೀರಾವರಿ ಸಾಮರ್ಥ್ಯದಿಂದಾಗಿ ಅಪಾರ ಪ್ರಯೋಜನ ಪಡೆಯಲಿದ್ದಾರೆ. ಈಗ ದೊಡ್ಡ ಪ್ರಮಾಣದಲ್ಲಿ ಬೆಳೆಗಳನ್ನು ಬೆಳೆಯಲು ಮತ್ತು ಕೃಷಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗಲಿದೆ.

***


(Release ID: 1780026) Visitor Counter : 274