ಪ್ರಧಾನ ಮಂತ್ರಿಯವರ ಕಛೇರಿ
ಸಂವಿಧಾನ ರಚನಾ ಸಭೆಯ ಐತಿಹಾಸಿಕ ಮೊದಲ ಅಧಿವೇಶನದ 75 ವರ್ಷಗಳ ಅಂಗವಾಗಿ ಸಂವಿಧಾನ ರಚನಾ ಸಭೆಯ ಪ್ರಮುಖರಿಗೆ ಪ್ರಧಾನಮಂತ್ರಿ ಅವರಿಂದ ಗೌರವ ನಮನ
Posted On:
09 DEC 2021 12:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಿಧಾನ ರಚನಾ ಸಭೆಯ ಐತಿಹಾಸಿಕ ಮೊದಲ ಅಧಿವೇಶನದ 75ನೇ ವರ್ಷದ ಅಂಗವಾಗಿ ಸಂವಿಧಾನ ರಚನಾ ಸಭೆಯ ಪ್ರಮುಖರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ,
"ಇಂದಿಗೆ 75 ವರ್ಷಗಳ ಹಿಂದೆ ನಮ್ಮ ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಅಧಿವೇಶನ ಸೇರಿತು. ಭಾರತದ ವಿವಿಧ ಭಾಗಗಳಿಂದ, ವಿಭಿನ್ನ ಹಿನ್ನೆಲೆಗಳಿಂದ ಮತ್ತು ವಿಭಿನ್ನ ಸಿದ್ಧಾಂತಗಳಿಂದ ಬಂದ ಗಣ್ಯ ವ್ಯಕ್ತಿಗಳು - ಭಾರತದ ಜನರಿಗೆ ಯೋಗ್ಯ ಸಂವಿಧಾನವನ್ನು ನೀಡುವ ಒಂದೇ ಗುರಿಯೊಂದಿಗೆ ಒಗ್ಗೂಡಿದರು. ಈ ಮಹಾನ್ ವ್ಯಕ್ತಿಗಳಿಗೆ ಗೌರವ ನಮನಗಳು.
ಸಂವಿಧಾನ ಸಭೆಯ ಮೊದಲ ಬೈಠಕ್ನ ಅಧ್ಯಕ್ಷತೆಯನ್ನು ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದ ಡಾ. ಸಚ್ಚಿದಾನಂದ ಸಿನ್ಹಾ ವಹಿಸಿದ್ದರು.
ಆಚಾರ್ಯ ಕೃಪಲಾನಿ ಅವರು ಅವರನ್ನು ಪರಿಚಯಿಸಿ, ಪೀಠದತ್ತ ಕೊಂಡೊಯ್ದರು.
ಇಂದು, ನಮ್ಮ ಸಂವಿಧಾನ ರಚನಾ ಸಭೆಯ ಐತಿಹಾಸಿಕ ಅಧಿವೇಶನದ 75ನೇ ವರ್ಷವನ್ನು ನಾವು ಆಚರಿಸುತ್ತಿದ್ದೇವೆ. ಈ ಮಹಾಮಾನ್ಯ ಸಭೆಯ ಕಾರ್ಯಕಲಾಪಗಳ ಬಗ್ಗೆ ಮತ್ತು ಅದರ ಭಾಗವಾಗಿದ್ದ ಪ್ರಸಿದ್ಧ ಪ್ರಮುಖರ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತೆ ನಾನು ನನ್ನ ಯುವ ಸ್ನೇಹಿತರನ್ನು ಒತ್ತಾಯಿಸುತ್ತೇನೆ. ಹೀಗೆ ಮಾಡುವುದರಿಂದ ಬೌದ್ಧಿಕವಾಗಿ ಶ್ರೀಮಂತ ಅನುಭವವನ್ನು ಹೊಂದಬಹುದು.” ಎಂದಿದ್ದಾರೆ.
***
(Release ID: 1780000)
Visitor Counter : 384
Read this release in:
Malayalam
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu