ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಇಂದು ರಾಜಕೀಯ ಪಕ್ಷಗಳ ಸದನ ನಾಯಕರ ಸಭೆ ನಡೆಸಿದ ಸರ್ಕಾರ


ಸದನದ ಕಲಾಪ ಸುಗಮವಾಗಿ ನಡೆಸಲು ಎಲ್ಲ ಪಕ್ಷಗಳ ಸಹಕಾರಕ್ಕೆ ಮನವಿ : ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು

ಸಂಸತ್ತಿನ ಆರೋಗ್ಯಕರ ಚರ್ಚೆ ನಡೆಯಬೇಕೆಂಬುದು ಸರ್ಕಾರದ ಬಯಕೆ: ಶ್ರೀ ರಾಜನಾಥ್ ಸಿಂಗ್

Posted On: 28 NOV 2021 3:48PM by PIB Bengaluru

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭದ ಮುನ್ನಾ ದಿನವಾದ ಇಂದು ಸರ್ಕಾರ ಎಲ್ಲಾ ಪಕ್ಷಗಳ ಸದನ ನಾಯಕರ ಸಭೆ ನಡೆಸಿತು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಸತ್ತಿನ ಮುಂಬರುವ ಅಧಿವೇಶನದ ಕುರಿತು ಮಾಹಿತಿ ನೀಡಿದರು. 2021ನೇ ಸಾಲಿನ ಸಂಸತ್ತಿನ ಚಳಿಗಾಲದ ಅಧಿವೇಶನ 2021ರ ನವೆಂಬರ್ 29ರಂದು ಸೋಮವಾರ ಆರಂಭವಾಗಲಿದೆ ಮತ್ತು ಸರ್ಕಾರಿ ಕಾರ್ಯಕಲಾಪಗಳ ಅನುಸಾರ 2021ರ ಡಿಸೆಂಬರ್ 23ರಂದು ಕಲಾಪ ಸಮಾಪನಗೊಳ್ಳಲಿದೆ ಎಂದು ಹೇಳಿದರು. ಈ ಅಧಿವೇಶನ 25 ದಿನಗಳ ಅವಧಿಯಲ್ಲಿ ಒಟ್ಟು 19 ದಿನಗಳ ಕಲಾಪ ನಡೆಯಲಿದೆ. 2021ರ ಅಕ್ಟೋಬರ್ 5 ಮತ್ತು 27 ರಂದು ನಾನಾ ಸಚಿವಾಲಯಗಳ/ಇಲಾಖೆಗಳ ಕಾರ್ಯದರ್ಶಿಗಳು/ಹಿರಿಯ ಅಧಿಕಾರಿಗಳೊಂದಿಗೆ ಎರಡು ಸಭೆಗಳನ್ನು ನಡೆಸಲಾಗಿದೆ ಮತ್ತು ಚಳಿಗಾಲದ ಅಧಿವೇಶನದಲ್ಲಿ ಕೈಗೊಳ್ಳಬೇಕಾಗಿರುವ ಕೆಲವು ವಿಷಯಗಳನ್ನು ಗುರುತಿಸಲಾಗಿದೆ ಮತ್ತು ಪ್ರತಿಕ್ರಿಯೆಯನ್ನು ಆಧರಿಸಿ ತಾತ್ಕಾಲಿಕವಾಗಿ 37 ವಿಷಯಗಳು, ಅದರಲ್ಲಿ 36 ಮಸೂದೆಗಳು ಮತ್ತು ಒಂದು ಹಣಕಾಸು ವಿಚಾರವನ್ನು 2021ರ ಚಳಿಗಾಲದ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲು ನಿಗದಿಪಡಿಸಲಾಗಿದೆ.

ಮೂರು ಮಸೂದೆಗಳನ್ನು ಸುಗ್ರೀವಾಜ್ಞೆಗಳ ಬದಲಿಗೆ ಮಂಡಿಸಲಾಗುವುದು. ಅವುಗಳೆಂದರೆ  (i) ಮಾದಕದ್ರವ್ಯ ಮತ್ತು ಸೈಕ್ರೋಟ್ರೊಪಿಕ್ ಪದಾರ್ಥಗಳ (ತಿದ್ದುಪಡಿ) ವಿಧೇಯಕ 2021, (ii) ಕೇಂದ್ರ ಜಾಗೃತ ಆಯೋಗ(ತಿದ್ದುಪಡಿ) ವಿಧೇಯಕ 2021 ಮತ್ತು (iii) ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್(ತಿದ್ದುಪಡಿ) ವಿಧೇಯಕ 2021ಕ್ಕೆ  ಅಧಿವೇಶನದ ನಡುವಿನ ಅವಧಿಯಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿತ್ತು. ಅವುಗಳನ್ನು ಸಂಸತ್ತಿನ ಕಲಾಪ ಪುನರಾರಂಭವಾದ ಆರು ವಾರಗಳಲ್ಲಿ ಸಂಸತ್ತಿನಲ್ಲಿ ಮಂಡಿಸುವ ಅಗತ್ಯವಿದೆ. ಸದನದ ಕಲಾಪ ನಿಯಮಾವಳಿಯಲ್ಲಿ ಅವಕಾಶವಿರುವಂತೆ ಯಾವುದೇ ವಿಷಯಗಳನ್ನು ಸದನದಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಹೇಳಿದರು. ಸದನದ ಕಲಾಪವನ್ನು ಸುಗಮ ರೀತಿಯಲ್ಲಿ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಶ್ರೀ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಪ್ರಸ್ತಾಪಿಸಿದ ವಿಷಯಗಳನ್ನು ಆಲಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಚರ್ಚೆ ಆರೋಗ್ಯಕರವಾಗಿತ್ತು  ಮತ್ತು ಹಲವು ಪ್ರಮುಖ ವಿಚಾರಗಳು ಪ್ರಸ್ತಾಪವಾದವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಪಕ್ಷಗಳು ಸಂಸತ್ತಿನಲ್ಲಿ ಹೆಚ್ಚಿನ ಚರ್ಚೆ ನಡೆಯಬೇಕೆಂದು ಪ್ರಸ್ತಾಪಿಸಿವೆ ಎಂದು ಉಲ್ಲೇಖಿಸಿದ ಅವರು, ಆ ಬಗ್ಗೆ ಸರ್ಕಾರ ಕೂಡ ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕೆಂದು ಬಯಸುತ್ತದೆಂದು ಪ್ರತಿಪಾದಿಸಿದರು.

ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ವಾಣಿಜ್ಯ ಮತ್ತು ಕೈಗಾರಿಕೆ, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣೆ ಹಾಗೂ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಸಭೆಯಲ್ಲಿ ಭಾಗವಹಿಸಿದ್ದರು. ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾವ್ ಮೇಘವಾಲ್ ಮತ್ತು ಶ್ರೀ ವಿ. ಮುರಳೀಧರನ್ ಅವರೂ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ 33 ಪಕ್ಷಗಳು ಭಾಗವಹಿಸಿದ್ದವು, ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್, ಡಿಎಂಕೆ. ಎಐಟಿಸಿ, ವೈಎಸ್ ಆರ್ ಸಿಪಿ, ಜೆಡಿ(ಯು), ಬಿಜೆಡಿ, ಬಿಎಸ್ ಪಿ, ಟಿಆರ್ ಎಸ್, ಎಸ್ .ಎಸ್, ಎಲ್ ಜೆಎಸ್ ಪಿ, ಎನ್ ಸಿಪಿ, ಎಸ್ ಪಿ, ಸಿಪಿಐ(ಎಂ), ಐಯುಎಂಎಲ್, ಟಿಡಿಪಿ, ಅಪ್ನಾ ದಳ್, ಸಿಪಿಐ, ಎನ್ ಪಿಎಫ್, ಎಸ್ ಎಡಿ, ಎಎಪಿ, ಎಐಎಡಿಎಂಕೆ, ಕೆಸಿ(ಎಂ), ಎಂಎನ್ ಎಫ್, ಆರ್ ಎಸ್ ಪಿ, ಆರ್ ಪಿಐ(ಎ), ಆರ್ ಜೆಡಿ, ಎನ್ ಪಿಪಿ, ಎಂಡಿಎಂಕೆ, ಜೆಕೆಎನ್ ಸಿ, ಟಿಎಂಸಿ(ಎಂ) ಪಕ್ಷಗಳು ಭಾಗವಹಿಸಿದ್ದವು.

ಚಳಿಗಾಲದ ಅಧಿವೇಶನ 2021ರಲ್ಲಿ ಕೈಗೆತ್ತಿಕೊಳ್ಳಲಿರುವ ಸಂಭವನೀಯ ವಿಧೇಯಕಗಳ ಪಟ್ಟಿ

  1. ಶಾಸನ ರಚನಾ ಕಲಾಪ
  2. ಮಾದಕದ್ರವ್ಯ ಮತ್ತು ಸೈಕೋಟ್ರೋಫಿಕ್ ಪದಾರ್ಥಗಳ(ತಿದ್ದುಪಡಿ) ವಿಧೇಯಕ 2021, (ಸುಗ್ರೀವಾಜ್ಞೆಗೆ ಬದಲಾಗಿ ಮಂಡನೆ)
  3. ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್(ತಿದ್ದುಪಡಿ) ವಿಧೇಯಕ 2021, (ಸುಗ್ರೀವಾಜ್ಞೆಗೆ ಬದಲಾಗಿ ಮಂಡನೆ)
  4. ಕೇಂದ್ರ ಜಾಗೃತ ಆಯೋಗ(ತಿದ್ದುಪಡಿ) ವಿಧೇಯಕ 2021, (ಸುಗ್ರೀವಾಜ್ಞೆಗೆ ಬದಲಾಗಿ ಮಂಡನೆ)
  5. ಲೋಕಸಭೆ ಅನುಮೋದಿಸಿರುವ ಅಣೆಕಟ್ಟು ಸುರಕ್ಷತಾ ವಿಧೇಯಕ 2019 
  6. ಲೋಕಸಭೆ ಅನುಮೋದಿಸಿರುವ ಬಾಡಿಗೆ ತಾಯ್ತನ (ನಿಯಂತ್ರಣ) ವಿಧೇಯಕ
  7. ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ(ತಿದ್ದುಪಡಿ) ವಿಧೇಯಕ 2019
  8. ಅಸಿಸ್ಟೆಡ್ ರಿಪ್ರಾಡಕ್ಟಿವ್ ತಂತ್ರಜ್ಞಾನ(ನಿಯಂತ್ರಣ) ವಿಧೇಯಕ 2020
  9. ರಾಷ್ಟ್ರೀಯ ಫಾರ್ಮಸಿಟಿಕಲ್ ಶಿಕ್ಷಣ ಮತ್ತು ಸಂಶೋಧನೆ(ತಿದ್ದುಪಡಿ) ವಿಧೇಯಕ 2021    
  10. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ(ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ವಿಧೇಯಕ 2021 
  11. ಕೃಷಿಕರ ಕಾನೂನು ನಿರಶನ ವಿಧೇಯಕ 2021 
  12. ಲೆಕ್ಕ ಪರಿಶೋಧಕರು, ಕಾಸ್ಟ್ ಮತ್ತು ವರ್ಕ್ಸ್  ಮತ್ತು ಕಂಪನಿ ಕಾರ್ಯದರ್ಶಿಗಳ ತಿದ್ದುಪಡಿ ವಿಧೇಯಕ 2021 
  13. ದಿವಾಳಿತನ ಮತ್ತು ದಿವಾಳಿ(ಎರಡನೇ ತಿದ್ದುಪಡಿ) ವಿಧೇಯಕ 2021
  14. ಕಂಟೋನ್ಮೆಂಟ್ ವಿಧೇಯಕ 2021        
  15. ಅಂತರ ಸೇವೆಗಳ ಸಂಸ್ಥೆಗಳು(ಕಮಾಂಡ್, ಕಂಟ್ರೋಲ್ ಮತ್ತು ಶಿಸ್ತು) ವಿಧೇಯಕ 2021        
  16. ಭಾರತೀಯ ಅಂಟಾರ್ಟಿಕ ವಿಧೇಯಕ 2021       
  17. ಎಮ್ಮಿಗ್ರೇಷನ್ ವಿಧೇಯಕ 2021      
  18. ಕ್ರಿಫ್ಟೋಕರೆನ್ಸಿ ಮತ್ತು ಅಫಿಷಿಯಲ್ ಡಿಜಿಟಲ್ ಕರೆನ್ಸಿ ನಿಯಂತ್ರಣ ವಿಧೇಯಕ 2021
  19. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ(ತಿದ್ದುಪಡಿ) ವಿಧೇಯಕ 2021
  20. ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ವಿಧೇಯಕ 2021
  21. ಭಾರತೀಯ ಸಮುದ್ರ ಮೀನುಗಾರಿಕೆ ವಿಧೇಯಕ 2021
  22. ರಾಷ್ಟ್ರೀಯ ದಂತ ಆಯೋಗ ವಿಧೇಯಕ 2021
  23. ರಾಷ್ಟ್ರೀಯ ನರ್ಸಿಂಗ್ ಮಿಡ್ ವೈಫರಿ ಆಯೋಗ ವಿಧೇಯಕ 2021
  24. ಮೆಟ್ರೋ ರೈಲು (ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣಾ) ವಿಧೇಯಕ 2021
  25. ಇಂಧನ ಸಂರಕ್ಷಣೆ(ತಿದ್ದುಪಡಿ ) ವಿಧೇಯಕ 2021
  26. ವಿದ್ಯುತ್ (ತಿದ್ದುಪಡಿ) ವಿಧೇಕ 2021
  27. ರಾಷ್ಟ್ರೀಯ ಸಾರಿಗೆ ವಿಶ್ವವಿದ್ಯಾಲಯ ವಿಧೇಯಕ 2021
  28. ಸಂವಿಧಾನಿಕ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ವಿಧೇಯಕ 2021 (ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದು)
  29. ಸಂವಿಧಾನಿಕ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ವಿಧೇಯಕ 2021 (ತ್ರಿಪುರಾಕ್ಕೆ ಸಂಬಂಧಿಸಿದ್ದು)
  30. ವ್ಯಕ್ತಿಗಳ ಕಳ್ಳ ಸಾಗಾಣೆ (ನಿಯಂತ್ರಣ, ರಕ್ಷಣೆ ಮತ್ತು ಪುನರ್ ವಸತಿ) ವಿಧೇಯಕ 2021
  31. ರಾಷ್ಟ್ರೀಯ ಡೋಪಿಂಗ್ ನಿಗ್ರಹ ವಿಧೇಯಕ 2021
  32. ಮಧ್ಯಸ್ಥಿಕೆ ವಿಧೇಯಕ 2021
  33. ಗಣಿಗಳು (ತಿದ್ದುಪಡಿ) ವಿಧೇಯಕ 2011 (ವಾಪಸ್ ಪಡೆಯಲು)
  34. ಅಂತರ ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ವಿಧೇಯಕ 2011 (ವಾಪಸ್ ಪಡೆಯಲು)
  35. ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರಿಗೆ ಸಂಬಂಧಿಸಿದ ಕಾನೂನುಗಳು (ತಿದ್ದುಪಡಿ) ವಿಧೇಯಕ 2013 (ವಾಪಸ್ ಪಡೆಯುವುದು)
  36. ಉದ್ಯೋಗ ವಿನಿಮಯ (ಖಾಲಿ ಹುದ್ದೆಗಳಿ ಕಡ್ಡಾಯ ಅಧಿಸೂಚನೆ) ತಿದ್ದುಪಡಿ ವಿಧೇಯಕ 2013 (ವಾಪಸ್ ಪಡೆಯಲು)
  37. ವಕ್ಫ್ ಆಸ್ತಿಗಳು (ಅನಧಿಕೃತ ಒತ್ತುವರಿ ತೆರವು) ವಿಧೇಯಕ 2014 (ವಾಪಸ್ ಪಡೆಯುವುದು)

11- ವಿತ್ತೀಯ ಕಲಾಪ

1.     2021-22ರ ಪೂರಕ ಅಂದಾಜು ಬೇಡಿಕೆಗಳ ಮೇಲಿನ ನಿರ್ಣಯ ಮಂಡನೆ, ಚರ್ಚೆ ಮತ್ತು ಮತದಾನ ಹಾಗೂ ಹಣಕಾಸು ವಿಧೇಯಕದ ಮಂಡನೆ, ಪರಿಶೀಲನೆ ಮತ್ತು ಅನುಮೋದನೆ

***


(Release ID: 1775950) Visitor Counter : 293