ಚುನಾವಣಾ ಆಯೋಗ
azadi ka amrit mahotsav

ಭಾರತೀಯ ಚುನಾವಣಾ ಆಯೋಗದಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ಸಮಾವೇಶ ಆಯೋಜನೆ 

Posted On: 23 NOV 2021 11:15AM by PIB Bengaluru

ಭಾರತೀಯ ಚುನಾವಣಾ ಆಯೋಗದ ನವದೆಹಲಿಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ಸಮಾವೇಶ ಆಯೋಜಿಸಿತ್ತು. ಮತದಾರರ ಪಟ್ಟಿ, ಮತಗಟ್ಟೆಗಳು, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ, ಮಾಹಿತಿ ತಂತ್ರಜ್ಞಾನ ವಿಧಾನಗಳ ಬಳಕೆಗೆ, ಕುಂದುಕೊರತೆಗಳ ಪರಿಹಾರ, ಇವಿಎಂಗಳು/ವಿವಿಪ್ಯಾಟ್ ಗಳು ಚುನಾವಣಾ ಸಿಬ್ಬಂದಿಗೆ ತರಬೇತಿ ಮತ್ತು ಸಾಮರ್ಥ್ಯವೃದ್ಧಿ, ಮಾಧ್ಯಮ ಮತ್ತು ಸಂವಹನ ಹಾಗೂ ವ್ಯಾಪಕ ಮತದಾರರನ್ನು ತಲುಪುವ ಕಾರ್ಯಕ್ರಮಗಳು ಸೇರಿದಂತೆ ಇತರೆ ಹಲವು ವಿಷಯಾಧಾರಿತ ಸಮಸ್ಯೆಗಳನ್ನು  ಚರ್ಚಿಸಲು ಮತ್ತು ಪರಾಮರ್ಶಿಸಲು ಸಮಾವೇಶವನ್ನು ಆಯೋಜಿಸಲಾಗಿತ್ತು.

ಮುಖ್ಯ ಚುನಾಚವಣಾ ಆಯುಕ್ತರಾದ ಶ್ರೀ ಸುಶಿಲ್ ಚಂದ್ರ ಅವರು ತಮ್ಮ ಭಾಷಣದಲ್ಲಿಸಿಇಒಗಳು ರಾಜ್ಯಗಳಲ್ಲಿ ಚುನಾವಣಾ ಆಯೋಗವನ್ನು ಪ್ರತಿನಿಧಿಸುವುದರಿಂದ ಮುಖ್ಯ ಚುನಾವಣಾಧಿಕಾರಿಗಳ ಪರಿಣಾಮಕಾರಿ ಮತ್ತು ಗೋಚರತ್ವದ ಮಹತ್ವವನ್ನು ಒತ್ತಿ ಹೇಳಿದರು. ಸಿಇಒಗಳು ಮತದಾರರ ಪಟ್ಟಿಯಲ್ಲಿ ಪರಿಪಕ್ವತೆ ಖಾತ್ರಿಪಡಿಸಬೇಕು. ಕನಿಷ್ಠ ಸೌಕರ್ಯಗಳ ಲಭ್ಯತೆ ಖಾತ್ರಿಪಡಿಸಬೇಕು ಮತ್ತು ಎಲ್ಲ ಮತಗಟ್ಟೆಗಳಲ್ಲಿ ಎಲ್ಲ ಮತದಾರರಿಗೆ ಉತ್ತಮ ಸೌಕರ್ಯಗಳನ್ನು ಖಾತ್ರಿಪಡಿಸಬೇಕು ಎಂದು ಸಿಇಒಗಳಿಗೆ ಸೂಚಿಸಿದರು. ಬಾಕಿ ಇರುವ ಕುಂದುಕೊರತೆಗಳನ್ನು ವಿಶೇಷವಾಗಿ ಮತದಾರರ ನೋಂದಣಿಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಅವರು ಸಿಇಒಗಳಿಗೆ ಸೂಚಿಸಿದರು. ವಾಸ್ತವವಾಗಿ ಮತದಾರರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಅವರು ಪುನರುಚ್ಛರಿಸಿದರು. ಸಿಇಒಗಳು ನಿರಂತರವಾಗಿ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಬೇಕು ಮತ್ತು ಏನಾದರೂ ಕುಂದುಕೊರತೆಗಳಿದ್ದರೆ ಅವುಗಳನ್ನು ಬಗೆಹರಿಸಬೇಕು ಎಂದು ಅವರು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುಶೀಲ್ ಚಂದ್ರ ಅವರು ತಮ್ಮ ಭಾಷಣದಲ್ಲಿ, ಆಯೋಗದ ನಿರ್ದೇಶನಗಳನ್ನು ದೇಶಾದ್ಯಂತ ಏಕರೂಪವಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸುವುದು ಖಚಿತಪಡಿಸಿಕೊಳ್ಳಲು ಅಂತರ ಮತ್ತು ಕೊರತೆಗಳನ್ನು ಗುರುತಿಸುವುದು ಸಮಾವೇಶದ ಉದ್ದೇಶವಾಗಿದೆ ಎಂದು ಹೇಳಿದರು. ಸಿಇಒಗಳು ತಾವು ಕೈಗೊಂಡ ಹೊಸ ಉಪಕ್ರಮಗಳು ಮತ್ತು ಉತ್ತಮ ಪದ್ಧತಿಗಳನ್ನು ಹೆಚ್ಚಿನ ಜನರಿಗೆ ತಲುಪುವಂತೆ ಮಾಡಲು ಮಾಧ್ಯಮಗಳಿಗೆ ಅವುಗಳ ವಿವರವನ್ನು ಹಂಚಿಕೊಳ್ಳಬೇಕು ಎಂದರು

ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರು, ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ಸಂವಾದ ನಡೆಸುತ್ತಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಕಾನೂನು ಮತ್ತು ನೀತಿಯ ಚೌಕಟ್ಟು ಸಾಕಷ್ಟು ಸದೃಢವಾಗಿದೆ. ಆದರೆ ಆಯೋಗದ ಹಲವು ನಿರ್ದೇಶನಗಳ ಜಾರಿ ಕ್ಷೇತ್ರಮಟ್ಟದಲ್ಲಿ ಬಹಳ ನಿರ್ಣಾಯಕವಾಗಿದೆ ಎಂದು ಹೇಳಿದರು. ಸಿಇಒಗಳು ಹೆಚ್ಚು ಆವಿಷ್ಕಾರಿಗಳಾಗಬೇಕುನವೀನ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಹೆಚ್ಚು ಸಕ್ರಿಯವಾಗಬೇಕು ಹಾಗೂ ಉತ್ತಮ ಪದ್ಧತಿಗಳು ಮತ್ತು ಸವಾಲುಗಳ ಕುರಿತಂತೆ ಪರಸ್ಪರರಿಂದ ಅರಿತುಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದರುಸಿಇಒಗಳು ನಿರಂತರವಾಗಿ ಡಿಇಒಗಳ ಜತೆ ಸಮನ್ವಯ ಸಾಧಿಸಬೇಕು ಮತ್ತು ಮೇಲ್ವಿಚಾರಣೆ ನಡೆಸಬೇಕು. ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ನಿರ್ಣಾಯಕ ಪ್ರತಿಕ್ರಿಯೆ ಪಡೆಯಲು ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂದು ಅವರು ಸಿಇಒಗಳನ್ನು ಒತ್ತಾಯಿಸಿದರು.

ಚುನಾವಣಾ ಆಯುಕ್ತರಾದ ಶ್ರೀ ಅನೂಪ್ ಚಂದ್ರ ಪಾಂಡೆ ಅವರುಬಿಎಲ್ಒಗಳ ತರಬೇತಿ ಮತ್ತು ಸಾಮರ್ಥ್ಯವರ್ಧನೆಯ ಕುರಿತು ಒತ್ತಿ ಹೇಳಿದರು. ಏಕೆಂದರೆ ಇಸಿಐನ ಚಟುವಟಿಕೆಗಳು ಮತ್ತು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುವುದನ್ನು ಅವಲಂಬಿಸಿರುತ್ತದೆ ಎಂದು ಪ್ರತಿಪಾದಿಸಿದರು. ಅಲ್ಲದೆ ಅವರು ತಳಮಟ್ಟದಲ್ಲಿ ಚುನಾವಣಾ ಸಮಯ ಹೊರತುಪಡಿಸಿ, ವರ್ಷವಿಡೀ ಜನಸಂಪರ್ಕ ಮತ್ತು ಸ್ವೀಪ್ ಚಟುವಟಿಕೆಗಳನ್ನು ಕ್ಷೇತ್ರ ಮಟ್ಟದಲ್ಲಿ ಕೈಗೊಳ್ಳಲು ನಾನಾ ಪಾಲುದಾರರು ಮತ್ತು ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದರು. ಸಿಇಒಗಳು ಇನ್ನೂ ಹೆಚ್ಚಿನ ಜನರಿಗೆ ತಲುಪುವ ಉದ್ದೇಶದಿಂದ ಸರಿಯಾದ ಮಾಹಿತಿಯನ್ನು ಮತ್ತು ವಸ್ತು ಸಂಗತಿಗಳನ್ನು ಸ್ಥಳೀಯ ಮಾಧ್ಯಮಗಳಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.

ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಉಮೇಶ್ ಸಿನ್ಹಾ, ತಮ್ಮ ಸ್ವಾಗತ ಭಾಷಣದಲ್ಲಿ ಕ್ಷೇತ್ರ ಮಟ್ಟದ ಕಾರ್ಯವೈಖರಿ, ನಾನಾ ಪಾಲುದಾರರೊಂದಿಗೆ ಸಮನ್ವಯತೆ  ಹಾಗೂ ಆಯೋಗದ ನಿರ್ದೇಶನಗಳನ್ನು ಜಾರಿಗೊಳಿಸುವ ಕುರಿತಂತೆ ಅರ್ಥಮಾಡಿಕೊಳ್ಳಲು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು. ಸಿಇಒಗಳು ವರ್ಷವಿಡೀ ಸಕ್ರಿಯವಾಗಿರುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಮೌಲ್ಯಮಾಪನ ಮತ್ತು ಅಗತ್ಯ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಚುನಾವಣಾಧಿಕಾರಿಗಳೊಂದಿಗೆ ನಿರಂತರ ಸಂವಾದದಲ್ಲಿ ತೊಡಗಬೇಕು ಎಂದು ಅವರು ಹೇಳಿದರು.

ಸಮಾವೇಶದ ವೇಳೆ ನಿನ್ನೆಚುನಾವಣಾ ಕಾನೂನಿಗೆ ಸಂಬಂಧಿಸಿದ ಪ್ರಕರಣಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ ಆಯೋಗಅಸ್ಸಾಂ ವಿಧಾನಸಭಾ ಚುನಾವಣೆ 2021 ಕುರಿತ ಸಾರ್ವತ್ರಿಕ ಚುನಾವಣೆಗಳ ನಡವಳಿಕೆಕುರಿತಂತೆ ಕಾಫಿಟೇಬಲ್ ಪುಸ್ತಕವನ್ನು ಆಯೋಗ ಬಿಡುಗಡೆ ಮಾಡಿತು ಮತ್ತು ಸಿಇಒ ಅಸ್ಸಾಂ ಅಭಿವೃದ್ಧಿಪಡಿಸಿರುವಕಾಲ್ ಆಫ್ ಡ್ಯೂಟಿಶೀರ್ಷಿಕೆಯ ಕಿರು ವಿಡಿಯೋವನ್ನು ಬಿಡುಗಡೆ ಮಾಡಲಾಯಿತು. ವಿಡಿಯೋದಲ್ಲಿ ದೂರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವಾಗ ಚುನಾವಣಾ ಸಿಬ್ಬಂದಿ ಎದುರಿಸುವ ಹಲವು ಸಮಸ್ಯೆಗಳನ್ನು ಪ್ರಮುಖವಾಗಿ ಚಿತ್ರಿಸಲಾಗಿದೆ. ಮಣಿಪುರ ಸಿಇಒ ಹೊಸ ಮತದಾರರಿಗಾಗಿ ಸಿದ್ಧಪಡಿಸಿರುವಪವರ್ ಆಫ್ 18’ ಶೀರ್ಷಿಕೆಯ ಮತದಾರರ ರಾಷ್ಟ್ರಗೀತೆಯನ್ನೂ ಸಹ ಸಮಾವೇಶದ ವೇಳೆ ಬಿಡುಗಡೆ ಮಾಡಲಾಯಿತು.

ಸಮಾವೇಶದ ವೇಳೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೊಂಡಿರುವ ವಿಶೇಷ ಮತದಾರರ ಪರಿಷ್ಕರಣೆ(ಎಸ್ಎಸ್ ಆರ್ 2022) ಕುರಿತಂತೆ ಸ್ವೀಪ್ ಚಟುವಟಿಕೆಗಳ ಛಾಯಾಚಿತ್ರ, ಮಲ್ಟಿ ಮೀಡಿಯಾ ಪ್ರದರ್ಶನವನ್ನು ಸಹ ನಡೆಸಲಾಯಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಲಾದ  ಎಸ್ಎಸ್ ಆರ್ 2022 ಕುರಿತ ದೃಶ್ಯ ಶ್ರವಣ ಕ್ರಿಯೇಟಿವ್ಸ್, ಮುದ್ರಣ ಜಾಹಿರಾತುಗಳು ಮತ್ತು ಸಂದೇಶಗಳನ್ನೂ ಸಹ ಪ್ರದರ್ಶಿಸಲಾಯಿತು.

ಸಮಾವೇಶದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳು, ಹಿರಿಯ ಡಿಇಸಿಗಳು, ಡಿಇಸಿಗಳು, ಡಿಜಿ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮುಂಬರುವ ದಿನಗಳಲ್ಲಿ ಚುನಾವಣೆಗಳನ್ನು ಎದುರಿಸಲಿರುವ ರಾಜ್ಯಗಳ ಚುನಾವಣಾ ನಿರ್ವಹಣೆಗೆ ಸಂಬಂಧಿಸಿದಂತೆ ಪರಾಮರ್ಶೆ ಕುರಿತಂತೆ ಇಂದು ಪ್ರತ್ಯೇಕವಾಗಿ ಒಂದು ದಿನದ ಸಭೆಯನ್ನು ಆಯೋಜಿಸಿ, ಚರ್ಚೆ ನಡೆಸಲಾಗುತ್ತಿದೆ.

***


(Release ID: 1774241) Visitor Counter : 394